ಕಮೆಂಟ್ ನೋಡಿ ಬೇಜಾರಾದ ಬ್ಲಾಗರ್ ಗೆ ಧೈರ್ಯ ತುಂಬಿದ ಡಾ. ಬ್ರೋ

ಡಾ. ಬ್ರೋ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಮಾಡಿದ ಒಂದು ಕಮೆಂಟ್, ಬಳಕೆದಾರರ ಗಮನ ಸೆಳೆದಿದೆ. ಬರೀ ಬ್ಲಾಗ್ ಮಾಡೋಕೆ ಮಾತ್ರವಲ್ಲ ಉತ್ಸಾಹಿಗಳನ್ನು ಹುರಿದುಂಬಿಸೋದ್ರಲ್ಲೂ ಗಗನ್ ಮುಂದಿದ್ದಾರೆ ಎಂಬುದು ಫ್ಯಾನ್ಸ್ ಅಭಿಪ್ರಾಯ. 
 

Social media influencer Dr.Bro gagan comment viral roo

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer), ಡಾ. ಬ್ರೋ ಖ್ಯಾತಿಯ ಗಗನ್ (Dr. Bro Gagan)  ಕನ್ನಡಿಗರ ಅಚ್ಚುಮೆಚ್ಚು. ಅವರ ವಿಡಿಯೋ ನೋಡಲು ಪ್ರವಾಸಿ ಪ್ರಿಯರು ಮುಂದಿರ್ತಾರೆ. ಗಗನ್ ಒಂದೇ ದಿನಕ್ಕೆ ಇಷ್ಟೊಂದು ಎತ್ತರಕ್ಕೆ ಏರಿಲ್ಲ. ಕಾಡು – ಮೇಡು ಅಲೆದಾಡಿರುವ ಅವರು, ಪ್ರಾಣವನ್ನು ಪಣಕ್ಕಿಟ್ಟು ಎಷ್ಟೋ ವಿಡಿಯೋ ಮಾಡಿದ್ದಾರೆ. ನಮಸ್ಕಾರ ದೇವ್ರು ಎನ್ನುತ್ತಲೇ ಎಲ್ಲರ ಗಮನ ಸೆಳೆಯುವ ಗಗನ್ ಬರೀ ತಮ್ಮ ವಿಡಿಯೋ ಮೂಲಕ ಮಾತ್ರವಲ್ಲ ತಮ್ಮ ಸ್ವಭಾವದ ಮೂಲಕವೂ ಅಭಿಮಾನಿಗಳನ್ನು ಸೆಳೆಯುತ್ತಾರೆ. ಗಗನ್ ಈಗ ತಮ್ಮಂತೆಯೇ ಯುಟ್ಯೂಬ್ ಮೂಲಕ ಸಾಧನೆ ಮಾಡಲು ಹೊರಟಿರುವ ಬ್ಲಾಗರ್ ಒಬ್ಬರ ಬೆನ್ನು ತಟ್ಟಿದ್ದಾರೆ. ಬಳಕೆದಾರರ ಮಾತಿನಿಂದ ಬೇಸರಗೊಂಡಿದ್ದ ಯುಟ್ಯೂಬರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ಅಂದ್ರೆ, Broengineerkannada ಹೆಸರಿನಲ್ಲಿ ಶ್ರೀನಿವಾಸ್ ಕೆ. ಜಾವಗಲ್ (𝗦𝗿𝗶𝗻𝗶𝘃𝗮𝘀 𝗞 𝗝𝗮𝘃𝗴𝗮𝗹) ಯುಟ್ಯೂಬ್ ಹಾಗೂ ಇನ್ಸ್ಟಾ ಖಾತೆಯನ್ನು ಹೊಂದಿದ್ದಾರೆ. ಅವರು ಕೂಡ ಗಗನ್ ರಂತೆ, ದೇಶ, ವಿದೇಶವನ್ನು ಸುತ್ತಿ ವಿಡಿಯೋ ಹಂಚಿಕೊಳ್ತಾರೆ. ಡಾ. ಬ್ರೋ ಕಲಿತ ಕಾಲೇಜಿನ ವಿಡಿಯೋ ಕೂಡ ಅವರು ಮಾಡಿದ್ದರು. ಈಗ ಅವರ ವಿಡಿಯೋಕ್ಕೆ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಡಾ. ಬ್ರೋ ಸಮಾನ ನೀವು ಬರಲ್ಲ ಅಂತ ಶ್ರೀನಿವಾಸ್ ಅವರ ವಿಡಿಯೋಕ್ಕೆ ಕಮೆಂಟ್ ಬಂದಿದೆ. ಇದನ್ನು ನೋಡಿ ಬೇಸರಗೊಂಡಿರುವ ಶ್ರೀನಿವಾಸ್, ನೋವಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಸುದೀಪ್ ಝಲಕ್, ವಿಡಿಯೋ ನೋಡಿ ಉಘೇ ಎಂದ ಫ್ಯಾನ್ಸ್

ವಿಡಿಯೋದಲ್ಲಿ, ಡಾ. ಬ್ರೋ ಗುರಿ ಬೇರೆ, ನನ್ನ ಗುರಿ ಬೇರೆ. ನಮ್ಮಿಬ್ಬರನ್ನು ಹೋಲಿಸುವ ಅವಶ್ಯಕತೆ ಇಲ್ಲ. ನಾನು ಕನ್ನಡಿಗರ, ಅವರೂ ಕನ್ನಡಿಗ. ಆದ್ರೆ ಈ ಮಾತು ಕೇಳಿ ತುಂಬಾ ಬೇಸರವಾಗಿದೆ. ಡಾ. ಬ್ರೋ ಐದು ವರ್ಷದಿಂದ ಬ್ಲಾಗ್ ನಡೆಸ್ತಿದ್ದಾರೆ. ಅವರಿಗೆ ಸಪೋರ್ಟ್ ಮಾಡಿದಂತೆ ನನಗೂ ಸಪೋರ್ಟ್ ಮಾಡಿ. ಇನ್ನು ನಾಲ್ಕು ವರ್ಷ ಬಿಟ್ಟು ನೋಡೋಣ ಎಂದು ಶ್ರೀನಿವಾಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. 

