ಸಾಯಿಸಲು ಬಂದಾಕೆ ಮತ್ತೊಮ್ಮೆ ಪ್ರಾಣ ಉಳಿಸಿದಳು! ಕಣ್ಣು ಅರಿಯದಿದ್ದರೂ... ಎನ್ನೋದು ಇದಕ್ಕೆ ಅಲ್ವಾ?

ಸಾಯಿಸಲು ಬಂದಾಕೆ  ಮತ್ತೊಮ್ಮೆ ಪ್ರಾಣ ಉಳಿಸಿದಳು! ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವುದು ಇದಕ್ಕೇ ಅಲ್ವಾ? ಏನಿದು ಅಮೃತಧಾರೆ ಟ್ವಿಸ್ಟ್‌? 
 

Sudha saved Bhoomika life this time in Amrutadhare while her intension was different suc

ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವ ಮಾತಿದೆ. ಅದೇ ಅಮೃತಧಾರೆಯ ಗೌತಮ್‌ ಮತ್ತು ಸುಧಾ ನಡುವೆ ಇದೆ. ಅಷ್ಟಕ್ಕೂ ಸೀರಿಯಲ್‌ನಲ್ಲಿ  ಈಗ ಅಣ್ಣ-ತಂಗಿಯ ಟ್ವಿಸ್ಟ್‌ ಬಂದಿದೆ. ಗೌತಮ್ ದಿವಾನ ತನ್ನ ಅಣ್ಣ ಎನ್ನುವುದನ್ನುತಿಳಿಯದೇ, ಯಾರದ್ದೋ ಮಾತು ಕೇಳಿಕೊಂಡು ತಂಗಿ ಸುಧಾ, ಅವರ ಮನೆ ಸೇರಿದ್ದಾಳೆ. ಅವರಿಗೆ ಕೆಡುಕು ಉಂಟುಮಾಡುವುದೇ ಅವಳ ಉದ್ದೇಶ. ಅಮ್ಮ ಮತ್ತು ಮಗಳು ಚೆನ್ನಾಗಿ ಇರಬೇಕು ಎಂದರೆ ಗೌತಮ್‌ ನೆಮ್ಮದಿಯನ್ನು ಹಾಳು ಮಾಡಬೇಕು, ಅವರಿಗೆ ಕೆಡುಕು ಮಾಡಬೇಕು, ಜೀವ ತೆಗೆಯಬೇಕು ಎಂದೆಲ್ಲಾ ಸುಧಾಳಿಗೆ ಹೇಳಿ ಕಳುಹಿಸಲಾಗಿದೆ. ಇದಕ್ಕೆ ಹೆದರಿರೋ ಸುಧಾ ಒಪ್ಪಿಕೊಂಡು ಗೌತಮ್ ಮನೆ ಸೇರಿದ್ದಾಳೆ. ಆದರೆ ಇದಾಗಲೇ ಗೌತಮ್‌ ಜೀವ ಉಳಿಸಿದ್ದಳು ಸುಧಾ. ಅವನನ್ನು ಬಾಯ್ತುಂಬಾ ಅಣ್ಣ ಎಂದು ಕರೆದಿದ್ದಾಳೆ. ಭೂಮಿಕಾಳನ್ನು ಅತ್ತಿಗೆ ಎನ್ನುತ್ತಿದ್ದಾಳೆ. ಗೌತಮ್‌ ಮತ್ತು ಭೂಮಿಕಾ ತೋರಿಸ್ತಿರೋ ಪ್ರೀತಿಗೆ ಅವಳು ಕರಗಿ ಹೋಗಿದ್ದಾಳೆ.
 
ಇದಾಗಲೇ ಒಮ್ಮೆ ಅರಿಯದೇ ಗೌತಮ್‌ನ ಜೀವ ಉಳಿಸಿದ್ದಳು. ಈಗ ಅಮ್ಮನ ಸಲುವಾಗಿ ಮನೆಯವರಿಗೆ ಕೆಡುಕು ಮಾಡಲೇ ಬೇಕು ಎನ್ನುವ ನಿರ್ಧಾರದಿಂದ ಗೌತಮ್‌ ಮನೆಯಲ್ಲಿ ಸಂಚು ಹೂಡಲೇ ಬೇಕಿದೆ ಸುಧಾ. ಅದನ್ನೇ ಮಲಗಿರುವ ಅಮ್ಮನ ಬಳಿಯೂ ಹೇಳಿ ಕಣ್ಣೀರಾಗಿದ್ದಾಳೆ. ಅಮ್ಮನನ್ನು ಉಳಿಸಿಕೊಳ್ಳಬೇಕು ಎಂದರೆ ನಾನು ಈ ಕೃತ್ಯ ಮಾಡಲೇಬೇಕು ಎಂದು ಹೇಳಿದ್ದಾಳೆ. ಆದರೆ ಕರುಳು ಸಂಬಂಧ ಎಂದರೆ ಸುಮ್ಮನೇನಾ? ಭೂಮಿಕಾ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಅವಳ ಸೆರಗಿಗೆ ಬೆಂಕಿ ತಗುಲಿದೆ. ಅದನ್ನು ನೋಡಿದ ಸುಧಾ, ತನ್ನ ಕೈಗಳಿಂದಲೇ ಅದನ್ನು ಆರಿಸಿದ್ದಾಳೆ. ಕೈಗೆ ಗಾಯವಾಗಿದೆ. ಇದನ್ನು ನೋಡಿ ಎಲ್ಲರೂ ಗಾಬರಿಯಾಗಿದ್ದಾರೆ. ಜೀವ ತೆಗೆಯಲು ಬಂದಾಕೆ ಮತ್ತೊಮ್ಮೆ ಜೀವ ಕಾಪಾಡಿದ್ದಾಳೆ. ಇನ್ನು ಅವಳು ಬಂದಿರೋ ಉದ್ದೇಶ ಈಡೇರಿಸಲು ಸಾಧ್ಯನಾ ಎನ್ನುವುದು ಮುಂದಿರುವ ಪ್ರಶ್ನೆ. 

