ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೊಂಬಾಟ್  ಭೋಜನ' ಶೋ ಬರೋಬ್ಬರಿ 1000 ಸಂಚಿಕೆಗಳನ್ನು ದಾಟಿಯೂ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಮುನ್ನಡೆದಿದೆ. ಸಿಹಿ ಕಹಿ ಚಂದ್ರು ನೇತೃತ್ವದ ಬೊಂಬಾಟ್ ಭೋಜನ ಶೋಗೆ ಕಿರುತೆರೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 

ಈ ಭಾನುವಾರ, ಅಂದರೆ 04 ಫೆಬ್ರವರಿ 2024ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮನರಂಜನೆಗಳ ಮಹಾಪೂರ ಸಿಗಲಿದೆ. ಸುವರ್ಣ ಸ್ಪೆಷಲ್ ಭಾನುವಾರದಲ್ಲಿ ಮಧ್ಯಾಹ್ನ 12.00 ಗಂಟೆಗೆ ಬೊಂಬಾಟ್ ಭೋಜನ, ಸಂಜೆ 5.00 ಕ್ಕೆ 'ಸುವರ್ಣ ಸೂಪರ್ ಸ್ಟಾರ್ 2', 6.30ಕ್ಕೆ 'ಕಥೆಯೊಂದು ಶುರುವಾಗಿದೆ', ರಾತ್ರಿ 7.00ಕ್ಕೆ 'ಸುವರ್ಣ JACKPOT', ರಾತ್ರಿ 8.00 ರಿಂದ 9.00 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', ರಾತ್ರಿ 9.00 ರಿಂದ 10.00 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಮಹಾಸಂಚಿಕೆಗಳು ಪ್ರಸಾರವಾಗಲಿವೆ. 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೊಂಬಾಟ್ ಭೋಜನ' ಶೋ ಬರೋಬ್ಬರಿ 1000 ಸಂಚಿಕೆಗಳನ್ನು ದಾಟಿಯೂ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಮುನ್ನಡೆದಿದೆ. ಸಿಹಿ ಕಹಿ ಚಂದ್ರು ನೇತೃತ್ವದ ಬೊಂಬಾಟ್ ಭೋಜನ ಶೋಗೆ ಕಿರುತೆರೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದು, ಸದ್ಯ ಬೊಂಬಾಟ್ ಭೋಜನ ಭಾರೀ ಜನಪ್ರಿಯತೆ ಪಡೆದಿದೆ. ಈ ಶೋನಲ್ಲಿ ಹಲವು ಜನಪ್ರಿಯ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿಗಳು ಭಾಗವಹಿಸಿ ಸಿಹಿ ಕಹಿ ಚಂದ್ರು ಅವರೊಂದಿಗೆ ಹರಟೆ, ಚರ್ಚೆ ನಡೆಸುತ್ತಾರೆ.

ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಹಲವು ಧಾರಾವಾಹಿಗಳು ಜನಪ್ರಿಯತೆ ಗಳಿಸಿದ್ದು ಉತ್ತಮ ಟಿಆರ್‌ಪಿ ಪಡೆದುಕೊಂಡಿವೆ. ಮಾಳಿಕಪುರಂ, ಆಸೆ, ಹೊಂಗನಸು, ನಾಗಪಂಚಮಿ, ಅನುಪಮ, ನೀನಾದೆನಾ, ಅವನು ಮತ್ತೆ ಶ್ರಾವಣಿ, ಲಚ್ಚಿ, ಗೌರಿಶಂಕರ, ಕಥೆಯೊಂದು ಶುರುವಾಗಿದೆ, ಅರಗಿಣಿ-2, ಜತೆಗೆ ಸುವರ್ಣ ಸಂಕಲ್ಪ ಹೀಗೆ ಹಲವು ಧಾರಾವಾಹಿಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ದಿನವಿಡೀ ಪ್ರಸಾರ ಕಾಣುತ್ತವೆ. ಹಲವು ಸೀರಿಯಲ್‌ಗಳು ಭಾರೀ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿವೆ.

ಸಿನಿಮಾಗೆ ಕರ್ಕೊಂಡ್ ಬಂದ್ರು ಶಂಕರ್‌ನಾಗ್, ಅಂಗಡಿ ಬಿಟ್ಟೆ, ಏನೇನೋ ಮಾಡ್ದೆ; ಏನೇನಂದ್ರು ರಮೇಶ್‌ ಭಟ್‌..!?

ಈಗ ಭಾನುವಾರ ಭರಪೂರ ಮನರಂಜನೆ ನೀಡುವ ಉದ್ದೇಶಕ್ಕೆ ಬದ್ಧವಾಗಿರುವ ಸುವರ್ಣ ವಾಹಿನಿ, ಈ ಭಾನುವಾರ 'ಸುವರ್ಣ ಸ್ಪೆಷಲ್ ಭಾನುವಾರ' ಪ್ರಸಾರ ಹಮ್ಮಿಕೊಂಡಿದೆ. ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುವ ಸುವರ್ಣ ವಾಹಿನಿಯ ಈ ಗುರಿ ಬರುವ ಭಾನುವಾರ ಈಡೇರಲಿದೆ. ಸುವರ್ಣ ವಾಹಿನಿಯ ಅಭಿಮಾನಿಗಳು ಈ ಸುದ್ದಿ ಕೇಳಿ ಸಖತ್ ಥ್ರಿಲ್ ಆಗಿದ್ದು ಭಾನುವಾರ ಬರುವುದನ್ನೇ ಕಾಯುತ್ತಿದ್ದಾರೆ ಎನ್ನಲಾಗಿದೆ.

ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!