ಕಮೆಂಟೂ ಕೊಟ್ಟು ದುಡ್ಡುನೂ ಕೊಡ್ತಾರೆ! ಜಾಲತಾಣದಿಂದ ತಿಂಗಳಿಗೆ 40 ಲಕ್ಷ ಗಳಿಸ್ತಾಳೆ 23 ವರ್ಷದ ಈಕೆ!

ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಆಗಿರೋ ಪಾಯಲ್​ ತಿಂಗಳಿಗೆ 40 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾಳಂತೆ. ಅದರ ಬಗ್ಗೆ ಅವಳೇ ಹೇಳಿದ್ದೇನು ಕೇಳಿ... 
 

As a social media influencer 23 years Payal earns 40 lakhs rupees per month suc

ಇಂದು ಸೋಷಿಯಲ್  ಮೀಡಿಯಾ ಇನ್​ಫ್ಲುಯೆನ್ಸರ್​ ಸಂಖ್ಯೆ ಹೆಚ್ಚಾಗುತ್ತಿದೆ. ಯೂಟ್ಯೂಬ್​ ಚಾನೆಲ್​ ಮಾಡಿರುವವರಿಗಂತೂ ಲೆಕ್ಕವೇ ಇಲ್ಲ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​ಗಳಿಂದಲೂ ಗಳಿಕೆ ಮಾಡುವವರು ಇದ್ದಾರೆ. ಆದರೆ ಅದೃಷ್ಟ ಎಲ್ಲರ ಕೈ ಹಿಡಿಯುವುದಿಲ್ಲವಲ್ಲ. ಹುಚ್ಚುಚ್ಚಾಗಿ ಅಸಂಬದ್ಧ ಎನಿಸುವಂತೆ ನುಲಿದಾಡಿದರೂ ಅಂಥವರಿಗೆ ಮಿಲಿಯನ್​ಗಟ್ಟಲೆ ವ್ಯೂಸ್​ ಬರುವುದು ಇದೆ, ಮತ್ತೆ ಕೆಲವರು ಕಷ್ಟಪಟ್ಟು ಸಾಕಷ್ಟು ಅಧ್ಯಯನ ನಡೆಸಿ ಒಂದು ಯೂಟ್ಯೂಬ್​ ಇಲ್ಲವೇ ಇನ್​ಸ್ಟಾದಲ್ಲಿ ಹಾಕಿದರೆ ಅದಕ್ಕೆ ಹತ್ತಾರು ಲೈಕ್ಸ್​ ಬರುವುದು ಎಷ್ಟೋ ಬಾರಿ ಕಷ್ಟವೇ. ಒಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ಹೈಲೈಟ್​ ಆಗಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಬಿಟ್ಟರು ಎಂದರೆ ಅವರಿಗೆ ಲಾಟರಿ ಹೊಡೆದಂತೆಯೇ. ಕೆಲವರಿಗೆ ಮಾತ್ರ ಈ ಅದೃಷ್ಟ ಒದಗಿ ಬರುತ್ತದೆ. ಏನೇ ಹಾಕಿದರೂ ಅದನ್ನು ನೋಡುವ ದೊಡ್ಡ ವರ್ಗವೇ ಇರುತ್ತದೆ. ಇಂಥ ಅದೃಷ್ಟಲಕ್ಷ್ಮಿಯ ಮೂಲಕ ತಿಂಗಳಿಗೆ ಕನಿಷ್ಠ ನಲವತ್ತು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾಳೆ ಈ 23 ವರ್ಷದ ಯುವತಿ!

ಹೌದು. ಈಕೆಯ ಹೆಸರು ಪಾಯಲ್​. ವಯಸ್ಸು 23 ವರ್ಷ. ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ ಈಕೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈಕೆ ಏನೆಲ್ಲವೆಂದರೂ ತಿಂಗಳಿಗೆ ನಲವತ್ತು ಲಕ್ಷ ರೂಪಾಯಿಗಳನ್ನು ಗಳಿಸ್ತಾಳಂತೆ. ಈ ಬಗ್ಗೆ ಖುದ್ದು ಪಾಯಲ್​ ಹೇಳಿಕೊಂಡಿದ್ದಾಳೆ. ಇವಳು ಮಾಡುವ ವಿಡಿಯೋಗಳಿಗೆ ಸಕತ್​ ರೆಸ್​ಪಾನ್ಸ್ ಇರುವುದು ಒಂದೆಡೆಯಾದರೆ, ಸೋಷಿಯಲ್​ ಮೀಡಿಯಾದಿಂದ ಹೈಲೈಟ್​ ಆಗಿರೋ ಕಾರಣ, ಕೆಲವು ಆನ್​ಲೈನ್​ ಜಾಹೀರಾತುಗಳಲ್ಲಿಯೂ ಈಕೆಗೆ ಆಫರ್​ ಬರುತ್ತಿವೆ. ಇವೆಲ್ಲವುಗಳಿಂದ ಪಾಯಲ್​ ಈ ಪರಿಯಲ್ಲಿ ಗಳಿಸ್ತಾಳೆ.

