'ರಾಧೆ ಶ್ಯಾಮ': ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಅಶ್ವಿನಿ ಗೌಡ!

ಬೆಳ್ಳೆತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಅಶ್ವಿನಿ ಗೌಡ. ಕಮ್ ಬ್ಯಾಕ್‌ಗೆ ಆಯ್ಕೆ ಮಾಡಿಕೊಂಡಿರುವ ಧಾರಾವಾಹಿ ಸೂಪರ್ ಎಂದ ನೆಟ್ಟಿಗರು.
 

Star Suvarna Radhe Shyam Ashwini gowda to play prathima devi role vcs

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅಶ್ವಿನಿ ಗೌಡ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಅಶ್ವಿನಿ ಕಿರುತೆರೆ ವೀಕ್ಷಕರ ಮನಸ್ಸಿಗೆ ಸದಾ ಹತ್ತಿರವಾಗುತ್ತಾರೆ, ಹೀಗಾಗಿ ಅವರ ಕಮ್‌ ಬ್ಯಾಕ್ ವಿಚಾರವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ. 

'ರಾಧೆ ಶ್ಯಾಮ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನನ್ನ ಹೊಸ ಪ್ರಾಜೆಕ್ಟ್. ನಿಮ್ಮ ಆಶೀರ್ವಾದ ಬೇಕಿದೆ'ಎಂದು ಪ್ರೋಮೋ ವಿಡಿಯೋ ಹಂಚಿಕೊಂಡಿದ್ದಾರೆ. ಮತ್ತೆ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಇಂದು ಸಂಜೆ ( ಸೆಪ್ಟೆಂಬರ್ 6) 6.30 ಧಾರಾವಾಹಿ ಪ್ರಸಾರವಾಗಲಿದೆ. 

'ಸರಸು' ಧಾರಾವಾಹಿ ಅಂತ್ಯವಾಗುತ್ತಿರುವುದಕ್ಕೆ ಶಾಕ್ ಆದ ನಟ ಸ್ಕಂದ ಅಶೋಕ್!

ಶಿವ ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ತಾನ್ವಿ ರಾವ್ ಹಾಗೂ ಅನೂಪ್ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಮಾ ದೇವಿ ಪಾತ್ರದಲ್ಲಿ ಅಶ್ವಿನಿ ಮಿಂಚಲಿದ್ದಾರೆ.  ತನ್ನ ಸುತ್ತಲಿರುವ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಹೆಣ್ಣು, ತಪ್ಪು ಅಂತ ಬಂದರೆ ತನ್ನ ಸ್ವಂತ ಮಕ್ಕಳನ್ನು ಕ್ಷಮಿಸುವುದಿಲ್ಲ ಅಂತ ಗುಣವುಳ್ಳ ಪಾತ್ರ ಇದಾಗಿರುತ್ತದೆ.  ಲವಲವಿಕೆ, ಕಾವೇರಿ ಹಾಗೂ ಮಹಾಪರ್ವ ಧಾರಾವಾಹಿಗಳಲ್ಲಿ ನಟಿಸಿರುವ ಅಶ್ವಿನಿ ಒಡೆಯಾ ಹಾಗೂ ರಾಮರಾಜ್ಯ ಚಿತ್ರದಲ್ಲಿ ನಟಿಸಿದ್ದಾರೆ.

Latest Videos
Follow Us:
Download App:
  • android
  • ios