ಸಣ್ಣಗಾಗಲು ಜಿಮ್ ಅಗತ್ಯವಿಲ್ಲ ಸೇವಿಸುವ ಆಹಾರದ ಮೇಲೆ ಕಣ್ಣಿದ್ದರೆ ಹಾಗೆ ಸಣ್ಣಗಾಗಬಹುದು. ಗಾಯಕ ರಾಹುಲ್ ವೈದ್ಯ ಉಪವಾಸದ ದಿನಚರಿ ಇದು....
ಹಿಂದಿ ಚಿತ್ರರಂಗದ ಜನಪ್ರಿಯ ಗಾಯಕ ರಾಹುಲ್ ವೈದ್ಯ ಬಿಗ್ ಬಾಸ್ ಸೀಸನ್ 14, ಫಿಯರ್ ಫ್ಯಾಕ್ಟರ್, ಖತ್ರೋನ್ ಕೆ ಕಿಲಾಡಿ 11 ಹಾಗೂ ಇಂಡಿಯನ್ ಐಡಲ್ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಈಗ ರಾಹುಲ್ ಸೆನ್ಸೆಷನಲ್ ಸ್ಟಾರ್ ಆಗಿರುವುದು ಮಿರರ್ ಸೆಲ್ಫ್ ಹಂಚಿಕೊಂಡ ನಂತರ. ಗಂಭೀರವಾಗಿ ಪೆಟ್ಟು ಬಿದ್ದಿದ್ದರೂ ಡಯಟ್ ಮಾಡಿಕೊಂಡು ಸಣ್ಣಗಾಗಿರುವುದಕ್ಕೆ. ಅಭಿಮಾನಿಗಳ ಒತ್ತಾಯದ ಮೇಲೆ ಫಿಟ್ನೆಸ್ ಗುಟ್ಟು ಬಿಚ್ಚಿಟ್ಟಿದ್ದಾರೆ.
35 ವರ್ಷದ ಗಾಯಕ 'ಪ್ರತಿ ದಿನ 16 ಗಂಟೆಗಳ ಉಪವಾಸ ನನ್ನ ದೇಹವನ್ನು ದಂಡಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಒಂದುವರೆ ತಿಂಗಳುಗಳ ಹಿಂದೆ ರಾಹುಲ್‌ಗೆ ತೀವ್ರವಾಗಿ ಬೆನ್ನಿಗೆ ಪೆಟ್ಟು ಬಿದ್ದಿತ್ತು ಆ ದಿನದಿಂದ ಸಂಪೂರ್ಣ ಚಿಕಿತ್ಸೆಯಲ್ಲಿರುವ ಗಾಯಕ ಜಿಮ್‌ಗೆ ತೆರಳಿ ವರ್ಕೌಟ್ ಮಾಡುವಂತಿರಲಿಲ್ಲ ಹೀಗಾಗಿ intermittent fastingನ ಆಯ್ಕೆ ಮಾಡಿಕೊಂಡಿರುವುದಾಗಿ ರಿವೀಲ್ ಮಾಡಿದ್ದಾರೆ. ಪೆಟ್ಟಿನಿಂದ ಬೆನ್ನು ಮೂಲೆಗಳು ಮಾತ್ರ ವೀಕ್ ಆಗುತ್ತಿರಲಿಲ್ಲ ನಾನು ತೂಕ ಕೂಡ ಹೆಚ್ಚಾಗುತ್ತಿದ್ದೆ. ಕುಳಿತ ಜಾಗದಲ್ಲಿ ಕುಳಿತುಕೊಂಡು ತೂಕ ತೂಕ ಹೆಚ್ಚಾಗುತ್ತಿರುವೆ ಹೀಗಾಗಿ ವರ್ಕೌಟ್ ಬದಲು ಸೇವಿಸುವ ಆಹಾರದಲ್ಲಿ ವ್ಯತ್ಯಾಸ ಮಾಡೋಣ ಎಂದು ತೀರ್ಮಾನಿಸಿದೆ ಎಂದು ರಾಹುಲ್ ಹೇಳಿದ್ದಾರೆ.
ನಟಿ ದಿಶಾ ಪರ್ಮಾರ್-ರಾಹುಲ್ ವೈದ್ಯ ದಂಪತಿಯ ರೊಮ್ಯಾಂಟಿಕ್ ಫೋಟೋ ವೈರಲ್
ರಾಹುಲ್ ದೇಹ intermittent fasting ತೆಗೆದುಕೊಳ್ಳುತ್ತದೆ ಅನೇಕರಿಗೆ ಒಂದು ಹೊತ್ತು ಊಟ ಇಲ್ಲದೆ ಬದುಕುವುದಕ್ಕೆ ಅಗಲ್ಲ.'ಎಲ್ಲರ ದೇಹ intermittent fastingನ ಒಪ್ಪಿಕೊಳ್ಳುವುದಿಲ್ಲ. ನಾನು ಕೂಡ ಇದರ ಬಗ್ಗೆ ತಿಳಿದುಕೊಂಡಿರುವವರನ್ನು ಸಂಪರ್ಕಿಸಿ ಮಾತನಾಡಿ ಆನಂತರ ಆರಂಭಿಸಿರುವುದು. ನಮ್ಮ ದೇಹಕ್ಕೆ ಏನು ಅಗತ್ಯವಿದೆ ಎಂದು ತಿಳಿಸುತ್ತಾರೆ ಅದರ ಪ್ರಕಾರ ಉಪವಾಸ ಮಾಡಬೇಕು' ಎಂದಿದ್ದಾರೆ ರಾಹುಲ್.
