Asianet Suvarna News Asianet Suvarna News

ನಿರ್ಮಾಪಕರ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದೆ: ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಕಾ

ನಿರ್ಮಾಪಕರ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ನಟಿ ಮೋನಿಕಾ ಚಿತ್ರರಂಗದ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ. 

Taarak Mehta Ka Ooltah Chashmah star Monika Bhadoriya reveals tortured on the set sgk
Author
First Published Jun 7, 2023, 4:23 PM IST

ಸಿನಿಮಾರಂಗದಲ್ಲಿ ಅನೇಕ ನಟಿಯರಿಗೆ ಕಹಿ ಅನುಭವಗಳು ಆಗಿದೆ. ಈಗಾಗಲೇ ಅನೇಕ ಮಂದಿ ಚಿತ್ರರಂಗದ ಕರಾಳಮುಖ ಬಿಚ್ಚಿಟ್ಟಿದ್ದಾರೆ. ಇನ್ನು ಕೆಲವರು ಸಿಡಿದೆದ್ದಿದ್ದಾರೆ. ಮೀಟೂ ಅಭಿಯಾನದ ಮೂಲಕ ಅನೇಕರು ನಟಿಯರು ಸಿನಿಮಾರಂಗದ ಕತ್ತಲೆ ಲೋಕದ ಅನಾವರಣ ಮಾಡಿದ್ದರು. ನಟಿಯರು ಲೈಂಗಿಕ ದೌರ್ಜನ್ಯ ಹಾಗೂ ಚಿತ್ರಹಿಂಸೆಯ ವಿರುದ್ಧ ತಿರುಗಿಬಿದ್ದಿದ್ದರು. ದೇಶಾದ್ಯಂತ 'ಮೀಟೂ' ಪ್ರಕರಣ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ ಅಷ್ಟೇ  ವೇಗವಾಗಿ ಈ ಪ್ರಕರಣಗಳು ತಣ್ಣಗಾದವು. 

ಇದೀಗ ಮತ್ತೋರ್ವ ನಟಿ ತನಗಾದ ಕೆಟ್ಟ ಅನುಭವವನ್ನು ತೆರೆದಿಟ್ಟಿದ್ದಾರೆ. ಅದು ಮತ್ಯಾರು ಅಲ್ಲ ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ಮೋನಿಕಾ ಭಡೋರಿಯಾ. ನಿರ್ಮಾಪಕರಿಂದ ಅನುಭವಿಸಿದ ಚಿತ್ರಹಿಂಸೆಯ ಬಗ್ಗೆ ಮೋನಿಕಾ ಬಾಯಿಬಿಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಮೋನಿಕಾ ಭಡೋರಿಯಾಗೆ ನಿರ್ಮಾಪಕರೊಬ್ಬರು ಶೂಟಿಂಗ್ ಸೆಟ್ಟಿನಲ್ಲಿ ಚಿತ್ರಹಿಂಸೆ ನೀಡಿದ್ದರಂತೆ. ನಿರ್ಮಾಪಕರ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸಿತ್ತು ಎಂದು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. 

ಹಿಂದಿಯ ಪ್ರಸಿದ್ಧ ಶೋ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಮೂಲಕ ಮೋನಿಕಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಶೋನ ನಿರ್ಮಾಪಕರು ತನಗೆ ಚಿತ್ರ ಹಿಂಸೆ ನೀಡಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಆಂಗ್ಲ ವೆಬ್‌ಸೈಟ್ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಮೋನಿಕಾ ಮಾತನಾಡಿದ್ದಾರೆ.  ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಹಿಂದಿಯ ಜನಪ್ರಿಯ ಶೋ. ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ಧ ಕಳೆದ ತಿಂಗಳಷ್ಟೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿತ್ತು. ನಟಿ ಜೆನ್ನಿಫರ್ ಮಿಸ್ತ್ರಿ ಬನ್ಸಿಲಾಲ್ ಈ ನಿರ್ಮಾಪಕನ ವಿರುದ್ಧ ಆರೋಪಿಸಿದ್ದರು. ಈ ಬೆನ್ನಲ್ಲೇ ಈಗ ಈ ಶೋದ ಖ್ಯಾತ ನಟಿ ಮೋನಿಕಾ ಭಡೋರಿಯಾ ಕೂಡ ಗಂಭೀರ ಆರೋಪ ಮಾಡಿದ್ದಾರೆ.

