ಸಾವಿರ ಸುಳ್ಳು ಹೇಳಿ ಇನ್ನೊಬ್ಬಳ ಹಿಂದೆ ಹೋಗ್ಬೋದು, ಮಗ ಚಿಕ್ಕ ಸುಳ್ಳು ಹೇಳ್ಬಾರ್ದಾ? ತಾಂಡವ್ಗೆ ನೆಟ್ಟಿಗರ ಕ್ಲಾಸ್!
ಮಗ ಗುಂಡ ತಲೆ ತಿರುಗಿಬಿದ್ದವರ ರೀತಿ ನಟನೆ ಮಾಡಿರುವ ವಿಷಯ ತಿಳಿದು ತಾಂಡವ್ ಕೆಂಡಾಮಂಡಲ ಆಗಿದ್ದಾನೆ. ಆತನ ಮೇಲೆ ಕೈ ಮಾಡಿದ್ದಾನೆ. ಸುಳ್ಳು ಹೇಳ್ತಿಯಾ ಕೇಳಿದ್ದಾನೆ. ನೆಟ್ಟಿಗರು ಏನು ಹೇಳಿದ್ರು ನೋಡಿ..
ಅಪ್ಪ ತಾಂಡವ್, ಶ್ರೇಷ್ಠಾಳ ಹಿಂದೆ ಬಿದ್ದಿರೋ ವಿಷ್ಯ ಅವನ ಮಕ್ಕಳು ಗುಂಡ ಮತ್ತು ತನ್ವಿಗಾಗಲೀ, ಅಮ್ಮ ಕುಸುಮಳಿಗಾಗಲೀ, ಪತ್ನಿ ಭಾಗ್ಯಳಿಗಾಗಲೀ ಗೊತ್ತಿಲ್ಲ. ಆದರೆ ಎಲ್ಲೋ ಏನೋ ಎಡವಟ್ಟು ನಡೆಯುತ್ತಿದೆ ಎನ್ನುವುದು ಮಾತ್ರ ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಅಪ್ಪ-ಅಮ್ಮನನ್ನು ಒಂದು ಮಾಡಲು ಮಗ ಗುಂಡ ಚಿಕ್ಕ ಸುಳ್ಳು ಹೇಳಿದ್ದ. ಶ್ರೇಷ್ಠಾಳ ಜೊತೆಯಲ್ಲಿ ಅಪ್ಪನನ್ನು ನೋಡಿದ್ದ ಮಗ ಗುಂಡಾ, ಏನೋ ಎಡವಟ್ಟಾಗುತ್ತಿದೆ ಎಂದುಕೊಂಡು ತಲೆ ತಿರುಗಿ ಬಿದ್ದವನ ರೀತಿ ಆ್ಯಕ್ಟ್ ಮಾಡಿದ್ದ. ಇದನ್ನು ತಾಂಡವ್ ನಿಜವೆಂದು ನಂಬಿದ್ದ. ಮಕ್ಕಳಿಗಾಗಿ ಭಾಗ್ಯಳ ಜೊತೆ ಚೆನ್ನಾಗಿ ಇರುವಂತೆ ಅವನೂ ಆ್ಯಕ್ಟ್ ಮಾಡಿದ್ದ. ಏನೇ ಆದರೂ ತಾಂಡವ್ ಮತ್ತು ಭಾಗ್ಯ ಒಂದಾಗಲಿ ಎನ್ನುವ ಕಾರಣಕ್ಕೆ ಕುಸುಮಾ ಕೂಡ ಇಬ್ಬರ ವಿವಾಹ ವಾರ್ಷಿಕೋತ್ಸವ ಅದ್ಧೂರಿಯಾಗಿ ಮಾಡಿದ್ದಳು. ಮಕ್ಕಳ ಖುಷಿಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ತಾಂಡವ್ ಎಲ್ಲವನ್ನೂ ಒಪ್ಪಿಕೊಂಡಿದ್ದ. ಆದರೆ ಅವನಿಗೆ ಒಂದು ಚೂರು ಮಕ್ಕಳು ಮತ್ತು ಅಮ್ಮ ಸೇರಿ ಮಾಡುತ್ತಿರುವ ಪ್ಲ್ಯಾನ್ ಎನ್ನುವುದು ಗೊತ್ತೇ ಆಗಿರಲಿಲ್ಲ.
