Asianet Suvarna News Asianet Suvarna News

ಮತ್ತೆ ಬಂತು ನಾಮಿನೇಷನ್ ಭೂತ; ಫಿನಾಲೆಗೆ ಬಲಗಾಲಿಟ್ಟು ಹೋಗಲಿರುವ ಸ್ಪರ್ಧಿ ಇವರಾ ಅವರಾ?!

ಕಾರ್ತಿಕ್, ಸಂಗೀತಾ, ವಿನಯ್, ಪ್ರತಾಪ್ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದಾರೆ. ಆದರೆ, ಈಗ ಎಲ್ಲರ ಕಣ್ಣು ನೆಟ್ಟಿರುವುದು ತನಿಷಾ ಮತ್ತು ಸಂಗೀತಾ ಮೇಲೆ. ಏಕೆಂದರೆ, ಈ ಬಾರಿ ಬಿಗ್ ಬಾಸ್ ಗೆಲ್ಲಲಿರುವುದು ಮಹಿಳಾ ಸ್ಪರ್ಧಿಯೇ ಎಂಬುದು ಬಹಳಷ್ಟು ಜನರ ಅಭಿಮತ. 

Nomination task to get tension in the contestants at bigg boss kannada season 10 srb
Author
First Published Jan 9, 2024, 10:10 AM IST

ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್‌ ಫೈನಲ್‌ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಇದೆ. ಈ ಹಂತದಲ್ಲಿ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅಲ್ಲಿಗೆ  ಪ್ರತಿಯೊಬ್ಬರೂ ಬಂದಿರುವುದು ಫಿನಾಲೆಯಲ್ಲಿ ಗೆಲ್ಲುವುದಕ್ಕೆ. ಆದರೆ, ಈಗಾಗಲೇ ಕೆಲವರು ಸೋಲು ಒಪ್ಪಿಕೊಂಡು ಹೊರಗೆ ಹೋಗಿಯಾಗಿದೆ. ಆದರೆ, ಉಳಿದ ಸ್ಪರ್ಧಿಗಳಲ್ಲಿ ಗೆಲ್ಲೋದು ಯಾರು ಎಂಬುದನ್ನು ಗೆಲ್ಲುವುದೂ ಕಷ್ಟ!

ಅದರ ಒಂದು ಭಾಗವಾಗಿ ನಾಮಿನೇಷನ್‌ ಚಟುವಟಿಕೆ ನಡೆದಿದೆ. ಅದರ ಝಲಕ್ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು. 

ಈ ಚಟುವಟಿಕೆಯಲ್ಲಿ ಕಾರ್ತಿಕ್‌ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ  ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ತನಿಷಾ ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ.  ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ತನಿಷಾ ಮೊದಲಿನಿಂದಲೂ ಗೆಲ್ಲುವ ಸ್ಪರ್ಧಿ ಎಂಬುದನ್ನು ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ಕಡೆಯಲ್ಲೂ ಹೈಲೈಟ್ ಆಗುತ್ತಲೇ ಬಂದಿದೆ. 

ನಟನೆಯಲ್ಲಿದ್ದಾಗ ಸೂಪರ್‌ ಸ್ಟಾರ್‌ ಪಟ್ಟ, ರಾಜಕೀಯಕ್ಕೆ ಬಂದು ಬದುಕೇ ಹಾಳಾಯ್ತು, ಮದುವೆಯಾದ್ರೂ ಒಂಟಿಯಾಗಿರುವ ನಟಿ

ಇನ್ನು ಕಾರ್ತಿಕ್, ಸಂಗೀತಾ, ವಿನಯ್, ಪ್ರತಾಪ್ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದಾರೆ. ಆದರೆ, ಈಗ ಎಲ್ಲರ ಕಣ್ಣು ನೆಟ್ಟಿರುವುದು ತನಿಷಾ ಮತ್ತು ಸಂಗೀತಾ ಮೇಲೆ. ಏಕೆಂದರೆ, ಈ ಬಾರಿ ಬಿಗ್ ಬಾಸ್ ಗೆಲ್ಲಲಿರುವುದು ಮಹಿಳಾ ಸ್ಪರ್ಧಿಯೇ ಎಂಬುದು ಬಹಳಷ್ಟು ಜನರ ಅಭಿಮತ. ನಟಿ ಶೃತಿಯವರ ಹಾರೈಕೆ ಕೂಡ ಅದೇ ಆಗಿದೆ. ಮುಂದೇನಾಗಲಿದ ಎಂಬುದನ್ನು ಕಾದು ನೋಡುವುದೊಂದೇ ದಾರಿ. ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು.

ಕಳಪೆ ಪಟ್ಟಕ್ಕೆ ಗರಂ ಆದ್ರಾ ವರ್ತೂರು ಸಂತೋಷ್; ಸ್ಫೋರ್ಟ್ಸ್ ಹುಟ್ಟುಹಾಕಿದ್ದೇ ನಾವು ಅಂದ್ಬಿಟ್ರಾ!?

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

Follow Us:
Download App:
  • android
  • ios