90ರ ದಶಕದ ಖ್ಯಾತ ನಟಿ ಮಮತಾ ಕುಲಕರ್ಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಚಿತ್ರಗಳ ಬಗ್ಗೆ ಅಲ್ಲ, ಬದಲಾಗಿ ಅವರ ಆಧ್ಯಾತ್ಮಿಕ ಜೀವನದ ಬಗ್ಗೆ. ಮಹಾ ಕುಂಭಮೇಳ 2025ರಲ್ಲಿ ಕಿನ್ನರ್ ಅಖಾಡದವರು ಅವರಿಗೆ ಮಹಾಮಂಡಲೇಶ್ವರ್ ಪಟ್ಟ ನೀಡಿದ್ದಾರೆ. ಈ ಬಗ್ಗೆ 10 ಕೋಟಿ ಲಂಚ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಮಮ್ತಾ ಏನು ಹೇಳಿದ್ದಾರೆ?
ಮಮ್ತಾ ಕುಲ್ಕರ್ಣಿ ಮಹಾಮಂಡಲೇಶ್ವರ್ ವಿವಾದ: 90ರ ದಶಕದ ಖ್ಯಾತ ನಟಿ ಮಮತಾ ಕುಲಕರ್ಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಚಿತ್ರಗಳ ಬಗ್ಗೆ ಅಲ್ಲ, ಬದಲಾಗಿ ಅವರ ಆಧ್ಯಾತ್ಮಿಕ ಜೀವನದ ಬಗ್ಗೆ. ಮಹಾ ಕುಂಭಮೇಳ 2025ರಲ್ಲಿ ಕಿನ್ನರ್ ಅಖಾಡದವರು ಅವರಿಗೆ ಮಹಾಮಂಡಲೇಶ್ವರ್ ಪಟ್ಟ ನೀಡಿದ್ದಾರೆ. ಇದಾದ ಬಳಿಕ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಮ್ತಾ ಅವರನ್ನು ಹಲವರು ಹೊಗಳಿದರೆ, ಇನ್ನು ಕೆಲವರು ಟೀಕಿಸಿದ್ದಾರೆ.
ಕಾವಿ ಬಟ್ಟೆ ತೊಟ್ಟ ಮಮತಾ ಕುಲ್ಕರ್ಣಿ ವೀಡಿಯೋ ವೈರಲ್:
ಕಾವಿ ಬಟ್ಟೆ ತೊಟ್ಟಮಮತಾ ಕುಲಕರ್ಣಿ ಅವರ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಲ್ಲಿ ಅವರು ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಆದರೆ, ಮಹಾಮಂಡಲೇಶ್ವರ್ ಪಟ್ಟ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಕೆಲವು ವರದಿಗಳ ಪ್ರಕಾರ ಅವರ ಪಟ್ಟವನ್ನು ಹಿಂಪಡೆಯಲಾಗಿದೆ ಎನ್ನಲಾಗಿದೆ.
ಕುಂಭಮೇಳಾ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್!
ಮಮತಾ ಕುಲಕರ್ಣಿ ಏನಂದ್ರು?:
ಇತ್ತೀಚೆಗೆ ಅವರು ರಜತ್ ಶರ್ಮಾ ಅವರ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಮಹಾಮಂಡಲೇಶ್ವರ್ ಹಿಮಾಂಗಿ, ನೀವು 10 ಕೋಟಿ ರೂ. ಕೊಟ್ಟು ಮಹಾಮಂಡಲೇಶ್ವರ್ ಪಟ್ಟ ಪಡೆದಿದ್ದೀರಿ ಎಂದು ಆರೋಪಿಸಿದ್ದಾರೆ ಏನು ಹೇಳ್ತೀರಿ ಎಂದು ಕೇಳಿದ್ದಾರೆ. ಆರೋಪ ಕೇಳಿ ಭಾವುಕರಾದ ಮಮತಾ ಕುಲಕರ್ಣಿ , ತಮ್ಮ ಬಳಿ ಒಂದು ಕೋಟಿ ರೂ. ಕೂಡ ಇಲ್ಲ. ಸರ್ಕಾರ ನನ್ನ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಚ್ಚಿದೆ ಎಂದಿದ್ದಾರೆ.
ಕೋಟ್ಯಾಧಿಪತಿ ಜೀವನವನ್ನು ತ್ಯಜಿಸಿದ ಸ್ವಾಮಿ ಅನಂತ ಗಿರಿ!
ಜೀವನದಲ್ಲಿ ಹಲವು ತ್ಯಾಗ ಮಾಡಬೇಕಾಯಿತು. ಗುರುವಿಗೆ ದಕ್ಷಿಣೆ ಕೊಡಲು ಎರಡು ಲಕ್ಷ ರೂ. ಸಾಲ ಮಾಡಬೇಕಾಯಿತು ಎಂದಿದ್ದಾರೆ. ಬಾಲಿವುಡ್ ತೊರೆದು ಸನ್ಯಾಸತ್ವ ಸ್ವೀಕರಿಸಿದ ಬಳಿಕ ಮಮತಾ ಕುಲಕರ್ಣಿ ಅವರ ಜೀವನ ಸಂಪೂರ್ಣ ಆಧ್ಯಾತ್ಮಿಕವಾಗಿ ಬದಲಾಗಿದೆ. ಈ ಬದಲಾವಣೆ ಬಗ್ಗೆ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
