Asianet Suvarna News Asianet Suvarna News

ಡಾ. ಬ್ರೋ ಜೊತೆ ಕೆಲಸ ಮಾಡೋ ಅವಕಾಶ...ಗೋ ಪ್ರವಾಸದಲ್ಲಿ ಖಾಲಿ ಇದೆ ಈ ಎಲ್ಲ ಜಾಬ್

ಡಾ. ಬ್ರೋ ಖ್ಯಾತಿಯ ಗಗನ್ ನಿಮಗೆ ಇನ್ನೊಂದು ಖುಷಿ ಸುದ್ದಿ ನೀಡಿದ್ದಾರೆ. ಅವರ ಜೊತೆ ಕೆಲಸ ಮಾಡಲು ಈಗ ನಿಮಗೆ ಅವಕಾಶ ಸಿಗ್ತಿದೆ. ನಿಮಗೆ ಎಲ್ಲ ಅರ್ಹತೆ ಇದೆ ಅಂದ್ರೆ ಇಂದೇ ಅಪ್ಲೈ ಮಾಡಿ. ಜಾಬ್ ಡಿಟೇಲ್ ಇಲ್ಲಿದೆ. 

social media influencer dr. bro company go pravasa job vacancy  roo
Author
First Published Sep 5, 2024, 10:34 AM IST | Last Updated Sep 5, 2024, 11:01 AM IST

ನಮಸ್ಕಾರ ದೇವ್ರೂ ಎನ್ನುತ್ತಲ್ಲೆ ವಿಡಿಯೋ ಶುರು ಮಾಡುವ ನಮ್ಮ ಕನ್ನಡಿಗ, ಕನ್ನಡಿಗರ ಅಚ್ಚುಮೆಚ್ಚಿನ ಬ್ರದರ್, ಡಾ. ಬ್ರೊ, ತಮ್ಮ ಫ್ಯಾನ್ಸ್ ಗೆ ಖುಷಿ ಸುದ್ದಿ ನೀಡಿದ್ದಾರೆ.  ಈಗಾಗಲೇ ಗೋ ಪ್ರವಾಸ ಹೆಸರಿನ ಕಂಪನಿ ಶುರು ಮಾಡಿ, ಜನಸಾಮಾನ್ಯರಿಗೆ ದೇಶ, ವಿದೇಶ ನೋಡಲು ಅವಕಾಶ ನೀಡಿರುವ ಗಗನ್, ಈಗ ತಮ್ಮ ಜೊತೆ ಕೆಲಸ ಮಾಡುವ ಅವಕಾಶ ನೀಡ್ತಿದ್ದಾರೆ. ಡಾ. ಬ್ರೊ ಒಡೆತನದ ಕಂಪನಿ ಗೋ ಪ್ರವಾಸದಲ್ಲಿ ಕೆಲಸ ಖಾಲಿ ಇದೆ. ಗಗನ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೋ ಪ್ರವಾಸದಲ್ಲಿ ಈ ಎಲ್ಲ ಹುದ್ದೆ ಖಾಲಿ ಇದೆ : ಗಗನ್ ನೀಡಿರುವ ಮಾಹಿತಿ ಪ್ರಕಾರ, ಗೋ ಪ್ರವಾಸ ಕಂಪನಿಯಲ್ಲಿ, ಇಂಟರ್ನ್ಯಾಷನಲ್ ಆಪರೇಷನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್ ನಲ್ಲಿ ಕೆಲಸ ಮಾಡಿ ಅನುಭವ ಇರುವವರು ಕೆಲಸಕ್ಕೆ ಬೇಕಾಗಿದ್ದಾರೆ. ಇದಲ್ಲದೆ ದೇಶೀಯ ಆಪರೇಷನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್ ನಲ್ಲಿ ಕೆಲಸ ಮಾಡಿ ಅನುಭವ ಇರುವವರ ಅವಶ್ಯಕತೆ ಇದೆ, ಜೊತೆಗೆ, ಏಷ್ಯಾದ ದೇಶಗಳಿಗೆ ವೀಸಾ ನೀಡುವ ತಜ್ಞರ ಅಗತ್ಯವಿದೆ. ಟಿಕೆಟಿಂಗ್ ಹುದ್ದೆ ಕೂಡ ಖಾಲಿ ಇದೆ.  

ಕಮೆಂಟೂ ಕೊಟ್ಟು ದುಡ್ಡುನೂ ಕೊಡ್ತಾರೆ! ಜಾಲತಾಣದಿಂದ ತಿಂಗಳಿಗೆ 40 ಲಕ್ಷ ಗಳಿಸ್ತಾಳೆ 23 ವರ್ಷದ ಈಕೆ!

