ಎದ್ದು ಬಂದು ಎದೆಗೆ ಒದೆಯೋದಾ? ಹೊಸ ವರ್ಷದ ಶುರುವಿನಲ್ಲಿಯೇ ಬಿಗ್ಬಾಸ್ನಲ್ಲಿ ಇದೆಂಥ ಕಿತ್ತಾಟ?
ಹೊಸ ವರ್ಷದ ಬಿಗ್ಬಾಸ್ನ ಆರಂಭಿಕ ಎಪಿಸೋಡ್ ಕಿತ್ತಾಟದ ಜೊತೆ ಶುರುವಾಗಿದೆ. ಅಷ್ಟಕ್ಕೂ ಆಗಿದ್ದೇನು?
2023ರ ಕೊನೆಯ ವಾರ ಬಿಗ್ಬಾಸ್ ಮನೆಯಲ್ಲಿದ್ದ ಶಾಂತ ವಾತಾವರಣ ಹೊಸ ವರ್ಷಕ್ಕೆ ಮತ್ತೆ ಕದಡಿ ಹೋಗಿದೆ. ಹೊಸ ವರ್ಷದ ಆರಂಭ ಮತ್ತೆ ಭಾರಿ ಕಿತ್ತಾಟದ ಜೊತೆ ಶುರುವಾಗಿದೆ. ಪಾಯಿಂಟ್ಸ್ ಟಾಸ್ಕ್ನಲ್ಲಿ ತನಿಷಾ, ಕಾರ್ತಿಕ್ ಹಾಗೂ ವಿನಯ್ ನಡುವೆ ಶುರುವಾಗಿರುವ ಈ ಜಗಳ ವಿಕೋಪಕ್ಕೆ ಹೋಗಿದ್ದು, ಹೊಸ ವರ್ಷದ ಆರಂಭದಲ್ಲಿಯೇ ಬಿಗ್ಬಾಸ್ ಮನೆ ರಣಾಂಗಣವಾಗಿದೆ. ಅಷ್ಟಕ್ಕೂ ಇಲ್ಲಿ ಇಂಥ ಕಿತ್ತಾಟ, ಕಾದಾಟ, ಬಡಿದಾಟ ಇದ್ದರಷ್ಟೇ ಬಿಗ್ಬಾಸ್ ಪ್ರೇಮಿಗಳು ಅದನ್ನು ಇಷ್ಟಪಟ್ಟು ನೋಡುವುದು ಎಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಎಲ್ಲವೂ ಸರಿಯಾಗಿಬಿಟ್ಟರೆ ಬಹುಶಃ ಈ ರಿಯಾಲಿಟಿ ಷೋಗೂ ಟಿಆರ್ಪಿ ಸಿಗುವುದಿಲ್ಲ, ಅದಕ್ಕೆ ಕಾರಣ ವೀಕ್ಷಕರು ಅದನ್ನು ನೋಡುವುದೇ ಇಲ್ಲ. ಬಡಿದಾಟ, ಹುಚ್ಚಾಟ ಹೆಚ್ಚಾದಷ್ಟೂ ವೀಕ್ಷಕರೂ ಇದನ್ನು ಆಸ್ವಾದಿಸುತ್ತಾರೆ ಎನ್ನುವುದು ಟಿಆರ್ಪಿ ರೇಟು ನೋಡಿದರೆ ತಿಳಿದುಬರುತ್ತದೆ. ಅದೇ ರೀತಿ 2024ರ ಆರಂಭ ಬಿಗ್ಬಾಸ್ ಪ್ರೇಮಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸುವಂತಿದೆ.
ಅಷ್ಟಕ್ಕೂ ಈಗ ಸ್ಪರ್ಧಿಗಳ ನಡುವೆ ಕಿತ್ತಾಟಕ್ಕೆ ಕಾರಣವಾದದ್ದು ಪಾಯಿಂಟ್ಸ್ ವಿಚಾರದಲ್ಲಿ. ಬಿಗ್ ಬಾಸ್ ಸ್ಪರ್ಧಿಗಳು ಎಷ್ಟಕ್ಕೆ ಬೆಲೆ ಬಾಳುತ್ತಾರೆ ಅಷ್ಟು ಪಾಯಿಂಟ್ಸ್ ತೆಗೆದುಕೊಳ್ಳಬೇಕು ಎಂದು ಬಿಗ್ಬಾಸ್ ಹೇಳಿದ್ದಾರೆ. ಇದೇ ವೇಳೆ ಕಿರಿಕ್ ಶುರುವಾಗಿದೆ. ಇಲ್ಲಿ ಜಗಳ ಬಂದಿರುವುದು ಸಂಗೀತಾ, ವಿನಯ್, ಕಾರ್ತಿಕ್ ತನಿಷಾ ಈ ನಾಲ್ವರ ಮಧ್ಯೆ. ಸದ್ಯಕ್ಕೆ ಸಂಗೀತಾ ಅವರು ನಾನು ಅಸಮರ್ಥರಾಗಿ ಇಲ್ಲಿಗೆ ಬಂದೆ ಎಂಬ ಮಾತು ಆಡಿದ್ದು ಇದಕ್ಕೆ ವಾಪಸ್ ವಿನಯ್ ಅವರು ನೀವು ಆ ರೀತಿ ಕಾರ್ಡ್ ಪ್ಲೇ ಮಾಡಬೇಡಿ ಎಂದಿದ್ದಾರೆ. ಕಳೆದ ಕೆಲ ಎಪಿಸೋಡ್ ಹಿಂದೆ ವಿನಯ್ ನಾನು ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಜಗಳವಾಡೋದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅವರು ಆ ಮಾತನ್ನೇ ಮರೆತಂತಿದ್ದು ಹೊಸ ವರ್ಷದ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ತಮ್ಮಲ್ಲೇ ಕಚ್ಚಾಡಿ ಕೊಳ್ಳುತ್ತಿದ್ದಾರೆ.
