ನವರಸನಾಯಕ ಜಗ್ಗೇಶ್ ಮುಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಕಣ್ಣೀರಿಟ್ಟ ಆಂಕರ್ ಶ್ವೇತಾ ಚೆಂಗಪ್ಪ

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ನಟ ಜಗ್ಗೇಶ್ ಮುಂದೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಕಣ್ಣೀರಿಟ್ಟಿದ್ದಾರೆ.

Television actress Shwetha Chengappa broke tears on Comedy Khiladigalu stage in front of actor Jaggesh sat

ಬೆಂಗಳೂರು (ಜು.17): ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ಒಂದು ತಂಡದ ಮಾಲೀಕರಾಗಿರುವ ನಟಿ ಹಾಗೂ ಆಂಕರ್ ಶ್ವೇತಾ ಚೆಂಗಪ್ಪ ಅವರು ವೇದಿಕೆ ಮೇಲೆಯೇ ನಟ ಜಗ್ಗೇಶ್ (Actor Jaggesh) ಅವರ ಮುಂದೆ ಕನ್ನಡದ ಆಂಕರ್ ಅಪರ್ಣಾ (Kannada tv presenter Aparna) ಅವರೊಂದಿಗಿನ ಒಡನಾಟದ ಘಟನೆಗಳನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.

ಕನ್ನಡ ಆಂಕರ್ ಅಪರ್ಣಾ ಕೇವಲ ನಿರೂಪಣೆಯಲ್ಲಿ ಮಾತ್ರವಲ್ಲದೇ, ನಟನೆ, ಹಾಸ್ಯ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದರು. ಆದರೆ, ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ತಮ್ಮ 57ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋನಲ್ಲಿ ಕೆಲ ನಿಮಿಷಗಳ ಕಾಲ ಭಾಷ್ಪಾಂಜಲಿ ಅರ್ಪಿಸಲಾಯಿತು. ಈ ವೇಳೆ ಶೋನ ಮುಖಗ್ಯ ತೀರ್ಪುಗಾರ ನಟ ಜಗ್ಗೇಶ್ ಅವರು ಅಪರ್ಣಾ ಅವರೊಂದಿಗೆ ಬಹುದಿನಗಳವರೆಗೆ ಒಡನಾಟವನ್ನು ಹೊಂದಿದ್ದ ಆಂಕರ್ ಶ್ವೇತಾ ಚೆಂಗಪ್ಪ ಹಾಗೂ ಹಾಸ್ಯ ನಟ ಕುರಿ ಪ್ರತಾಪ್ ಕೆಲವು ಆಪ್ತ ಸಂಗತಿಗಳನ್ನು ಹಂಚಿಕೊಳ್ಳಲು ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟರು.

ನಿವೇದಿತಾ ಗೌಡ ನಿನ್ನ ವೈಯಾರ, ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ.. ಎಂದ ನೆಟ್ಟಿಗರು!

ಈ ವೇಳೆ ಮಾತನಾಡಿದ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ (Shwetha Chengappa) ಅವರು, ನಾವೆಲ್ಲಾ ನಿರೂಪಣೆಯಲ್ಲಿದ್ದೀವೆ ಎಂದರೆ, ಯಾರೇ ಆಗಿರಬಹುದು ಅಕುಲ್, ಅನುಶ್ರೀ, ಕುರಿ ಪ್ರತಾಪ್, ಆನಂದ್ ಮತ್ತು ನಾನು ಸೇರಿ ನಿರೂಪಣೆ ಎಂದು ಬಂದಾಕ್ಷಣ ಮೊದಲನೆಯದಾಗಿ ಕರ್ನಾಟಕದಲ್ಲಿ ಒಂದೇ ಒಂದು ಹೆರು ಬರುವುದು ಅದು ಅಪರ್ಣಾ. ಅವರು ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳ ಕಾರ್ಯಕ್ರಮ ಯಾವುದೇ ಒಂದು ಸರ್ಕಾರಿ ಕಾರ್ಯಕ್ರಮಗಳಿದ್ದರೂ ಅದನ್ನು ಶುದ್ಧ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದರು. ಅಂತಹ ತಾಕತ್ತು, ಧೈರ್ಯ ಎಲ್ಲರಿಗೂ ಬರುವುದಿಲ್ಲ. ದೊಡ್ಡ ಗಣ್ಯರಿರುವ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಲು ಪ್ರಬುದ್ಧತೆ, ಭಾಷಾ ಸ್ಪಷ್ಟತೆ, ಗೌರವ ಭಾವನೆ ಅಪರ್ಣಾ ಅವರಲ್ಲಿತ್ತು. ಅಂತಹ ಕಾರ್ಯಕ್ರಮಗಳಲ್ಲಿ ಅಷ್ಟೊಂದು ಗಾಂಭೀರ್ಯ ಕಾಪಾಡಿಕೊಂಡು ಬರುತ್ತಿದ್ದರೂ ನಮ್ಮ ಮುಂದೆ ಚಿಕ್ಕ ಮಗುವಿನ ಮುಗ್ಧ ಮನಸ್ಸಿರುವವಂತೆ ಇರುತ್ತಿದ್ದರು. ಅವರು ಮನಸ್ಸಿಗೆ ತುಂಬಾ ಹತ್ತಿರವಾಗಿದ್ದರು. 

