ಸಾವಿನ ಶೂಟಿಂಗ್‌ ಮಾಡಿಯೇ ಶಂಕರ್‌ನಾಗ್‌ ತೆರಳಿದ್ದು, ಮತ್ತೆ ವಾಪಾಸ್‌ ಬರಲೇ ಇಲ್ಲ: ಶಿವರಂಜಿನಿ

ನಟಿ ಶಿವರಂಜಿನಿ, 30 ವರ್ಷಗಳ ನಂತರ ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ 'ಕನಸುಗಳ ಕಾರ್ಖಾನೆ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ನಾಗ್ ಅವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

sp sangliyana Movie Fame actress shivaranjini on Shankar Nag sundarakanda san

ಬೆಂಗಳೂರು (ಅ.23): ಎಸ್‌ಪಿ ಸಾಂಗ್ಲಿಯಾನಾ, ಸಂಘರ್ಷ, ಕೆರಳಿದ ಕೇಸರ, ಸುಂದರಕಾಂಡ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶಿವರಂಜಿನಿ ಇದ್ದಕ್ಕಿಂದ್ದಂತೆ ಕಣ್ಮರೆಯಾಗಿಬಿಟ್ಟರು. ಒಂದೆಡೆ ಶಂಕರ್‌ನಾಗ್‌ ಸಾವು ಕಂಡರೆ, ಅವರ ಕೊನೆಯ ಸಿನಿಮಾ ಯುದ್ಧಕಾಂಡದಲ್ಲಿ ನಟಿಸಿದ್ದ ಶಿವರಂಜಿನಿ ಕೂಡ ಕಣ್ಮರೆಯಾಗಿ ಹೋಗಿದ್ದರು. ಇಂಥ ಶಿವರಂಜಿನಿಯನ್ನು ನಿರ್ದೇಶಕ ರಘುರಾಮ್‌ ಈಗ ಕ್ಯಾಮೆರಾ ಮುಂದೆ ತಂದು ನಿಲ್ಲಿಸಿದ್ದಾರೆ. ಅಂದಾಜು 30 ವರ್ಷಗಳ ಬಳಿಕ ಅವರು ಕ್ಯಾಮೆರಾಗೆ ಮಾತನಾಡಿದ್ದಾರೆ. ರಘುರಾಮ್‌ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್‌ ಪೇಜ್‌ಗೆ ಹಳೆಯ ಸಿನಿಮಾಗಳ ನಾಯಕಿಯರನ್ನು ಹುಡುಕಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ನಟಿ ಹಾಗೂ ಕರಾಟೆ ಕ್ವೀನ್‌ ಶಿವರಂಜಿನಿ. ಶಂಕರ್‌ ನಾಗ್‌ ಅಭಿನಯದ ಎಸ್‌ಪಿ ಸಾಂಗ್ಲಿಯಾನಾ-2 ಅವರ ಮೊದಲ ಸಿನಿಮಾ. ಅದಕ್ಕೆ ಆಯ್ಕೆಯಾಗಿದ್ದರೊಂದಿಗೆ ಶಂಕರ್‌ ನಾಗ್‌ ಅಗಲುವು ಹಿಂದಿನ ದಿನ ರಾತ್ರಿ ಅಭಿನಯಿಸಿದ ಕಟ್ಟ ಕಡೆಯ ದೃಶ್ಯವನ್ನೂ ಅವರು ನೆನಪಿಸಿಕೊಂಡಿದ್ದಾರೆ.

'ಎಸ್‌ಪಿ ಸಾಂಗ್ಲಿಯಾನಾದಲ್ಲಿ ನಟಿಸಿದ್ದು ಒಂದು ಥರಾ ಡ್ರೀಮ್‌. ಮೊದಲ ಪಿಕ್ಚರ್‌ಅಲ್ಲೇ ಶಂಕರ್‌ನಾಗ್‌ ಸರ್‌ ಜೊತೆ ನಟಿಸಿದ್ದೆ..' ಎಂದು ಹೇಳಿದ್ದಾರೆ. ಸುಂದರಕಾಂಡ ನಾನು ಅವರೊಂದಿಗೆ ನಟಿಸಿದ 2ನೇ ಸಿನಿಮಾ. ಶಂಕರ್‌ ನಾಗ್‌ ಇದೇ ಸಿನಿಮಾದ ಟೈಮ್‌ನಲ್ಲಿಯೇ ತೀರಿ ಹೋಗಿದ್ದರು.ಶಂಕರ್‌ ನಾಗ್‌ ಅಗಲುವ ಹಿಂದಿನ ದಿನ ಕೂಡ ಸುಂದರಕಾಂಡ ಸಿನಿಮಾದಲ್ಲಿ ಅವರು ಸಾಯುವ ಸೀನ್‌ನ ಶೂಟಿಂಗ್‌ ನಡೆದಿತ್ತು.ಅದರಲ್ಲಿ ನಾನೂ ಕೂಡ ಇದ್ದೆ. ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ಸಾಯುವಂಥ ಘಟನೆಗಳ ಶೂಟಿಂಗ್‌ ಮಾಡಿದ ಬಳಿಕ, ನಟರನ್ನು ಏಳಿಸುವ ವೇಳೆ ಅವರು ನಗುವ ಶೂಟ್‌ ಮಾಡಿ ಏಳಿಸುತ್ತಾರೆ. ಈ ಫಿಲ್ಮ್‌ನಲ್ಲೂ ಹಾಗೇ ತೆಗೀತೀನಿ ಸರ್‌ ಎಂದಾಗ ಶಂಕರ್‌ ನಾಗ್‌ ಅವರು, 'ಏಯ್‌ ಹೋಗೋ ನಿನ್ನ..' ಅಂತಾ ಅವರು ಎದ್ದುಹೊರಟಿದ್ದರು' ಎಂದು ನೆನಪಿಸಿಕೊಂಡಿದ್ದಾರೆ. 'ಈಗಲೂ ಕೂಡ ಫ್ಲ್ಯಾಶ್‌ ಬ್ಯಾಕ್‌ ಮಾಡಿ ನೋಡುವಾಗ, ನಿಜವಾಗ್ಲೂ ಬೇಸರವಾಗುತ್ತೆ' ಎಂದು ಶಿವರಂಜಿನಿ ಹೇಳಿದ್ದಾರೆ.

