Cine World

ತಮನ್ನಾಳ ಸುಂದರ ರಹಸ್ಯವೇನು?

ಚಿತ್ರರಂಗಕ್ಕೆ ಪ್ರವೇಶಿಸಿ ಸುಮಾರು 20 ವರ್ಷಗಳು ಕಳೆದರೂ, ನಟಿ ತಮನ್ನಾ ಇಂದಿಗೂ ತನ್ನ ಸೌಂದರ್ಯದಿಂದ ಮನಸೆಳೆಯುತ್ತಿದ್ದಾರೆ. ಈ ಮಿಲ್ಕಿ ಬ್ಯೂಟಿಯ ಸೌಂದರ್ಯದ ಗುಟ್ಟೇನು ಎಂದು ಈಗ ತಿಳಿದುಕೊಳ್ಳೋಣ. 

Image credits: Social media

ತಮನ್ನಾ ವೃತ್ತಿಜೀವನ ಆರಂಭ

 2005 ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರದ ಮೂಲಕ ತಮನ್ನಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಶ್ರೀ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದರು. 
 

Image credits: Instagram

ಹ್ಯಾಪಿ ಡೇಸ್ ಮೂಲಕ ಖ್ಯಾತಿ

ನಂತರ ಹ್ಯಾಪಿ ಡೇಸ್ ಚಿತ್ರದ ಮೂಲಕ ಯುವಕರ ಹೃದಯ ಗೆದ್ದ ತಮನ್ನಾ ಸತತ ಗೆಲುವಿನೊಂದಿಗೆ ಮುನ್ನಡೆದರು. ಇಷ್ಟು ವರ್ಷಗಳ ನಂತರವೂ ತಮ್ಮ ಸೌಂದರ್ಯದಿಂದಲೇ ಮಿಂಚುತ್ತಿದ್ದಾರೆ. 

Image credits: Instagram

ತಮನ್ನಾಳ ಸೌಂದರ್ಯದ ಗುಟ್ಟು

ಹಲವಾರು ಸಂದರ್ಭಗಳಲ್ಲಿ ನೀಡಿದ ಸಂದರ್ಶನಗಳಲ್ಲಿ ತಮನ್ನಾ ತಮ್ಮ ಸೌಂದರ್ಯದ ಗುಟ್ಟುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆ ಸಲಹೆಗಳನ್ನು ಒಮ್ಮೆ ನೋಡೋಣ. 
 

Image credits: Instagram

ನೈಸರ್ಗಿಕ ಫೇಸ್ ಪ್ಯಾಕ್

ತಮ್ಮ ಚರ್ಮ ಸುಂದರವಾಗಿ ಮತ್ತು ಆರೋಗ್ಯಕರವಾಗಿರಲು ಮನೆಯಲ್ಲಿ ತಯಾರಿಸಿದ ಪ್ಯಾಕ್‌ಗಳೇ ಕಾರಣ ಎಂದು ತಮನ್ನಾ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದಾರೆ. 

Image credits: Tamanna bhatia/instagram

ಜೇನಿನಿಂದ ಸೌಂದರ್ಯ

ಜೇನುತುಪ್ಪ, ಕಾಫಿ ಮತ್ತು ಗಂಧವನ್ನು ಫೇಸ್ ಮಾಸ್ಕ್ ಆಗಿ ಬಳಸುತ್ತೇನೆ ಎಂದು ತಮನ್ನಾ ಹೇಳಿದ್ದಾರೆ. ಇದು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. 
 

Image credits: Tamanna bhatia/instagram

ಮೊಸರು

ತಮನ್ನಾ ಅವರ ಹೊಳೆಯುವ ಚರ್ಮಕ್ಕೆ ಮತ್ತೊಂದು ಕಾರಣ ಮೊಸರು. ತಣ್ಣನೆಯ ಮೊಸರಿಗೆ ಕಡ್ಲೆ ಹಿಟ್ಟನ್ನು ಬೆರೆಸಿ ಚರ್ಮಕ್ಕೆ ಹಚ್ಚುತ್ತೇನೆ ಎಂದು ತಮನ್ನಾ ಹೇಳಿದ್ದಾರೆ. 
 

Image credits: instagram

ಗುಲಾಬಿ ನೀರು

ಫೇಸ್ ಪ್ಯಾಕ್ ಹಚ್ಚಿದ ನಂತರ ಗುಲಾಬಿ ನೀರಿನಿಂದ ಮುಖ ತೋಳೆಯುತ್ತೇನೆ. ಇದು ನನ್ನ ಚರ್ಮವನ್ನು ತೇವಾಂಶದಿಂದಿಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. 
 

Image credits: Google

ಆಹಾರದಲ್ಲೂ ಎಚ್ಚರಿಕೆ

ಆಹಾರದ ವಿಷಯದಲ್ಲೂ ಜಾಗ್ರತೆ ವಹಿಸುತ್ತೇನೆ ಎಂದು ತಮನ್ನಾ ಹೇಳಿದ್ದಾರೆ. ಅವಕಾಡೊ, ಬ್ರೊಕೊಲಿ ಮುಂತಾದ ಆಹಾರಗಳನ್ನು ಸೇವಿಸುವುದರ ಜೊತೆಗೆ ಸಾಕಷ್ಟು ನೀರು ಕುಡಿಯುತ್ತೇನೆ ಎಂದು ತಿಳಿಸಿದ್ದಾರೆ. 
 

Image credits: instagram

70ರ ದಶಕದ ಸ್ಟಾರ್‌ ನಟಿಯರ ಮಕ್ಕಳು ಈಗ ಏನು ಮಾಡುತ್ತಿದ್ದಾರೆ?

ಒಂದೇ ವಾರದಲ್ಲಿ ನಟಿ ಕೀರ್ತಿ ಸುರೇಶ್ ಎರಡೆರಡು ಮದುವೆ!

ಗಳಿಕೆಯಲ್ಲಿ 7 ವರ್ಷಗಳ ಹಳೆಯ ಬಾಹುಬಲಿ 2 ದಾಖಲೆ ಮುರಿದ ಪುಷ್ಪ 2 !

ಅಲ್ಲು ಅರ್ಜುನ್ 100 ಕೋಟಿ ರೂ ಮೌಲ್ಯದ ಬಂಗಲೆ ಒಳಗೆ ಏನಿದೆ?