• International OPS Executive Holiday Packages (Experience)
• Domestic OPS  Executive Holiday Packages (Experience)
• Visa Experts For Asian Countries 
• Ticketing : Dom/ Intl/ Online /Offline

ಒಟ್ಟೂ ನಾಲ್ಕು ಹುದ್ದೆ ಖಾಲಿ ಇದ್ದು, ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ತಿಳಿದಿರಬೇಕು. ಪಿಯುಸಿ ಪಾಸ್ ಆದವರು, ಪದವಿದರರು,ಟೂರಿಸ್ಟ್ ಕೋರ್ಸ್ ಮಾಡಿದವರಿಗೆ ಮೊದಲ ಆದ್ಯತೆ. ಗಗನ್ ಸಂಬಳ ಎಷ್ಟು ಕೊಡ್ತಾರೆ ಅನ್ನೋದನ್ನು ತಮ್ಮ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿಲ್ಲ. ನಿಮಗೆ ಈ ಕೆಲಸದಲ್ಲಿ ಅನುಭವವಿದ್ರೆ ಈಗ್ಲೇ ಅಪ್ಲೈ ಮಾಡಿ. Info@gopravas.com ಗೆ ನೀವು ಅರ್ಜಿ ಸಲ್ಲಿಸಬಹುದು.

ಆಗಸ್ಟ್ ಹದಿನೈದು, ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ಗಗನ್, ಗೋ ಪ್ರವಾಸ ಕಚೇರಿ ಶುರು ಮಾಡಿರೋದಾಗಿ ತಿಳಿಸಿದ್ದರು. ವಿಜಯನಗರದಲ್ಲಿ ಡಾ. ಬ್ರೋ, ಗೋ ಪ್ರವಾಸ ಕಚೇರಿಯನ್ನು ತೆರೆದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕಚೇರಿ ಮುಂದೆ ನಿಂತಿರುವ ಪೋಸ್ಟ್ ಹಾಕಿದ ಗಗನ್, 78ನೇ ಸ್ವಾತಂತ್ರ್ಯ ದಿನದಂದು ಗೋ ಪ್ರವಾಸದ ಹೊಸ ಆಫೀಸ್ ಅನ್ನು ವಿಜಯನಗರದಲ್ಲಿ ತೆರೆಯಲಾಗಿದೆ. ಪ್ರಯಾಣದ ಉತ್ಸಾಹಿ ಜನರ ಭಾಗವಾಗಲು ನನಗೆ ಖುಷಿಯಾಗ್ತಿದೆ ಎಂದು ಶೀರ್ಷಿಕೆ ಹಾಕಿದ್ದರು.

ಬೆಂಗ್ಳೂರಲ್ಲಿ ಶೀಘ್ರ ಏರಿಂಡಿಯಾ ವಿನಾನಗಳ ರಿಪೇರಿ ಘಟಕ ನಿರ್ಮಾಣ: ಸಾವಿರಾರು ಉದ್ಯೋಗ ಸೃಷ್ಟಿ

ಡಾ. ಬ್ರೋ ತಮ್ಮ ಜೊತೆ ಸಾಮಾನ್ಯ ಜನರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಅನೇಕ ದಿನಗಳಿಂದ ಮಾಡ್ತಿದ್ದಾರೆ.ಈ ಹಿಂದೆ ಗೋ ಪ್ರವಾಸದ ಟೀಂ ಜೊತೆ ಪ್ರವಾಸಕ್ಕೆ ಹೋಗಿ ಬಂದ 100ಕ್ಕೂ ಹೆಚ್ಚು ಮಂದಿ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆ ರೇಟಿಂಗ್ಸ್ ಕೂಡ ನೀಡಿದ್ದರು. ಗೋ ಪ್ರವಾಸ ತಂಡದ ಮುಂದಿನ ಟೂರ್, ಥೈಲ್ಯಾಂಡ್. ಇನ್ಸ್ಟಾಗ್ರಾಮ್ ನಲ್ಲಿ ಗಗನ್, ಥೈಲ್ಯಾಂಡ್ ಟ್ರಿಪ್ ಬಗ್ಗೆ ಇತ್ತೀಚಿಗಷ್ಟೆ ಮಾಹಿತಿ ನೀಡಿದ್ದಾರೆ. 

ಒಂದು ತಿಂಗಳ ಹಿಂದೆ ಹಿಸ್‌ ಬುಲ್‌ ವಿಡಿಯೋ ಹಾಕಿದ್ದ ಬ್ರೋ, ಸದ್ಯ ಯಾವುದೇ ವಿಡಿಯೋ ಹಂಚಿಕೊಂಡಿಲ್ಲ. ಅವರು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್‌ ನಲ್ಲಿ ಲೈವ್‌ ಬಂದು, ಅನೇಕ ವಿಷ್ಯಗಳ ಬಗ್ಗೆ ಮಾಹಿತಿ ನೀಡಿದ್ದರು. ತಮ್ಮ ಯುಟ್ಯೂಬ್‌ ಗಳಿಕೆ, ಯಾವ ಕ್ಯಾಮರಾ ಬಳಕೆ ಮಾಡ್ತಿದ್ದಾರೆ ಎಂಬೆಲ್ಲವನ್ನು ಹೇಳಿ, ಹೊಸದಾಗಿ ಯುಟ್ಯೂಬ್ ಚಾನೆಲ್‌ ಶುರು ಮಾಡುವ ಜನರಿಗೆ ಅಮೂಲ್ಯ ಸಲಹೆಯನ್ನು ಕೂಡ ನೀಡಿದ್ದರು. 

Latest Videos
Follow Us:
Download App:
  • android
  • ios