Asianet Suvarna News Asianet Suvarna News

ಸುಖಾಂತ್ಯದತ್ತ ವಿಕ್ರಮ್ ವೇದಾರ ಪ್ರೇಮಕಥೆ ನೀನಾದೆ ನಾ, ಕಣ್ಣೀರು ಸುರಿಸುತ್ತಿರುವ ನಾಯಕಿ ಖುಷಿ!

 ಸ್ಟಾರ್‌ ಸುವರ್ಣ ವಾಹಿನಿಯ ನಂಬರ್‌ 1 ಟಿಆರ್‌ಪಿ ಸೀರಿಯಲ್ ವಿಕ್ರಮ್ ವೇದಾದ ಕ್ಲೈಮ್ಯಾಕ್ಸ್ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ. ಇಂಥಾ ತರಾತುರಿಯಲ್ಲಿ ಯಾಕೆ ಸೀರಿಯಲ್ ವೈಂಡ್‌ಅಪ್ ಆಗ್ತಿದೆ.. ನಾಯಕಿ ಯಾಕೆ ಕಣ್ಣೀರು ಹಾಕ್ತಿದ್ದಾರೆ?

star suvarna no.1 trp serial vikram veda winding up, heroine Khusi shivu is shedding tears bni
Author
First Published Aug 30, 2024, 10:57 AM IST | Last Updated Aug 30, 2024, 11:49 AM IST

ನೀನಾದೆ ನಾ ಅನ್ನುವ ಲವ್‌ಸ್ಟೋರಿ ಸ್ಟಾರ್‌ ಸುವರ್ಣದಲ್ಲಿ ಬಹಳ ದಿನಗಳಿಂದ ನಂ.1 ಸೀರಿಯಲ್ ಆಗಿ ಜನಪ್ರಿಯವಾಗಿತ್ತು. ಇದೀಗ ಸೀರಿಯಲ್ ವೈಂಡ್‌ ಅಪ್ ಆಗುತ್ತಿದೆ. ಕೊನೆಯ ಎಪಿಸೋಡ್ ಇಂದು ರಾತ್ರಿ ೯.೩೦ಕ್ಕೆ ಪ್ರಸಾರವಾಗಲಿದೆ. ಕಳೆದ ಒಂದೂವರೆ ವರ್ಷದಿಂದ ಪ್ರಸಾರ ಕಾಣುತ್ತಿದ್ದ 'ನೀನಾದೆ ನಾ' ಸೀರಿಯಲ್ ಹೀಗೆ ಸಡನ್ನಾಗಿ ವೈಂಡ್‌ ಅಪ್ ಆಗ್ತಿರೋದಕ್ಕೆ ಈ ಸೀರಿಯಲ್ ಫ್ಯಾನ್ಸ್ ಬಹಳ ಬೇಜಾರಲ್ಲಿದ್ದಾರೆ. 'ಈ ಧಾರಾವಾಹಿ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು. ಮುಕ್ತಾಯ ಆಗ್ತಿದೆ ಅಂತ ಬೇಸರ ಆಗ್ತಿದೆ. ವೇದಾ ವಿಕ್ರಮ್ ಜೋಡಿಯ ಇನ್ನೊಂದು ಧಾರಾವಾಹಿ ಮತ್ತೆ ಬರಲಿ. ಎಲ್ಲರ ಅಭಿನಯವೂ ಬಹಳ ಚೆನ್ನಾಗಿತ್ತು. ಹೊಸ ಅಧ್ಯಾಯ ಆದಷ್ಟು ಬೇಗ ಬರಲಿ' ಅಂತ ಒಬ್ಬರು, 'ಇಷ್ಟು ಬೇಗ ಈ ಸೀರಿಯಲ್ ಮುಗಿಸ್ತಿದ್ದೀರಾ?' ಅಂತ ಮತ್ತೊಬ್ರು, 'ಈ ಸೀರಿಯಲ್‌ ಅನ್ನು ಹ್ಯಾಪಿ ಎಂಡಿಂಗ್ ಅಂತ ಮಾಡಿದ್ರೂ ಅದು ಇಂಪ್ಯಾಕ್ಟ್‌ಫುಲ್ ಆಗಿ ಕಾಣಿಸ್ತಿಲ್ಲ. ವೇದಾಗೆ ಹಿಂದಿನ ನೆನಪಾದಾಗ ಮೇಲೆ ಇನ್ನೊಂದಿಷ್ಟು ಹ್ಯಾಪಿ ಎಪಿಸೋಡ್‌ ಬೇಕಿತ್ತು. ಈ ಎಂಡಿಂಗ್ ತುಂಬ ಅಬ್ರಪ್ಟ್ ಆಗಿದೆ' ಅಂತ ಮಗದೊಬ್ರು ಕಾಮೆಂಟ್ ಮಾಡಿದ್ದಾರೆ.

