ಬಿಗ್‌ಬಾಸ್ ತೆಲುಗು 8 ಮುಕ್ತಾಯ, ಟೈಟಲ್ ಗೆದ್ದು ಇತಿಹಾಸ ಬರೆದ ಕನ್ನಡಿಗ ನಿಖಿಲ್‌ಗೆ ಸಿಕ್ಕಿದ್ದೆಷ್ಟು ಲಕ್ಷ?
ನಿಖಿಲ್ ಮಲಿಯಕ್ಕಳ್ ಬಿಗ್‌ಬಾಸ್ ತೆಲುಗು 8 ಟೈಟಲ್ ಗೆದ್ದು 55 ಲಕ್ಷ ರೂಪಾಯಿ ಬಹುಮಾನ ಮತ್ತು ಐಷಾರಾಮಿ ಕಾರನ್ನು ತನ್ನದಾಗಿಸಿಕೊಂಡಿದ್ದಾರೆ. ಗೌತಮ್ ಕೃಷ್ಣ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಕನ್ನಡದ ನಟ ಉಪೇಂದ್ರ ಮತ್ತು ನಟಿ ರೀಷ್ಮಾ ನಾಣಯ್ಯ ಫಿನಾಲೆಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ನಾಗಾರ್ಜುನ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ 8ಕ್ಕೆ ತೆರೆ ಬಿದ್ದಿದೆ. ಕನ್ನಡಿಗ ನಿಖಿಲ್ ಮಲಿಯಕ್ಕಳ್ ಬಿಗ್‌ಬಾಸ್ ತೆಲುಗು 8 ಟೈಟಲ್ ಗೆದ್ದು ಬರೋಬ್ಬರಿ 55 ಲಕ್ಷ ರೂಪಾಯಿ ಬಹುಮಾನ ಜೊತೆಗೆ ಐಷಾರಾಮಿ ಕಾರು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಬೇರೆ ಭಾಷೆಯ ಬಿಗ್‌ಬಾಸ್ ಗೆದ್ದು ಕನ್ನಡಿಗ ನಿಖಿಲ್ ಹೊಸ ಇತಿಹಾಸ ಬರೆದಿದ್ದಾರೆ. ಗೌತಮ್ ಕೃಷ್ಣ ರನ್ನರ್ ಅಪ್ ಆಗಿ ಹೊರಹೊಮಿದ್ದಾರೆ.
ನಿಖಿಲ್ ಮಲಿಯಕ್ಕಲ್ ಕಲರ್ಸ್ ಸೂಪರ್ ನ ಮನೆಯೇ ಮಂತ್ರಾಲಯ ಎಂಬ ಧಾರವಾಹಿಯಲ್ಲಿ ನಟಿಸಿದ್ದರು. ನಟ ಹಲವಾರು ಟಿವಿ ಧಾರಾವಾಹಿಗಳನ್ನು ಮಾಡುವ ಮೂಲಕ ತೆಲುಗಿನಲ್ಲಿ ಜನಪ್ರಿಯರಾಗಿದ್ದಾರೆ. ಮೈಸೂರು ಮೂಲದ ನಿಖಿಲ್ ವಾರಕ್ಕೆ ರೂ. 2.25 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.
ತಮನ್ನಾ ಭಾಟಿಯಾ ಸೌಂದರ್ಯದ ರಹಸ್ಯವೇನು?
ಟೈಟಲ್ ಪೈಪೋಟಿ ಗೌತಮ್ ಮತ್ತು ನಿಖಿಲ್ ನಡುವೆ ಆರಂಭವಾಗುತ್ತದೆ. ನಟ, ನಿರೂಪಕ ನಾಗಾರ್ಜುನ ಆಸಕ್ತಿದಾಯಕ ಆಟವನ್ನು ಆರಂಭಿಸಿದರು. ಬಿಗ್ ಬಾಸ್ ಸೀಸನ್ ವಿಜೇತರಿಗೆ 55 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ಐಷಾರಾಮಿ ಕಾರು ಕೂಡ ಸಿಗಲಿದೆ. ಮೊದಲು ನಾಗಾರ್ಜುನ ಟೈಟಲ್ ತ್ಯಾಗ ಮಾಡಿ 40 ಲಕ್ಷ ರೂಪಾಯಿಗಳ ಸೂಟ್‌ಕೇಸ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು. ಆದರೆ ಈ ಆಫರ್‌ಗೆ ಇಬ್ಬರೂ ಮರುಳಾಗಲಿಲ್ಲ.