ಇನ್ನೊಂದು ಘಟನೆಯಲ್ಲಿಯೂ, ಕುಸುಮಾ ಮತ್ತು ಮಕ್ಕಳು ಜೊತೆಗೂಡಿ ಪ್ಲ್ಯಾನ್ ಮಾಡಿ ಇಬ್ಬರನ್ನೂ ಜೊತೆಗೂಡಿಸುವಲ್ಲಿ ಸಕ್ಸಸ್ ಆಗಿದ್ರು. ಗುಂಡ ಅಪ್ಪನಿಗೆ ಕಾಲ್ ಮಾಡಿ ಎಲ್ಲಿ ಇದ್ದಿ ಎಂದು ಕೇಳಿದ್ದ. ಶ್ರೇಷ್ಠಾ ಮನೆಯಲ್ಲಿ ಇರೋ ಆತ ಏನೇನೋ ಸಬೂಬು ಹೇಳಿದ್ದ. ಕುಸುಮಾ ಹೇಳಿಕೊಟ್ಟಂತೆಯೇ ಹೇಳಿರುವ ಗುಂಡಾ, ಕೂಡಲೇ ಶಾಪಿಂಗ್ ಮಾಲ್ಗೆ ಬಾ ಎಂದಿದ್ದ. ನನಗೆ ತುರ್ತು ಕೆಲಸ ಇದೆ, ಇದು ಆಗಲ್ಲ ಎಂದು ತಾಂಡವ್ ಹೇಳಿದರೂ ಸುಳ್ಳು ಹೇಳಿದ ಗುಂಡಾ, ನಾವು ಇದಾಗಲೇ ಆಟೋದಲ್ಲಿ ಹೊರಟಾಗಿದೆ, ನೀನು ಅಲ್ಲಿಯೇ ಬಾ ಎಂದಿದ್ದ. ಕೊನೆಗೂ ತಾಂಡವ್ ಬಂದಿದ್ದ. ಅಲ್ಲಿಗೆ ಮಕ್ಕಳ ಪ್ಲ್ಯಾನ್ ಸಕ್ಸಸ್ ಆಗಿತ್ತು. ಆದರೆ ಈ ವಿಷಯ ಶ್ರೇಷ್ಠಾಳಿಗೆ ಹೇಗೋ ತಿಳಿದು ಹೋಗಿ, ಎಲ್ಲವನ್ನೂ ತಾಂಡವ್ ಎದುರು ಹೇಳಿಬಿಟ್ಟಿದ್ದಾಳೆ.
ಶ್ರೀದೇವಿ ಪುತ್ರಿ ಜಾಹ್ನವಿ ರಾಜಕೀಯ ಧುರೀಣನ ಸೊಸೆಯಾಗೋದು ಪಕ್ಕನಾ? ಅಪ್ಪ ಬೋನಿ ಕಪೂರ್ ಹೇಳಿದ್ದೇನು?
ಇದರಿಂದ ತಾಂಡವ್ಗೆ ಉರಿದು ಹೋಗಿದೆ. ಅಷ್ಟಕ್ಕೂ ಭಾಗ್ಯಳಿಗೆ ಈ ಎಲ್ಲಾ ಪ್ಲ್ಯಾನ್ಗಳ ಬಗ್ಗೆ ಗೊತ್ತೇ ಇಲ್ಲ. ಆದರೆ ಎಲ್ಲವನ್ನೂ ಭಾಗ್ಯಳ ಮೇಲೆ ಹೊರಿಸಿದ್ದಾನೆ ತಾಂಡವ್. ನೀನು ಮೋಸಗಾತಿ, ನಿನ್ನನ್ನೇ ಮಗ ಫಾಲೋ ಮಾಡಿದ್ದಾನೆ. ಸುಳ್ಳುಗಾತಿ ಎಂದೆಲ್ಲಾ ಬಾಯಿಗೆ ಬಂದ ಹಾಗೆ ಪತ್ನಿಗೆ ಬೈದಿದ್ದಾನೆ. ಉಳಿದವರಿಗೆ ಏನು ಮಾತನಾಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಾರೆ. ಒಂದು ಹಂತದಲ್ಲಿ ಮಗ ತನ್ನ ಎದುರೇ ನಾಟಕ ಮಾಡಿದನೆಂಬ ಕಾರಣಕ್ಕೆ, ತಾಂಡವ್ ಮಗನ ಮೇಲೆ ಕೈ ಮಾಡಿದ್ದಾನೆ. ಅಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯಳ ಕೋಪ ನೆತ್ತಿಗೇರಿದೆ.
ಅಷ್ಟಕ್ಕೂ ಭಾಗ್ಯ ಹಲವಾರು ರೀತಿಯಲ್ಲಿ ಪ್ರಯತ್ನ ಪಟ್ಟು ತಾನು ಮತ್ತು ತನ್ವಿ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಪರೀಕ್ಷಾ ಸ್ಥಳದಲ್ಲಿ ಕಾಪಿ ಚೀಟಿ ಇರಿಸಿದ್ದ ಕನ್ನಿಕಾ ಮಿಸ್ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿ ಪರೀಕ್ಷೆ ಬರೆಯಲು ಯಶಸ್ವಿಯಾಗಿದ್ದು ತಾಂಡವ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದೆಲ್ಲಾ ಕೋಪವನ್ನು ಮಗನ ಮೇಲೆ ತೋರಿಸಿದ್ದಾನೆ. ಇನ್ನೊಂದು ಸಲ ಹೊಡೆಯಲು ಬಂದಾಗ ತಾಂಡವ್ ಕೈಯನ್ನು ಭಾಗ್ಯ ಹಿಡಿದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗಿದೆ. ತಾಂಡವ್ನನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನೂರಾರು ಸುಳ್ಳು ಹೇಳಿ ಶ್ರೇಷ್ಠಾಳ ಹಿಂದೆ ಹೋಗಿದ್ದಿಯಾ. ಈಗ ಅಪ್ಪ-ಅಮ್ಮನನ್ನು ಒಂದು ಮಾಡಲು ಮಗ ಚಿಕ್ಕ ಸುಳ್ಳು ಹೇಳಿದ್ರೆ ಅದು ಇಷ್ಟು ಸಿಟ್ಟು ತರಿಸಿತಾ ಎಂದು ಕೇಳುತ್ತಿದ್ದಾರೆ.
ಸುದೀಪ್ ಅಮ್ಮನಾಗಿದ್ದ ನಟಿ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಕೇಸ್ ದಾಖಲು: ಅಷ್ಟಕ್ಕೂ ಆಗಿದ್ದೇನು?