Asianet Suvarna News Asianet Suvarna News

ಟ್ರೆಂಡ್ ಆಗ್ತಿದೆ 'ಬೆಂಕಿ ಬಂತೋ' ಸಾಂಗ್; ಯಾರು ಆ ಬೆಂಕಿ, ಯಾರದು ಗ್ಲಾಮರ್ ಡಾಲ್?!

ಮಂಗಳಗೌರಿ ಸೀರಿಯಲ್ ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ಪೆಂಟಗನ್ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ಉಂಡೆನಾಮ ಚಿತ್ರದಲ್ಲೂ ಕಾಣಿಸಿಕೊಂಡರು.

Tanisha Kuppanda fans creation benki bantho album song becomes viral all over karnataka srb
Author
First Published Jan 9, 2024, 11:38 AM IST

ಟೈಟಲ್ ನೋಡಿ ಕನ್ಫೂಸ್ ಆಗ್ಬೇಡಿ..ಬಿಗ್ ಬಾಸ್ ಸೀಸನ್ 10ರಲ್ಲಿ ಅದೆಲ್ಲಿ ಬೆಂಕಿ ಬಂತು ಅಂತಾ ಯೋಚನೆ ಮಾಡಬೇಡಿ..ನಾವು ಹೇಳ್ತಿರೋದು ಬೆಂಕಿಯಂತೆ ಫರ್ಪೆಮೆನ್ಸ್ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ ಬಗ್ಗೆ. ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿರುವ, ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಅದು 'ಬೆಂಕಿ ಬಂತೋ (Benki Bantho Lyrical Song) ಹಾಡು. ಈ ಆಲ್ಬಟ್ ಹಾಡು (Benki Bantho Album Song) ಈಗ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆ ಸುತ್ತಾಡುತ್ತಿದೆ.

Tanisha Kuppanda fans creation benki bantho album song becomes viral all over karnataka srb

ಬೆಂಕಿ ಬಂತೋ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ  ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗಳಿ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್. ಈ ಮಸ್ತ್ ಸಿಂಗಿಂಗ್ ಸೆನ್ಸೇಷನ್ ನೋಡಿದವರೆಲ್ಲ ತನಿಷಾ ಗೆಲ್ಲಬೇಕು ಅಂತಾ ಕಮೆಂಟ್ ಹಾಕುತ್ತಿದ್ದಾರೆ.

Tanisha Kuppanda fans creation benki bantho album song becomes viral all over karnataka srb

ಮಂಗಳಗೌರಿ ಸೀರಿಯಲ್ ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ (Tanisha Kuppanda), ಆ ನಂತ್ರ ಪೆಂಟಗನ್ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ಉಂಡೆನಾಮ ಚಿತ್ರದಲ್ಲೂ ಕಾಣಿಸಿಕೊಂಡರು. ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಸದ್ಯ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ದೊಡ್ಮನೆ ಆಟದಲ್ಲಿ ಗೆದ್ದು ಬಾ ತನಿಷಾ ಅಂತಾ ಆಕೆಯ ಫ್ಯಾನ್ಸ್ ಬೆಂಬಲ ನೀಡುತ್ತಿದ್ದಾರೆ. 

ಪರಮ ಭಕ್ತನ ಸಾತ್ ಪಡೆದ 'ಹನು-ಮಾನ್' ಸಿನಿಮಾ; ತೇಜ ಸಜ್ಜಾ ಮೀಟ್ಸ್ ಧ್ರುವ ಸರ್ಜಾ

ಅಷ್ಟೇ ಅಲ್ಲ, ಬಿಗ್ ಬಾಸ್ (Bigg Boss Kannada) ಮನೆಯೊಳಕ್ಕೆ ಮೊದಲ ದಿನ ಪ್ರವೇಶ ಪಡೆದಾದ ಅಲ್ಲಿಯೇ ಇದ್ದ ನಟಿ ಶೃತಿ 'ಈ ಬಾರಿ ಮಹಿಳಾ ಸ್ಪರ್ಧಿ ಗೆಲ್ಲಬೇಕು ಎಂಬುದು ನನ್ನ ಆಶಯ' ತನಿಷಾ ಅವರೇ ಗೆದ್ದು ಬರಲಿ ಎಂದು ನಾನು ಹಾರೈಸುತ್ತೇನೆ' ಎಂದು ಹೇಳಿದ್ದರು. ಜತೆಗೆ, ಸುದೀಪ್ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಮನೆಗೆ ನ್ಯಾಯಾಧೀಶರಾಗಿ ಹೋಗಿದ್ದ ನಟಿ ಶ್ರುತಿ ಅಲ್ಲಿ ಮತ್ತೆ ಅದನ್ನೇ ರಿಪೀಟ್ ಮಾಡಿದ್ದರು. ಈಗ ನೋಡಿದರೆ, ನಟಿ ಶ್ರುತಿ ಮಾತು ಹಾಗೂ ಹಾರೈಕೆ ಕಾರ್ಯರೂಪಕ್ಕೆ ಬರುವ ಲಕ್ಷಣ ದಟ್ಟವಾಗಿದೆ ಎನ್ನಬಹುದು. ಸೋಷಿಯಲ್ ಮೀಡಿಯಾದಲ್ಲಿ ಕೂಡ ತನಿಷಾ ಪರ ಬಹಳಷ್ಟು ವೀಕ್ಷಕರು ಬ್ಯಾಟಿಂಗ್ ಮಾಡುತ್ತಿದ್ದಾರೆ.

ಮತ್ತೆ ಬಂತು ನಾಮಿನೇಷನ್ ಭೂತ; ಫಿನಾಲೆಗೆ ಬಲಗಾಲಿಟ್ಟು ಹೋಗಲಿರುವ ಸ್ಪರ್ಧಿ ಇವರಾ ಅವರಾ?!

Follow Us:
Download App:
  • android
  • ios