ಕನ್ನಡ ಚಿತ್ರರಂಗ ಪ್ರೇಕ್ಷಕರ ಕೊರತೆ ಎದುರಿಸುತ್ತಿದೆ. ನಾನು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುವ, ಹೊಸ ಯೋಚನೆಯ ಸಿನಿಮಾಕ್ಕೆ ಎದುರು ನೋಡುತ್ತಿದ್ದೆ. ರಕ್ಕಸಪುರದೋಳ್‌ ಸಿನಿಮಾ ತಲ್ಲೀನಗೊಳಿಸುವ ಅನುಭವದ ಜೊತೆಗೆ ಅತ್ಯುತ್ತಮ ಟೆಕ್ನಿಕಲ್‌ ಟೀಮ್‌ ಹೊಂದಿದೆ. 

‘ನಾವು ಚೆನ್ನಾಗಿ ಕಾಣ್ಬೇಕು ಅಂತ ಸಿನಿಮಾಗೆ ದುಡ್ಡು ಸುರಿಯೋದು ಅರ್ಥಹೀನ. ಚಂದ ಕಾಣಬೇಕು ಅಂದರೆ ವೆಡ್ಡಿಂಗ್ ಫೋಟೋಶೂಟ್‌ ಮಾಡಿಸಿ, ಸಿನಿಮಾ ಅಲ್ಲ.’ - ಹೀಗಂದಿದ್ದು ರಾಜ್‌ ಬಿ ಶೆಟ್ಟಿ. ಸಾಹಸ ನಿರ್ದೇಶಕ ರವಿವರ್ಮ ನಿರ್ಮಾಣ, ರವಿ ಸಾರಂಗ ನಿರ್ದೇಶನದ, ರಾಜ್‌ ಬಿ ಶೆಟ್ಟಿ ನಟನೆಯ ‘ರಕ್ಕಸಪುರದೋಳ್‌’ ಸಿನಿಮಾ ಮುಹೂರ್ತ ಇತ್ತೀಚೆಗೆ ನಡೆಯಿತು.

ಈ ವೇಳೆ ರಾಜ್‌ ಶೆಟ್ಟಿ, ‘ಕನ್ನಡ ಚಿತ್ರರಂಗ ಪ್ರೇಕ್ಷಕರ ಕೊರತೆ ಎದುರಿಸುತ್ತಿದೆ. ನಾನು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುವ, ಹೊಸ ಯೋಚನೆಯ ಸಿನಿಮಾಕ್ಕೆ ಎದುರು ನೋಡುತ್ತಿದ್ದೆ. ರಕ್ಕಸಪುರದೋಳ್‌ ಸಿನಿಮಾ ತಲ್ಲೀನಗೊಳಿಸುವ ಅನುಭವದ ಜೊತೆಗೆ ಅತ್ಯುತ್ತಮ ಟೆಕ್ನಿಕಲ್‌ ಟೀಮ್‌ ಹೊಂದಿದೆ. ಇದರಲ್ಲಿ ಪೊಲೀಸ್‌ ಪಾತ್ರ ಮಾಡುತ್ತಿದ್ದೇನೆ. ವ್ಯಕ್ತಿಯ ಒಳಗಿನ ರಾಕ್ಷಸತ್ವವನ್ನು ಹೊರಗೆ ತರುವ ಕಥೆ ಸಿನಿಮಾದ್ದು. 

ನನಗೆ ವಿವಿಧ ಭಾಷೆಗಳಿಂದ ಅವಕಾಶಗಳು ಬರುತ್ತಿವೆ. ನಾನು ಕನ್ನಡಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇನೆ’ ಎಂದಿದ್ದಾರೆ. ನಿರ್ದೇಶಕ ರವಿ ಸಾರಂಗ, ‘ಇದೊಂದು ಕ್ರೈಮ್‌ ಥ್ರಿಲ್ಲರ್‌. ಕೊಳ್ಳೆಗಾಲ ಪ್ರದೇಶದಲ್ಲಿ ನೆಲೆಯೂರಿರುವ ಮೂಢನಂಬಿಕೆಯನ್ನಾಧರಿಸಿ ಕಥೆಯ ಒನ್‌ಲೈನ್‌ ಇದೆ’ ಎಂದರು. ನಿರ್ಮಾಪಕ ರವಿವರ್ಮ, ‘ನನ್ನ ಸಿನಿಮಾ ಕೆಲಸದ ಮುಂದುವರಿಕೆ ಇದು. 

ಮಾಲಿವುಡ್ ಆಯ್ತು, ಇದೀಗ ಬಾಲಿವುಡ್‌ಗೆ ಕಾಲಿಟ್ಟ ರಾಜ್‌ ಬಿ ಶೆಟ್ಟಿ: ಬಾಬಿ ಡಿಯೋಲ್ ಜೊತೆ ಅಬ್ಬರಿಸುತ್ತಾರಾ?

ರಾಜ್‌ ಶೆಟ್ಟಿ ಬಜೆಟ್‌ ಬಗ್ಗೆ ಮಾತನಾಡುವಾಗ ನನ್ನ ಮಾರ್ಕೆಟ್‌ಗಿಂತ ಕಮ್ಮಿಯೇ ಖರ್ಚು ಮಾಡಿ ಎಂದಿದ್ದಾರೆ. ಇದು ನಿರ್ಮಾಪಕರ ಬಗೆಗಿನ ಅವರ ಕಾಳಜಿ ತೋರಿಸುತ್ತದೆ’ ಎಂದರು. ನಿರ್ದೇಶಕ ಪ್ರೇಮ್‌, ನಟಿ ರಕ್ಷಿತಾ ಪ್ರೇಮ್‌ ಶುಭ ಹಾರೈಸಿದರು. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಕಲಾವಿದರಾದ ಸ್ವಾತಿಷ್ಠಾ ಕೃಷ್ಣನ್‌, ಅರ್ಚನಾ ಕೊಟ್ಟಿಗೆ, ಬಿ ಸುರೇಶ್‌, ಅನಿರುದ್ಧ ಭಟ್‌, ಸೌಮ್ಯಾ ಉಪಸ್ಥಿತರಿದ್ದರು.