ಮಕ್ಕಳ ಅಣತಿಯಂತೆ ಪತ್ನಿಗೆ ಪಾನೀಪುರ ತಿನ್ನಿಸಿದ್ದಾನೆ ತಾಂಡವ್. ಇದನ್ನು ಸುಂದ್ರಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ವಿಡಿಯೋ ಏನಾದ್ರೂ ಶ್ರೇಷ್ಠಾಳ ಕೈಗೆ ಸಿಕ್ಕರೆ?
ಮಕ್ಕಳ ಹಟಕ್ಕೆ ಬಿದ್ದು ತಾಂಡವ್ ಭಾಗ್ಯ ಸಹಿತ ಎಲ್ಲರನ್ನೂ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಶ್ರೇಷ್ಠಾಳಿಗೆ ಏನೋ ಒಂದು ಸುಳ್ಳು ಹೇಳಿ ಅಂತೂ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಅಪ್ಪ ಎಲ್ಲಿ ಅಮ್ಮನಿಗೆ ಡಿವೋರ್ಸ್ ಕೊಟ್ಟುಬಿಡುತ್ತಾನೋ ಎನ್ನುವ ಭಯದಲ್ಲಿ ಇರುವ ಮಕ್ಕಳು ಅಜ್ಜಿಯ ಸಲಹೆಯ ಮೇರೆಗೆ ಅಪ್ಪ-ಅಮ್ಮನನ್ನು ಒಂದು ಮಾಡಲು ಸರ್ಕಸ್ ಮಾಡುತ್ತಿದ್ದಾರೆ. ಇದೀಗ ಉದ್ದೇಶಪೂರ್ವಕವಾಗಿ ಪಾನೀಪುರಿ ತಿನ್ನಲು ಅಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಇದೆಲ್ಲಾ ನಿಮಗೆ ಯಾರು ಹೇಳಿದ್ರು ಎಂದು ತಾಂಡವ್ ಕೇಳಿದ್ದಾನೆ. ನಮ್ಮ ಸ್ಕೂಲ್ನಲ್ಲಿ ಎಲ್ಲಾ ಅಪ್ಪ-ಅಮ್ಮನೂ ಹೀಗೆ ಔಟಿಂಗ್ಗೆ ಮಕ್ಕಳನ್ನು ಕರ್ಕೊಂಡು ಹೋಗ್ತಾರೆ. ನಮಗೂ ಆಸೆ ಆಗಲ್ವಾ ಅಂತ ಕೇಳಿದ್ದಾನೆ ಗುಂಡ. ಇನ್ಮುಂದೆ ಸದಾ ಹೀಗೆಯೇ ಕರ್ಕೊಂಡು ಹೋಗಬೇಕು ಎಂದಿದ್ದಾನೆ. ಇದೇ ವೇಳೆ ಡಿವೋರ್ಸ್ ಅಂತೆಲ್ಲಾ ಇನ್ನೊಮ್ಮೆ ಮಾತಾಡಲ್ಲ ಅಲ್ವಾ ಎಂದು ಅಪ್ಪನಿಗೆ ಗುಂಡಾ ಪ್ರಶ್ನೆ ಮಾಡಿದ್ದಾನೆ. ಇದನ್ನು ಕೇಳಿ ತಾಂಡವ್ ಪೇಚಿಗೆ ಸಿಲುಕಿದ್ದಾನೆ. ಮಧ್ಯೆ ಪ್ರವೇಶಿಸಿದ ಭಾಗ್ಯ, ಹಾಗೇನೂ ಇಲ್ಲ. ನಿಮಗೆ ಪ್ರಾಮಿಸ್ ಮಾಡಿದ್ದಾರೆ ಅಲ್ವಾ? ಎಲ್ಲರೂ ಒಟ್ಟಿಗೇ ಇರ್ತೇವೆ ಎಂದಿದ್ದಳು.