Fasting Tips:
ಕಿಚಡಿ ಅಥವಾ ರೋಟಿ ಸೇವಿಸಿ
ಅಕ್ಕಿ ಮತ್ತು ಗೋಧಿಯಂತಹ ಸಾಮಾನ್ಯ ಧಾನ್ಯಗಳನ್ನು ಉಪವಾಸದ ಸಮಯದಲ್ಲಿ ಸೇವಿಸದಿದ್ದರೂ, ಇತರೆ ಧಾನ್ಯಗಳಾದ ಕುತ್ತು, ಸಿಂಗಾರ ಹಿಟ್ಟು, ಸಾಬುದಾನ, ರಾಜಗಿರಾ ಹಿಟ್ಟಿನ ಬಗ್ಗೆ ಗಮನವಿರಲಿ. ಇವುಗಳನ್ನು ಪೂರಿ, ಪಕೋಡ, ವಡಾ ಅಥವಾ ಹಲ್ವಾಗಳಲ್ಲಿ ಬಳಸುವುದಕ್ಕಿಂತ ಹೆಚ್ಚಾಗಿ ಖಿಚಡಿ ಅಥವಾ ರೊಟ್ಟಿಗಳಲ್ಲಿ ಬಳಸಿ.
ಹಣ್ಣಿನ ಚಾಟ್
ಈ ಸಮಯದಲ್ಲಿ ಜಿಡ್ಡಿನ ಆಹಾರಗಳಿಂದ ದೂರವಿರಿ. ಆಲುಗೆಡ್ಡೆಯಂತಹ ಕರಿದ ತಿಂಡಿಗಳು ಬಾಯಲ್ಲಿ ನೀರೂರಿಸಬಹುದು. ಆದರೆ ಕರಿದ ತಿಂಡಿಗಳು ದಿನದ ಕೊನೆಯಲ್ಲಿ ಹೊಟ್ಟೆ ಉಬ್ಬಿದಂತೆ ಗ್ಯಾಸ್ಟಿçಕ್ ಸಮಸ್ಯೆ ಕಾಣಿಸುತ್ತದೆ. ಆಲೂಗೆಡ್ಡೆ ಫ್ರೆöÊಗಳ ಬದಲಿಗೆ ಫ್ರೂಟ್ ಚಾಟ್‌ಗೆ ಆದ್ಯತೆ ನೀಡಿ. ಹಣ್ಣುಗಳನ್ನು ಸೇವಿಸಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್ ಜೋಡಿ..!
ಹಣ್ಣು ಸೇವಿಸಿ
ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗುವ ವಿಟಮಿನ್‌ಗಳು, ಖನಿಜಗಳು, ಮತ್ತು ಫೈಬರ್‌ಗಳು ಸಿಗುತ್ತದೆ. ಅಲ್ಲದೆ ನೈಸರ್ಗಿಕವಾದ ಸಕ್ಕರೆಯನ್ನು ಸಹ ದೇಹಕ್ಕೆ ನೀಡುತ್ತದಲ್ಲದೆ ದಿನವಿಡೀ ಶಕ್ತಿಯುತವಾಗಿರುವಂತೆ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ.
ಸಕ್ಕರೆ ಸೇವನೆ ಬೇಡ
ಹಬ್ಬದ ಸಮಯದಲ್ಲಿ ತಯಾರಿಸುವ ಪಾಯಸ ಅಥವಾ ಹಲ್ವಾಗಳಲ್ಲಿ ಸಕ್ಕರೆಯ ಬಳಕೆ ತಪ್ಪಿಸಿ. ಪದಾರ್ಥದಲ್ಲಿನ ಪರಿಮಳ ಹಾಗೂ ರುಚಿ ಹೆಚ್ಚಿಸಲು ಹೆಚ್ಚು ಏಲಕ್ಕಿ, ಜೇನುತುಪ್ಪ, ಖರ್ಜೂರ, ದಾಲ್ಚಿನ್ನಿ ಮತ್ತು ತಾಜಾ ಹಣ್ಣುಗಳನ್ನು ಸೇರಿಸಲು ಪ್ರಯತ್ನಿಸಿ.
