Asianet Suvarna News Asianet Suvarna News

ನೀನಾದೆ ನಾ ಹೊಸ ತಿರುವು, ಸ್ಮಗ್ಲರ್‌ ಆಗಿ ಬದಲಾದ ವಿಕ್ರಮ್‌, ಬೆನ್ನು ಬಿಡದ ಬೇತಾಳನಾದ ವೇದಾ!

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ನೀನಾದೆ ನಾ ಧಾರವಾಹಿ ಎರಡನೇ ಅಧ್ಯಾಯಕ್ಕೆ ಕಾಲಿಟ್ಟಿದೆ. ಈ ಬಾರಿ ಪ್ರೀತಿಯ ಅಧ್ಯಾಯದಲ್ಲಿ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ.

star suvarna neenadena serial  come up with new way promo released gow
Author
First Published Aug 28, 2024, 7:52 PM IST | Last Updated Aug 28, 2024, 7:52 PM IST

ವಿಭಿನ್ನ ಕಥೆಯ ಮೂಲಕ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದ ಸ್ಟಾರ್ ಸುವರ್ಣ (Star Suvarna)ದಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಧಾರವಾಹಿ  ಪ್ರೇಕ್ಷಕರ ಮನ ಗೆದ್ದಿದೆ. ಇದರ ನಾಯಕ-ನಾಯಕಿ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಎನಿಸಿಕೊಂಡಿದ್ದಾರೆ. ಇದೀಗ ನೀನಾದೆ ನಾ  ಸೀರಿಯಲ್  ಮೊದಲ ಅಧ್ಯಾಯವನ್ನು ಮುಗಿಸಿ ಎರಡನೇ ಅಧ್ಯಾಯವಾಗಿ ಪ್ರೀತಿಯ ಅಧ್ಯಾಯ ಆರಂಭಿಸುತ್ತಿದ್ದಾರೆ. 

ನಟ ರಮೇಶ್ ಅರವಿಂದ್ ನಿರ್ಮಾಣದ ಈ  ಧಾರವಾಹಿಯಲ್ಲಿ ನಾಯಕಿ ವೇದಾ ಪಾತ್ರದಲ್ಲಿ ನಟಿ ಖುಷಿ ಶಿವು ಮಿಂಚುತ್ತಿದ್ದಾರೆ. ನಟ ದಿಲೀಪ್ ಶೆಟ್ಟಿ ನಾಯಕನಾಗಿ ವಿಕ್ರಮ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಒರಟ ಗಂಡನ ಪಾತ್ರದಲ್ಲಿ ದಿಲೀಪ್ ಶೆಟ್ಟಿ ಮತ್ತು ಗಂಡನನ್ನು ಸರಿದಾರಿಗೆ ತರುವ ದಿಟ್ಟ ಹೆಣ್ಣಿನ  ಪಾತ್ರದಲ್ಲಿ ಖುಷಿ ಶಿವು ನಟಿಸುತ್ತಿದ್ದಾರೆ. ಧಾರವಾಹಿಯಲ್ಲಿ ಇವರಿಬ್ಬರದೂ ಗುಂಡ-ಬೇತಾಳ ಜೋಡಿ.  ಸದ್ಯ ವೇದಾಳಿಗೆ ಬೆಟ್ಟದಿಂದ ಬಿದ್ದು ಎಲ್ಲವೂ ಮರೆತು ಹೋಗಿದೆ. ಗಂಡ ವಿಕ್ರಮ್ ಯಾರೆಂದು ಗೊತ್ತಿಲ್ಲ. ಪ್ರೀತಮ್ ಮೋಸ ಮಾಡಿರುವುದು ಕೂಡ ಗೊತ್ತಿಲ್ಲ.

ಕನ್ನಡ ಖ್ಯಾತ ನಿರ್ಮಾಪಕ ಕೆ. ಪ್ರಭಾಕರ್ ಹೃದಯಾಘಾತದಿಂದ ನಿಧನ

ತನ್ನ ಪ್ರೀತಿಯ ಗಂಡ ಗುಂಡನನ್ನು ಬದಲಾಯಿಸಲು ವೇದಾ ಇನ್ನಿಲ್ಲದ ಪ್ರಯತ್ನ ಮಾಡಿದ್ದಳು. ಆದರೆ ಆತ ಗೊತ್ತಿಲ್ಲದಂತೆ ರೌಡಿಸಂನಲ್ಲಿ ಸ್ವಲ್ಪ ಈಗಲೂ ಇದ್ದಾನೆ. ಆದರೆ ವೇದಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ವೇದಾಳಿಗೆ ಯಾವಾಗ ನೆನೆಪಿನ ಶಕ್ತಿ ಹೋಗಿದೆ ಎಂದು ಗೊತ್ತಾಯ್ತೋ ಅಲ್ಲಿಂದ ವೇದಾಳಿಗಾಗಿ ಪ್ರೀತಂ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಇದೀಗ ಮತ್ತೆ ಆತನ ವೇಷ ಭೂಷಣ ಬದಲಾಗಿದೆ. ಮೊದಲಿನ ವಿಕ್ರಂನಂತೆ ಇದ್ದಾನೆ.