ಇದರ ನಡುವೆಯೇ, ಇಷ್ಟಕ್ಕೇ ಸುಮ್ಮನಾಗದ ಗುಂಡ, ಅಮ್ಮನಿಗೆ ಪಾನೀಪುರಿ ತಿನ್ನಿಸುವಂತೆ ಅಪ್ಪನಿಗೆ ತಾಕೀತು ಮಾಡಿದ್ದಾನೆ. ಎಲ್ಲರಿಗೂ ಹೊಟ್ಟೆ ತುಂಬಿದೆ, ಮತ್ಯಾಕೆ ಎಂದು ತಾಂಡವ್ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆದರೆ ಗುಂಡ ಬಿಡಬೇಕಲ್ಲ, ಇನ್ನೊಂದು ಪಾನೀಪುರಿಗೆ ಆರ್ಡರ್ ಮಾಡಿಯೇ ಬಿಟ್ಟಿದ್ದಾನೆ.ಮಕ್ಕಳ ಆಸೆಯನ್ನು ನಿರಾಸೆ ಮಾಡಲು ಆಗದ ತಾಂಡವ್ ಭಾಗ್ಯಳಿಗೆ ಪಾನೀಪುರಿ ತಿನ್ನಿಸಿದ್ದಾನೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದನ್ನು ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಸದಾ ಹೀಗೆ ಇರಿ ಎನ್ನುತ್ತಿದ್ದಾರೆ. ಇಂಥ ಮಕ್ಕಳು ಇದ್ದರೆ, ಅಪ್ಪ-ಅಮ್ಮ ಜೊತೆಯಾಗಿ ಇರಲು ಸಾಧ್ಯ ಎಂದು ಇನ್ನು ಹಲವರು ಹೇಳುತ್ತಿದ್ದಾರೆ. ಸುಂದ್ರಿ ಎಂಟ್ರಿ ಕೊಟ್ಟಿದ್ದು, ಪಾನೀಪುರಿ ತಿನ್ನಿಸುವ ವಿಡಿಯೋಮಾಡಿಕೊಂಡಿದ್ದಳು. ಶ್ರೇಷ್ಠಾಳಿಗೆ ಅದನ್ನು ತೋರಿಸಲು ಹೋಗಿದ್ದಳು. ಅದಕ್ಕೆ ನೆಟ್ಟಿಗರು, ತಾಂಡವ್ನ ಕಾಲು ಎಳೆದಿದ್ದು, ಪ್ರೇಯಸಿಯನ್ನು ಬಿಟ್ಟು ಪತ್ನಿಗೆ ತಿನ್ನಿಸ್ತಾ ಇದ್ಯಾ? ಮುಂದೈತೆ ಮಾರೀಹಬ್ಬ ಎಂದಿದ್ದಾರೆ.
ಪ್ರೇಯಸಿಯೆಂಬ ಬಿಸಿ ತುಪ್ಪ! ಮದ್ವೆಯಾದೋನ ಇಂಥ ಪಾಡು ಯಾರಿಗೂ ಬೇಡ ಅಂತಿದ್ದಾರೆ ನೆಟ್ಟಿಗರು!
ಈ ವಿಷ್ಯ ಶ್ರೇಷ್ಠಾಗೆ ಗೊತ್ತಾದರೆಎ ಏನಾಗುತ್ತದೋ ನೋಡಬೇಕಿದೆ. ಇದಾಗಲೇ ಶ್ರೇಷ್ಠಾ ದ್ವೇಷದ ಜ್ವಾಲೆಯಲ್ಲಿ ಕುದಿಯುತ್ತಿದ್ದಳು. ಭಾಗ್ಯ ಮತ್ತು ತಾಂಡವ್ ಡ್ಯಾನ್ಸ್ ಕಾಂಪಿಟೇಷನ್‌ನಲ್ಲಿ ಗೆದ್ದಿದ್ದರು. ಪತಿಯ ಜೊತೆ ಅದ್ಭುತವಾಗಿ ನೃತ್ಯ ಮಾಡಿದ್ದಳು ಭಾಗ್ಯ. ಶ್ರೇಷ್ಠಾಳ ಕುತಂತ್ರ ಬುದ್ಧಿ ಪೂಜಾಗೆ ತಿಳಿದಿದೆ. ತನಗೆ ತಿಳಿದಿರೋ ಸತ್ಯವನ್ನೇ ಬಂಡವಾಳ ಮಾಡಿಕೊಂಡು ಪೂಜಾ ಶ್ರೇಷ್ಠಾಳನ್ನು ಆಡಿಸಲು ಶುರುವಿಟ್ಟುಕೊಂಡಿದ್ದಳು. ತನ್ನ ಅಕ್ಕ ಭಾಗ್ಯಳನ್ನು ಡ್ಯಾನ್ಸ್‌ಗಾಗಿ ಸುಂದರವಾಗಿ ರೆಡಿ ಮಾಡುವಂತೆ ಹೇಳಿದ್ದಳು.