ಈ ಸೀರಿಯಲ್ ವೈಂಡ್ ಅಪ್‌ ಆಗ್ತಿದೆ ಅಂತ ಹದಿನೈದು ದಿನ ಮೊದಲೇ ಸೀರಿಯಲ್ ತಂಡವೇ ಹೇಳಿತ್ತು. ಅಷ್ಟೇ ಅಲ್ಲದೆ ಸೀರಿಯಲ್‌ ಟೀಮ್ ವಿಶೇಷ ಪ್ರೋಮೋ ಮಾಡಿ ಈ ಸಂಗತಿ ಹೇಳಿತ್ತು. ಆದರೆ ಅಲ್ಲೊಂದು ಗುಡ್‌ನ್ಯೂಸ್ ಅನ್ನೂ ಕೊಟ್ಟಿತು. ಅದು ಮತ್ತೇನೂ ಅಲ್ಲ, ಮತ್ತೆ ಹೊಸ ಕಥೆಯೊಂದಿಗೆ ಬರ್ತಿರೋದಾಗಿ ಗುಡ್‌ ನ್ಯೂಡ್ ಕೊಟ್ಟಿತು. ಸೋ ಸದ್ಯ ಈ ಕಥೆ ಮುಗಿದಿದ್ದಕ್ಕೆ ಬೇಜಾರು ಆದ್ರೂ ಈ ಸೀರಿಯಲ್ ಫ್ಯಾನ್ಸ್ ಎಲ್ಲರೂ ‘ನೀನಾದೆ ನಾ’ ಪ್ರೀತಿಯ ಹೊಸ ಅಧ್ಯಾಯಕ್ಕೆ ಎದುರು ನೋಡ್ತಿದ್ದಾರೆ.

ನೀನಾದೆ ನಾ ಹೊಸ ತಿರುವು, ಸ್ಮಗ್ಲರ್‌ ಆಗಿ ಬದಲಾದ ವಿಕ್ರಮ್‌, ಬೆನ್ನು ಬಿಡದ ಬೇತಾಳನಾದ ವೇದಾ!

