ಸೀತಾರಾಮ ಸೀರಿಯಲ್​ ಸೀತಾ, ವೈಷ್ಣವಿ ಮನೆಗೆ ಬಂದ ಕಳ್ಳ! ಅವನು ಕೇಳಿದ್ದೇನು? ನಟಿ ಹೇಳಿದ್ದೇನು?

ಸೀತಾರಾಮ ಸೀರಿಯಲ್​ ಸೀತಾ ಅಂದ್ರೆ ವೈಷ್ಣವಿ ಗೌಡ ಮನೆಗೆ ಬಂದನಂತೆ ಕಳ್ಳ! ಅವನ್ಯಾರು? ನಟಿಯ ಬಾಯಲ್ಲೇ ಕೇಳಿ...
 c

Thief entry to Seetharama serial Vaishnavi Gowdas home What he asked and what she  suc

ಸೀತಾರಾಮ ಸೀರಿಯಲ್​ ಸೀತೆಯ ಮನೆಗೆ ಕಳ್ಳ ಬಂದಿದ್ನಂತೆ! ಹೌದು. ಹೀಗಂತ ಖುದ್ದು ಸೀತೆ ಅಂದ್ರೆ ವೈಷ್ಣವಿ ಗೌಡ ಹೇಳಿದ್ದಾರೆ! ಅಷ್ಟಕ್ಕೂ ಬಹುತೇಕರಿಗೆ ತಿಳಿದಿರುವಂತೆ ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತೆಯ ಪಾತ್ರ ಮನೆಮಾತಾಗಿದೆ. ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್​ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​.

ಇದೀಗ ಅವರು ರೀಲ್ಸ್​ ಒಂದನ್ನು ಮಾಡಿದ್ದಾರೆ. ನಿನ್ನೆ ರಾತ್ರಿ ನನ್ನ ಮನೆಗೆ ಒಬ್ಬ ಕಳ್ಳ ಬಂದಿದ್ದ. ನಿನ್ನ ಬಳಿ ಏನೇನಿದೆ ಎಲ್ಲವನ್ನೂ ಕೊಡು ಎಂದ. ಆಗ ನಾನು ನನ್ನ ರಾಮ್​, ನನ್ನ ಶಾಮ್​, ನನ್ನ ಹೆಸರು, ನನ್ನ ಕೆಲಸ ಎಲ್ಲವನ್ನೂ ತೆಗೆದುಕೊಂಡು ಹೋಗು ಎಂದೆ ಎಂಬ ಹಾಡಿನ ರೀಲ್ಸ್​ ಮಾಡಿದ್ದಾರೆ. ಅಷ್ಟಕ್ಕೂ ಇದು ಚೋರ್ ಎಂಬ ಸಂಗೀತ ಆಲ್ಬಂನ ಹಾಡಾಗಿದ್ದು, ಇದೀಗ ಟ್ರೆಂಡಿಂಗ್​ನಲ್ಲಿದೆ. ಅದಕ್ಕೆ ನಟಿ ಸಕತ್​ ಎಕ್ಸ್​ಪ್ರೆಷನ್​ ಕೊಟ್ಟು ರೀಲ್ಸ್​ ಮಾಡಿದ್ದಾರೆ. ಅದರಲ್ಲಿ ರಾಮ್​ನೂ ಕರೆದುಕೊಂಡು ಹೋಗು ಎಂಬ ಮಾತು ಬಂದಿದ್ದರಿಂದ ನೆಟ್ಟಿಗರು ಕಮೆಂಟ್​  ಮಾಡುತ್ತಿದ್ದಾರೆ. ರಾಮ್​ನ ಕರೆದುಕೊಂಡು ಹೋದ್ರೆ ಸೀತಾ ಏನ್​ ಮಾಡ್ತಾಳೆ? ಹೀಗೆಲ್ಲಾ ಹೇಳೋದಾ ಎಂದು ಕೇಳುತ್ತಿದ್ದಾರೆ.

ಸಿಹಿಯ ನಟನೆಗೆ ಕಣ್ಣೀರು ಹಾಕಿದ ಫ್ಯಾನ್ಸ್‌: ನಿನಗೆ ನೀನೇ ಸಾಟಿ ಕಂದಾ ಎಂದ ಅಭಿಮಾನಿಗಳು

ಇನ್ನು ಸೀತಾರಾಮ ವಿಷಯಕ್ಕೆ ಬರುವುದಾದರೆ, ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ.  ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಾರೆ. 

 

ಅದೇ ಇನ್ನೊಂದೆಡೆ ಸೀತಾಳಿಗೆ ಅಪಘಾತದ ವಿಷಯ ತಿಳಿದು ಗಾಬರಿಯಾಗಿದ್ದಾಳೆ. ಜೋರಾಗಿ ಅಳುತ್ತಾ ಆಸ್ಪತ್ರೆಗೆ ಧಾವಿಸಿದ್ದಾಳೆ. ತನ್ನಿಂದ ತಪ್ಪಾಯ್ತು ಎಂದು ಗೋಳೋ ಎಂದಿದ್ದಾಳೆ. ಆಸ್ಪತ್ರೆಗೆ ಧಾವಿಸುತ್ತಿರುವ ಹೊತ್ತಿನಲ್ಲಿಯೇ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಬಂದಿದೆ. ರಾಮ್​ನ ಮಾಜಿ ಪ್ರೇಯಸಿಯ ಎಂಟ್ರಿ ಆಗಿದೆ. ಹೂಗುಚ್ಛ ಹಿಡಿದುಕೊಂಡು ಬಂದಿದ್ದಾಳೆ. ರಾಮ್‌ ಬಾಳಿನಿಂದ ಸೀತಾಳನ್ನು ದೂರ ಮಾಡಲು ಚಿಕ್ಕಮ್ಮ ಪ್ರೇಯಸಿಯ ಕೈಜೋಡಿಸಿದ್ದಾಳೆ. ಎಚ್ಚರಗೊಂಡ ರಾಮ್‌ ಸೀತಾಳಿಗೆ ಮೌನವಾಗಿಯೇ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾನೆ. ಮುಂದೇನು ಎನ್ನುವುದು ಪ್ರಶ್ನೆ. 

Latest Videos
Follow Us:
Download App:
  • android
  • ios