ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಶುರು ಮಾಡಿ ಬಹಳ ಕಾಲ ಆಯ್ತು. ಈ ಚಾನಲ್‌ನಲ್ಲಿ ಈಗ ಈ ಮನೆ ಮಂದಿಯದ್ದೇ ಎಪಿಸೋಡ್‌ ಪ್ರಸಾರವಾಗುತ್ತಿದೆ. ಅದರಲ್ಲಿ ಸೃಜನ್ ಹೆಂಡತಿ ಗ್ರೀಷ್ಮಾ ಮತ್ತು ಅತ್ತೆ ಗಿರಿಜಾ ಲೋಕೇಶ್ ಜಗಳ ಹೆಂಗಿರುತ್ತೆ ಗೊತ್ತಾ? 

ಸೃಜನ್ ಲೋಕೇಶ್ (Srujan lokesh) ಯೂಟ್ಯೂಬ್ (Youtube) ಚಾನಲ್‌ ನಲ್ಲಿ ಮಜವಾದ ಎಪಿಸೋಡ್‌ ಗಳು ಪ್ರಸಾರ ಆಗ್ತಿವೆ. ಅದರಲ್ಲೂ ಅತ್ತೆ ಸೊಸೆ ಕುರಿತಾದ ಎಪಿಸೋಡ್‌ಗಳು ಸಖತ್ತಾಗಿ ನಗೆ ಉಕ್ಕಿಸುತ್ತವೆ. ಈ ಎಪಿಸೋಡ್‌ಗಳು ಸೃಜಾ ಹಾಸ್ಯಕ್ಕೆ ಏನೂ ಕಮ್ಮಿ ಇಲ್ಲದ ಹಾಗೆ ಬರ್ತಿವೆ. ಸೃಜನ್‌ ಲೋಕೇಶ್ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗ್ತಿರೋ ಈ ಎಪಿಸೋಡ್‌ಗಳ ಸೃಜನ್‌ ಅವರ ಮನೆಮಂದಿ, ಪಕ್ಕದ ಮನೆಯವರು ಎಲ್ಲ ಕಾಣಿಸಿಕೊಳ್ಳೋದು ವಿಶೇಷ. ಮನೆಯ ಅಷ್ಟೂ ಜನ ಕಲಾವಿದರಾಗಿರೋದೂ ಇದಕ್ಕೆ ಕಾರಣ. ಆ ಕಾರಣಕ್ಕೋ ಏನೋ ಈ ಎಪಿಸೋಡ್‌ಗಳು ನೋಡೋಕೆ ಸಹಜವಾಗಿರುತ್ತೆ. 

ಗಿರಿಜಾ ಲೋಕೇಶ್, ಗ್ರೀಷ್ಮಾ, ಕೆಲವೊಮ್ಮೆ ಸೃಜನ್, ಇವರ ಮಗ ಸುಕೃತ್, ಸೃಜನ್ ಅಕ್ಕ ಪೂಜಾ ಲೋಕೇಶ್ ಹೀಗೆ ಮನೆಯ ಅಷ್ಟೂ ಜನ ಈ ಎಪಿಸೋಡ್‌ಗಳಲ್ಲಿ ಬರ್ತಾರೆ. ಒಂಥರಾ ನಮ್ಮ ನಿಮ್ಮ ಮನೆಯಲ್ಲಿ ನಡೆಯೋ ಥರದ್ದೇ ವಿಷಯಗಳನ್ನು ಇಟ್ಟುಕೊಂಡು ಈ ಎಪಿಸೋಡ್ ಹೆಣೆದಿದ್ದಾರೆ. ಎಲ್ಲ ಎಪಿಸೋಡ್ ಗಳಿಗೂ ಹಾಸ್ಯದ ಲೇಪ ಇದೆ. ಸದ್ಯಕ್ಕೀಗ ಗಮನ ಸೆಳೆಯುತ್ತಿರುವುದು ಗ್ರೀಷ್ಮಾ ಹಾಗೂ ಗಿರಿಜಾ ಲೋಕೇಶ್ (girija lokesh) ಎಪಿಸೋಡ್ ಗಳು. ಅತ್ತೆ ಸೊಸೆ ಕಿತ್ತಾಟ, ಆದರೆ ಮೂರನೆಯವರು ಮಧ್ಯೆ ಬಂದರೆ ಕೂಡಲೇ ಪರಸ್ಪರ ಒಟ್ಟಾಗುವ ಅತ್ತೆ ಸೊಸೆ ಇವೆಲ್ಲ ಸಖತ್ ಫನ್ನಿಯಾಗಿ ಮೂಡಿಬಂದಿವೆ. 

Sathya: ಸತ್ಯ ಮಾಲಾಶ್ರೀ ತರವೇ ಇರಲಿ, ಶ್ರುತಿ ಮಾಡ್ಬೇಡಿ ಪ್ಲೀಸ್!

