Asianet Suvarna News Asianet Suvarna News

ರೀಲ್ಸ್‌ನಿಂದ ಅರಳಿದ ಪ್ರೀತಿ; ಬೈಕ್ ಚಿನ್ನ ಪಡೆದು ವರುಣ್‌ - ವರ್ಷಾ ಬ್ರೇಕಪ್, ಪೋಸ್ಟ್ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಟಿಕ್‌ಟಾಕ್ ಸ್ಟಾರ್‌ಗಳ ಬ್ರೇಕಪ್ ಸ್ಟೋರಿ. ಹುಡುಗ ಮಾಡಿದ ತಪ್ಪು ಎಂದ ನೆಟ್ಟಿಗರು.....
 

Tiktok Instagram reels Varun Varsha  break up post goes viral vcs
Author
First Published Sep 13, 2023, 2:37 PM IST

ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುವ ಪ್ರತಿಯೊಂದು ಹಾಡು, ಡೈಲಾಗ್ ಮತ್ತು ಸಿನಿಮಾಗಳನ್ನು ಟಿಕ್‌ಟಾಕ್, ಡಬ್‌ಸ್ಮ್ಯಾಶ್‌ ಮತ್ತು ರೀಲ್ಸ್‌ ಮಾಡುವ ಮೂಲಕ ಜನಪ್ರಿಯತೆ ಪಡೆದಿರುವ ಜನಪ್ರಿಯ influencers ವರುಣ್ ಮತ್ತು ವರ್ಷಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವರ್ಷಾ ಪೋಸ್ಟ್ ಹಾಕುತ್ತಿದ್ದಂತೆ ಪ್ರತಿಯೊಂದು ಟ್ರೋಲ್ ಮತ್ತು ಮೀಮ್‌ ಪೇಜ್‌ಗಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಅಲ್ಲದೆ ಯಾರಿದು ವರುಣ್ ವರ್ಷಾ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಲು ಶುರು ಮಾಡಿದ್ದಾರೆ. 

ಏನಿದು ಪೋಸ್ಟ್:

'ಎಲ್ಲರಿಗೂ ನಮಸ್ಕಾರ ತುಂಬಾ ದಿನದಿಂದ ನೀವೆಲ್ಲಾ ಕೇಳಿದಂತೆ ಸಾಮಾನ್ಯ ಪ್ರಶ್ನೆ ಏನೆಂದರೆ, ವರುಣ್ ಮತ್ತು ನಿಮಗೂ ಏನಾಯಿತೆಂದು. ಆ ವಿಷಯದ ಬಗ್ಗೆ ಇವತ್ತು ನಾನು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ. ಸುಮಾರು ವರ್ಷಗಳಿಂದ ನಾನು ಮತ್ತು ವರುನ್ ಇಬ್ಬರು ಪ್ರೀತಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಒಂದು ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದಾನೆ. ನನಗೆ ಆ ಹುಡುಗಿ ಹೆಸರು ಹೇಳಲು ಇಷ್ಟವಿಲ್ಲ ಯಾಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ ಈ ವಿಷಯಕ್ಕಾಗಿ ಹಲವಾರು ಬಾರಿ ವರುಣ್ ಮತ್ತು ನನ್ನ ಮಧ್ಯೆ ಮನಸ್ತಾಪಗಳು ಬಂದಿದ್ದು ನಾನು ಎಷ್ಟೇ ಹೇಳಿದರೂ ಅಹ ಅವನು ಆ ಹುಡುಗಿಯನ್ನು ಬಿಡುವುದಕ್ಕೆ ತಯಾರಿಲ್ಲ ಆದುದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀಸಲು ಇಷ್ಟವಿಲ್ಲ ನಾನು ಆ ಹುಡುಗಿ ಜೊತೆ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಯಿತ್ತು. 

