ಕಿರುತೆರೆ ನಟಿ ಶ್ವೇತಾ ಚಂಗಪ್ಪ ಇತ್ತಿಚಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಪುತ್ರನ ಆಗಮನದಿಂದ ಪ್ರತೀ ವರ್ಷವೂ ಬರ್ತ್‌ಡೇ ಪಾರ್ಟಿ ಕೊಂಚ ಸ್ಪೆಷಲ್ ಆಗಿರುತ್ತದೆ. ಆದರೆ ಈ ವರ್ಷ ಈ ಸ್ಪೆಷಲ್‌ಗೆ ಮತ್ತಷ್ಟು ಸ್ಪೆಷಲ್ ಹೆಚ್ಚಿಸಿದ್ದು ಮಜಾ ಟಾಕೀಸ್ ತಂಡ ಎನ್ನಬಹುದು. 

ಮಜಾ ಟಾಕೀಸ್‌ಗೆ ಮತ್ತೆ ಎಂಟ್ರಿ ಕೊಟ್ಟ ಶ್ವೇತಾ ಚಂಗಪ್ಪ; ನೆಟ್ಟಿಗರ ಕಾಮೆಂಟ್‌ ನೋಡಿ ಶಾಕ್! 

ಶ್ವೇತಾ ಪೋಸ್ಟ್:
'ಮಧ್ಯರಾತ್ರಿ ಸರ್ಪ್ರೈಸ್‌ ವಿಸಿಟ್ ಕೊಟ್ಟ ಕುಟುಂಬದಂತಿರುವ ಸ್ನೇಹಿತರು. ನಾವು ಜೀವನದಲ್ಲಿ ಪಡೆದುಕೊಳ್ಳುವ ಪರಿಶುದ್ಧ ಪ್ರೀತಿಯೇ ಫ್ರೆಂಡ್‌ಶಿಪ್. ನನ್ನ ಹುಟ್ಟುಹಬ್ಬ ಶುಭಾಶಯ ಕೋರಿದ ಪ್ರತಿಯೊಬ್ಬರು ತುಂಬಾನೇ ಸ್ಪೆಷಲ್, ನನಗೆ ಹತ್ತಿರವಾಗಿದ್ದಾರೆ. ನಾನು ನಿಮ್ಮೆಲ್ಲರ ಮನಸ್ಸಿಗೆ ಇಷ್ಟೊಂದು ಹತ್ತಿರವಇರುವೆ ಎಂದು ತಿಳಿದುಕೊಳ್ಳಲು ತುಂಬಾ ಖುಷಿಯಾಗುತ್ತದೆ. ಆರ್ಡಿನರಿ ದಿನವನ್ನು ಎಕ್ಸ್‌ಟ್ರಾ ಆರ್ಡಿನರಿ ಮಾಡಿದ್ದೀರಾ,' ಎಂದು ಶ್ವೇತಾ, ಮಜಾ ಟಾಕೀಸ್ ಸಹ ನಟರಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಸೃಜನ್ ಲೋಕೇಶ್, ಪತ್ನಿ ಗ್ರೀಷ್ಮಾ ಲೋಕೇಶ್, ಸಹೋದರಿ ಪೂಜಾ ಲೋಕೇಶ್, ಸೃಜನ್ ಇಬ್ಬರು ಗಂಡು ಮಕ್ಕಳು ಹಾಗೂ ಮಜಾ ಟಾಕೀಸ್‌ ಕುಟುಂಬ ಮಧ್ಯರಾತ್ರಿಯೇ ಶ್ವೇತಾಗೆ ಸರ್ಪ್ರೈಸ್‌ ವಿಸಿಟ್ ನೀಡಿದೆ. ರೆಡ್‌ ವೆಲ್ವೆಟ್‌ ಕೇಕ್‌ ಕತ್ತರಿಸಿ, ಶ್ವೇತಾ ಸಂತಸ ಪಟ್ಟಿದ್ದಾರೆ. 

ಸುಮಾರು ಎರಡು ವರ್ಷಗಳ ನಂತರ ಶ್ವೇತಾ ಕಿರುತೆರೆಗೆ ಕಮ್‌ ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಸಂತೋಷವಾಗಿದೆ. ರಾಣಿ ಇಲ್ಲದೇ ಮಜಾ ಟಾಕೀಸ್‌ ನೋಡಲು ಬೇಸರವಾಗುತ್ತಿತ್ತು, ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಟಿ ಶ್ವೇತಾ ಚಂಗಪ್ಪ ಪುತ್ರ ಜಿಯಾನ್‌ ತುಂಟಾಟ; ಅಮ್ಮನಿಗೆ ಡಬಲ್ ಕೆಲಸ!