ಲೇಟೆಸ್ಟ್ ಎಪಿಸೋಡ್‌ನಲ್ಲಿ ಸೋಮಾರಿ ಸೊಸೆಯಿಂದ ಅತ್ತೆಗಾಗೋ ಫಚೀತಿಯನ್ನ ತೋರಿಸಿದ್ದಾರೆ. ಯಮನಿದ್ದೆ ಮಾಡಿ ಎಷ್ಟೋ ಹೊತ್ತಿಗೆ ಸೊಸೆ ಗ್ರೀಷ್ಮಾ ಎದ್ದು ಬರೋವಷ್ಟರಲ್ಲಿ ಅತ್ತೆ ಗಿರಿಜಾ ಲೋಕೇಶ್ ಡೈನಿಂಗ್ ಟೇಬಲ್ ಮೇಲೆ ಕೂತಿರ್ತಾರೆ. 'ಯಾಕೋ ಇವತ್ತು ಏಳೋಕೇ ಆಗಿಲ್ಲ ಅತ್ತೆ. ಏನ್ ಮಾಡಿದ್ರೂ ಕಣ್ ಬಿಡೋದಕ್ಕೇ ಆಗ್ಲಿಲ್ಲ.. ' ಅಂತ ಲೇಟಾಗಿ ಎದ್ದ ತಪ್ಪಿಗೆ ಅತ್ತೆಯನ್ನ ಕನ್ವಿನ್ಸ್ ಮಾಡೋಕೆ ಟ್ರೈ ಮಾಡ್ತಾಳೆ ಗ್ರೀಷ್ಮಾ. ಅತ್ತೆ ಗಿರಿಜಾಗೆ ಒಳಗೊಳಗೆ ಸಿಟ್ಟಿದ್ದರೂ ಹೊರಗೆ ತೋರಿಸಿಕೊಳ್ಳದೇ ನಗು ನಗುತ್ತಾ ಅಲ್ಲಲ್ಲಿ ವ್ಯಂಗ್ಯದ ಬಾಣದಿಂದ ತಿವಿಯುತ್ತಾ ಸೊಸೆಯ ಜೊತೆ ಮಾತಾಡ್ತಾರೆ. ಸರಿ ತಿಂಡಿ ಏನ್ ಮಾಡೋದು ಅನ್ನೋ ಪ್ರಶ್ನೆ. ಹೇಗೂ ಎದ್ದಿದ್ದು ಲೇಟ್. ಚಿತ್ರಾನ್ನ ಸುಲಭ. ಅದನ್ನೇ ಮಾಡಿ ಬಿಡ್ತೀನಿ ಅಂತಾಳೆ ಗ್ರೀಷ್ಮಾ. ಚಿತ್ರಾನ್ನ ತಿಂದೂ ತಿಂದೂ ಸುಸ್ತಾಗಿದ್ದರೂ ಬೇರೆ ದಾರಿಯಿಲ್ಲದೇ ಗಿರಿಜಮ್ಮ ಸೊಸೆಗೆ ಹೂಂ ಅಂತಾರೆ. ಇನ್ನೇನು ಐದೇ ನಿಮಿಷಕ್ಕೆ ಪ್ರೆಶ್ ಆಗಿ ಬರ್ತೀನಿ ಅಂತ ಹೋಗೋ ಸೊಸೆಮುದ್ದು, ಬಾತ್ ರೂಮ್‌ನಿಂದಲೇ ಅತ್ತೆಗೆ ಚಿತ್ರಾನ್ನಕ್ಕಾಗಿ ಈರುಳ್ಳಿ ಹೆಚ್ಚಿಕೊಡಲು ಹೇಳ್ತಾಳೆ, ಆಮೇಲೆ ಕೊತ್ತಂಬರಿ ಸೊಪ್ಪು, ಮೆಣಸಿನ ಕಾಯಿ, ನಿಂಬೆ ಹುಳಿನೂ ಕಟ್ ಮಾಡೋ ಕೆಲಸ ಅತ್ತೆಯ ಮೇಲೆ ಬೀಳುತ್ತೆ. 

Reels: ಹವಿ ಮದ್ವೆ ನಿಲ್ಲಿಸಿದ ಖುಷಿಗೆ ರಾ ರಾ ರಕ್ಕಮ್ಮ ಸಾಂಗ್ ಗೆ ಡ್ಯಾನ್ಸ್ ಮಾಡ್ತಿದ್ದಾರಾ ಮಂಗಳಜ್ಜಿ, ವರೂ?