ಕೊನೆಗೆ ನಾಗಾರ್ಜುನ ಸೂಟ್‌ಕೇಸ್ ಆಫರ್ ಅನ್ನು ಒಟ್ಟು ಬಹುಮಾನ 55 ಲಕ್ಷ ರೂಪಾಯಿಗೆ ಏರಿಸಿದರು. ಟೈಟಲ್ ಬಿಟ್ಟು ಸೂಟ್‌ಕೇಸ್ ತೆಗೆದುಕೊಂಡರೆ 55 ಲಕ್ಷ ರೂಪಾಯಿ ಸಿಗುತ್ತದೆ. ಆಸೆಗೆ ಒಳಗಾಗದವರಿಗೆ ಟೈಟಲ್ ಜೊತೆಗೆ ಐಷಾರಾಮಿ ಕಾರು ಸಿಗುತ್ತದೆ. ನಿಖಿಲ್ ಹಣ ತೆಗೆದುಕೊಳ್ಳಲು ಸ್ವಲ್ಪ ಆಸೆಪಟ್ಟರು. ಆದರೆ ಕುಟುಂಬ ಸದಸ್ಯರ ಸಲಹೆಯ ಮೇರೆಗೆ ಬೇಡ ಎಂದು ನಿರ್ಧರಿಸಿದರು. ಕೊನೆಗೆ ನಿಖಿಲ್ ಟೈಟಲ್ ಗೆದ್ದು ಬಹುಮಾನವನ್ನು ಪಡೆದರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಗೌತಮ್ ರನ್ನರ್ ಅಪ್ ಆದರು.
ಪುಷ್ಪ 3 ರಲ್ಲಿ ವಿಜಯ್ ದೇವರಕೊಂಡ? ಅಲ್ಲು ಅರ್ಜುನ್ ಗೆ ಟಕ್ಕರ್!
ನಿಖಿಲ್ ತೆಲುಗು ಬಿಗ್‌ಬಾಸ್ ಶೋ ವೀಕ್ಷಕರ ಫೇವರಿಟ್ ಮತ್ತು ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಕನ್ನಡತಿ ಪ್ರೇರಣಾ ಕಂಬಂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಈ ಸೀಸನ್ ಸ್ಪರ್ಧಿಗಳಾದ ವಿಷ್ಣುಪ್ರಿಯ, ಹರಿತೇಜ, ನಯನಿ ಪಾವನಿ ಹೊರತುಪಡಿಸಿ ಎಲ್ಲಾ ಸ್ಪರ್ಧಿಗಳು ಹಾಜರಿದ್ದರು.
ನಟ ರಾಮ್ ಚರಣ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೈಟಲ್ ಗೆದ್ದ ನಿಖಿಲ್ ಗೆ ಟ್ರೋಫಿ ಪ್ರದಾನ ಮಾಡಿದರು. ಇನ್ನು ಯುಐ ಚಿತ್ರದ ಪ್ರಚಾರಕ್ಕಾಗಿ ಕನ್ನಡದ ನಟ-ನಿರ್ಮಾಪಕ ಉಪೇಂದ್ರ, ನಾಯಕಿ ರೀಷ್ಮಾ ನಾಣಯ್ಯ ವಿಶೇಷ ಅತಿಥಿಗಳಾಗಿ ಫಿನಾಲೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಾಗಾರ್ಜುನ ಅವರಿಗೆ ಉಪ್ಪಿ ಐ ಎಮ್ ಗಾಡ್ , ಗಾಡ್ ಈಸ್ ಗ್ರೇಟ್ ಡೈಲಾಗ್ ಹೇಳಿದ್ರು. ಬಿಗ್‌ಬಾಸ್ ಮನೆಯೊಳಗೆ ಹೋದ ಉಪ್ಪಿ ಸ್ಪರ್ಧಿ ಅವಿನಾಶ್ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದರು. ಈ ವೇಳೆ ಪ್ರೇರಣಾ ಅವರಿಗೆ ಥೀಯೇಟರ್ ಗೆ ಹೋಗಿ ಮೂವಿ ನೋಡಿ ಎಂದು ಉಪೇಂದ್ರ ಮನವಿ ಮಾಡಿಕೊಂಡರು.
105 ದಿನಗಳ ಕಾಲ ನಡೆದ ಈ ಶೋವನ್ನು ಸೂಪರ್‌ಸ್ಟಾರ್ ನಾಗಾರ್ಜುನ ಹೋಸ್ಟ್ ಮಾಡಿದರು. ಬಿಗ್ ಬಾಸ್ ತೆಲುಗು ತನ್ನ 8 ನೇ ಸೀಸನ್ ಅನ್ನು ಮುಕ್ತಾಯಗೊಳಿಸುತ್ತಿದೆ. ವಿವಾದಾತ್ಮಕ ಮತ್ತು ಜನಪ್ರಿಯ ಕಾರ್ಯಕ್ರಮವನ್ನು ಸೆಪ್ಟೆಂಬರ್ 1 ರಂದು ಸ್ಟಾರ್ ಮಾದಲ್ಲಿ ಆರಂಭವಾಗಿತ್ತು. ಈ ಬಾರಿ ಒಟ್ಟು 22 ಮಂದಿ ಸ್ಪರ್ಧಿಗಳು ಶೋನಲ್ಲಿದ್ದರು. ಅವರಲ್ಲಿ 5 ಮಂದಿ ಮಾತ್ರ ಫೈನಲ್ ಗೆ ಲಗ್ಗೆ ಇಟ್ಟಿದ್ದರು.