ಇದೀಗ ಸೀರಿಯಲ್ ಹೊಸ ರೂಪದಲ್ಲಿ ಬರುತ್ತಿದೆ. ನೀನಾದೆನಾ ಪ್ರೀತಿಯ ಅಧ್ಯಾಯ  ಆರಂಭಿಸಲಾಗುತ್ತಿದ್ದು, ಹೀಗಾಗಿ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಮಂಗಳೂರಿನ ಕರಾವಳಿ ತೀರದಲ್ಲಿ ಈ ಪ್ರೋಮೋವನ್ನು ಶೂಟಿಂಗ್‌ ಮಾಡಲಾಗಿದ್ದು, ವಿಕ್ರಮ್‌ ಸಂಪೂರ್ಣ ಬದಲಾಗಿದ್ದಾನೆ. ಭೂಗತ ಜಗತ್ತಿನ ನಂಟು ಇರುವಂತೆ ಕಾಣುತ್ತಿದೆ. ಮಂಗಳೂರಿನ ಬಂದರಿನಲ್ಲಿ ತನ್ನ ಸ್ಮಗ್ಲಿಂಗ್ ದಂಧೆ ನಡೆಸುತ್ತಿದ್ದಾನೆ. 

ದೇಶದ ಅತ್ಯಂತ ಕಠಿಣ ಜೈಲಿಗೆ ದರ್ಶನ್‌ ಶಿಫ್ಟ್, ಬಳ್ಳಾರಿ ಜೈಲಿನ ಇತಿಹಾಸ ತಿಳಿಯಲೇಬೇಕು!

ಪ್ರೋಮೋದಲ್ಲಿ ಮದುವೆಯಾಗಿ ಹೋಗಬೇಕಿರುವ ನೀನು ಇಲ್ಲೇನು ಮಾಡುತ್ತಿದ್ದಿಯಾ ಎಂದು ವಿಕ್ರಮ್‌ ಬಂದರಿಗೆ  ಬಂದ ವೇದಾ ಬಳಿ ಕೇಳುತ್ತಿದ್ದು,   ಈ ಮಧ್ಯೆ ವೇದಾಳ ಮದುವೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂಬ ಧ್ವನಿ ಕೇಳಿಸುತ್ತೆ. ಆಗ ಅಲ್ಲೊಬ್ಬ ಹೆಣ್ಣು ಮಕ್ಕಳ ಬುದ್ದಿ ಮೊಣಕಾಲು ಕೆಳಗೆ ಎಂದು ಹೇಳುತ್ತಿದ್ದು, ಸಿಟ್ಟಾದ ವಿಕ್ರಮ್ ಹೆಣ್ಣ ಮಕ್ಕಳಿಗೆ ಮರ್ಯಾದೆ ಕೊಡೋದು ಕಾಪಾಡೋದು ನಮ್ಮ ಕರ್ತವ್ಯ ಎನ್ನುತ್ತಾನೆ. 

ಆಗ ವಿಕ್ರಮ್ ಗೆ ಉತ್ತರ ಕೊಟ್ಟಿರುವ ವೇದಾ ನಮ್ಮಂತ ಹೆಣ್ಣು ಮಕ್ಕಳನ್ನು ಕಾಪಾಡಲು ನಿನ್ನಂತಹ ರಾಕ್ಷಸ ಬೇಡ. ಇಡೀ ಊರೇ ನಿನ್ನ ದಂಧೆಯನ್ನು ಲೈವ್‌ ನಲ್ಲಿ ನೋಡುತ್ತಿದೆ.  ಈಗ ನಿನ್ನನ್ನು ಯಾರು ಕಾಪಾಡುತ್ತಾರೆ ಎಂದು ವೇದಾ ಹೇಳಿದ್ದು, ಪೊಲೀಸರು ಬಂಧಿಸಲು ಬಂದಾಗ  ಸಿಂಹದ ಜೊತೆಗೆ ಸೆಣಸಾಡಬೇಡ ಎಂದು ವೇದಾಳಿಗೆ ಎಚ್ಚರಿಕೆ ಕೊಡುತ್ತಾನೆ ವಿಕ್ರಮ್ , ಇದಕ್ಕೆ ಉತ್ತರ ಕೊಟ್ಟ ವೇದಾ ನಿನ್ನಂತ ಪ್ರಾಣಿಗಳನ್ನು ಬೋನಿನಲ್ಲಿಡಬೇಕು ಎಂದು ಸಿಟ್ಟಿನಿಂದಲೇ ಉತ್ತರಿಸುತ್ತಾಳೆ. 