ನನ್​ ಕನಸಿನ ಹುಡ್ಗನೇ ಬೇರೆ ಇದ್ದ, ಅವ್ರನ್ನ ಯಾಕೆ ಒಪ್ಪಿಕೊಂಡ್ನೋ ಈಗ್ಲೂ ಗೊತ್ತಾಗ್ತಿಲ್ಲ: ಅದಿತಿ ಹೇಳಿದ್ದೇನು?

ಆದರೆ ಕುತೂಹಲದ ವಿಷಯ ಏನೆಂದರೆ, ಸೂಪರ್​ಚಾಟ್​ಗಳಿಂದ ಈಕೆ ಗಳಿಸುವುದೇ ಹೆಚ್ಚು. ಸೂಪರ್​ಚಾಟ್​ ಎಂದರೆ, ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಅಥವಾ ವಿಡಿಯೋ ಅಪ್​ಲೋಡ್​ ಮಾಡಿದ ಸಂದರ್ಭದಲ್ಲಿ, ಅವುಗಳಿಗೆ ಲಕ್ಷಾಂತರ ಮಂದಿ ಕಮೆಂಟ್ಸ್​ ಹಾಕುತ್ತಾರಲ್ಲ, ಆ ಕಮೆಂಟ್ಸ್​ಗಳಲ್ಲಿ ಕೆಲವು ವಿಭಿನ್ನ ಬಣ್ಣಗಳಿಂದ ಹೈಲೈಟ್​  ಆಗುವುದನ್ನು ನೀವು ನೋಡಿರಬಹುದು. ಹೀಗೆ ತಮ್ಮ ಕಮೆಂಟ್ಸ್​ ಹೈಲೈಟ್​ ಆಗಬೇಕು ಎಂದರೆ ಇಂತಿಷ್ಟು ಹಣವನ್ನು ಅಂಥ ಕಮೆಂಟಿಗರು ಕೊಡಬೇಕಾಗುತ್ತದೆ. ತಮ್ಮ ನೆಚ್ಚಿನ ತಾರೆಯರಿಗೆ ಕಮೆಂಟ್​ ಮಾಡಿದಾಗ, ಲಕ್ಷಾಂತರ ಮಂದಿಯ ಕಮೆಂಟ್ಸ್​ಗಳಲ್ಲಿ ತಮ್ಮದು ಹೈಲೈಟ್​ ಆದರೆ ಯಾರಿಗೆ ತಾನೇ ಖುಷಿಯಾಗಲ್ಲ! ಇಂಥ ಹುಚ್ಚು ಅಭಿಮಾನಿಗಳೂ ಸಾಕಷ್ಟು ಮಂದಿ ಇರುತ್ತಾರೆ. ಅಂಥವರಿಂದಲೂ ಪಾಯಲ್​ ಹಣ ಗಳಿಸುತ್ತಾಳಂತೆ.

ಈ ಸಂದರ್ಶದಲ್ಲಿ ಈ ಬಗ್ಗೆಯೂ ಈಕೆ ಹೇಳಿಕೊಂಡಿದ್ದಾಳೆ. ಒಬ್ಬಾತ ಈಕೆಗೆ ಸೂಪರ್​ಚಾಟ್ ಮಾಡಲು ಎರಡು ಲಕ್ಷ ರೂಪಾಯಿ ಪಾವತಿ ಮಾಡಿದ್ದಾನೆ ಎನ್ನುವ ಸತ್ಯ ಹೇಳಿದ್ದಾಳೆ. ಇದು ಒಬ್ಬಾತ ಕೊಟ್ಟಿರುವ ಹಣ. ಕಮೆಂಟ್​ ಜೊತೆ ಹೀಗೆ ಲಕ್ಷ ಲಕ್ಷ ದುಡ್ಡುಗಳನ್ನೂ ಈಕೆ ಗಳಿಸುತ್ತಿದ್ದಾಳೆ. ನಾನು ಇಷ್ಟು ಹಣ ಗಳಿಕೆ ಮಾಡುತ್ತೇನೆ ಎಂದು ಹೇಳಿಕೊಳ್ಳಲು ಯಾವುದೇ ಮುಜುಗರ ಇಲ್ಲ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದಿರುವ ಪಾಯಲ್​, ಬ್ರ್ಯಾಂಡ್​ಗಳಿಂದಲೂ ಹಣ ಬರುತ್ತದೆ, ಯೂಟ್ಯೂಬ್​ನಿಂದಲೂ ಹಣ ಬರುತ್ತದೆ. ಹೀಗೆ ತಿಂಗಳಿಗೆ ಏನಿಲ್ಲವೆಂದರೂ 40 ಲಕ್ಷ ರೂಪಾಯಿ ದುಡಿಯುವುದಾಗಿ ಹೇಳಿದ್ದಾಳೆ! ಹೇಗಿದೆ ಅದೃಷ್ಟ. 

ಮಧ್ಯ ರಾತ್ರಿ ಕತ್ತು ಹಿಡಿದು ಪಬ್​ನಿಂದ ಹೊರಕ್ಕೆ ತಳ್ಳಿದ್ರು, ಲೈಫ್​ ಟರ್ನ್​ ಆಗಿದ್ದು ಅಲ್ಲೇ... ಚಂದನ್​ ಶೆಟ್ಟಿ ಮೆಲುಕು

Latest Videos
Follow Us:
Download App:
  • android
  • ios