Ramachari Kannada Serial: ರಾಮಾಚಾರಿ ಧಾರಾವಾಹಿಯಲ್ಲಿ ಹೊಸ ಪಾತ್ರದ ಆಗಮನವಾಗಿದೆ, ಇದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಸೀತಾಲಕ್ಷ್ಮೀ ಎಂಬ ಹಠಮಾರಿ ಹುಡುಗಿಯ ಪಾತ್ರವು ಕಥೆಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿ ಸಮಯ ಬದಲಾಗಿದ್ದು, ವೀಕ್ಷಕರು ಕೊಂಚ ಬೇಸರ ವ್ಯಕ್ತಪಡಿಸಿದ್ದರು. 9 ಗಂಟೆಗೆ ಪ್ರಸಾರವಾಗುತ್ತಿದ್ದ ರಾಮಾಚಾರಿ ಈಗ 10 ಗಂಟೆಗೆ ಬರುತ್ತಿದೆ. ಧಾರಾವಾಹಿಯ ವಿಲನ್ ವೈಶಾಖಾ ಒಳ್ಳೆಯವಳಾಗಿದ್ದು ಆಯ್ತು. ಮತ್ತೊಂದೆಡೆ ಚಾರು ವಿರುದ್ಧ ಕತ್ತಿ ಮಸೆಯುತ್ತಿದ್ದ ರುಕ್ಮಿಣಿಯನ್ನು ಕರೆದುಕೊಂಡು ಕೃಷ್ಣ ಪುಣೆಗೆ ಹೋಗಿದ್ದಾನೆ. ಇನ್ನೇನು ಧಾರಾವಾಹಿ ಮುಗಿತು ಎಂದು ಲೆಕ್ಕಾಚಾರ ಹಾಕುತ್ತಿದ್ದ ವೀಕ್ಷಕರಿಗೆ ನಿರ್ದೇಶಕರು ಪಿಕ್ಚರ್ ಅಭೀ ಬಾಕಿ ಹೈ ಎಂದು ಹೇಳಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಹೊಸ ಪಾತ್ರವೊಂದನ್ನು ಪರಿಚಯಿಸಲಾಗಿದೆ. ಇದನ್ನು ನೋಡಿ ವೀಕ್ಷಕರು, ತುಂಬಾ ಎಳೆಯಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
ಹೊಸ ಪಾತ್ರದ ಪರಿಚಯ
ರಾಮಾಚಾರಿ ಸೀರಿಯಲ್‌ನಲ್ಲಿ ಹೊಸ ಪಾತ್ರದ ಪರಿಚಯವಾಗಿದೆ. ಶ್ರೀಮಂತ ಕುಟುಂಬದ ಹಠಮಾರಿ ಮಗಳಾಗಿರುವ ಸೀತಾಲಕ್ಷ್ಮೀ ಪಾತ್ರ ಬಂದಿದೆ. ಪರಿಚಯದ ಸಂಚಿಕೆಯಲ್ಲಿಯೇ ಸೀತಾಲಕ್ಷ್ಮೀ ಎಷ್ಟು ಹಠಮಾರಿ ಎಂಬುದನ್ನು ತೋರಿಸಲಾಗಿದೆ. ತಾನು ಇಷ್ಟಪಟ್ಟ ಗೊಂಬೆ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ಮನೆಯಲ್ಲಿರೋ ಎಲ್ಲಾ ವಸ್ತುಗಳನ್ನು ಒಡೆದು ಹಾಕಿದ್ದಾಳೆ. ಸೀತಾಲಕ್ಷ್ಮೀ ಪ್ರೀತಿ ಮೇಲಿಂದ ಆಕೆ ಬೇಡಿದನ್ನು ಕೊಡಿಸುವ ತಂದೆ ಮತ್ತು ತಾಯಿಯನ್ನು ನಿನ್ನೆ ಸಂಚಿಕೆಯಲ್ಲಿ ತೋರಿಸಲಾಗಿದೆ. ಮನೆಯಲ್ಲಿರೋ ಎಲ್ಲಾ ವಸ್ತುಗಳನ್ನು ಒಡೆದು ಹಾಕು. ಜೆಸಿಬಿಯಿಂದ ಈ ಮನೆಯನ್ನೇ ಬೀಳಿಸು. ಆದರೆ ನಿನಗೆ ಯಾವುದೇ ಅಪಾಯ ಮಾಡಿಕೊಳ್ಳಬೇಡ ಎಂದು ತಂದೆ ಸಮಾಧಾನ ಮಾಡಿದ್ದಾನೆ. ಈ ಮೂಲಕ ಆತ ಎಷ್ಟು ಶ್ರೀಮಂತ ಮತ್ತು ಮಗಳ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾನೆ ಅನ್ನೋದನ್ನು ತೋರಿಸಲಾಗಿದೆ.