ನನಗೆ ತುಂಬಾ ಹತ್ತಿರವಿದ್ದವರ ಜೊತೆಗೆ ಮಾತ್ರ ಫೋನ್ ಕಾಂಟ್ಯಾಕ್ಟ್‌ನಲ್ಲಿರುತ್ತೇನೆ. ಅಪರ್ಣಾ ಜೊತೆಯಲ್ಲಿಯೂ ನಿರಂತರವಾಗಿ ಫೋನ್ ಕಾಂಟ್ಯಾಕ್ಟ್‌ನಲ್ಲಿದ್ದೆ. ಸ್ವಲ್ಪ ದಿನಗಳ ಹಿಂದೆ ಅಪರ್ಣಾ ನನ್ನೊಂದಿದೆ ಫೋನ್ ಸಂಪರ್ಕ ಮಾಡುವುದರಿಂದ ದೂರವಾಗಿದ್ದರು. ಎಲ್ಲೋ ಒಂದು ಕಡೆ ಯಾಕೆ ನನ್ನನ್ನು ಅಪರ್ಣಾ ಹೀಗೆ ದೂರ ಮಾಡುತ್ತಿದ್ದಾರೆ ಎಂಬ ತುಂಬಾ ನೋವು ಕಾಡುತ್ತಿತ್ತು. ಇದೇ ಸಂದರ್ಭದಲ್ಲಿ ಅಪರ್ಣಾ ಅವರಿಗೆ ಕ್ಯಾನ್ಸರ್ ಇದೆ, ಅನಾರೋಗ್ಯ ಎಂದು ಊಹಾಪೋಹ ಸುದ್ದಿಗಳು ಕೇಳಿ ಬಂದಿದ್ದವು. ಆಗ ನಾನು ಹೋಗು ಅಪರ್ಣಾಗೆ ಪರ್ಸನಲ್‌ ಆಗಿ ಕೇಳಬೇಕು ಎನಿಸಲಿಲ್ಲ. ನಿಮಗೆ ಕಾಯಿಲೆ ಇದೆ ಅಂತೆ ಹೌದಾ ಎಂದು ಕೇಳುವುದು ತುಂಬಾ ತಪ್ಪು, ಅದನ್ನು ನಾನು ಕೇಳಲೂ ಹೋಗಲಿಲ್ಲ. 

ಬೆಡ್ ರೂಮ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ; ಇದಕ್ಕಂತಲೇ ಡಿವೋರ್ಸ್ ಕೊಟ್ಟಿದ್ದಾ ಎಂದ ಚಂದನ್ ಫ್ಯಾನ್ಸ್

ನನ್ನಿಂದ ಅಪರ್ಣಾ ದೂರವಾಗಿದ್ದ ಬಗ್ಗೆ ಅವರ ಆಪ್ತರು ಬಂದು ನನ್ನ ಮುಂದೆ ಹೇಳಿದರು. ನಾನು ಶ್ವೇತಾನಿಂದ ಏಕೆ ದೂರವಾಗಿದ್ದೇನೆ ಎಂದರೆ, ನಾನು ಹೋಗ್ತೀನಿ ಅಂತಾ ಅವಳಿಗೆ ಗೊತ್ತಾದರೆ ತುಂಬಾ ನೋವು ಮಾಡ್ಕೊಂಡು ಬಿಡ್ತಾಳೆ. ಅವಳು ನನ್ನ ಮಗಳು ಥರಾ ಅದಕ್ಕೆ ಅವಳಿಂದ ದೂರವಿದ್ದೇನೆ ಎಂದು ಹೇಳಿಕೊಂಡಿದ್ದರಂತೆ. ಒಂದು ಇರುವೆಗೂ ಅವರು ನೋವು ಮಾಡೊಲ್ಲ. ಒಂದು ಇರುವೆ ಅವರಿಗೆ ಕಚ್ಚಿದೆ ಎಂದರೂ ಆ ಇರುವೆಗೆ ಮುದ್ದು ಮಾಡಿ ಬೈಯುವಂತಹ ವ್ಯಕ್ತಿತ್ವ ಅವರದ್ದು. ಕನ್ನಡ ಎಂದರೆ ಅಪರ್ಣಾ, ಅಪರ್ಣಾ ಎಂದರೆ ಕನ್ನಡ ಎಂದು ಹೇಳಿಕೊಂಡು ಶ್ವೇತಾ ಚೆಂಗಪ್ಪ ಕಣ್ಣೀರಿಟ್ಟರು.

Latest Videos
Follow Us:
Download App:
  • android
  • ios