ಬರೀ ಅಶೂರೆನ್ಸ್ ಕೊಟ್ಟಿರೋದು ಮಾತ್ರ ಅಲ್ಲ, ಹೊಸ ಸೀರಿಯಲ್‌ನ ಪ್ರೋಮೋವನ್ನೂ ರಿಲೀಸ್ ಮಾಡಲಾಗಿದೆ. ಅದರಲ್ಲಿ ನಾಯಕ ನಟ ದಿಲೀಪ್ ಶೆಟ್ಟಿ ಬೇರೆ ಥರ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರು ಬೀಚ್ ಕಡೆ ಈ ಧಾರಾವಾಹಿಯ ಶೂಟಿಂಗ್ ನಡೆದಿದೆ. ಮಂಗಳೂರು ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದೆ ಎನ್ನಲಾಗಿದೆ. ಇನ್ನು ಈ ಪ್ರೋಮೋದಲ್ಲಿ ಕೂಡ ನಾಯಕ ರೌಡಿಸಂ ಮಾಡುತ್ತಿರುತ್ತಾನೆ, ಸ್ಮಗ್ಲರ್ ಆಗಿದ್ದಾನೆ. ಇದನ್ನು ವೇದ ವಿರೋಧಿಸಿ ಆತನನ್ನು ಪೊಲೀಸರಿಗೆ ಒಪ್ಪಿಸುತ್ತಾಳೆ. ಹೊಸ ಅಧ್ಯಾಯದಲ್ಲಿಯೂ ವಿಕ್ರಮ್, ವೇದ ಎನ್ನುವ ಪಾತ್ರಗಳ ಹೆಸರು ಸ್ವಭಾವ ಮೊದಲಿನ ಹಾಗೇ ಇದೆ. ಇಬ್ಬರೂ ಹಾವು ಮುಂಗುಸಿಗಳ ಥರ ಕಿತ್ತಾಡುತ್ತಲೇ ಪ್ರೀತಿಯಲ್ಲಿ ಬೀಳೋ ಕಥೆ ಇದು ಅಂತ ಗೊತ್ತಾಗುತ್ತೆ.

ಆದರೆ ಈ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಖುಷಿ ಶಿವು ಸೀರಿಯಲ್ ವೈಂಡ್‌ಅಪ್ ಆಗ್ತಿದ್ದ ಹಾಗೆ ಕಣ್ಣೀರು ಹಾಕಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸ್ಟಾರ್ ಸುವರ್ಣ ವಾಹಿನಿಯೇ ಖುಷಿ ಶಿವು ಭಾವುಕರಾದ ಪ್ರೊಮೊ ಪ್ರಸಾರ ಮಾಡಿದೆ. 'ನಾನು ಬುದ್ಧಿಯಿಂದ ಇದರಲ್ಲಿ ನಟಿಸಿಲ್ಲ. ಹೃದಯಪೂರ್ವಕವಾಗಿ ನಟಿಸಿದ್ದೇನೆ. ನಂಗೆ ಮಾತಾಡಕ್ಕಾಗ್ತಿಲ್ಲ' ಅಂತ ಖುಷಿ ಶಿವು ಕಣ್ಣೀರು ಹಾಕ್ತಿರೋ ಈ ಪ್ರೋಮೋ ನೋಡಿ ಫ್ಯಾನ್‌ಗಳೂ ಕಣ್ಣೀರಾಗಿದ್ದಾರೆ. 'ಮಿಸ್ ಯೂ ಗುಂಡ ಬೇತಾಳ' ಅಂದಿದ್ದಾರೆ. ನಾಯಕ ದಿಲೀಪ್ ಅವರು ಖುಷಿಯನ್ನ ಸಮಾಧಾನಿಸಲು ಪ್ರಯತ್ನಿಸಿದ್ದಾರೆ.

ರಂಜನಿ ರಾಘವನ್ ಲವ್ಸ್ ಸಾಗರ್‌ ಭಾರದ್ವಾಜ್ ! ಇದು ಕನ್ನಡತಿ ಭುವಿಯ ರಿಯಲ್ ಲವ್ ಸ್ಟೋರಿ!

ಇನ್ನು ಇಂದು ರಾತ್ರಿಯ ಕ್ಲೈಮ್ಯಾಕ್ಸ್‌ನಲ್ಲಿ ವಿಕ್ರಮ್ ವೇದ ಮತ್ತೆ ಒಂದಾಗುವ ಎಪಿಸೋಡ್ ನೋಡಬಹುದು. ಇದರಲ್ಲಿ ವೇದ ಗರ್ಭಿಣಿ ಆಗಿರೋದನ್ನೂ ತೋರಿಸಲಾಗಿದೆ.

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)

 

Latest Videos
Follow Us:
Download App:
  • android
  • ios