ಈ ವಿಡಿಯೋಕ್ಕೆ ಡಾ. ಬ್ರೋ ಗಗನ್ ಕಮೆಂಟ್ ಮಾಡಿದ್ದಾರೆ. ಬೇಜಾರ್ ಆಗ್ಬೇಡಿ ಬ್ರೋ, ನಿಮ್ಮ ಪ್ರಯತ್ನ ಮುಂದುವರೆಸಿ ಎಂದಿರುವ ಗಗನ್, ನಮಸ್ಕಾರ ಮತ್ತು ಹಾರ್ಟ್ ಎಮೋಜಿ ಹಾಕಿದ್ದಾರೆ. ಗಗನ್ ಈ ವಿಡಿಯೋಕ್ಕೆ ಕಮೆಂಟ್ ಮಾಡ್ತಿದ್ದಂತೆ, ಬಳಕೆದಾರರೊಬ್ಬರು ಡಾ. ಬ್ರೋ ಇದಕ್ಕೆ ಇಷ್ಟವಾಗೋದು ಎಂದಿದ್ದಾರೆ. ಎಲ್ಲರನ್ನೂ ಬೆಳೆಸುವ ಅವರ ಗುಣ ಇಷ್ಟವಾಗುತ್ತೆ ಎಂದು ಬಳಕೆದಾರರು ಹೇಳಿದ್ದಾರೆ. ಬ್ರೋ ಇಂಜಿನಿಯರ್ ಕನ್ನಡ ಚಾನೆಲ್ ಗೆ ಕೂಡ ಸಪೋರ್ಟ್ ಮಾಡುವುದಾಗಿ ಅನೇಕ ಬಳಕೆದಾರರು ಹೇಳಿದ್ದಾರೆ. ಶ್ರೀನಿವಾಸ್  ಬೆನ್ನು ತಟ್ಟಿರುವ ಬಳಕೆದಾರರು, ಕನ್ನಡಿಗರನ್ನು ಬೆಳೆಸ್ತೇವೆ ಎಂಬ ಭರವಸೆ ನೀಡಿದ್ದಾರೆ.

ಡಾ. ಬ್ರೋ ಯುಟ್ಯೂಬ್ ಚಾನೆಲ್ ನಲ್ಲಿ ಅಭಿಮಾನಿಗಳು ಗಗನ್ ಮಿಸ್ ಮಾಡಿಕೊಳ್ತಿದ್ದಾರೆ. ಒಂದು ತಿಂಗಳ ಹಿಂದೆ ಗಗನ್ ಒಂದು ವಿಡಿಯೋ ಪೋಸ್ಟ್ ಮಾಡಿದ್ದು ಬಿಟ್ಟರೆ ಮತ್ತ್ಯಾವ ವಿಡಿಯೋವನ್ನು ಸದ್ಯ ಹಂಚಿಕೊಂಡಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ವಾರದ ಹಿಂದೆ ಉತ್ರಿ ಬೆಟ್ಟದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಒಂದಿಷ್ಟು ಪ್ರವಾಸಿಗರ ಜೊತೆ ಪ್ರವಾಸಕ್ಕೆ ಹೋಗಿದ್ದ ಗಗನ್, ಕತ್ತಲಲ್ಲಿ ಉತ್ರಿ ಬೆಟ್ಟ ಹತ್ತಿದ್ದ ವಿಡಿಯೋ ಹಂಚಿಕೊಂಡಿದ್ದರು.

ಇದು ಗೊಂಬೆಯಲ್ಲ ಭೂತ, ಐಶ್ವರ್ಯ ರೈ ಡಾಲ್ ನೋಡಿ ನೆಟ್ಟಿಗರು ಗರಂ

ಇಷ್ಟು ದಿನ ಒಬ್ಬರೇ ದೇಶ ಸುತ್ತುತ್ತಿದ್ದ ಗಗನ್ ಈಗ ಪ್ರವಾಸಿಗರನ್ನು ತಮ್ಮ ಜೊತೆ ಕರೆದೊಯ್ತಿದ್ದಾರೆ. ಈಗಾಗಲೇ ಪ್ರವಾಸಿಗರ ಜೊತೆ ಕೆಲ ಟೂರ್ ಮುಗಿಸಿರುವ ಗಗನ್, ವಿಜಯನಗರದಲ್ಲಿ ಕಚೇರಿ ಕೂಡ ತೆರೆದಿದ್ದಾರೆ. ಅಕ್ಟೋಬರ್ 4ರಿಂದ ಅಕ್ಟೋಬರ್ 8ರವರೆಗೆ ದುಬೈ ಪ್ರವಾಸದಲ್ಲಿರುವ ಗಗನ್, ತಮ್ಮ ಜೊತೆ ಪ್ರವಾಸಿಗರನ್ನು ಕರೆದೊಯ್ಯಲಿದ್ದಾರೆ.  ತಮ್ಮ ಖಾತೆಯಲ್ಲಿ ಪ್ಯಾಕೇಜ್ ಪ್ಲಾನ್ ಡಿಟೇಲ್ ನೀಡಿದ್ದಾರೆ. 

Latest Videos
Follow Us:
Download App:
  • android
  • ios