ಝೀ ಕನ್ನಡ ವಾಹಿನಿಯ ಜನಮೆಚ್ಚಿದ ಜನಪ್ರಿಯ ಸಿಂಗಿಂಗ್ ಕಾಂಪಿಟೇಶನ್ ಕಾರ್ಯಕ್ರಮ ಸರಿಗಮಪ.  ಪ್ರತಿವಾರವೂ ಬೇರೆ ಬೇರೆ ಥೀಮ್ ಇಟ್ಟುಕೊಂಡು ಮೂಡಿ ಬರುತ್ತಿರುವ ಈ ಕಾರ್ಯಕ್ರಮ ವೀಕ್ಷಕರ ಮನ ಗೆಲ್ಲುತ್ತಿದೆ. 

ಈ ಕಾರ್ಯಕ್ರಮದಲ್ಲಿ ಹಂಸಲೇಖ, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದಾರೆ. ಇವರು ಸರಿಗಮಪಕ್ಕೆ ಕಳೆ ಇದ್ದಂತೆ. ಕೆಲ ವಾರಗಳಿಂದ ಕಾರಣಾಂತರದಿಂದ ವಿಜಯ್ ಪ್ರಕಾಶ್ ಭಾಗಿಯಾಗಿಲ್ಲ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಟ್ವಿಟರ್ ನಲ್ಲಿ ವಿಜಯ್ ರವರನ್ನು ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಮುಂದಿನ ವಾರ ಖಂಡಿತ ಬರುತ್ತೇನೆ ಎಂದು ಅಭಿಮಾನಿಗಳಿಗೆ ಉತ್ತರಿಸಿದ್ದಾರೆ. 

 

ಸೀಸನ್ 15 ನಲ್ಲಿ ರಾಜೇಶ್ ಕೃಷ್ಣನ್ ಕೂಡಾ ಇರಲಿಲ್ಲ. ಆಗಲೂ ಅಭಿಮಾನಿಗಳು ಪ್ರಶ್ಮಿಸಿದ್ದರು.