ಅಪರ್ಣಾ ಮಜಾಟಾಕೀಸ್‌ಗೆ ಬರಬೇಕು ಅನ್ನೋದು ನನ್ನ ಯೋಚನೆಯಲ್ಲ, ಅನಾರೋಗ್ಯವನ್ನು ಗೌಪ್ಯವಾಗಿಟ್ಟಿದ್ದರು:ಸೃಜನ್
ಅಚ್ಚ ಕನ್ನಡದ ಸ್ಪಷ್ಟ ನಿರೂಪಕಿ ಅಪರ್ಣಾ ವಸ್ತಾರೆ ಇನ್ನಿಲ್ಲ. ಅವರ ಅಂತಿಮ ದರ್ಶನ ಪಡೆದ ನಟ, ನಿರೂಪಕ ಸೃಜನ್ ಲೋಕೇಶ್ ಅವರೊಂದಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು (ಜು.12): ಅಚ್ಚ ಕನ್ನಡದ ಸ್ಪಷ್ಟ ನಿರೂಪಕಿ ಅಪರ್ಣಾ ವಸ್ತಾರೆ ಇನ್ನಿಲ್ಲ. ಅವರ ಅಂತಿಮ ದರ್ಶನ ಪಡೆದ ನಟ, ನಿರೂಪಕ ಸೃಜನ್ ಲೋಕೇಶ್ ಅವರೊಂದಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಮೆಟ್ರೋ ಇರುವರೆಗೂ ಅಪರ್ಣಾ ಧ್ವನಿ ಇರಬೇಕು ಅನ್ನೋದು ನನ್ನ ಆಸೆ. ಮೆಟ್ರೋ ಸಿಬ್ಬಂದಿ ಬಳಿ ಮಾಧ್ಯಮದ ಮೂಲಕ ಮನವಿ ಮಾಡಿ ಕೊಳ್ತೀವಿ ಮೆಟ್ರೋ ಇರೋ ವರೆಗೂ ಅಪರ್ಣ ಧ್ವನಿ ಇರಬೇಕು ಎಂದಿದ್ದಾರೆ.
ಕೆಳದಿನಗಳ ಹಿಂದೆ ಅವರ ಬಳಿ ನಾನು ಮಾತನಾಡಿದ್ದೆ, ಆಗ ಅವರು ಹೇಳಿದ್ದರು ಡಾಕ್ಟರ್ ಕೂಡ ಹೇಳ್ತಾ ಇದ್ರಂತೆ ನೀವು ಮಜಾ ಟಾಕೀಸ್ ನೋಡ್ದಾಗ ನಿಮಗೆ ಜೀವನದಲ್ಲಿ ಹೊಸ ಹುರುಪು ಬರ್ತಾ ಇದೆ. ದಯವಿಟ್ಟು ಅದನ್ನು ರೆಗ್ಯೂಲರ್ ಆಗಿ ನೋಡಿ ಅಂತ.
ಅಂಬಾನಿ ಮಗನ ಮದುವೆಯಲ್ಲಿ ಭಾಗಿಯಾದ ಯಶ್ ರಾಧಿಕಾ ಪಂಡಿತ್, ನಟ ಕೂದಲಿಗೆ ಕತ್ತರಿ ಹಾಕಿದ್ದು ರಿವೀಲ್!
ನನಗೆ ಅಪರ್ಣಾ ಅವರು ಹೇಳಿದ್ದು ಒಂದೇ ಒಂದು ಥ್ಯಾಂಕ್ಯೂ ಸೃಜನ್ ನನಗೊಂದು ಅವಕಾಶ ಕೊಟ್ಟಿದ್ದಕ್ಕೆ ಅದಕ್ಕೆ ನಾನಂದೆ ಥ್ಯಾಂಕ್ಯೂ ನಿಮಗೆ, ನಿಮ್ಮಂತ ಪ್ರತಿಭೆ ಜೊತೆಗೆ ನಟಿಸಲು ಅವಕಾಶ ಕೊಟ್ಟಿದ್ದಕ್ಕೆ ಅಂತ. ಅವರು ಯಾವತ್ತೂ ಕೂಡ, ಸೀನಿಯರ್ ಆರ್ಟಿಸ್ಟ್ , ಅಷ್ಟು ದೊಡ್ಡ ಪ್ರತಿಭೆ, ಅಷ್ಟು ಹೆಸರು ಮಾಡಿರುವ ನಿರೂಪಕಿ, ನೀವು ಎಲ್ಲೇ ನೋಡಿ ಸರ್ಕಾರಿ ಕಾರ್ಯಕ್ರಮದಿಂದ ಹಿಡಿದು ಮೆಟ್ರೋವರೆಗೂ ಅಪರ್ಣಾ ಕಾಣಿಸುತ್ತಾರೆ. ದೂರದರ್ಶನ ಆರಂಭ ಆದಾಗಿನಿಂದಲೂ ನಮ್ಮನ್ನೆಲ್ಲ ರಂಜಿಸಿದ್ದಾರೆ.
