ಕೊರೋನಾ ಮಹಾಮಾರಿ ದಿನದಿನಕ್ಕೂ ವಿಸ್ತರಿಸುತ್ತಿದೆ. ಸೋಂಕಿತರ ಸಂಖ್ಯೆ ಲಕ್ಷ ಲಕ್ಷ ಗಡಿಯಲ್ಲಿ ದಾಖಲಾಗುತ್ತಿವೆ. ಇದೀಗ ಗಿಣಿರಾಮ ಧಾರಾವಾಹಿ ನಟಿ ನಯನ ಅವರಿಗೆ ಸೋಂಕು ತಗುಲಿದೆ. 

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರುತ್ತಿದೆ. ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಸಾವುಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದೆ.

ಇದೀಗ ‘ಗಿಣಿರಾಮ’ ಧಾರಾವಾಹಿಯ ನಾಯಕಿ ನಯನಾ ನಾಗರಾಜ್‌ ಅವರು ಕೊರೋನಾ ಸೋಂಕು ತಗುಲಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿಸಿರುವ ನಟಿ, ‘ಈ ಸೋಂಕು ಹೇಗೆ ಬಂತು ಅನ್ನೋದೇ ತಿಳಿಯುತ್ತಿಲ್ಲ ಎಂದಿದ್ದಾರೆ.

ಆರೋಗ್ಯದ ಬಗ್ಗೆ ರೂಮರ್ಸ್: ಅರ್ಜುನ್ ಜನ್ಯ ಕಿಡಿ

 ಆದರೆ ಕೊರೋನಾದ ಅಷ್ಟೂ ಲಕ್ಷಣಗಳಿವೆ. ಹೋಮ್‌ ಐಸೋಲೇಶನ್‌ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿರುವೆ’ ಎಂದಿದ್ದಾರೆ.

ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬರುತ್ತಿರುವ ‘ಗಿಣಿರಾಮ’ ಸೀರಿಯಲ್‌ನಲ್ಲಿ ನಯನಾ ಅವರು ಮಹತಿ ಪಾತ್ರ ನಿರ್ವಹಿಸುತ್ತಿದ್ದಾರೆ.