‘ಸ್ಟಾರ್‌ ಸುವರ್ಣ’ ಅಡುಗೆ ಮನೆಯಲ್ಲಿ ಅವರೆಲ್ಲ ತಮ್ಮ ಅಡುಗೆ ಕೈ ರುಚಿ ತೋರಿಸಲಿದ್ದಾರೆ. ಸಾಧಕಿಯರ ಕಿಚನ್‌ ದರ್ಬಾರ್‌ ಕಾರ್ಯಕ್ರಮ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಮೂಡಿಬರಲಿದೆ.

ರಾಘವೇಂದ್ರ ರಾಜ್‌ಕುಮಾರ್‌ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!

ಮಾ.2ಕ್ಕೆ ಹಿರಿಯ ನಟಿ ವನಿತಾ ವಾಸು ಅತಿಥಿಯಾಗಿ ಬರಲಿದ್ದಾರೆ. ಮಾ.3 ಕ್ಕೆ ಡಿಸಿಪಿ ಇಶಾ ಪಂತ್‌, ಮಾ.4ಕ್ಕೆ ರಾಯಚೂರಿನ ರೈತ ಮಹಿಳೆ ಕವಿತಾ ಉಮಾಶಂಕರ್‌ ಭಾಗವಹಿಸುತ್ತಿದ್ದಾರೆ. ಮುಂದೆ ಹೆಸರಾಂತ ಹೃದಯ ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಮಾಜಿ ಶಾಸಕಿ ಬಿ.ಟಿ.ಲಲಿತಾ ನಾಯಕ್‌ ಹಾಗೂ ಬಿಎಂಟಿಸಿ ಮೊದಲ ಮಹಿಳಾ ಬಸ್‌ ಚಾಲಕಿ ಪ್ರೇಮಾ ಅತಿಥಿಯಾಗಿ ಪಾಲ್ಗೊಳಲಿದ್ದಾರೆ.

ಸ್ಟಾರ್‌ ಸುವರ್ಣದಲ್ಲಿ ಶುರುವಾಗಲಿದೆ 'ಮತ್ತೆ ವಸಂತ'!

ಮಾ. 8 ಮತ್ತು 9 ರಂದು ಎರಡು ದಿನಗಳ ಕಾಲ ಇಸ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಲೇಖಕಿ ಸುಧಾಮೂರ್ತಿ ಭಾಗವಹಿಸಿ ತಮ್ಮ ಅಡುಗೆ ಕೈ ಚಳಕ ತೋರಿಸಲಿದ್ದಾರೆ.