Asianet Suvarna News Asianet Suvarna News

vaishnavi gowda : ಅತ್ತಿಗೆ ಸೀಮಂತದಲ್ಲಿ ಮಿಂಚಿದ ನಟಿ ವೈಷ್ಣವಿ ಗೌಡ

ನಟಿ ವೈಷ್ಣವಿ ಗೌಡ ಅವರ ಕುಟುಂಬದಲ್ಲಿ ಸಂತಸದ ವಾತಾವರಣ! ಅವರ ಅತ್ತಿಗೆ ಸೀಮಂತ ನೆರವೇರಿದ್ದು, ಈ ಸುಂದರ ಕ್ಷಣವನ್ನು ವೈಷ್ಣವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

sitaram serial actress vaishnavi gowda photo viral roo
Author
First Published Aug 19, 2024, 12:35 PM IST | Last Updated Aug 19, 2024, 12:49 PM IST

ಸೀತಾರಾಮ ಧಾರಾವಾಹಿ (Sitaram serial) ಯ ಸೀತಾ, ನಟಿ ವೈಷ್ಣವಿ ಗೌಡ (actress Vaishnavi Gowda) ಮನೆಗೆ ಮುದ್ದಾದ ಮಗುವೊಂದು ಬರಲಿದೆ. ಬಿಗ್ ಬಾಸ್ (Bigg Boss) ಖ್ಯಾತಿಯ ನಟಿ ವೈಷ್ಣವಿ ಗೌಡ ಕುಟುಂಬ ಖುಷಿಯಲ್ಲಿದೆ.  ವೈಷ್ಣವಿ ಅತ್ತಿಗೆ ಗರ್ಭಿಣಿ. ಅತ್ತಿಗೆ ಸೀಮಂತ ನಡೆದಿದ್ದು, ಅದ್ರ ಫೋಟೋವನ್ನು ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅತ್ತಿಗೆ ಜೊತೆಗಿರುವ ಫೋಟೋ ಹಂಚಿಕೊಂಡ ವೈಷ್ಣವಿ ಗೌಡ, ಅತ್ತಿಗೆ ಸೀಮಂತ ಎಂದು ಶೀರ್ಷಿಕೆ ಹಾಕಿದ್ದಾರೆ. 

ನಟಿ ವೈಷ್ಣವಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದ್ರಲ್ಲಿ ವೈಷ್ಣವಿ ಹಾಗೂ ಅವರ ಅತ್ತಿಗೆ ಮಾತ್ರ ಇದ್ದಾರೆ. ಸೀರೆಯುಟ್ಟ ವೈಷ್ಣವಿ, ಖುರ್ಚಿಯ ಮೇಲೆ ಕುಳಿತಿರುವ ಅತ್ತಿಗೆ ಪಕ್ಕ ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾರೆ. ವೈಷ್ಣವಿ ಹಾಗೂ ಅವರ ಅತ್ತಿಗೆ ಮುದ್ದಾಗಿ ಕಾಣ್ತಿದ್ದು, ಅಭಿಮಾನಿಗಳು ಫೋಟೋವನ್ನು ಮೆಚ್ಚಿಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಅತ್ತಿಗೆ ಹಾಗೂ ಅಣ್ಣ ಇಬ್ಬರೂ ವೈಷ್ಣವಿ ಜೊತೆ ಕಾಣಿಸಿಕೊಂಡಿದ್ದಾರೆ. 

ಚಂದ ಕಾಣ್ಬೇಕು ಅಂದ್ರೆ ವೆಡ್ಡಿಂಗ್‌ ಶೂಟ್‌ ಮಾಡಿಸಿ, ಸಿನಿಮಾ ಅಲ್ಲ: ರಕ್ಕಸಪುರದೋಳ್‌ ನಟ ರಾಜ್‌ ಬಿ ಶೆಟ್ಟಿ

