ಮನೋರಂಜನೆಗೆ ಮಾಡಬೇಕು ಖುಷಿ ಕೊಡುತ್ತದೆ ಹಾಗಂತ ಫಾಲ್ಸ್‌ ಬಳಿ ನಿಂತು ಮಾಡಬೇಡಿ ಎಂದು ತಮ್ಮ ಫಾಲೋವರ್ಸ್‌ಗೆ ಸಲಹೆ ಕೊಟ್ಟ ಶಿಲ್ಪಾ....   

ಸೋಷಿಯಲ್ ಮೀಡಿಯಾದಲ್ಲಿ ಈಗ ರೀಲ್ಸ್‌ ಮೇನಿಯಾ. ಯಾರ ಕೈಯಲ್ಲಿ ನೋಡಿದರೂ ಐ ಫೋನ್‌ ಇರುತ್ತೆ, ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡುತ್ತಾರೆ ಇಲ್ಲವಾದರೆ ಯುಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಫಾಸ್ಟ್‌ ದುನಿಯಾದಲ್ಲಿ ಸುಲಭವಾಗಿ ಹೆಸರು ಮತ್ತು ಹಣ ಸಂಪಾದನೆ ಮಾಡಲು ಅದೆಷ್ಟೋ ಯುವಕರು ಮುಂದಾಗುತ್ತಾರೆ. ತಪ್ಪ ಆಯ್ಕೆ ಮಾಡಿಕೊಳ್ಳಬೇಡಿ ಎಂದು ಟಿಕ್‌ಟಾಕ್ ಸ್ಟಾರ್ ಶಿಲ್ಪಾ ಗೌಡ ಹೇಳಿದ್ದಾರೆ. 

ಒಂದು ಕಾಲದಲ್ಲಿ ಭಾರತದಲ್ಲಿ ಟಿಕ್‌ಟಾಕ್‌ ಇದ್ದಾಗ ಕ್ರಿಯೇಟಿವ್‌ ವಿಡಿಯೋಗಳನ್ನು ಮಾಡುತ್ತಿದ್ದ ಶಿಲ್ಪಾ ಗೌಡ ಈಗ ರೀಲ್ಸ್‌ನಲ್ಲಿ ಮಿಂಚುತ್ತಿದ್ದಾರೆ. ಪಡ್ಡೆ ಹುಡುಗರ ನಿದ್ರೆಗೆಡಿಸಿರುವ ಶಿಲ್ಪಾ 'ಟಿಕ್‌ಟಾಕ್ ಮಾಡಲು ಆರಂಭಿಸಿದಾಗ ನನ್ನ ಬಳಿ ಐ ಫೋನ್‌ ಇರಲಿಲ್ಲ. ಪರೀಕ್ಷೆಯಲ್ಲಿ ಒಳ್ಳೆ ಅಂಕ ಬಂದಿತ್ತು ಎಂದು ಅಪ್ಪ ನನಗೆ 8 ಸಾವಿರ ಕೊಟ್ಟು ಫೋನ್ ಕೊಡಿಸಿದ್ದರು. ಐ ಫೋನ್ ಬೇಕು ಎಂದು ಮನೆಯಲ್ಲಿ ಹಠ ಮಾಡಿ ಕೊಡಿಸಿಕೊಳ್ಳಲು ಆಗುವುದಿಲ್ಲ. ಕೈಗೆ ಫೋನ್ ಬಂತು ಅಲ್ಲು ರೀಲ್ಸ್‌ ನೋಡಿ ಸ್ಟೇಟ್ಸ್‌ಗೆ ಹಾಕಿದೆ. ಎಲ್ಲರನ್ನು ನೋಡಿ ನಾನು ಈ ರೀತಿ ವಿಡಿಯೋ ಮಾಡಬಹುದು ಅಲ್ವಾ ಎಂದು ಶುರು ಮಾಡಿಕೊಂಡೆ' ಎಂದು ಶಿಲ್ಪಾ ಖಾಸಗಿ ಕನ್ನಡ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಇಷ್ಟು ಗ್ರ್ಯಾಂಡ್ ಮದುವೆ ಮಾಡಿ ಟೊಮೊಟೊ ಸಾರೇ ಮಾಡ್ಲಿಲ್ಲ!: ಗಣೇಶ್ ಕಾರಂತ್ ಕಾಮಿಡಿ ಚಿಂದಿ‌ ಅಂತಾರೆ ನೆಟ್ಟಿಗರು

