Breakup: 5 ವರ್ಷ ಪ್ರೀತಿಗೆ ಬ್ರೇಕ್ ಹಾಕಿದ ನಟಿ Deepthi Sunaina ಮತ್ತು ಬಿಗ್ ಬಾಸ್ Shanmukh Jaswanth!
5 ವರ್ಷಗಳ ಕಾಲ ಪ್ರೀತಿಸಿ ಬ್ರೇಕಪ್ ಮಾಡಿಕೊಂಡ ಸೆಲೆಬ್ರಿಟಿ ಜೋಡಿ. ಸುನೈನಾ ಪರ ನಿಂತ ನೆಟ್ಟಿಗರು....
ಟಿಕ್ ಟಾಕ್, ಇನ್‌ಸ್ಟಾಗ್ರಾಂ (Instagram) ರೀಲ್ಸ್ ಮತ್ತು ಯುಟ್ಯೂಬ್ (Youtube) ಮೂಲಕ ಜನಪ್ರಿಯತೆ ಪಡೆದುಕೊಂಡ ದೀಪ್ತಿ (Deepthi Sunaina) ಮತ್ತು ಷಣ್ಮುಖ (Shanmukh Jaswanth) 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬದವರಿಗೂ ಇವರ ಲವ್ ಮ್ಯಾಟರ್ ಗೊತ್ತಿದ್ದು ಗ್ರೀನ್ ಸಿಗ್ನಲ್ ಕೊಟ್ಟ ನಂತರವಷ್ಟೇ ಮುಂದೆ ನಡೆದಿದ್ದಾರೆ. ಕಡಿಮೆ ಅವಧಿಯಲ್ಲಿ ಬಲು ಬೇಗ ಹೆಸರು ಗಳಿಸಿದ ಜೋಡಿ ಇವರದ್ದು ಆದರೆ ಬ್ರೇಕಪ್ (Breakup) ಆಗಲು ಕಾರಣ ಏನು ಎಂದು ಯಾರೊಂದಿಗೂ ಹಂಚಿಕೊಂಡಿಲ್ಲ.
ಹೌದು! ತೆಲುಗು ಬಿಗ್ ಬಾಸ್ ಸೀಸನ್ 2ರಲ್ಲಿ (Bigg Boss Telugu) ದೀಪ್ತಿ ಸ್ಪರ್ಧಿಸಿದ್ದರು ಇದಾದ ನಂತರ ಅವರ ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ದೀಪ್ತಿಯಿಂದ ಜನಪ್ರಿಯತೆ ಪಡೆದುಕೊಂಡ ಬಾಯ್‌ಫ್ರೆಂಡ್ (Boyfriend) ಷಣ್ಮುಖ ಕೂಡ ಬಿಗ್ ಬಾಸ್ ಸೀಸನ್ 5 ಪ್ರವೇಶಿಸಿದ್ದರು. ಮನೆಯೊಳಗಿದ್ದ ಷಣ್ಮುಖ ಅವರಿಗೆ ಸಿರಿ ಹನುಮಂತ್ (Siri Hanmanth) ಅವರೊಟ್ಟಿಗೆ ಕ್ಲೋಸ್ ಆದಾಗ ಕಾರಣ ಇವರಿಬ್ಬರ ನಡುವೆ ಕಿಡಿ ಹತ್ತಿಕೊಂಡಿದೆ ಎನ್ನಲಾಗಿದೆ. ಕ್ಯಾಮೆರಾ ಎದುರು ಇಬ್ಬರು ತಬ್ಬಿಕೊಂಡು ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವುದನ್ನು ಎಲ್ಲರು ನೋಡಿದ್ದಾರೆ. ಷಣ್ಮುಖ ಪ್ರೀತಿ ವಿಚಾರ ಎಲ್ಲಿರಿಗೂ ಗೊತ್ತಿರುವ ಕಾರಣ ಮನೆಯಲ್ಲಿದ್ದವರು ಇದರ ಬಗ್ಗೆ ಚಿಂತಿಸಿಲ್ಲ ಅದರೆ ದೀಪ್ತಿ ಇದನ್ನು ನೋಡಿ ಒಪ್ಪಿಕೊಳ್ಳುವುದಕ್ಕೆ ಕಷ್ಟ ಪಟ್ಟಿದ್ದಾರೆ. ಹೀಗಾಗಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಯತ್ನ ಮಾಡೋಣ ನನ್ನ ಇತಿಮಿತಿಯಲ್ಲಿದ್ದರೆ ಡ್ಯಾನ್ಸ್ ಮಾಡ್ತೀನಿ: ನಟ Vijay Raghavendraಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ (Social Media) ಲೈವ್ ಬಂದ ಷಣ್ಮುಖ 'ದಯವಿಟ್ಟು ಇದು ಬ್ರೇಕಪ್ ಎಂದು ಹೇಳಿ ನನ್ನನ್ನು ಹೆದರಿಸಬೇಡಿ. ಅವಳು ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾಳೆ ನಿಜ ಆದರೆ ನಾನು ಶೀಘ್ರವೇ ಅವಳನ್ನು ಭೇಟಿ ಮಾಡಿ ಸರಿ ಮಾಡಿಕೊಳ್ಳುವೆ' ಎಂದಿದ್ದರು. ಆದರೆ ಅಷ್ಟರಲ್ಲಿ ಷಣ್ಮುಖ ಅವರನ್ನು ಎಲ್ಲಾ ಕಡೆ ಬ್ಲಾಕ್ ಮಾಡುವ ಮೂಲಕ ದೀಪ್ತಿ ಬ್ರೇಕಪ್ ಸಣ್ಣ ಸುಳಿವು ಕೊಟ್ಟರು.
