ಕಂದನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್‌ ಬಬ್ಲಿ ಗರ್ಲ್​ ತೇಜಸ್ವಿನಿ: ಫೋಟೋ ಶೇರ್​ ಮಾಡಿ ಮಾಹಿತಿ

ಕಿರುತೆರೆ, ಹಿರಿತೆರೆ ಸೇರಿದಂತೆ ಬಿಗ್​ಬಾಸ್​ನಲ್ಲಿಯೂ ಖ್ಯಾತಿ ಗಳಿಸಿರೋ ನಟ ತೇಜಸ್ವಿನಿ ಪ್ರಕಾಶ್​ ತಾಯಿಯಾಗಲಿದ್ದಾರೆ. ಈ ಗುಡ್​ನ್ಯೂಸ್​ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. 
 

Tejaswini Prakash is going to be a mother She shared this good news suc

ಸ್ಯಾಂಡಲ್‌ವುಡ್‌ ಬಬ್ಲಿ ಗರ್ಲ್ ಎಂದೇ ಖ್ಯಾತಿಪಡೆದು, ಕಿರುತೆರೆಯ ವಿಲನ್ ಪಾತ್ರಕ್ಕೆ ಜೀವ ತುಂಬಿರೋ ಬಿಗ್​ಬಾಸ್​ ಸ್ಪರ್ಧಿ ತೇಜಸ್ವಿನಿ ಪ್ರಕಾಶ್‌ ಅಮ್ಮನಾಗುವ ಹರ್ಷದಲ್ಲಿದ್ದಾರೆ. ಕಳೆದ ವರ್ಷದ ಮಾರ್ಚ್‌ 20ರಂದು  ಫಣಿ ವರ್ಮ ನದೀಮ್‌ಪಳ್ಳಿ ಜೊತೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿಯೀಗ ಇನ್​ಸ್ಟಾಗ್ರಾಮ್​ನಲ್ಲಿ ತಾಯಿಯಾಗುತ್ತಿರುವ ಖುಷಿಯನ್ನು ಶೇರ್​ ಮಾಡಿಕೊಂಡಿದ್ದಾರೆ.  ಮಸಣದ ಮಕ್ಕಳು, ಗಜ(Gaja), ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ  ತೇಜಸ್ವಿನಿ.

ನಟಿ ಅವರು ಸಕತ್​ ಹೈಲೈಟ್​ ಆಗಿದ್ದು ಬಿಗ್​ಬಾಸ್​ ಸ್ಪರ್ಧಿಯಾಗಿದ್ದಾಗ. 2017ರಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ತೇಜಸ್ವಿನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 28 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ನಂತರ ಎಲಿಮಿನೇಟ್ ಆಗಿದ್ದರು. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದರೂ ಅವರು ವಿಲನ್​ ಆಗಿ ಮಿಂಚಿದ್ದ ‘ನನ್ನರಸಿ ರಾಧೆ’ ಸೀರಿಯಲ್‌ ಜನಮೆಚ್ಚುಗೆ  ಗಳಿಸಿತ್ತು. ಇಲ್ಲಿ ಲಾವಣ್ಯ ಪಾತ್ರದಲ್ಲಿ ಸಕತ್​ ಮಿಂಚಿದ್ದರು ತೇಜಸ್ವಿನಿ. ಹೋದಲ್ಲಿ ಬಂದಲ್ಲಿ ತೇಜಸ್ವಿನಿ ಅನ್ನುವ ಬದಲು ಲಾವಣ್ಯ ಎಂದು ಕರೆದವರೇ ಹೆಚ್ಚು!

ಪತಿಯ ಬರ್ತ್​ಡೇಗೆ ರೀಲ್​, ಮೈಕ್​, ಹೆಡ್​ಫೋನ್ ಇರೋ ಕೇಕ್​​: ನಿವೇದಿತಾರಿಗೆ ಭೇಷ್​ ಎಂದ ಫ್ಯಾನ್ಸ್​!