ವೈಷ್ಣವಿ ಗೌಡ ಅವರಿಗೆ  ಅಣ್ಣನಿದ್ದು, ಅವರ ಹೆಸರು ಸುನೀಲ್. ಅತ್ತಿಗೆ ಅಂಕಿತ. ಡಿಸೆಂಬರ್ 2000ನೇ ಇಸವಿಯಲ್ಲಿ ಸುನೀಲ್ ಮತ್ತು ಅಂಕಿತ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ವೈಷ್ಣವಿ ಗೌಡ ಕೂಡ ಈ ಸುಂದರ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ವೈಷ್ಣವಿ ಅತ್ತಿಗೆಯ ಸೀಮಂತದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಲೈಕ್ ಬಟನ್ ಒತ್ತಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ಎಲ್ಲರ ಮನಸ್ಸು ಗೆದ್ದಿರುವ ವೈಷ್ಣವಿ ಗೌಡ, ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಬ್ಯುಸಿಯಿದ್ದಾರೆ. ಸೀತಾ ಹಾಗೂ ಸಿಹಿ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೀತಾರಾಮರ ಪ್ರೀತಿ, ಮದುವೆಯನ್ನು ಅತ್ಯಂತ ಕುತೂಹಲದಿಂದ ವೀಕ್ಷಣೆ ಮಾಡಿದ್ದ ಅಭಿಮಾನಿಗಳಿಗೆ ಆ ಜೋಡಿ ರೀಲ್ಸ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರೂ ಸಂಭ್ರಮ. ಧಾರಾವಾಹಿ ಜೊತೆ ಅವರ ಡಾನ್ಸ್, ಬಿಡುವಿನ ಸಮಯದಲ್ಲಿ ಅವರು ಮಾಡುವ ತರಲೆ ವಿಡಿಯೋಗಳನ್ನು ಅಭಿಮಾನಿಗಳು ಇಷ್ಟಪಟ್ಟು ನೋಡ್ತಾರೆ. 

ವೈಷ್ಣವಿ ಗೌಡ, ಸಿನಿಮಾ, ಧಾರಾವಾಹಿ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದಾರೆ. ವೈಷ್ಣವಿ ದೇವಿ ಧಾರಾವಾಹಿ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು,  ನಂತ್ರ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮನೆಮಾತಾದ್ರು. ನಂತ್ರ ಬಿಗ್ ಬಾಸ್ 8ರಲ್ಲಿ ಸ್ಪರ್ಧಿಸಿದ್ದ ವೈಷ್ಣವಿ ತಾಳ್ಮೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಬಿಗ್ ಬಾಸ್ ನಂತ್ರ ವೈಷ್ಣವಿ ಝೀ ಕನ್ನಡದ ಸೀತಾರಾಮದಲ್ಲಿ ಮಿಂಚುತ್ತಿದ್ದಾರೆ.

ಇದಲ್ಲದೆ ವೈಷ್ಣವಿ ಗೌಡ, ಡ್ರೆಸ್ ಕೋಡ್ ಹಾಗೂ ಗಿರಿಗಿಟ್ಟಲೆ ಸಿನಿಮಾದಲ್ಲಿ ನಟಿಸಿದ್ದಾರೆ. ಭರ್ಜರಿ ಕಾಮಿಡಿ ಶೋನಲ್ಲಿ ನಿರೂಪಕಿಯಾಗಿಯೂ ವೈಷ್ಣವಿ ಮಿಂಚಿದ್ದಾರೆ. ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದಾರೆ. ಅವರು ಪ್ರತಿ ದಿನ ವಿಡಿಯೋ, ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಯೋಗ ಹಾಗೂ ಡಾನ್ಸ್ ನಲ್ಲಿ ವೈಷ್ಣವಿ ಎತ್ತಿದ ಕೈ. ಮದುವೆಗೆ ನಾನು ಸದಾ ಸಿದ್ಧ ಎನ್ನುತ್ತಿದ್ದ ವೈಷ್ಣವಿ ಸ್ವಲ್ಪ ಸಮಸ್ಯೆ ಎದುರಿಸಿದ್ದರು. ಹಾಗಾಗಿ ಇನ್ನೂ ವೈಷ್ಣವಿ ಒಂಟಿಯಾಗಿದ್ದಾರೆ. ಅವರನ್ನು ನೋಡಿದ ಅಭಿಮಾನಿಗಳು, ಮದುವೆ ಯಾವಾಗ ಅಂತ ಪ್ರಶ್ನೆ ಮಾಡ್ತಿರುತ್ತಾರೆ. 

ಬಿಗ್‌ಬಾಸ್‌ ಕನ್ನಡ ಸೀಸನ್ 11: ಹೈದರಾಬಾದ್‌ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋ ಲೀಕ್!

ಕೆಲ ದಿನಗಳ ಹಿಂದೆ ವೈಷ್ಣವಿ ಖುಷಿ ಸುದ್ದಿಯೊಂದನ್ನು ನೀಡಿದ್ದರು. ಅವರ ತಾಯಿ ಭಾನು ರವಿಕುಮಾರ್ ವಕೀಲರಾಗಿ ಬಡ್ತಿ ಪಡೆದಿರುವುದಾಗಿ ವೈಷ್ಣವಿ ಹೇಳಿದ್ದರು. ತಾಯಿ ಜೊತೆ ಫೋಟೋ ಹಂಚಿಕೊಂಡಿದ್ದ ಅವರು, ನಮ್ಮ ಮನೆಯಲ್ಲಿ ಈಗ ವಕೀಲರಿದ್ದಾರೆ ಎಂದಿದ್ದರು. 

Latest Videos
Follow Us:
Download App:
  • android
  • ios