ರೀಲ್‌ ಪತ್ನಿ ಎದುರು ರಿಯಲ್‌ ಪತ್ನಿ ಜೊತೆ ಶ್ರೀರಸ್ತು ಶುಭಮಸ್ತು ಮಾಧವ್‌ ಸಕತ್‌ ಸ್ಟೆಪ್‌

ಅಷ್ಟಕ್ಕೂ ಹಿಂದಿನ ಸಂಚಿಕೆಯಲ್ಲಿ ತಾನು ವಿಧವೆ ಎನ್ನುವ ಪಟ್ಟ ಕಟ್ಟಿಕೊಂಡವಳು ಎಂದಾಗ, ಗೌತಮ್ ಸುಂದರವಾದ ಮಾತನ್ನಾಡಿದ್ದ. ಗೌತಮ್‌ ಪೂಜೆ ಮಾಡುತ್ತಿರುವಾಗ ಸುಧಾ ಮೂಲೆಯಲ್ಲಿ ನಿಂತುಕೊಳ್ಳುತ್ತಾಳೆ. ಅದಕ್ಕೆ ಕಾರಣ ಕೇಳಿದಾಗ, ನೀವು ಪೂಜೆಮಾಡ್ತಾ ಇದ್ದಿರಿ. ನಾನು ವಿಧವೆ. ಎದುರಿಗೆ ಬರಬಾರದು ಎಂದುನಿಂತೆ ಎನ್ನುತ್ತಾಳೆ ಸುಧಾ. ಅದಕ್ಕೆ ಅವಳಿಗೆ ಕ್ಲಾಸ್‌ ತೆಗೆದುಕೊಳ್ಳುವ ಗೌತಮ್‌, ಇದೆಲ್ಲಾ ಏನೂ ಇಲ್ಲ. ಇವೆಲ್ಲಾ ಮನುಷ್ಯ ತನ್ನ ಭಯಕ್ಕೆ ಹಾಕಿಕೊಂಡುವ ನಿಯಮಗಳು ಅಷ್ಟೇ ಎಂದಿದ್ದಾನೆ. ಬೆಕ್ಕು ಅಡ್ಡ ಬರೋದು, ವಿಧವೆ ಎದುರಿಗೆ ಬರೋದು... ಇವೆಲ್ಲಾ ಮೌಢ್ಯಗಳ ಪರಮಾವಧಿ ಎಂದಿರುವ ಗೌತಮ್‌, ನಾನುರಸ್ತೆಯ ಮೇಲೆ ಹೋಗುವಾಗ ಎಷ್ಟೋ ವಿಧವೆಯರು ಅಡ್ಡ ಬರುತ್ತಾರೆ. ಹಾಗೆಂದು ನನಗೆ ಕೆಡುಕು ಆಗುತ್ತಾ? ಹೋಗುವ ಕೆಲಸ ಆಗಲ್ವಾ? ಇದೆಲ್ಲಾ ಹುಚ್ಚುತನ. ನನ್ನ ಪಾಲಿಗೆ ನೀನು ಯಾವತ್ತಿಗೂ ಮುತ್ತೈದೆಯೇ. ಅದೆಲ್ಲಾ ತಲೆಯಿಂದ ತೆಗೆದುಹಾಕು ಎನ್ನುತ್ತಾನೆ.

ಈ ಮಾತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಈಗಬೇಕಿರುವುದು ಇದೇ ಮಾತು. ಸೀರಿಯಲ್‌ ಮೂಲಕ ಮೌಢ್ಯಕ್ಕೆ ತೆರೆ ಎಳೆಯಬೇಕು. ಸೀರಿಯಲ್‌ಗಳನ್ನು ನೋಡುವ ದೊಡ್ಡ ವರ್ಗ ಅದನ್ನೇ ಪಾಲಿಸುವುದು ಇದೆ. ಇದೇ ಕಾರಣಕ್ಕೆ ಧಾರಾವಾಹಿಗಳಲ್ಲಿ ಇಂಥ ಮಾತುಗಳು ನಟರ ಬಾಯಲ್ಲಿ ಬಂದರೆ ಅತಿ ಉತ್ತಮ ಎನ್ನುತ್ತಿದ್ದಾರೆ ನೆಟ್ಟಿಗರು. 
 

ನನಗೆ ಮಗು ಇಷ್ಟವಿಲ್ಲ, ಎಲ್ಲರೂ ಸುಳ್ಳೆ ಹೇಳ್ತಾರೆ, ಈ ಹಿಂಸೆ ತಾಳೋಕೆ ಕಷ್ಟವಾಗ್ತಿದೆ: ನಟಿ ರಾಧಿಕಾ ಓಪನ್ ಮಾತು!

Latest Videos
Follow Us:
Download App:
  • android
  • ios