Asianet Suvarna News Asianet Suvarna News

ನನ್ನ ಕಣ್ಣುಗಳಿಂದ ಇನ್ನು ಏನೇನು ನೋಡ್ಬೇಕು ಅಂತ ತಲೆ ಚಚ್ಚಿಕೊಂಡ ಭಾಗ್ಯ

ಭಾಗ್ಯಾ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ರಾವ್, ತೆರೆಯ ಹಿಂದಿನ ಘಟನೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

sushma rao shares bhagyalakshmi serial making video mrq
Author
First Published Jun 25, 2024, 3:11 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ರೂಪದೊಂದಿಗೆ ಬದಲಾಗುತ್ತಿದೆ. ಗಂಡನಿಗೆ ಬೇಡವಾಗಿರುವ ಭಾಗ್ಯ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಆದ್ರೆ ಈ ವಿಷಯ ಮನೆಯಲ್ಲಿ ಯಾರಿಗೂ ಹೇಳುವ ಧೈರ್ಯವನ್ನು ಭಾಗ್ಯ ಮಾಡಿಲ್ಲ. ಇತ್ತ ತನಗೆ ಹಾಗೂ ತನ್ನ ಸಂಸಾರಕ್ಕೆ ನಂಬಿಕೆ ದ್ರೋಹ ಮಾಡಿರುವ ಶ್ರೇಷ್ಠಾಗೆ ಕಪಾಳಕ್ಕೆ ಬಿಸಿ ಬಿಸಿ ಏಟು ನೀಡಿ ತನ್ನ ಹಣ ವಸೂಲಿ ಮಾಡಿಕೊಂಡು ಭಾಗ್ಯ ಹಿಂದಿರುಗಿದ್ದಾಳೆ. 

ಭಾಗ್ಯಾಳ ಎಂಟ್ರಿಯಿಂದ ತಾಂಡವ್ ಮತ್ತು ಶ್ರೇಷ್ಠಾ ಪ್ರಿವೆಡ್ಡಿಂಗ್ ಶೂಟ್ ಕ್ಯಾನ್ಸಲ್ ಅಗಿದೆ. ಪ್ರಿವೆಡ್ಡಿಂಗ್ ಶೂಟ್ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಭಾಗ್ಯ ದುರ್ಗಿಯ ಅವತಾರ ತಾಳಿ ಶ್ರೇಷ್ಠಾಳಿಗೆ ನಂಬಿಕೆ ದ್ರೋಹ ಮಾಡಿದ್ರೆ ಏನಾಗುತ್ತೆ ಎಂದು ತಿಳಿಸಿದ್ದಳು. ಅಲ್ಲಿಂದ ನೇರವಾಗಿ ಶ್ರೇಷ್ಠಾಳನ್ನು ಬ್ಯಾಂಕ್‌ಗೆ ಎಳೆದೊಯ್ದು ಹಣ ಪಡೆದುಕೊಂಡಿದ್ದಳು. ಭಾಗ್ಯಾ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ರಾವ್, ತೆರೆಯ ಹಿಂದಿನ ಘಟನೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

ಶ್ರೇಷ್ಠಾ ಕಾಲೆಳೆದ ಭಾಗ್ಯಾ

ಎರಡು ದಿನಗಳ ಹಿಂದೆಯಷ್ಟೇ ಶ್ರೇಷ್ಠಾ ಫೋಟೋಶೂಟ್‌ಗಾಗಿ ಹೂ ಸಿದ್ಧಪಡಿಸುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಶ್ರೇಷ್ಠಾ ಬರುತ್ತಿದ್ದಂತೆ ಇವಳಿಗೋಸ್ಕರ ನಾನು ಹೂ ಬೇರೆ ಬಿಡಿಸಬೇಕು. ನನ್ನ ಗಂಡನ ಜೊತೆ ರೊಮ್ಯಾನ್ಸ್ ಮಾಡ್ತಾಳೆ ಎಂದು ಶ್ರೇಷ್ಠಾಳ ಕಾಲೆಳೆದಿದ್ದರು. ಶೂಟಿಂಗ್‌ಗಾಗಿಯೇ ಸೆಟ್‌ ಸಿಬ್ಬಂದಿ ಜೊತೆ ಕುಳಿತು ಭಾಗ್ಯ ಮತ್ತು ಶ್ರೇಷ್ಠಾ ಕೆಲಸ ಮಾಡಿದ್ದರು.  

ಪತ್ರಕರ್ತರ ಮನಗೆದ್ದ ಭಾಗ್ಯಾಳ ಒತ್ತು ಶ್ಯಾವಿಗೆ ಮತ್ತು ರಸಾಯನ ಮಾಡೋ ಸೀಕ್ರೇಟ್ ಇಲ್ಲಿದೆ!

ಇದೀಗ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿರುವ ಭಾಗ್ಯಾ, ಈ ಕಣ್ಣುಗಳಿಂದ ಇನ್ನು ಏನೇನೂ ನಾನು ನೋಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಕಾರಣ, ಮತ್ತೊಮ್ಮೆ ತಾಂಡವ್ ಮತ್ತು ಶ್ರೇಷ್ಠಾ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ದೃಶ್ಯದ ಚಿತ್ರೀಕರಣ ವೇಳೆ ಅಲ್ಲಿಯೇ ಇರೋ ಗಂಡ ತಾಂಡವ್ ಹಾಗೂ ಶ್ರೇಷ್ಠಾ ಫೋಟೋಶೂಟ್‌ಗೆ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಾಂಡವ್ ಸೊಕ್ಕಿಗೆ ಪೆಟ್ಟು ಕೊಟ್ಟ ಭ್ಯಾಗ್ಯಾ 

ಫೈವ್ ಸ್ಟಾರ್‌ ಕೆಲಸ ಪಡೆದುಕೊಂಡಿರುವ ಭಾಗ್ಯ ತಿಂಗಳ ಸಂಬಳ ಒಂದು ಲಕ್ಷ ರೂಪಾಯಿ. ಮನೆ ಸಾಲ ಕಂತು ನೀಡಬೇಕು ಎಂದು ತಾಂಡವ್ ಚಾಲೆಂಜ್ ಹಾಕಿದ್ದನು. ಸವಾಲಿನಂತೆ ತಾಂಡವ್ ಕೈಗೆ ಒಂದಲ್ಲ ಎರಡು ತಿಂಗಳ ಸಾಲದ ಕಂತನ್ನು ಭಾಗ್ಯಾ ನೀಡಿದ್ದಾಳೆ. ನಾನು ಎಲ್ಲೇ ಹೋದರು, ನನ್ನನ್ನು ಕೇಳೋದಕ್ಕೆ ನೀವ್ಯಾರು ಎಂದು ಭಾಗ್ಯಾ ಪ್ರಶ್ನೆ ಮಾಡಿದ್ದಾಳೆ.  

ತಾಂಡವ್ ಸೊಕ್ಕಿಗೆ ಪೆಟ್ಟು ಕೊಟ್ಟ ಭಾಗ್ಯಾ: ತಾಳ್ಮೆಯಿಂದ ಸೀರಿಯಲ್ ನೋಡಿದಕ್ಕೆ ಸಾರ್ಥಕ‌ ಅಂತಿದ್ದಾರೆ ಜನ

Latest Videos
Follow Us:
Download App:
  • android
  • ios