ಇಲ್ಲಿ ವೇದಾ  ಇನ್ವೆಸ್ಟಿಗೇಷನ್ ಆಫಿಸರ್‌ ಥರಾ ಕಾಣಿಸುತ್ತಿದ್ದಾಳೆ. ವಿಕ್ರಮ್‌ ನ ಸ್ಮಗ್ಲಿಂಗ್‌ ದಂಧೆಯನ್ನು ಬಯಲಿಗೆಳೆಯುವ ಹುಡುಗಿಯಾಗಿದ್ದು,  ಆತನನ್ನು ಬಂಧಿಸುವ ಪ್ರಯತ್ನದಲ್ಲಿ ಹಲವು ಬಾರಿ ಸೋತಿದ್ದಾಳೆ ಎಂದು ಕಾಣಿಸುತ್ತಿದೆ.  ವಿಕ್ರಮ್‌ ಬಂಧನವಾದಾಗ ಬಂದರಿನಲ್ಲಿರುವ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿರುವುದು ಕಾಣಿಸುತ್ತಿದೆ. ಅಂದರೆ ವಿಕ್ರಮ್‌ ತನ್ನ ಊರಿನವರಿಗೆ ಒಳ್ಳೆಯದ್ದನ್ನೇ ಮಾಡಿದ್ದಾನೆ. ಆದರೆ ಆತ ವೇದಾಳಿಂದ ದೂರವಾಗಿರುವುದ್ಯಾಕೆ? ವೇದಾಳಿಗೆ ಮರಳಿ ನೆನಪು ಬಂದಿದೆಯಾ? ನೆನಪು ಬಂದಿರುವ ವೇದಾ ಮರಳಿ ವಿಕ್ರಮ್‌ ನನ್ನು ಸರಿ ದಾರಿಗೆ ತರಲು ಪ್ರಯತ್ನಿಸುತ್ತಿದ್ದಾಳಾ? ವಿಕ್ರಮ್ ಮತ್ತೆ ದಾರಿ ತಪ್ಪಲು ಕಾರಣವೇನು. ವಿಕ್ರಮ್‌ -ವೇದಾರ ಈ ಜಗಳ ಪ್ರೀತಿಯಾಗಿ ಬದಲಾಗೋದು ಯಾವಾಗ? ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ

ಧಾರವಾಹಿ ಪ್ರಿಯರು ಹೇಳಿದಂತೆ ಇವರದು 6 ಅಡಿ ಕಟೌಟ್‌ ಗೆ ಮೂರಡಿ ಕಟೌಟ್‌ ಜೋಡಿ. ತಮ್ಮ ಮುದ್ದಾದ ಅಭಿನಯದಿಂದ ಕಿರುತೆರೆ ಮಂದಿಯ ಮನ ಗೆದ್ದಿದ್ದ ಜೋಡಿ ವಿಕ್ರಮ್-ವೇದಾ. ಇವರಿಗೆ ವಿಕ್ದ ಎಂದು ಜೊತೆಯಾಗಿ ಹೆಸರನ್ನು ಕೂಡ ಇಟ್ಟಿದ್ದಾರೆ. ನಿವೀಬ್ರು ಮದುವೆಯಾಗಿ, ಈ ಮುದ್ದಾದ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸುತ್ತಲೇ ಇದ್ದಾರೆ. ಅದರಂತೆ ಇವರಿಬ್ಬರ ಮಧ್ಯೆ ಸ್ನೇಹಕ್ಕಿಂತಲೂ ಹೆಚ್ಚಿನದ್ದೇನೋ ಇದೆ ಎಂದು ಯಾವಾಗಲೂ ಫ್ಯಾನ್ಸ್ ಊಹಿಸುತ್ತಲೇ ಇದ್ದಾರೆ. ಹೀಗಾಗಿ ನಿಜಜೀವನದಲ್ಲಿ ಮದುವೆಯಾಗಿ ಎಂದು ಕೂಡ ಹೇಳುತ್ತಲೇ ಇದ್ದಾರೆ.

Latest Videos
Follow Us:
Download App:
  • android
  • ios