Arundathi Nag: ಇಂದಿನ ಧಾರವಾಹಿಗಳು ದಾರಿ ತಪ್ಪಿದೆ, ಅದೇ ಕಾರಣಕ್ಕೆ ನಾನು ಸೀರಿಯಲ್ಸ್‌ ಮಾಡಲ್ಲ

ನಾನು ತುಂಬಾ ವಂಡರ್‌ಫುಲ್‌ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದೇನೆ. ಎರಡೇ ವರ್ಷ ನಾನು ಸಿನಿಮಾ ಮಾಡಿದ್ದು, ಸಣ್ಣ ಪಾತ್ರಗಳನ್ನೂ ಕೌಂಟ್‌ ಮಾಡೋದಾರೆ, ಒಂದು 16-17 ಸಿನಿಮಾಗಳನ್ನು ನಾನು ಮಾಡಿದ್ದೇನೆ. ಒಂದು ತಮಿಳು ಸಿನಿಮಾ ಮಾಡಿದ್ದೇನೆ. ತೆಲುಗು 2 ಸಿನಿಮಾ ಮಾಡಿದ್ದೇನೆ ಎಂದು ಶಿವರಂಜಿನಿ ತಿಳಿಸಿದ್ದಾರೆ.

ದಿವಂಗತ ಶಂಕರ್‌ ನಾಗ್‌ ಬಗ್ಗೆ ಸಿಂಪಲ್‌ ಸ್ಟಾರ್ ಹೇಳಿದ್ದೇನು; ಯಾಕೆ ಶಾಕ್ ಆಗಿದ್ದಾರೆ ರಕ್ಷಿತ್ ಶೆಟ್ಟಿ?

ಇನ್ನು ಶಿವರಂಜನಿ ಅವರ ವೈಯಕ್ತಿಕ ಜೀವನ ನೋಡೋದಾದರೆ, ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.ವಿಷ್ಣುಮೂರ್ತಿ ಹಾಗೂ ಸುಮಿತ್ರಾ ದಂಪತಿಯ ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂರನೆಯವರು. ಇವರ ಮೂಲ ಹೆಸರು ಕಿರಣ್ಮಯಿ. ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ನಂತರ ಪದವಿಗಾಗಿ ಮಂಗಳೂರಿಗೆ ಹೋದ ಕಿರಣ್‌ ಮಯಿ ಕರಾಟೆ ಸೇರಿದರು. ಶಾಲೆಯಲ್ಲಿದ್ದಾಗ ಡ್ರಾಮಾ, ಸ್ಪೋರ್ಟ್ಸ್‌ನಲ್ಲಿದ್ದ ಕಿರಣ್‌, ಕಾಲೇಜಿನಲ್ಲಿ ಕೂಡಾ ವಾಲಿಬಾಲ್‌, ಸಾಫ್ಟ್‌ಬಾಲ್‌, ಕಬಡ್ಡಿಯಲ್ಲಿ ಸಕ್ರಿಯರಾಗಿದ್ದರು. ಕರಾಟೆ ಕಲಿತು ಬ್ಲಾಕ್‌ ಬೆಲ್ಟ್‌ ಪಡೆದರು. ಎನ್‌ಸಿಸಿಗೆ ಸೇರಿಸಿ ಆರ್‌ಡಿ ಕ್ಯಾಂಪ್‌ನಲ್ಲಿ ಇಡೀ ತಂಡವನ್ನು ಮುನ್ನಡೆಸಿದ್ದರು.  ದುಬೈನಲ್ಲಿ ನೆಲೆಸಿದ್ದ ಉಮಾನಾಥ್‌ ರೈ ಅವರನ್ನು ಮದುವೆಯಾದ ಬಳಿಕ ವಿದೇಶದಲ್ಲಿಯೇ ನೆಲೆಸಿದ್ದರು. ಅವರಿಗೆ ಇಬ್ಬರು ಮಕ್ಕಳು. ಆದಿತ್ಯ ಹಾಗೂ ಶಿವಾಂಗಿ. ದುಬೈನಲ್ಲಿಯೇ ವಾಸ್ತವ್ಯ ಹೂಡಿರುವ ಶಿವರಂಜಿನಿ ಅಪರೂಪಕ್ಕೊಮ್ಮೆ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ.
 

Latest Videos
Follow Us:
Download App:
  • android
  • ios