ಸೋಷಿಯಲ್ ಮೀಡಿಯಾದಲ್ಲಿಆ್ಯಕ್ಟಿವ್ ಆಗಿರುವ ಸುದೀಪ್ ಪುತ್ರಿ, ನೆಟ್ಟಿಗರು ಬಿಗ್ ಬಾಸ್‌  ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ. 

ಅದ್ಭುತ ಗಾಯಕಿ ಹಾಗೂ ಪೇಂಟರ್ ಅಗಿ ಗುರುತಿಸಿಕೊಂಡಿರುವ ಸಾನ್ವಿ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಜೊತೆ ಕೆಲವೊಂದು ವಿಚಾರಗಳ ಬಗ್ಗೆ ಚರ್ಚಿಸುತ್ತಾರೆ ಹಾಗೂ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಇದೀಗ ಸಾನ್ವಿ ಬಿಗ್ ಬಾಸ್‌ ಸೀಸನ್ 8ರ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಸಿಗರೇಟ್‌ ಪ್ರಾಣ ಉಳಿಸುತ್ತೆ, ಆದರೆ ಅದಕ್ಕೆ ಪ್ರಾಣವಿಲ್ಲ; ಶುಭಾ ಪೂಂಜಾ ಎಡವಟ್ಟಿಗೆ ರಘು ಗೌಡ ಟಾಂಗ್! 

ಆರಂಭದಲ್ಲಿ ಸುದೀಪ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ. 'ಆರಾಮ್ ಆಗುತ್ತಿದ್ದಾರೆ. ಈ ವಾರವೂ ಶೋ ನಿರೂಪಣೆ ಮಾಡುವುದಿಲ್ಲ. ಅವರಿಗೆ ಇನ್ನೂ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಬೇಕು,' ಎಂದು ಹೇಳಿದ್ದಾರೆ. ಇನ್ನು ಈ ಸೀಸನ್‌ನ ಫೇವರೆಟ್ ಸ್ಪರ್ಧಿ ಯಾರು? ರಾಜೀವ್ ಬಿಟ್ಟರೆ ಇನ್ಯಾರು ಎಂದು ಕೇಳಿದ್ದಾರೆ ಅಭಿಮಾನಿಗಳು. 'ಹೌದು ನನಗೆ ರಾಜೀವ್ ಫೇವರೆಟ್. ಆದರೆ ಈ ಬಾರಿ ಎಲ್ಲ ಸ್ಪರ್ಧಿಗಳೂ ಇಷ್ಟ. ಆಯ್ಕೆ ಮಾಡಲು ಆಗುವುದಿಲ್ಲ,' ಎಂದೂ ಹೇಳಿದ್ದಾರೆ. 

ಬಿಬಿ ಮನೆಯಲ್ಲಿ ಮಾತ್ರವಲ್ಲ, ಇಡೀ ಕರ್ನಾಟಕದ ಮನೆ ಮಾತಾಗಿರುವ ಜೋಡಿ ಅರವಿಂದ್ ಹಾಗೂ ದಿವ್ಯಾ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ ಮಂದಿ. 'ಅವರಿಬ್ಬರು ಒಟ್ಟಾಗಿ ಕ್ಯೂಟ್ ಆಗಿ ಕಾಣಿಸುತ್ತಾರೆ,' ಎಂದು ಸಾನ್ವಿ ಹೇಳಿದ್ದಾರೆ. 'ಬಿಬಿಯಲ್ಲಿ ವೈಷ್ಣವಿ ಅವರನ್ನು ಇಷ್ಟಪಡುತ್ತೀರಾ? ಯಾಕೆ? ಎಂದು ಕೇಳಿದ್ದಾರೆ. 'ನನಗೆ ವೈಷ್ಣವಿ ತುಂಬಾ ಇಷ್ಟ ಆಗುತ್ತಾರೆ. ಅವರು ತುಂಬಾ ಟ್ಯಾಲೆಂಟೆಡ್ ಅಂದು ಕೊಳ್ತಿನಿ ಹಾಗೂ ಚೆನ್ನಾಗಿ ಆಟ ಅಡುತ್ತಿದ್ದಾರೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸಾನ್ವಿ.

'ನೀವು ಚೀಪ್' ಎಂದ ನಿಧಿ ಸುಬ್ಬಯ್ಯಗೆ 'ನಿನ್ನ ಚರಿತ್ರೆ ರಿವೀಲ್ ಮಾಡ್ಲಾ?' ವಾರ್ನ್ ಮಾಡಿದ ಪ್ರಶಾಂತ್! 

ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಫೋಟೋಗಳನ್ನು ಹೆಚ್ಚಾಗಿ ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡುತ್ತಾರೆ. ಯಾಕೆ ಅವರದ್ದು ಮಾತ್ರ ಅಷ್ಟೊಂದು ಶೇರ್ ಮಾಡುತ್ತೀರಾ ಎಂದು ಕೇಳಿರುವುದಕ್ಕೆ 'ನಾನು ಸಿದ್ಧಾರ್ಥ್ ಅವರ ಅಭಿಮಾನಿ, ಅದಿಕ್ಕೆ' ಎಂದು ಉತ್ತರ ನೀಡಿದ್ದಾರೆ.