ರಾಮಾಚಾರಿ ತಲೆಯಲ್ಲಿ ಎರಡು ಸುಳಿ
ಮತ್ತೊಂದೆಡೆ ರಾಮಾಚಾರಿ ತಲೆಯಲ್ಲಿ ಎರಡು ಸುಳಿ ಇರೋ ವಿಚಾರ ಚಾರುಗೆ ಗೊತ್ತಾಗಿದೆ. ಎರಡು ಸುಳಿ ಇದ್ರೆ ಏನು ಅರ್ಥ ಅಂತ ಕೇಳಿದ್ದಕ್ಕೆ, ನನ್ನ ತಲೆಯಲ್ಲಿ ಎರಡು ಸುಳಿ, ನಿಮ್ಮ ಕಣ್ಣಲ್ಲಿ ಎರಡು ಪ್ರೀತಿಯ ಬಾವಿ ಎಂದು ರಾಮಾಚಾರಿ ರೊಮ್ಯಾಂಟಿಕ್ ಡೈಲಾಗ್ ಹೊಡೆದಿದ್ದಾನೆ. ಮದುವೆಯಾಗಿ ಇಷ್ಟು ದಿನ ಆಯ್ತು. ನನ್ನ ತಲೆಯನ್ನು ನಿಮಗೆ ಕೊಟ್ಟು ಇಷ್ಟು ದಿನ ಆಯ್ತು. ಎರಡು ಸುಳಿ ಇರೋ ವಿಷಯ ತಿಳಿದುಕೊಳ್ಳಲು ಇಷ್ಟು ಸಮಯ ಬೇಕಾ ಆಯ್ತಾ ಎಂದು ತಮಾಷೆ ಮಾಡಿ ರಾಮಾಚಾರಿ ಆಫಿಸ್‌ಗೆ ಹೋಗಿದ್ದಾನೆ. ಇದೇ ವಿಷಯವನ್ನು ಅತ್ತೆಗೆ ಚಾರು ಕೇಳಿದಾಗ, ತಲೆಯಲ್ಲಿ ಸುಳಿ ಎರಡಿದ್ರೆ, ಮದುವೆಯೂ ಎರಡು ಆಗುತ್ತೆ ಎಂದು ಹೇಳಿದ್ದಾರೆ. ಎರಡು ಮದುವೆಯ ವಿಷಯ ಕೇಳಿ ಚಾರು ಆತಂಕಕ್ಕೆ ಒಳಗಾಗಿದ್ದಾಳೆ.
ಸೀತಾಲಕ್ಷ್ಮೀ ಮತ್ತು ರಾಮಾಚಾರಿಯ ಮೊದಲ ಭೇಟಿ
ತಾನು ಇಷ್ಟಪಟ್ಟಿದ್ದು ಬೇಕು ಅನ್ನೋ ಮೊಂಡು ಸ್ವಭಾವದ ಸೀತಾಲಕ್ಷ್ಮೀ ಮತ್ತು ರಾಮಾಚಾರಿಯ ಮುಖಾಮುಖಿಯಾಗಿದೆ. ಸೀತಾಲಕ್ಷ್ಮೀ ಚಲಾಯಿಸುತ್ತಿದ್ದ ಕಾರ್ ಬ್ರೇಕ್‌ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲಿಗೆ ಬಂದ ರಾಮಾಚಾರಿ ಕಾರ್ ಡೋರ್ ಓಪನ್ ಮಾಡಿ ಸೀತಾಲಕ್ಷ್ಮೀಯನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋಗಿದ್ದಾನೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಸೀತಾಲಕ್ಷ್ಮೀಗೆ ರಾಮಾಚಾರಿ ಮೇಲೆ ಲವ್ ಆದಂತೆ ತೋರಿಸಲಾಗಿದೆ. ಮುಂದೆ ರಾಮಾಚಾರಿಯೇ ತನ್ನ ಗಂಡನಾಗಬೇಕೆಂದು ಸೀತಾಲಕ್ಷ್ಮೀ ಹಠ ಹಿಡಿಯಲಿದ್ದಾಳೆ ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.

ರಾಮಾಚಾರಿಗೆ ಪುಟ್ಟಗೌರಿಯ ಟಚ್
ಸೀತಾಲಕ್ಷ್ಮೀ ಪಾತ್ರ ನೋಡುತ್ತಿದ್ದಂತೆ ಪ್ರೇಕ್ಷಕರ ಮುಂದೆ ಪುಟ್ಟಗೌರಿ ಧಾರಾವಾಹಿ ಕಣ್ಮುಂದೆ ಬಂದಿದೆ. ವೀಕ್ಷಕರು ಹಿಮಾ ಪಾತ್ರವನ್ನು ಸೀತಾಲಕ್ಷ್ಮೀಗೆ ಹೋಲಿಸುತ್ತಿದ್ದಾರೆ. ಮಹೇಶ್‌ಗೆ ಮದುವೆಯಾಗಿದ್ರೂ ಮಗಳ ಆಸೆ ಪೂರೈಸಲು ಆತನ ಜೊತೆಯಲ್ಲಿ ಮದುವೆ ಮಾಡಿಸಲು ತಂದೆ ಮುಂದಾಗುತ್ತಾನೆ. ರಾಮಾಚಾರಿಯಲ್ಲಿಯೂ ಮುಂದೆ ಇದೇ ರೀತಿ ಆಗುತ್ತಾ ಅನ್ನೋ ಅನುಮಾನ ಪ್ರೇಕ್ಷಕರಲ್ಲಿ ಉಂಟಾಗಿದೆ.