ದುಃಖ ಏನಂದ್ರೆ ಅವರು 2 ವರ್ಷ ಈ ಕಾಯಿಲೆಯಿಂದ ನರಳಿದ್ದು, ನನಗಿಂತ ಹೆಚ್ಚಾಗಿ ನನ್ನ ಹೆಂಡತಿಗೆ ಅವರು ಕ್ಲೂಸ್ ಫ್ರೆಂಡ್ ಯಾಕಂದ್ರೆ ಜೊತೆಯಲ್ಲಿ ಕೆಲಸ ಮಾಡಿದ್ದರು. ಮಜಾ ಟಾಕೀಸ್ ಅಪರ್ಣಾ ಬರಬೇಕು ಅನ್ನೋದು ನನ್ನ ಹೆಂಡತಿ ಯೋಚನೆ, ನಾನು ಅಪರ್ಣಾ ಜೊತೆ ಕೆಲಸ ಮಾಡಿದ್ದು ಮಜಾ ಟಾಕೀಸ್‌ನಲ್ಲೇ, ಮಜಾ ಟಾಕೀಸ್‌ಗೆ ಬನ್ನಿ ಅಂತ ಕರೆ ಮಾಡಿದಾಗ ಅವರು ಭಯ ವ್ಯಕ್ತಪಡಿಸಿದ್ದರು. ಯಾಕೆಂದ್ರೆ ಅವರ ಇಮೇಜ್ ಬೇರೆ. ಕಾಮಿಡಿ ಏನು ಮಾಡೋದು ಅಂತ. ಫಸ್ಟ್ ಎಪಿಸೋಡ್ ಆದ ನಂತರ ನನಗೆ ಕರೆ ಮಾಡಿ ಸೃಜಾ ನನಗೆ ಯಾಕೋ ತುಂಬಾ ಭಯ ಆಗ್ತಿದೆ ಬೇಡ ಅಂದ್ರು. ನಾನು ಧೈರ್ಯ ಹೇಳಿದ್ದೆ. ನಾನು ಬರೀ ವರಲಕ್ಷ್ಮಿ ಅಂತ ಇಟ್ಟೆ. ಅವರು ಒನ್ ಆಂಡ್ ಆನ್ಲಿ ವರಲಕ್ಷ್ಮಿ ಅಂತ ಇಟ್ಟು ಕೊಂಡರು.
ಮೆಟ್ರೋಗೆ ಧ್ವನಿ ನೀಡಿದ ಅಪರ್ಣಾಗೆ ನಮ್ಮ ಮೆಟ್ರೋದ ಭಾವಪೂರ್ಣ ವಿದಾಯ ನಿಲ್ಲೋಲ್ಲ ಕನ್ನಡತಿ ಧ್ವನಿ ಎಂದು ಸ್ಪಷ್ಟನೆ
ಶೋ ಬಿಟ್ಟು ಅವರ ವ್ಯಕ್ತಿತ್ವ ಎಷ್ಟು ದೊಡ್ಡದು ಅನ್ನೋದನ್ನ ನೋಡಬಹುದು. 20-30 ವರ್ಷಗಳಿಂದ ಅವರ ಐಡೆಂಟಿಟಿ ಚೇಂಜ್ ಆಯ್ತು ಅದು ಮಜಾಟಾಕೀಸ್ ನಲ್ಲಿ. ಈ ತರಹ ವ್ಯಕ್ತಿ ಬದಲಾಗಬಹುದು ಅಂತ ತೋರಿಸಿ ಕೊಂಡರು.
ಅವರು ತುಂಬಾ ಸ್ನೇಹ ಜೀವಿ. ಅನಾರೋಗ್ಯದ ಬಗ್ಗೆ ಗೌಪ್ಯವಾಗಿ ಇಟ್ಟಿದ್ದರು. ನಮಗೆ ತುಂಬಾ ಲೇಟ್ ಆಗಿ ಗೊತ್ತಾಯ್ತು. ಕೀಮೋ ಎಲ್ಲಾ ಮಾಡಿಸಿಕೊಂಡಾಗಲೂ ತುಂಬಾ ಚೆನ್ನಾಗಿ ಪ್ರತಿಕ್ರಿಯಿಸುತ್ತಿದ್ದರು. ಚಿಕಿತ್ಸೆ ಪಡೆದು ಕೊಂಡರು, ರಿಕವರಿ ಆಗಿದ್ರು. ಆದಾದ ಮೇಲೆ ಏನಾಯ್ತು ಗೊತ್ತಿಲ್ಲ. ಈ ಹಂತಕ್ಕೆ ಈಗ ಬಂದು ನಿಂತಿರುವುದು ತುಂಬಾ ನೋವಿನ ವಿಷಯ ಎಂದಿದ್ದಾರೆ.