ದೀಪ್ತಿ ಮಾತು:
'ತುಂಬಾ ದಿನಗಳಿಂದ ಚಿಂತಿಸಿ ತೆಗೆದುಕೊಂಡಿರುವ ನಿರ್ಧಾರ ಇದು. ಷಣ್ಮುಖ ಮತ್ತು ನಾನು ನಿರ್ಧರಿಸಿ ನಮ್ಮ ಜೀವನದಲ್ಲಿ ಬೇರೆ ಆಗುತ್ತಿದ್ದೀವಿ ನಮ್ಮ individual pathನ ಫಾಲೋ ಮಾಡಬೇಕಿದೆ. ಈ 5 ವರ್ಷ ಸಂಬಂಧದಲ್ಲಿ ಪ್ರೀತಿ, ಸಂತೋಷ ಮತ್ತು ಗ್ರೋಥ್ ಮಾತ್ರವಿರಲಿಲ್ಲ ನಮ್ಮೊಳಗಿರುವ demonsನ ಫೈಟ್ ಮಾಡುವುದು ಕೂಡ ಕಷ್ಟ ಆಯ್ತು. ನೀವೆಲ್ಲರೂ ನನ್ನ ಸಂಬಂಧ ಶಾಶ್ವತವಾಗಿ ಉಳಿಯಬೇಕು ಎಂದು ಎಷ್ಟು ಬಯಸುತ್ತಿದ್ದಿರೋ ಅಷ್ಟೆ ನಾವು ಕೂಡ ಬಯಸುತ್ತಿದ್ದೆವು ಆದರೆ ಬಹಳ ವರ್ಷಗಳಿಂದ ಇದು ನಡೆಯುತ್ತಿದ್ದು ದಿನ ಸಾಗಿಸಲು ಕಷ್ಟವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನೋಡುವಷ್ಟು ಸುಲಭವಲ್ಲ ಜೀವನ. ನಾವಿಬ್ಬರು ಒಟ್ಟಿಗೆ ಇರಬೇಕು ಎಂದು ಕಿತ್ತಾಡುವ ಸಮಯದಲ್ಲಿ ನಮ್ಮನ್ನು ನಾವು ಕಳೆದುಕೊಂಡಿದ್ದೀವಿ. ನಮಗೆ ಜೀವನದಲ್ಲಿ ಏನು ಬೇಕು ಎಂಬುದನ್ನು ನಿಜಕ್ಕೂ ಮರೆತಿದ್ದೀವಿ. ಒಂದೇ ಕಡೆ ಸ್ಟಕ್ ಆಗುವ ಪದಲು ಮುಂದೆ ಹೋಗೋಣ ಎಂದುಕೊಂಡಿದ್ದೀವಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
Sathyaraj Hospitalized: ಬಾಹುಬಲಿ ಕಟ್ಟಪ್ಪ ಖ್ಯಾತಿಯ ಹಿರಿಯ ನಟ ಆಸ್ಪತ್ರೆಗೆ ದಾಖಲುಷಣ್ಮುಖ ಮಾತು:
'ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಆಕೆಗಿದೆ. ಈಗಾಗಲೆ ಜೀವನದಲ್ಲಿ ಸಾಕಷ್ಟು ಎದುರಿಸಿದ್ದಾಳೆ. ಆಕೆ ಸಂತೋಷವಾಗಿರಬೇಕು ನೆಮ್ಮದಿಯಾಗಿರಬೇಕು ಎಂದಷ್ಟೆ ನಾನು ಭಾವಿಸುವೆ. ಯಾವು ಯಾವುದೇ ದಾರಿ ಆಯ್ಕೆ ಮಾಡಿಕೊಂಡರು ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತೇವೆ. ನನ್ನೊಟ್ಟಿಗೆ 5ವರ್ಷ ಇದ್ದು ನಾನ್ನೊಬ್ಬ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುವುದಕ್ಕೆ ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಸ್. ನೀವು ಸಂತೋಷವಾಗಿರಬೇಕು. ಆಲ್ ದಿ ಬೆಸ್ಟ್ ದೀಪು' ಎಂದು ಬರೆದುಕೊಂಡಿದ್ದಾರೆ.