'ನಾನು ನನ್ನ ಅಮ್ಮ ಹಾಗೂ ಅಜ್ಜಿಯನ್ನು ಅತೀ ಕಡಿಮೆ ಸಮಯದಲ್ಲಿ ಕಳೆದುಕೊಂಡೆ. ಅವರಿಬ್ಬರೂ ನನ್ನ ಬದುಕಿನ ಪಿಲ್ಲರ್ ಆಗಿದ್ದರು. ನನಗೆ ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಇಂತಹ ಸಮಯದಲ್ಲಿ ನಾನು ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲೂ ಕೂಡ ಚಿತ್ರಹಿಂಸೆಯನ್ನು ನೀಡಲಾಗುತ್ತಿತ್ತು. ಅದು ನರಕಯಾತನೆ.. ಆ ಚಿತ್ರಹಿಂಸೆಯ ಬಳಿಕ ನಾನು ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿದ್ದೆ' ಎಂದಿದ್ದಾರೆ.

#MeToo ಕಳ್ಳತನವಾದರೆ ಪೊಲೀಸ್‌ಗೆ ಹೇಳ್ತೀವಿ ಅಂದ್ಮೇಲೆ ಮಾನ ಮರ್ಯಾದೆ ಹೋದ್ರೂ ಕಂಪ್ಲೇಂಟ್ ಕೊಡ್ಬೇಕು: ತನುಶ್ರೀ ದತ್ತಾ

'ನಾನು ನನ್ನ ಪೋಷಕರನ್ನು ಸೆಟ್ಟಿಗೆ ಕರೆದುಕೊಂಡು ಬರಬೇಕು ಅಂತಿದ್ದೆ. ಆದರೆ, ಇಲ್ಲಿನ ವಾತಾವರಣವನ್ನು ನೋಡಿ ಬೇಡವೆಂದು ನಿರ್ಧರಿಸಿದೆ. ನನ್ನ ತಾಯಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ಈ ವೇಳೆ ನನ್ನ ತಂದೆ ನಿಧನರಾದಾಗ ಹಣ ನೀಡಿದ್ದೆವು. ತಾಯಿ ಚಿಕಿತ್ಸೆಗೂ ಹಣ ನೀಡಿದ್ದೇವೆ ಎಂದಿದ್ದರು. ಇದು ನನಗೆ ತೀವ್ರ ನೋವುಂಟು ಮಾಡಿದೆ' ಎಂದಿದ್ದಾರೆ.

ಮೀ ಟೂ ಕಾರಣಕ್ಕೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಜೆಕ್ಟ್? ಏನಿದು ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಸುದ್ದಿ

'ನಾನು ಶೋ ಬಿಟ್ಟಾಗ ಯಾರೂ ನನ್ನ ಪರ ನಿಲ್ಲಲಿಲ್ಲ. ನಾನು ಮಾಧ್ಯಮದವರನ್ನು ಸಂಪರ್ಕಿಸಿದೆ, ಅವರು ನನ್ನೊಂದಿಗೆ ಮಾತನಾಡಲು ಬಯಸಿದಾಗ ಅವರು ನನಗೆ ಬಾಂಡ್‌ಗೆ ಸಹಿ ಹಾಕಿ ಮತ್ತು 'ನೀವು ಈ ಪೇಪರ್‌ಗಳಿಗೆ ಸಹಿ ಮಾಡಿ ಮಾಧ್ಯಮಗಳಿಗೆ ಹೋಗದಿದ್ದರೆ, ನಿಮ್ಮ ಉಳಿದ ಹಣ ನಾವು ಬಿಡುಗಡೆ ಮಾಡುತ್ತೇವೆ, ಇಲ್ಲದಿದ್ದರೆ ಇಲ್ಲ' ಎಂದು ಹೇಳಿದರು. ನಾನು ಅವರಿಗೆ ಒಂದು ವರ್ಷ ಕರೆ ಮಾಡಿದೆ ಮತ್ತು ಒಂದು ಹಂತದಲ್ಲಿ ಅವರು ನನ್ನ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು' ಎಂದು ಹೇಳಿದ್ದಾರೆ. 

Follow Us:
Download App:
  • android
  • ios