ಬೇರೆ ದಾರಿ ಇಲ್ಲದೇ ಚಿತ್ರಾನ್ನವನ್ನೂ ಮಾಡಿ ಬಿಡುವ ಗಿರಿಜಮ್ಮ ಇನ್ನಾದರೂ ಹಾಯಾಗಿ ಕೂರಬಹುದು ಅಂದುಕೊಂಡರೆ ಫ್ರೆಶ್ ಆಗಿ ಬರುವ ಸೊಸೆ ಚಿತ್ರಾನ್ನವನ್ನು ಹೊಗಳಿ ಹೊಗಳಿ ತಿಂದು ಮಧ್ಯಾಹ್ನಕ್ಕೆ ಮಾಡೋ ಸಾರು ಹೇಗಿದ್ರೆ ಚಂದ ಅಂತನೂ ಹೇಳಿ ಹೋಗ್ತಾಳೆ. ಹಾಗೆ ಹೋದವಳು ಫೋನಲ್ಲಿ ಬ್ಯುಸಿ. ಇವಳಿನ್ನು ಬರಲ್ಲ ಅಂದುಕೊಂಡು ಮಧ್ಯಾಹ್ನದ ಅಡುಗೆಯನ್ನೂ ಅತ್ತೆಯೇ ಮಾಡಿ ಮುಗಿಸ್ತಾರೆ. ಗಡದ್ದಾಗಿ ಉಣ್ಣೋ ಸೊಸೆಗೆ ಸ್ವಲ್ಪ ಹೊತ್ತಿಗೆ ತೂಕಡಿಕೆ. ಬೆಳಗ್ಗಿಂದ ಸಿಕ್ಕಾಪಟ್ಟೆ ಕೆಲಸ ಮಾಡಿ ಸುಸ್ತಾಗಿದೆ, ಸಣ್ಣದೊಂದು ನ್ಯಾಪ್ ತಗೊಂಡು ಬರ್ತೀನಿ ಅಂತ ಮತ್ತೆ ಅತ್ತೆಯನ್ನು ಕನ್ವಿನ್ಸ್ ಮಾಡಿ ಹೊರಟಾಗ ಆಯ್ತು, ಇನ್ನು ಸಂಜೆ ಕಾಫಿನೂ ನಾನೇ ಮಾಡ್ಬೇಕು ಅಂತ ಅತ್ತೆ ತಲೆ ಮೇಲೆ ಕೈಹೊತ್ತು ಕೂತರೆ ಸೊಸೆ ನಿಮಗೆ ಕಾಫಿ ಚೆನ್ನಾಗಿ ಮಾಡಲಿಕ್ಕೆ ಬರಲ್ಲ. ನಾನೇನು ಎದ್ದು ಬಂದು ಮಾಡ್ತೀನಿ ಅನ್ನೋದಾ? ಸಿಟ್ಟಲ್ಲಿ ಮೈ ಎಲ್ಲ ಪರಚ್ಕೊಳ್ಳೋ ಸ್ಥಿತಿಯಲ್ಲಿರುವ ಗಿರಿಜಮ್ಮ ಇಷ್ಟಕ್ಕೆಲ್ಲ ಕಾರಣ ಆದ ಮಗನಿಗೆ ಬೈಕೊಳ್ತಾರೆ. 

YouTube video player
ಇನ್ನೊಂದು ಎಪಿಸೋಡ್‌ನಲ್ಲಿ ಪೂಜಾ ಲೋಕೇಶ್ ಅಥವಾ ಶಿಲ್ಪಾ ಮತ್ತು ಸೃಜನ್ ಮಗ ಸುಕೃತ್ ಎಪಿಸೋಡ್ ಇದೆ. ಅದೂ ಸಖತ್ತಾಗಿ ನಗೆ ತರಿಸುತ್ತೆ. 
ಒಟ್ಟಾರೆ ಇವರ ಫ್ಯಾಮಿಲಿಯಲ್ಲಿ ಇರೋರೆಲ್ಲ ಆರ್ಟಿಸ್ಟ್ ಗಳೇ. ಗಿರಿಜಾ ಲೋಕೇಶ್ ಹಿರಿಯ ಕಲಾವಿದೆ. ಅನೇಕ ಸಿನಿಮಾಗಳ ಮೂಲಕ ಮನೆ ಮಾತಾಗಿದ್ದಾರೆ. ಗ್ರೀಷ್ಮಾ 'ಪ್ರೀತಿ ಇಲ್ಲದ ಮೇಲೆ' ಸೀರಿಯಲ್ ನಲ್ಲಿ ಆಕ್ಟಿಂಗ್ ಮೂಲಕ ಮೋಡಿ ಮಾಡಿದವರು. ಪೂಜಾ ಲೋಕೇಶ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದವರು. ಸೃಜನ್ ವಿಷಯ ಹೇಳೋದೇ ಬೇಡ. ಇವರ ನಡುವೆ ನಾನ್ಯಾರಿಗೂ ಕಮ್ಮಿ ಇಲ್ಲ ಅಂತ ಪುಟಾಣಿ ಹುಡುಗ, ಗ್ರೀಷ್ಮಾ ಹಾಗ ಸೃಜನ್ ಮಗ ಸುಕೃತ್ ಸಹ ಆಕ್ಟಿಂಗ್ ನಲ್ಲಿ ಮಿಂಚುತ್ತಿದ್ದಾನೆ. ಇಡೀ ಫ್ಯಾಮಿಲಿ ಫುಲ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಕೊಡ್ತಿದೆ. 

ಡೀಸೆಂಟ್ ಆಗಿದ್ದ ಕನ್ನಡತಿಯಲ್ಲೂ ಶುರುವಾಗಿದೆ ರೊಮ್ಯಾನ್ಸ್‌ ಕಚಗುಳಿ