ನಟಿ ಶುತಿ ಹರಿಹರನ್ ಮತ್ತೆ ಪ್ರೆಗ್ನೆಂಟ್?; ಸರೋಗೆಸಿ ಬಗ್ಗೆ ನಟಿ ಹೇಳಿಕೆ ವೈರಲ್

ಕಳೆದ ಸುಮಾರು ತಿಂಗಳುಗಳಿಂದ ನನ್ನ ಮತ್ತು ವರುಣ್ ವಿಡಿಯೋಸ್‌ಗಳನ್ನು ಅಪ್ಲೋಡ್ ಮಾಡುತ್ತಿಲ್ಲ ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳಿದಿದ್ದರೆ ನನಗೆ ನಾನೇ ಮೋಸ ಮಾಡಿಕೊಳ್ಳುತ್ತಿದ್ದೇನೆ ಎಂದು ನನ್ನ ಮನಸ್ಸಿಗೆ ಅನಿಸಿದೆ ಆದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯ ಹೇಳಿಕೊಳ್ಳಲು ಇಷ್ಟ ಪಡುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್ ಮಧ್ಯೆ ಯಾವುದೇ ರೀತಿ ಪ್ರೀತಿ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲ ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ ನಾನು ಅವರಿಗಾಗಿ ಜೀವನನ್ನು ನಡೆಸಲೇಬೇಕು ಆದುದರಿಂದ ನಿಮಗೆ ಹೇಳಬೇಕು ಅನಿಸಿದ್ದು ನಾನು ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ ದಯವಿಟ್ಟು ಇದನ್ನು ನೀವು ಅರ್ಧಮಾಡಕೊಳ್ಳುವಿರಿ ಎಂದು ನಾನು ಣಾವಿಸಿದ್ದೇನೆ.

ಹೀಗೆಂದು ವರ್ಷ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಟಿಕ್‌ಟಾಕ್‌ನಿಂದ ಪರಿಚಯವಾದ ವರುಣ್ ಮತ್ತು ವರ್ಷಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ವರುಣ್ ಹುಟ್ಟುಹಬ್ಬದ ದಿನವೇ ವರ್ಷಾಗೆ ಪ್ರಪೋಸ್ ಮಾಡಿಬಿಟ್ಟರು. ಹೀಗಾಗಿ ಪ್ರತಿ ವರ್ಷ ಬರ್ತಡೇ ಜೊತೆ ಲವ್ ಆನಿವರ್ಸರಿ ಆಚರಿಸಿಕೊಳ್ಳುತ್ತಿದ್ದರು ವರುಣ್. ವರ್ಷಾ ಫ್ಯಾಮಿಲಿ ವಿರೋಧ ವ್ಯಕ್ತ ಪಡಿಸಿದಾಗ ವರುಣ್ ತಂದೆ ಇವರಿಬ್ಬರ ಪ್ರೀತಿ ಒಪ್ಪಿಕೊಂಡರು. ಫ್ಯಾಮಿಲಿ ವಿರುದ್ಧವಾಗಿ ವರುಣ್‌ನನ್ನು ಪ್ರೀತಿಸಲು ವರ್ಷ ಮುಂದಾದಳು. ಅದೆಷ್ಟೋ ವರ್ಷ ಕಳೆದ ನಂತರ ವರುಣ್‌ ಮೇಲೆ ವರ್ಷ ಪೋಷಕರಿಗೆಎ ನಂಬಿಕೆ ಬಂದಿತ್ತು. ಇಬ್ಬರು ಕುಟುಂಬ ಒಟ್ಟಗಿದ್ದು ಹಲವು ಸಲ ಯುಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಗೃಹ ಪ್ರವೇಶದಲ್ಲೂ ಬಿಗ್ ಬಾಸ್ ಕಿಶನ್- ನಮ್ರತಾ ರೊಮ್ಯಾನ್ಸ್‌; ಬಿಂಕದ ಸಿಂಗಾರಿಗೆ ಮೈ ಕುಣಿಸಿದ ಜೋಡಿ!

ಇವರ ಪ್ರೀತಿ ಇಷ್ಟೇ ಅಲ್ಲ...ವರುಣ್ ಖುಷಿಯಾಗಿರಬೇಕು ಎಂದು ಒಮ್ಮೆ ದುಬಾರಿ ಬೈಕ್‌ನ ವರ್ಷಾ ಗಿಫ್ಟ್ ಆಗಿ ನೀಡುತ್ತಾರೆ. ಪ್ರತಿ ವರ್ಷಾ ಹುಟ್ಟುಹಬ್ಬಕ್ಕೆ ಚಿನ್ನ ಅಥವಾ ದುಬಾರಿ ಗಿಫ್ಟ್ ಕೊಡುತ್ತಾರೆ. ಇಬ್ಬರು ಒಟ್ಟಿಗೆ ಸೇರಿಕೊಂಡು ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಖರೀದಿಸಿದ್ದರು. ಈಗ ಅದು ಯಾರ ಪಾಲಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ತಂದೆ ಕಳೆದುಕೊಂಡು ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ ವರುಣ್‌ನ ಸಮಾಜದಲ್ಲಿ ಒಳ್ಳೆ ಸ್ಥಾನಕ್ಕೆ ತಂದು ಬಿಟ್ಟ ವ್ಯಕ್ತಿ ವರ್ಷಾ. ಜನಪ್ರಿಯತೆ ಮತ್ತು ಹಣ ಗಳಿಸಲು ಸಪೋರ್ಟ್ ಮಾಡಿದ್ದು ವರ್ಷಾ. ಹೀಗಾಗಿ ವರುಣ್‌ ವಿರುದ್ಧ ಪ್ರತಿಯೊಬ್ಬ ನೆಟ್ಟಿಗ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

Follow Us:
Download App:
  • android
  • ios