ಟಿಕ್‌ಟಾಕ್‌ ಬ್ಯಾನ್ ಆಗಿದಕ್ಕೆ ಬೇಸರ ಆಗಲಿಲ್ಲ. ಇನ್‌ಸ್ಟಾಗ್ರಾಂ ಬಳಸುತ್ತಿದ್ದೆ ಸ್ವಲ್ಪ ದಿನಗಳ ನಂತರ ಅದರಲ್ಲಿ ರೀಲ್ಸ್‌ ಬಂದು. ಮೊದಲು ರೀಲ್ಸ್ ಇಷ್ಟನೇ ಇರಲಿಲ್ಲ ಆಮೇಲೆ ಆಮೇಲೆ ಚೆನ್ನಾಗಿ ನಾನು ಮಾಡಬಹುದು ಅನಿಸಿತ್ತು. ಅಲ್ಲಿಂದ ವಿಡಿಯೋ ಮಾಡಲು ಶುರು ಮಾಡಿದೆ. ರೀಲ್ಸ್ ಮಾಡಬೇಕು ಎಂದು ನಾನು ಯಾವತ್ತೂ ಫಾಲ್ಸ್‌ ಮುಂದೆ ಮಾಡಿಲ್ಲ. ನನ್ನ ಫಾಲೋವರ್ಸ್‌ಗೆ ಒಂದು ಸಲಹೆ ಕೊಡಲು ಇಷ್ಟ ಪಡುತ್ತೀನಿ...ದಯವಿಟ್ಟು ರೀಲ್ಸ್ ಮಾಡುವಾಗ ನೋಡಿಕೊಂಡು ಮಾಡಿ ರಿಸ್ಕ್‌ ತೆಗೆದುಕೊಳ್ಳಬೇಡಿ' ಎಂದು ಶಿಲ್ಪಾ ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಶಿಲ್ಪಾ ಸಖತ್‌ ಸುದ್ದಿಯಲ್ಲಿರುವ ಖಾತೆ. ಕೆಲವರು ಆಕೆ ರೀಲ್ಸ್‌ ನೋಡಿ ಎಂಜಾಯ್ ಮಾಡುತ್ತಾರೆ, ಇನ್ನು ಕೆಲವರು ಫ್ಯಾಷನ್‌ ಮತ್ತು ಜಾಹೀರಾತುಗಳಿಂದ ಫಾಲೋ ಮಾಡುತ್ತಾರೆ. ಆದರೆ ಪಡ್ಡೆ ಹುಡುಗರ ಮಾತ್ರ ಯಾವುದೋ ವಿಡಿಯೋ ಅನ್ಕೊಂಡು ಫಾಲೋ ಮಾಡುತ್ತಾರೆ. ಇದ್ಯಾವುದು ನಮಗೆ ಬೇಡ ಆದರೆ ಶಿಲ್ಪಾ ಕೊಟ್ಟಿರುವ ಸಲಹೆ ನಿಜಕ್ಕೂ ಅದೆಷ್ಟೋ ಮಂದಿಗೆ ಸಲಹೆಯಾಗಿರುತ್ತದೆ. ಈ ಹಿಂದೆ ಶಿಲ್ಪಾಗೆ ಬಿಗ್ ಬಾಸ್ ಆಫರ್‌ ಕೂಡ ಬಂದಿದೆ ಅನ್ನೋ ಮಾತುಗಳಿತ್ತು ಆದರೆ ಶಿಲ್ಪಾ ಜಾಗಕ್ಕೆ ಆಕೆ ಸ್ನೇಹಿತೆ ಸೋನು ಗೌಡ ಬಂದರು. 

ನಾವು ಓದೋದು ಹೀಗೆ ಅಂತ ರೀಲ್ ಪೋಸ್ಟ್ ಮಾಡಿದ್ರೆ ಎಲ್ಲ ಮಕ್ಕಳೂ ಇದು ನಾವೇ ಅನ್ನೋದಾ?

ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದ:

23 ವರ್ಷದ ಶರತ್ ಕುಮಾರ್ ಕೊಲ್ಲೂರು ಸಮೀಪದ ಅರಿಶಿನ ಗುಂಡಿ ಫಾಲ್ಸ್‌ನಲ್ಲಿ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದು 8 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಶರತ್‌ ಬಿದ್ದ ಜಾಗದಿಂದ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.