ಇಷ್ಟುದಿನ ಗೃಹಿಣಿಯರು ದೊಡ್ಡ ಸಂಖ್ಯೆಯಲ್ಲಿ ಟಿವಿ ನೋಡುಗರಾಗಿದ್ದರು. ಪ್ರತಿ ವಾಹಿನಿಯೂ ತನ್ನ ಕಾರ್ಯಕ್ರಮವನ್ನು ಗೃಹಿಣಿಯರನ್ನು ಮನಸಲ್ಲಿಟ್ಟುಕೊಂಡು ರೂಪಿಸುತ್ತಿತ್ತು. ಮಹಾಭಾರತ ಪ್ರಸಾರವಾದ ನಂತರ ಮಕ್ಕಳು ಹಾಗೂ ಹಿರಿಯರು ಕಿರುತೆರೆಗೆ ದೊಡ್ಡ ಮಟ್ಟದಲ್ಲಿ ಆಕರ್ಷಿತರಾಗಿದ್ದು ಹೊಸ ಟ್ರೆಂಡ್‌ ಹುಟ್ಟು ಹಾಗಿದೆ.

ಕನ್ನಡದ ಕಂಪಿನಲ್ಲಿ ಪ್ರಸಾರವಾಗುತ್ತಿದೆ ಮಹಾಭಾರತ

ಸ್ಟಾರ್‌ ಸುವರ್ಣ ವಾಹಿನಿ ಮಹಾಭಾರತ ಧಾರಾವಾಹಿ ಪ್ರಸಾರ ಮಾಡಿದ 2 ದಿನದಲ್ಲೇ ಕನ್ನಡ ಕಿರುತೆರೆಯ ಉಳಿದೆಲ್ಲ ವಾಹಿನಿಗಿಂತ ಶೇಕಡಾ 50 ಕ್ಕಿಂತ ಹೆಚ್ಚು ನೋಡುಗರನ್ನು ತನ್ನತ್ತ ಸೆಳೆದುಕೊಂಡಿದೆ. ಮಹಾಭಾರತದ ಹಸ್ತಿನಾಪುರದಿಂದ ಪ್ರಾರಂಭವಾಗುವ ಕತೆಯನ್ನು ಕುರುಕ್ಷೇತ್ರ ಯುದ್ಧದವರೆಗೆ ಕೇವಲ 260 ಸಂಚಿಕೆಯಲ್ಲಿ ಕಟ್ಟಿಕೊಟ್ಟು ಅದ್ಧೂರಿ ಮೇಕಿಂಗ್‌ ಹಾಗೂ ಅದ್ಭುತವೆನಿಸುವ ಗಾಫಿಕ್ಸ್‌ ಅಳವಡಿಸಿದ್ದು ಈ ಯಶಸ್ಸಿನ ಗುಟ್ಟು.

ಪ್ರಸ್ತುತ ಸಂದರ್ಭದಲ್ಲಿ ದೇಶಾದಾದ್ಯಂತ ಜನರು ದೊಡ್ಡ ಮಟ್ಟದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ನೋಡುಗರು ಮಹಾಭಾರತದ ಹಾಗೂ ರಾಮಾಯಣದಂತಹ ಆಧ್ಯಾತ್ಮಿಕ ಧಾರಾವಾಹಿಗಳನ್ನು ನಿರೀಕ್ಷೆಗೂ ಮೀರಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಆಧುನಿಕ ತಂತ್ರಜ್ಞಾನದ ಮೆರಗಿನೊಂದಿಗೆ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿ ನೋಡುಗರ ಮನಸ್ಸಿನಲ್ಲಿ ಶಾಶ್ವತನಾಗಿ ಭಾವವಾಗಿ ದಾಖಲಾಗುತ್ತಿದೆ.

ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ

ಮಹಾಭಾರತಕ್ಕೆ ಸಿಕ್ಕ ಜನಾಭಿಪ್ರಾಯದಿಂದ ಸ್ಟಾರ್‌ ಸುವರ್ಣ ವಾಹಿನಿ ಮತ್ತೊಂದು ಅದ್ದೂರಿ ಧಾರಾವಾಹಿ ‘ರಾಧಾ-ಕೃಷ್ಣ’ವನ್ನು ಕೂಡಾ ಕನ್ನಡದಲ್ಲಿ ಪ್ರಸಾರ ಮಾಡುತ್ತಿದೆ. ಗೋಕುಲನಂದನ ಬಾಲಲೀಲೆ, ಅಧ್ಯಾತ್ಮದ ಕನ್ನಡಿಯಲ್ಲಿ ಜಗದೋದ್ಧಾರಕ ಶ್ರೀಕೃಷ್ಣನ ಒಲವಿನ ಕಥೆಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟು ನೋಡುಗರಿಗೆ ಮನರಂಜನೆಯ ನೀಡುವ ಉದ್ದೇಶ ಸ್ಟಾರ್‌ ಸುವರ್ಣ ವಾಹಿನಿಯದ್ದು. ಮೇ 18 ರಿಂದ ರಾತ್ರಿ 7 ಗಂಟೆಗೆ (ಸೋಮವಾರದಿಂದ ಶನಿವಾರವದವರೆಗೆ) ರಾಧಾ-ಕೃಷ್ಣ ಕನ್ನಡಿಗರ ಮನೆಯಂಗಳಕ್ಕೆ ತಲುಪಲಿದೆ.