Asianet Suvarna News Asianet Suvarna News

Sathyaraj Hospitalized: ಬಾಹುಬಲಿ ಕಟ್ಟಪ್ಪ ಖ್ಯಾತಿಯ ಹಿರಿಯ ನಟ ಆಸ್ಪತ್ರೆಗೆ ದಾಖಲು

  • Sathyaraj Hospitalized: ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಆಸ್ಪತ್ರೆಗೆ ದಾಖಲು
  • ಬಹುಭಾಷಾ ನಟ ಸತ್ಯರಾಜ್ ಚೆನ್ನೈ ಆಸ್ಪತ್ರೆಯಲ್ಲಿ
Legendary Telugu Actor Sathyaraj Hospitalized in Chennai dpl
Author
Bangalore, First Published Jan 8, 2022, 1:18 PM IST

ಲೆಜೆಂಡರಿ ನಟ, ಬಾಹುಬಲಿ(Baahubali) ಸಿನಿಮಾದ ಕಟ್ಟಪ್ಪ ಖ್ಯಾತಿಯ ಸತ್ಯರಾಜ್(Satyaraj) ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯ ನಟ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ನಟ ಜನವರಿ 7ರಂದು ಆಸ್ಪತ್ರೆಗೆ ಧಾವಿಸಿದ್ದರು. ನಟ ಕೊರೋನಾಗೆ ಪಾಸಿಟಿವ್(Coronavirus) ದೃಢಪಟ್ಟ ನಂತರ ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದರು. ನಟನ ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಬಿಡುಗಡೆಯಾಗಿಲ್ಲ. ತೀವ್ರ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ನಟ ಆಸ್ಪತ್ರೆಗೆ ತುರ್ತಾಗಿ ಧಾವಿಸಿದ್ದಾರೆ ಎನ್ನಲಾಗಿದೆ.

ಈ ಮಾಹಿತಿಯಿಂದ ಅಭಿಮಾನಿಗಳು ಇನ್ನೂ ಗೊಂದಲಕ್ಕೊಳಗಾಗಿದ್ದಾರೆ. ಆದರೆ ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂಬ ಭರವಸೆಯಲ್ಲಿದ್ದಾರೆ! ಕಳೆದ ಕೆಲವು ದಿನಗಳಲ್ಲಿ ತೆಲುಗು ಚಿತ್ರರಂಗದ ಹಲವಾರು ನಟ-ನಟಿಯರಿಗೆ ಕೋವಿಡ್ -19 ಗೆ ಪಾಸಿಟಿವ್ ದೃಢಪಟ್ಟಿದೆ. ಸಿನಿಮಾ ಸ್ಟಾರ್‌ಗಳಾದ ಮಹೇಶ್ ಬಾಬು, ಮಂಚು ಮನೋಜ್, ಮಂಚು ಲಕ್ಷ್ಮಿ, ಸಂಗೀತ ನಿರ್ದೇಶಕ ತಮನ್, ನಿತಿನ್ ಪತ್ನಿ ಹಾಗೂ ನಟ ವಿಶ್ವಕ್ ಸೇನ್ ಸೇರಿದಂತೆ ಇತರರಿಗೆ ಸೋಂಕು ತಗುಲಿದೆ. ನಟಿ ತ್ರಿಶಾ ಅವರು ಜನವರಿ 7 ರಂದು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಲಸಿಕೆಯನ್ನು ಪಡೆದರೂ ಮತ್ತು ವೈರಸ್ ಸೋಂಕನ್ನು ತಪ್ಪಿಸಲು ಅವರು ಮಾಡಬಹುದಾದ ಎಲ್ಲವನ್ನೂ ಮಾಡಿದರೂ, ಅವಳು ಇನ್ನೂ ಪ್ರಭಾವಿತಳಾಗಿದ್ದಳು.

ಮಹೇಶ್‌ ಬಾಬುಗೆ ಸೋಂಕು, ಪತ್ರ ಬರೆದ ನಟ

ಕಮಲ್ ಹಾಸನ್(Kamal Hassan), ಚಿಯಾನ್ ವಿಕ್ರಮ್, ವಡಿವೇಲು ಮತ್ತು ತ್ರಿಶಾ ಕೃಷ್ಣನ್ ಸೇರಿದಂತೆ ತಮಿಳು ಚಿತ್ರರಂಗದ ಅನೇಕ ಚಿತ್ರರಂಗದ ಟಾಪ್‌ ನಟರೂ ಇತ್ತೀಚೆಗೆ ಕೊರೊನಾವೈರಸ್‌ನಿಂದ ಬಳಲಿದ್ದರು. ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಆತಂಕದ ನಡುವೆ ಅನೇಕ ಸಿನಿಮಾಗಳ ಶೂಟಿಂಗ್ ವೇಳಾಪಟ್ಟಿಯನ್ನು(Schedule) ಬದಲಾಯಿಸಲಾಗಿದೆ. ಕೆಲವು ಸಿನಿಮಾಗಳ ಥಿಯೇಟರ್ ಬಿಡುಗಡೆಯನ್ನೂ ಮುಂದೂಡಲಾಗಿದೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಆರ್‌ಆರ್‌ಆರ್ ಸಹ ಕೋವಿಡ್ -19 ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಚಿತ್ರವನ್ನು ಜನವರಿ 7 ರಂದು ಭಾರತದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಕೊರೋನಾ (Coronavirus) ವ್ಯಾಪಿಸುತ್ತಿರುವುದು ಎಲ್ಲರಿಗೆ ಗೊತ್ತಿರುವ ಸಂಗತಿ. ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಅವರಿಗೂ ಸೋಂಕು ತಗುಲಿದೆ. ಮಹೇಶ್ ಬಾಬು ಸೋಶಿಯಲ್(Social Media)  ಮೀಡಿಯಾ ಮೂಲಕ ವಿಚಾರ ತಿಳಿಸಿದ್ದು ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.  ಮಹೇಶ್ ಬಾಬು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮುಂಜಾಗೃತಾ ಕ್ರಮ ಅನುಸರಿಸಿದರೂ ನನಗೆ ಕೊರೋನಾ ತಗುಲಿದೆ ಎಂದಿದ್ದಾರೆ.  ವೈದ್ಯರ ಮಾರ್ಗದರ್ಶನ ಪಾಲಿಸುತ್ತಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದಿದ್ದಾರೆ. ಕೊರೋನಾ ಲಸಿಕೆ ಅಪಾಯ ಕಡಿಮೆ ಮಾಡುತ್ತದೆ. ದಯವಿಟ್ಟು ನಿಯಮ ಪಾಲಿಸಿ, ಮನೆಯಲ್ಲೇ ಸುರಕ್ಷಿತವಾಗಿರಿ.. ಅಗತ್ಯ ಇದ್ದರೆ ಮಾತ್ರ ಹೊರಗೆ ಬನ್ನಿ ಎಂದು ಕೇಳಿಕೊಂಡಿದ್ದಾರೆ.  ನಟ ಮಹೇಶ್ ಬಾಬು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನುವ ಮಾಹಿತಿ ಇದೆ.  ಕೊರೋನಾ ಕಾರಣಕ್ಕೆ ಸಿನಿಮಾ ಜಗತ್ತು ಸಹ ನಿಧಾನವಾಗಿದೆ.

Follow Us:
Download App:
  • android
  • ios