2008ರಲ್ಲಿ ತೆರೆಕಂಡ ಗಜ ಚಿತ್ರದ ಮೂಲಕ ಚಿತ್ರರಂಗಕ್ಕೆ ತೇಜಸ್ವಿನಿ ಪ್ರಕಾಶ್ ಪದಾರ್ಪಣೆ ಮಾಡಿದರು. ನಟ ದರ್ಶನ್, ನವ್ಯಾ ನಾಯರ್ ನಟನೆಯ ‘ಗಜ’ ಚಿತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಹಲವು ಕನ್ನಡ ಚಲನಚಿತ್ರಗಳಲ್ಲಿ ತೇಜಸ್ವಿನಿ ನಟಿಸಿದ್ದಾರೆ. ಡಾ ವಿಷ್ಣುವರ್ಧನ್ ಜೊತೆಗೆ ‘ಮಾತಾಡ್ ಮಾತಾಡು ಮಲ್ಲಿಗೆ’, ‘ಪ್ರೀತಿ ಏಕೆ ಭೂಮಿ ಮೇಲಿದೆ’, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಅರಮನೆ’ ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.2016ರಿಂದ 2017ರಲ್ಲಿ  ಪ್ರಸಾರವಾದ ನಿಹಾರಿಕಾ ಧಾರಾವಾಹಿಯಲ್ಲಿ ಲೀಡ್ ರೋಲ್‍ನಲ್ಲಿ ಅಭಿನಯಿಸಿದರು. ಕನ್ನಡ ಮಾತ್ರವಲ್ಲದೇ,  ತೆಲುಗಿನ ಕಟ್ ಚೇಸ್ತೆ, ಪ್ರತಿ ಕ್ಷಣಂ ಸೇರಿದಂತೆ ಈವರೆಗೆ 22 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಇವರು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.  

ಅಷ್ಟಕ್ಕೂ ಇವರ ಖಾಸಗಿ ಜೀವನ ತುಸು ಸೀಕ್ರೇಟೇ. ಏಕೆಂದರೆ ಇದುವರೆಗೂ ಗಂಡನ ಗುಟ್ಟನ್ನು ನಟಿ ಬಿಟ್ಟುಕೊಟ್ಟಿಲ್ಲ. ಫಣಿ ವರ್ಮ ನದೀಮ್‌ಪಳ್ಳಿ ಅವರ ಜೊತೆಗೆ ಫೋಟೋ, ರೀಲ್ಸ್​ ಶೇರ್​ಮಾಡುವ ನಟಿ ಪತಿಯ ಬಗ್ಗೆ ಎಲ್ಲಿಯೂ ಹೆಚ್ಚು ಹೇಳಿಲ್ಲ. ಇದೀಗ ಮಗುವಾಗುವ ಸುದ್ದಿಯನ್ನು ಹೇಳಿಕೊಂಡಿದ್ದಾರೆ.  ಪಾಪುವೊಂದರ ಕೈಯನ್ನು ಶೇರ್​ ಮಾಡಿಕೊಳ್ಳುವ  ಮೂಲಕ ಈ ಗುಡ್​ನ್ಯೂಸ್​ ನೀಡಿದ್ದಾರೆ. ಅಂದಹಾಗೆ ಇವರ ಪತಿ  ಬಾಲ್ಯದ ಗೆಳೆಯನಾಗಿದ್ದು, ನಟಿ ಸದ್ಯ  ಸಂಸಾರದ ಜೊತೆ ಅಭಿನಯದಲ್ಲೂ ತೊಡಗಿದ್ದಾರೆ.

Family Gangsters: ರಿಯಲ್​ ಹೆಂಡ್ತಿ ಎದುರೇ ರೀಲ್​ ಹೆಂಡ್ತಿ ಭಾಗ್ಯಳ ಹೆಗಲ ಮೇಲೆ ಕೈ- ತಾಂಡವ್ ಪೇಚಾಟ!

Latest Videos
Follow Us:
Download App:
  • android
  • ios