ಚಾಲೆಂಜ್ ಹಾಕಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ ಮೂರ್ಚೆ ಹೋಗಿ ಆಸ್ಪತ್ರೆಗೆ ದಾಖಲು! ವಿಡಿಯೋ ವೈರಲ್
ಸದ್ಯಕ್ಕೆ ವಿನಯ್ ಒಬ್ಬರೇ 20 ಲಕ್ಷ ಪಾಯಿಂಟ್ಸ್ ತೆಗೆದುಕೊಂಡಿದ್ದರೆ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸಮಸ್ಯೆಗಳು ಕೂಡ ಬರುತ್ತಾ ಇರಲಿಲ್ಲ. ಆದರೆ ಇಲ್ಲಿ ಆದದ್ದೇ ಬೇರೆ. ಸಂಗೀತಾ, ಕಾರ್ತಿಕ್ ತನಿಷಾ ಕೂಡ ಶೇರ್ ಕೇಳಿದ್ದಕ್ಕೆ ಮಾತಿನ ಚಕಮಕಿ ನಡೆದಿದೆ. ಇದಕ್ಕೆ ತನಿಷಾ ಆರಂಭದಲ್ಲಿ ತಗಾದೆ ತೆಗೆದಿದ್ದಾರೆ. ಆಗ ಎದ್ದು ಬಂದು ಎದೆಗೆ ಒದ್ದಂಗೆ ಎಂಬ ಗಾದೆ ಮಾತು ಬಂದಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ತನಿಷಾ ಜೋರಾಗಿ ಮಾತನಾಡುತ್ತಿದ್ದಂತೆಯೇ ಕಾರ್ತಿಕ್ ಬುಡವನ್ನೇ ಅಲ್ಲಾಡಿಸುತ್ತೇನೆಂದರು. ಆಗ ಕೋಪದಲ್ಲಿ ತನಿಷಾ ನಾನು ನಿಮ್ಮ ಹೆಸರನ್ನು ಹೇಳಿಯೇ ಇಲ್ಲ. ಇದ್ದಿದ್ದನ್ನ ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂತೆ ಎಂಬ ಗಾದೆ ಮಾತಿನಂತಾಯಿತು ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ವಿನಯ್ ಮನೆಯಲ್ಲಿ ನನ್ನ ಎದೆಗೆ ಒದೆಯುವ ಧೈರ್ಯ ಯಾರಿಗೂ ಇಲ್ಲ ಎಂದರು, ಅಷ್ಟೇ ಅಲ್ಲದೇ, ನಿನಗೆ ಯೋಗ್ಯತೆ ಇದ್ದರೆ ನನ್ನ ಎದೆಗೆ ಒದ್ದು ನೋಡು ಎಂದರು.
ಇವರ ಮಾತಿನ ಚಕಮಕಿ ಇಷ್ಟಕ್ಕೆ ನಿಂತಿಲ್ಲ. ವಿನಯ್ ಈ ರೀತಿ ಹೇಳುತ್ತಿದ್ದಂತೆಯೇ ಸುಮ್ಮನಿರದ ತನಿಷಾ, ನಾನು ಸತ್ಯ ಹೇಳಿದರೆ ಉರಿದು ಕೊಳ್ಳೋರಿಗೆ ಈ ಮಾತು ಹೇಳಿದ್ದೇನೆ ನೀನು ಯಾಕೆ ಚುಚ್ಚಿ ಕೊಳ್ಳುತ್ತಿದ್ದೀಯಾ ಎಂದರು. ಅಷ್ಟಕ್ಕೂ ವಿನಯ್ ಅವರು ಮೊದಲಿನಿಂದಲೂ ಸಿಕ್ಕಾಪಟ್ಟೆ ಸಿಟ್ಟು, ಗಲಾಟೆಯಲ್ಲಿಯೇ ಆಡುತ್ತಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಇಬ್ಬರು ಕೂಡ ವಿನಯ್ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. ಇನ್ನು ವರ್ತೂರು ವಿಷಯದಲ್ಲಿ ಹಾಗಲ್ಲ. ಅವರು ತಾವು ಎಷ್ಟಕ್ಕೆ ತೂಗುತ್ತಾರೋ ಅಷ್ಟು ಪಾಯಿಂಟ್ಸ್ ತೆಗೆದುಕೊಂಡು ಕತ್ತಿಗೆ ಹಾಕಿಕೊಂಡಿದ್ದಾರೆ. ಪ್ರತಾಪ್ ಕೂಡ ಅಷ್ಟೇ ನಾನು 50 ಸಾವಿರಕ್ಕೆ ತೂಗುತ್ತೇನೆ ಎಂದು ಅಷ್ಟು ಪಾಯಿಂಟ್ಸ್ ತೆಗೆದುಕೊಂಡಿದ್ದಾರೆ. ಆದರೆ ಸಂಗೀತಾ, ವಿನಯ್, ಕಾರ್ತಿಕ್ ತನಿಷಾ ಈ ನಾಲ್ವರ ಮಧ್ಯೆ ಮಾತಿನ ಚಕಮಕಿಯಾಗಿದೆ.
ಕುತೂಹಲ ಮೂಡಿಸಿದ ಶಾರುಖ್ ದೀಪಿಕಾ ಹೊಸ ಪ್ರೊಮೋ: ಪಠಾಣ್ 2 ಅಲ್ವಂತೆ! ಹಾಗಿದ್ರೆ ಇದೇನು?