ಭಾಗ್ಯಳಿಗೆ ಇದೊಂದು ರೀತಿಯಲ್ಲಿ ವಿಚಿತ್ರವಾಗಿ ತೋರಿತ್ತು. ಇದೆಲ್ಲಾ ಯಾಕೆ ಎಂದಳು. ಆದರೆ ಪೂಜಾ ಬಿಡಬೇಕಲ್ಲ, ನಿನಗೆ ಗೊತ್ತಾಗಲ್ಲ ಸುಮ್ಮನಿರು ಎನ್ನುತ್ತಲೇ ಶ್ರೇಷ್ಠಾ ಅವರೇ ಅಕ್ಕನಿಗೆ ಚೆನ್ನಾಗಿ ಮೇಕಪ್ ಮಾಡಿ ಎಂದು ಹೇಳುವ ಮೂಲಕ, ಮೇಕಪ್ ಮಾಡಿಸಿದ್ದಳು. ಎರಡು ಮಕ್ಕಳ ಅಪ್ಪನ ಹಿಂದೆ ಹೋದ ಶ್ರೇಷ್ಠಾಳಿಗೆ ಈಗ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಪೂಜಾ ಭಾರಿ ಚಾಲಾಕಿ ಎನ್ನುವುದು ಆಕೆಗೆ ಗೊತ್ತು. ಭಾಗ್ಯಳನ್ನು ಚೆನ್ನಾಗಿ ಡ್ರೆಸ್ ಮಾಡದೇ ಹೋದರೆ ಪೂಜಾ ಏನಾದರೂ ಮಾಡಿ ತನ್ನ ಬಂಡವಾಳ ಬಯಲು ಮಾಡುವಳೋ ಎನ್ನುವ ಭಯ. ಇದೇ ಕಾರಣಕ್ಕೆ, ಭಾಗ್ಯಳನ್ನು ರೆಡಿ ಮಾಡಲು ಒಪ್ಪಿಕೊಂಡಿದ್ದಳು. ಇಬ್ಬರೂ ಡ್ಯಾನ್ಸ್ ಮಾಡಿ ಗೆದ್ದಿದ್ದರು. ಆಗ ಭಾಗ್ಯಳನ್ನು ತಾಂಡವ್ ಶ್ರೇಷ್ಠಾಳ ಎದುರೇ ಹೊಗಳಿದ್ದ. ಗಂಡ-ಹೆಂಡತಿ ಇಷ್ಟು ಕ್ಲೋಸ್ ಆಗಿ ಮಾತನಾಡುವುದನ್ನು ನೋಡಿದ ಶ್ರೇಷ್ಠಾ ಮಾತ್ರ ಉರಿದುಕೊಂಡಿದ್ದಳು. ಇಬ್ಬರೂ ಒಂದಾಗಿಬಿಟ್ಟರೆ ತನ್ನ ಕಥೆಏನು ಎಂದುಕೊಂಡು, ತಾಂಡವ್ಗೆ ಆವಾಜ್ ಹಾಕಿದ್ದಳು. ಈಗ ಹೀಗಾಗಿದೆ, ಮುಂದೇನು ಕಾದಿದ್ಯೋ ತಾಂಡವ್ಗೆ.
ಮಹಾಕಾಳಿಯಾದ ಪುಟ್ಟಕ್ಕ: ಮಕ್ಕಳ ವಿಷ್ಯಕ್ಕೆ ಬಂದ್ರೆ ಸುಮ್ಮನೇ ಇರ್ತಾಳಾ ಈ ಅಮ್ಮ?
