ಸೋಲಿನ ಸರಪಳಿ ಹರಿದು ಗೆಲುವಿನ ಮಾಲೆ ಧರಿಸಿ ಮೆರೆಯುತ್ತಿರುವ ಸ್ನೇಹಿತ್ ಗೌಡ!
ನಮೃತಾ ಗೌಡ ಮತ್ತು ತುಕಾಲಿ ಸಂತೋಷ್ ವಿರುದ್ಧ ಗೆದ್ದ ಸ್ನೇಹಿತ್‌ಗೆ ಕ್ಯಾಪ್ಟನ್ ಪಟ್ಟ ದೊರಕಿದೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟ ಸಿಕ್ಕರೆ ಅದೊಂಥರಾ ಕಿರೀಟ ದೊರೆತ ಹಾಗೆ. ಇದೀಗ ಕ್ಯಾಪ್ಟನ್ ಪಟ್ಟದ ಮೂಲಕ ಗೆಲುವು ಪಡೆದ ಸ್ನೇಹಿತ್ ಈ ಗೆಲುವನ್ನು ತಮ್ಮ ತಾಯಿಗೆ ಡೆಡಿಕೇಟ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 10 ಮನೆಯ ಮೊಟ್ಟಮೊದಲು ಕ್ಯಾಪ್ಟನ್ ಆಗಿ ಸ್ನೇಹಿತ್ ಗೌಡ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಹೊಸ ಸಾಹಸವೊಂದನ್ನು ಸಾಧಿಸಿದಂತಾಗಿದೆ. ಏಕೆಂದರೆ, ಈ ಹಿಂದಿನ ಹೆಚ್ಚು-ಕಡಿಮೆ ಎಲ್ಲಾ ಟಾಸ್ಕ್‌ಗಳಲ್ಲಿ ಸ್ನೇಹಿತ್ ಗೌಡ ಹಿನ್ನಡೆ ಅನುಭವಿಸಿ ಬೇಸರಗೊಂಡಿದ್ದಾರೆ. ಆ ಮೂಲಕ ವೀಕ್ಷಕರು ಕೂಡ ಸ್ನೇಹಿತ್ ಗೌಡ ಅವರಿಗೆ ಸಾಮರ್ಥ್ಯವಿಲ್ಲ ಎಂದು ಚರ್ಚೆಗೆ ತೊಡಗಿದ್ದರು. ಆದರೆ ಇದೀಗ ಸ್ಹೇಹಿತ್ ಗೌಡ ಕ್ಯಾಪ್ಟನ್ ಶಿಪ್ ಪಡೆಯುವ ಮೂಲಕ ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಉತ್ತರ ಕೊಟ್ಟಂತಾಗಿದೆ.
ನಮೃತಾ ಗೌಡ ಮತ್ತು ತುಕಾಲಿ ಸಂತೋಷ್ ವಿರುದ್ಧ ಗೆದ್ದ ಸ್ನೇಹಿತ್‌ಗೆ ಕ್ಯಾಪ್ಟನ್ ಪಟ್ಟ ದೊರಕಿದೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟ ಸಿಕ್ಕರೆ ಅದೊಂಥರಾ ಕಿರೀಟ ದೊರೆತ ಹಾಗೆ. ಇದೀಗ ಕ್ಯಾಪ್ಟನ್ ಪಟ್ಟದ ಮೂಲಕ ಗೆಲುವು ಪಡೆದ ಸ್ನೇಹಿತ್ ಈ ಗೆಲುವನ್ನು ತಮ್ಮ ತಾಯಿಗೆ ಡೆಡಿಕೇಟ್ ಮಾಡಿದ್ದಾರೆ. ಬಿಗ್ ಬಾಸ್ ಸ್ನೇಹಿತ್ ಅವರನ್ನು ಕ್ಯಾಪ್ಟನ್ ಮಾಡುತ್ತಿದ್ದಂತೆ ಈಗ ಸ್ನೇಹಿತ್ ಜವಾಬ್ದಾರಿ ಹೆಚ್ಚಿದೆ. ಇಡೀ ತಂಡವನ್ನು ಮುನ್ನಡೆಸಬೇಕಾದ ಕೆಲಸ ಈಗ ಸ್ನೆಹಿತ್ ಹೆಗಲಿಗೇರಿದೆ.
ಸಿಟ್ಟು ಬಂದ್ರೆ ಗಂಡ ದಡಬಡ ಅಂತ ಮನೆಯಿಂದ ಹೊರ ಹೋಗ್ಬೇಕು, ಸುಖ ಸಂಸಾರಕ್ಕೆ ಹರೀಶ್ ಈ ಸೂತ್ರ ವರ್ಕ್ ಔಟ್ ಆಗುತ್ತಾ?
ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯ ಕ್ಯಾಪ್ಟನ್ಸಿ ಮೂಲಕ ಸ್ನೇಹಿತ್ ಗೌಡ ಬೇರೆ ಸ್ಪರ್ಧಿಗಳಿಗಿಂತ ಸ್ವಲ್ಪ ಮುನ್ನಡೆ ಸಾಧಿಸಿದಂತೆ ಆಗಿದೆ. ನಮೃತಾ ಗೌಡ ಮತ್ತು ತುಕಾಲಿ ಸಂತೋಷ್ ಅವರಿಗೆ ಒಲಿಯಲು ಸಾಧ್ಯವಿದ್ದ ಪಟ್ಟವನ್ನು ಸ್ನೇಹಿತ್ ಪಡೆದು ಅವರಿಬ್ಬರಿಗೂ ಟಾಂಗ್ ಕೊಟ್ಟಿದ್ದಾರೆ. ಮುಂದಿನ ಸ್ಪರ್ದೆಗಳಲ್ಲಿ ಸ್ನೇಹಿತ್ ಮುನ್ನಡೆ ಕಾಯ್ದುಕೊಂಡರೆ ಆಗ ವೀಕ್ಷಕರು ಸ್ನೇಹಿತ್ ಗೌಡ ಅವರಿಗೆ ಮಣೆ ಹಾಕುವ ಎಲ್ಲ ಸಾಧ್ಯತೆಗಳು ತೆರೆದಿರುತ್ತವೆ. ಸ್ನೇಹಿತ್ ಬಿಗ್ ಬಾಸ್ ಮನೆಯ ಮುಂದಿನ ಜರ್ನಿ ಹೇಗಿರುತ್ತದೆ ಎಂಬುದನ್ನು ಕಾದು ನೋಡೋಣ!
ಇದೇನ್ ಗುರು ಹುಡ್ಗೀರ್ ಜೊತೆ ಬಿಗ್ ಬಾಸ್ ಫ್ಲರ್ಟ್ ಮಾಡ್ತಾವ್ರೆ?; ನಮ್ರತಾ ಗೌಡ ಮಾತ್ರವಲ್ಲ ಎಲ್ಲರೂ ಶಾಕ್!