ಚಂದನ್​ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಪತ್ನಿ ನಿವೇದಿತಾ ಗೌಡ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಕೇಕ್​  ಮಾಡಿಸಿದ್ದು ಫ್ಯಾನ್ಸ್​ ಮೆಚ್ಚುಗೆ ಗಳಿಸಿದೆ.  

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಕೆಲ ತಿಂಗಳಿನಿಂದ ಸಕತ್​ ಸುದ್ದಿಯಲಿದ್ದಾರೆ. ಇನ್ನು ಇವರ ಪತಿ ಚಂದನ್​ ಶೆಟ್ಟಿ ಅವರ ವಿಷಯಕ್ಕೆ ಬರುವುದಾದರೆ, ಚಂದನ್​ ಶೆಟ್ಟಿ ಅವರು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಇವರು. ಇದೀಗ ಹೀರೊ ಪಟ್ಟಕ್ಕೆ ಏರಿದ್ದಾರೆ. ಸದ್ಯ ಯಾವುದೂ ಚಿತ್ರ ರಿಲೀಸ್​ ಆಗಿಲ್ಲ. ಆದರೆ ಈಗಲೇ ಮೂರನೇ ಸಿನಿಮಾಗೆ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ', 'ಸೂತ್ರಧಾರಿ' ಸಿನಿಮಾಗಳ ನಂತರ ಈಗ ಹೊಸದೊಂದು ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದು, ಕಳೆದ ವರ ಮಹಾಲಕ್ಷ್ಮೀ ಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಹೊಸ ಚಿತ್ರಕ್ಕೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದು ಹೆಸರಿಡಲಾಗಿದೆ. ಸಂಪೂರ್ಣ ಕಥೆ ಒಂದು ಕಾಲೇಜಿನ ಸುತ್ತವೇ ನಡೆಯಲಿದೆಯಂತೆ. ಆ ಕಾರಣಕ್ಕಾಗಿ ಈ ಟೈಟಲ್​. ಈ ಹಿಂದೆ ಶ್ರೀಮುರಳಿ, ಅಕುಲ್ ಬಾಲಾಜಿ, ಶ್ರೀಕಿ ನಟಿಸಿದ್ದ 'ಲೂಸ್‌ಗಳು' ಸಿನಿಮಾವನ್ನು ನಿರ್ದೇಶಿಸಿದ್ದ ಅರುಣ್ ಅಮುಕ್ತ ಅವರು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಅದೇ ಇನ್ನೊಂದೆಡೆ, ನಿವೇದಿತಾ ಗೌಡ ಏನೇ ಮಾಡಿದ್ರೂ ಅದು ಸುದ್ದಿಯಾಗ್ತಾರೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಈ ಚಂದನವನದಲ್ಲಿ ನಟಿ ನಿವೇದಿತಾ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ. ಇತ್ತೀಚೆಗಷ್ಟೇ ನೀರಿನ ಒಳಗೆ ಈ ಜೋಡಿ ರೊಮ್ಯಾಂಟಿಕ್​ ಆಗಿ ಕಾಲ ಕಳೆದು ಅದರ ವಿಡಿಯೋ ಶೇರ್​ ಮಾಡಿದ್ದರು. ಇದಕ್ಕೆ ಲಕ್ಷಾಂತರ ಮಂದಿ ಲೈಕ್ಸ್​ ಮಾಡಿದ್ದರು. ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್​ ಖಾಸಗಿಯಾಗಿ ಇರಬೇಕು, ಇದನ್ನೆಲ್ಲ ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರೂ ಈ ಜೋಡಿಯ ಫ್ಯಾನ್ಸ್​ ಅಂತೂ ಫಿದಾ ಆಗಿದ್ದರು. ಇದರ ಬೆನ್ನಲ್ಲೇ ನಟಿ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಚಂದನ್​-ನಿವೇದಿತಾ ರೊಮ್ಯಾನ್ಸ್​ ವಿಡಿಯೋ: ಬೆಸ್ಟ್​ ಕಪಲ್ ಎನ್ನುತ್ತಲೇ ಉದ್ದ ಕೂದ್ಲು ಮಿಸ್ ಮಾಡ್ಕೊಂಡ ಫ್ಯಾನ್ಸ್!

ಸದ್ಯ ಚಂದನ್ ಶೆಟ್ಟಿ 2ನೇ ಸಿನಿಮಾ ಸೂತ್ರಧಾರ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಇದರ ನಡುವೆಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೊನ್ನೆ ಸೆಪ್ಟೆಂಬರ್​ 17ಎಂದು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದರ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ. ಪತಿ ಚಂದನ್​ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ನಿವೇದಿತಾ ಗೌಡ, ಹ್ಯಾಪಿ ಬರ್ತ್​ ಡೇ ಬೇಬಿ ಎಂದು ಕೇಕ್ ಮೇಲೆ ಬರೆಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದು, ನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ . ಯೂ ಆರ್​ ಮೈ ಬೆಸ್ಟ್​ ಎಂದಿರೋ ನಟಿ, ನಾನು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತಲೇ ಇರುತ್ತೇನೆ ಹಾಗೂ ಕೊಂಚ ಕಿರಿಕಿರಿ ನೀಡುವೆ ಎಂದಿದ್ದರು. 

ಇದೀಗ ಅವರ ಕೇಕ್​ ವಿಡಿಯೋ ಸಕತ್​ ವೈರಲ್​ ಆಗಿದೆ. ಇದಕ್ಕೆ ಕಾರಣ ಕೇಕ್​ ಮೇಲೆ ನಿವೇದಿತಾ ಅವರು ಚಿತ್ರದ ರೀಲ್ಸ್​, ಮೈಕ್​, ಹೆಡ್​ಫೋನ್​ ಇರೋ ಕೇಕ್​ ತಯಾರಿಸಿ ಅದರ ಮೇಲೆ ಚಂದನ ಶೆಟ್ಟಿಯವರ ಚಿಕ್ಕ ಮೂರ್ತಿ ಇಟ್ಟಿದ್ದಾರೆ. ಚಂದನ್​ ಅವರು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿರೋದ್ರಿಂದ ಈ ರೀತಿ ಕೇಕ್​ ತಯಾರಿಸಿದ್ದಾರೆ. ಇದಕ್ಕೆ ನೆಟ್ಟಿಗರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ನಿವೇದಿತಾ ಅವರ ತಲೆ ಎಂದರೆ ತಲೆ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 
ತೋಬಾ ತೋಬಾ ಹಾಡಿಗೆ ಬಳುಕಿದ ನಿವೇದಿತಾ: ಗಂಡನ ಕನ್ನಡ ಹಾಡೆಂದ್ರೆ ನಿಂಗೆ ಅಲರ್ಜಿನಾ ಎಂದ ಫ್ಯಾನ್ಸ್​!

View post on Instagram