ತಾಂಡವ್ ಸೊಕ್ಕಿಗೆ ಪೆಟ್ಟು ಕೊಟ್ಟ ಭಾಗ್ಯಾ: ತಾಳ್ಮೆಯಿಂದ ಸೀರಿಯಲ್ ನೋಡಿದಕ್ಕೆ ಸಾರ್ಥಕ ಅಂತಿದ್ದಾರೆ ಜನ
ಭಾಗ್ಯಲಕ್ಷ್ಮೀ ಸೀರಿಯಲ್ ಗೆ ಭಾರಿ ಟ್ವಿಸ್ಟ್ ದೊರಕಿದ್ದು ಇಷ್ಟು ದಿನ ತಾಳ್ಮೆಯಿಂದ ಸೀರಿಯಲ್ ನೋಡಿದಕ್ಕೆ ಸಾರ್ಥಕ ಅಂತಿದ್ದಾರೆ ಜನದು, ಎರಡು ದಿನದಿಂದ ಸೀರಿಯಲ್ ನೋಡ್ತಿದ್ದ ವೀಕ್ಷಕರು ಫುಲ್ ಖುಷಿ ಆಗಿದ್ದಾರೆ. ಇಷ್ಟು ದಿನ ಸೀರಿಯಲ್ ನ್ನು ತಾಳ್ಮೆಯಿಂದ ನೋಡಿದ್ದಕ್ಕೆ ಸಾರ್ಥಕ ಅಂತಿದ್ದಾರೆ ಜನ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ (Bhagyalakshmi) ಸೀರಿಯಲ್ ಕಳೆದ ಕೆಲವು ಎಪಿಸೋಡ್ ಗಳು ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿವೆ. ನೋಡುತ್ತಿರುವ ವೀಕ್ಷಕರಂತೂ ಇದೇ ಬೇಕಾಗಿತ್ತು, ಇದು ಮೊದ್ಲೇ ಆಗ್ಬೇಕಿತ್ತು ಅನ್ನುವಂತೆ ಮೂಡಿ ಬರ್ತಿದೆ ಭಾಗ್ಯಲಕ್ಷ್ಮಿ. ಇದಕ್ಕೆಲ್ಲಾ ಕಾರಣ ಭಾಗ್ಯ ಜೀವನದಲ್ಲಿನ ಬಿಗ್ ಟ್ವಿಸ್ಟ್.
ಇಷ್ಟು ದಿನ ನೋವಿನಿಂದ, ಅವಮಾನದಿಂದ ನೊಂದು ಬೆಂದಿದ್ದ ಭಾಗ್ಯ ಪಾಲಿಗೆ ಕೊನೆಗೂ ಒಳ್ಳೆಯ ದಿನ ಬಂದಿದೆ. ಕೆಲಸದಿಂದ ತೆಗೆದವರೇ ಇದೀಗ ಭಾಗ್ಯಗೆ ಮುಖ್ಯ ಶೆಫ್ ಸ್ಥಾನ ನೀಡಿ, ಒಂದು ಲಕ್ಷ ರೂಪಾಯಿ ಚೆಕ್ ಕೂಡ ನೀಡಿದ್ದಾರೆ. ಈಗ ಭಾಗ್ಯ ಸಮಸ್ಯೆ ಅರ್ಧ ಪರಿಹಾರವಾದಂತಾಗಿದೆ.
ಇದರೊಂದಿಗೆ ಭಾಗ್ಯಗೆ ಶ್ರೇಷ್ಠಾಳೆ ಲಕ್ಷ್ಮೀ ಮದುವೆಗೆ ತೆಗೆದಿಟ್ಟಂತಹ ದುಡ್ಡನ್ನು ತೆಗೆದು, ತಾನೇ ವಾಪಾಸ್ ಭಾಗ್ಯಳಿಗೆ ಸಾಲ ನೀಡುವಂತೆ ಕೊಟ್ಟಿರುವುದು ಗೊತ್ತಾಗಿ, ಶ್ರೇಷ್ಠ ಪ್ರಿವೆಡ್ಡಿಂಗ್ ಫೋಟೋ ಶೂಟ್ (pre wedding photoshoot) ಸಂಭ್ರಮಿಸುತ್ತಿರುವ ನಡುವೆಯೇ ಬಂದು ಕಪಾಳ ಮೋಕ್ಷ ಮಾಡಿ, ಅವಳಿಂದ ದುಡ್ಡನ್ನು ಮರಳಿ ಪಡೆದಿದ್ದಾರೆ.
ಇದೀಗ ತಾಂಡವ್, ಭಾಗ್ಯಾಳನ್ನು ಆಡಿಕೊಳ್ಳುತ್ತಾ ಭಾಗ್ಯ ಮೇಡಂ ಮನೆಯ ಇಎಂಐ (EMI) ಕಟ್ಟಬೇಕು ಅಂತ ಹೇಳಿದ್ದೆ ಅಲ್ವಾ? ಕೊಡ್ತೀರಾ? ನಿಮ್ ಹತ್ರ ಅಷ್ಟು ದುಡ್ಡು ಎಲ್ಲಿ ಬರುತ್ತೆ ಎಂದು ಹೀಯಾಳಿಸುತ್ತಾನೆ. ಅದಕ್ಕೆ ಭಾಗ್ಯ ತನ್ನ ಬ್ಯಾಗ್ ನಿಂದ ಹಣ ತೆಗೆದು ತಾಂಡವ್ ಕೈಗೆ ಕೊಡುತ್ತಾ, ನಾನು ಕಷ್ಟಪಟ್ಟು ದುಡಿದ ದುಡ್ಡು ಇದು, ಇದರಲ್ಲಿ ಎರಡು ತಿಂಗಳ ಇಎಂಐ ಇದೆ ಎಂದು ಹೇಳುತ್ತಾಳೆ.
ಆಗ ತಾಂಡವ್ ಮುಖ ನೋಡಬೇಕು, ಇಂಗು ತಿಂದ ಮಂಗನತ್ತಾಗುತ್ತೆ. ತಾಂಡವ್ ಸೊಕ್ಕಿಗೆ ಭಾಗ್ಯ ಮೊದಲನೇ ಪೆಟ್ಟು ಕೊಟ್ಟಾಗಿದೆ. ಇದನ್ನ ನೋಡಿ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಇಷ್ಟು ದಿನ ತಾಳ್ಮೆಯಿಂದ ಸೀರಿಯಲ್ ನೋಡಿದ್ದಕ್ಕೂ ಈಗ ಸಾರ್ಥಕವಾಯ್ತು ಎಂದು ಹೇಳಿ ಖುಷಿಪಟ್ಟಿದ್ದಾರೆ.
ಒಬ್ಬರು ಕಾಮೆಂಟ್ ಮಾಡಿ ಚಾಲೆಂಜ್ ಅಂದ್ರೆ ಇದು. ಹೆಣ್ಣು ಮನಸು ಮಾಡಿದ್ರೆ ಏನು ಬೇಕಾದ್ರು ಮಾಡಬಹುದು ಅನ್ನೋದನ್ನು ಇದು ಸೂಚಿಸುತ್ತೆ. ಅಬ್ಬಾ ನೋಡೋಕೆ ಎರಡು ಕಣ್ಣು ಸಾಲುತ್ತಿಲ್ಲ ಭಾಗ್ಯ ನೆನ್ನೆ ಇವತ್ತು ನೋಡೋಕೆ ಒಂಥರಾ ಖುಷಿ. ಚಪ್ಪಲಿ ಸುತ್ತಿಕೊಂಡು ಹೊಡಿಯೋದು ಅಂದರೆ ಇದೇ ಎಂದು ಮೆಚ್ಚಿಕೊಂಡಿದ್ದಾರೆ.
ಇನ್ನೂ ಕೆಲವರು ಭಾಗ್ಯ ರಾಕ್, ತಾಂಡವ್ ಶಾಕ್ ಎಂದಿದ್ದಾರೆ. ಭಾಗ್ಯ ಸೂಪರ್. ಸೀರಿಯಲ್ ಇದೇ ರೀತಿಯಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ. ತಾಂಡವ್ ನ ಎಮರ್ಜೆನ್ಸಿ ವಾರ್ಡ್ ಗೆ ಕಳಿಸಿ ಬೇಗ ಎಂದೆಲ್ಲಾ ಕಾಮೆಂಟ್ ಮೂಲಕ ತಮ್ಮ ಸಂತಸವನ್ನು ತೋರ್ಪಡಿಸಿದ್ದಾರೆ ಜನ.