ನೋಡಿ ಫ್ರೆಂಡ್ಸ್... ರಾತ್ರಿ ನಿದ್ದೆ ಮಾಡಲೂ ಬಿಡಲಿಲ್ಲ... ಸೀತಾರಾಮ ಸಿಹಿಯಿಂದ ಹೀಗೊಂದು ಕಂಪ್ಲೇಂಟ್...
ಸೀತಾರಾಮ ಸೀರಿಯಲ್ನಲ್ಲಿ ಮದುವೆಯ ಸಡಗರ ಜೋರಾಗಿ ನಡೆಯುತ್ತಿರುವ ನಡುವೆಯೇ ಸಿಹಿ ಸೋಷಿಯಲ್ ಮೀಡಿಯಾಕ್ಕೆ ಬಂದು ಹೇಳಿದ್ದೇನು?
ಸೀತಾ ಮತ್ತು ರಾಮ್ ಮದುವೆ ಸಂಭ್ರಮ ಬಲು ಜೋರಾಗಿ ನಡೆದಿದೆ. ಇವರಿಬ್ಬರೂ ಮದುವೆಯಾಗಲಿ ಎಂದು ಆಶಿಸುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಆ ಕ್ಷಣ ಕಣ್ತುಂಬಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇವರಿಬ್ಬರ ಮದುವೆಯನ್ನು ತಡೆಯಲು ವಿಲನ್, ರಾಮ್ ಚಿಕ್ಕಮ್ಮ ಭಾರ್ಗವಿ ಮಾಡಿರುವ ಪ್ಲ್ಯಾನ್ ಎಲ್ಲವೂ ಠುಸ್ ಆಗಿದೆ. ವಿವಾಹ ಪೂರ್ವ ಕಾರ್ಯಕ್ರಮಗಳು ಬಲು ಜೋರಾಗಿಯೇ ನಡೆಯುತ್ತಿದೆ.
ಸೀರಿಯಲ್ನಲ್ಲಿ ಮದುವೆಗಳು ಎಂದರೆ ಇಂದು ರಿಯಲ್ ಮದ್ವೆಗಿಂತಲೂ ಭರ್ಜರಿಯಾಗಿಯೇ ನಡೆಯುತ್ತದೆ. ಅದೇ ಅದ್ಧೂರಿ ಸೆಟ್ಟಿಂಗ್ಗಳನ್ನು ಮಾಡಲಾಗುತ್ತದೆ. ದಿನಪೂರ್ತಿ ಶೂಟಿಂಗ್ ನಡೆಯುತ್ತದೆ. ನಿಜವಾದ ಮದುವೆಯ ದಿನ ಸುಸ್ತಾಗುವಷ್ಟೇ ಈ ರೀಲ್ ಮದ್ವೆಗಳಲ್ಲಿಯೂ ನಟರಿಗೆ ಸುಸ್ತಾಗುವುದು ಇದೆ. ಅದೇ ರೀತಿ ಸೀತಾರಾಮ ಸೀರಿಯಲ್ನಲ್ಲಿ ವಿವಾಹ ಪೂರ್ವ ಶೂಟಿಂಗ್ಗಳನ್ನು ಮುಗಿಸಿ ಸುಸ್ತಾಗಿರುವ ಸಿಹಿ ಮತ್ತು ಸೀತಾ ಶೂಟಿಂಗ್ ಹೇಗಿತ್ತು ಎಂದು ಹೇಳಿದ್ದಾರೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇದ್ದು, ಆಗಾಗ್ಗೆ ಸೀರಿಯಲ್ ಶೂಟಿಂಗ್ಗಳ ಅಪ್ಡೇಟ್ಸ್ ನೀಡುತ್ತಲೇ ಇರುತ್ತಾರೆ. ಇದೀಗ ಸಿಹಿ ಪಾತ್ರಧಾರಿ ರಿತು ಸಿಂಗ್ ಕೂಡ ವೈಷ್ಣವಿ ಜೊತೆ ಕಾಣಿಸಿಕೊಂಡಿದ್ದು, ಶೂಟಿಂಗ್ ಹೇಗಿತ್ತು ಎಂದು ಹೇಳಿದ್ದಾಳೆ.
ಭೂಮಿಕಾ ಕಿಡ್ನ್ಯಾಪ್: ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ ನಾಯಕಿಗೆ ಭೇಷ್ ಎಂದ ಫ್ಯಾನ್ಸ್
ಇಬ್ಬರೂ ಮೆಹಂದಿ ಹಾಕಿಕೊಂಡಿರುವುದನ್ನು ಹೇಳಿದ ಸಿಹಿ, ರಾತ್ರಿಯೆಲ್ಲಾ ನಿದ್ದೆ ಮಾಡಲು ಕೊಟ್ಟಿಲ್ಲ. ಈಗಷ್ಟೇ ಶೂಟಿಂಗ್ ಮುಗಿಯಿತು. ಮತ್ತೆ ನಾಳೆ ಆರು ಗಂಟೆಗೆ ಏಳಬೇಕು ಎಂದು ತನ್ನ ಮುಗ್ಧ ಮಾತುಗಳಿಂದ ಹೇಳಿದ್ದಾಳೆ. ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ರಾಮ್ ಮತ್ತು ಸೀತಾಳ ಮದುವೆಯ ನಂತರ ಇಬ್ಬರನ್ನೂ ಬೇರೆ ಮಾಡುವ ಪ್ಲ್ಯಾನ್ ಮಾಡಿದ್ದಾಳೆ ಭಾರ್ಗವಿ, ನಿಜಕ್ಕೂ ಸೀತಾ ಬದುಕಿನಲ್ಲಿ ಏನಾಗಿತ್ತು ಅನ್ನೋದು ಸೀತಾಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಆದರೆ ಸೀತಾಳ ಗಂಡನ ವಿಷಯ ಇಟ್ಟುಕೊಂಡು ಅವಳನ್ನು ಈ ಮನೆಯಿಂದ ಹೊರಗಡೆ ಹಾಕಬೇಕು ಅಂತ ಭಾರ್ಗವಿ ಎಲ್ಲಾ ಯೋಜನೆ ರೂಪಿಸಿದ್ದಾಳೆ.
ಅದೇ ಇನ್ನೊಂದೆಡೆ ಸಿಂಪಲ್ ಸೀತಾಳ ಹುಟ್ಟುಹಬ್ಬವನ್ನು ಸಿಂಪಲ್ ಆಗಿಯೇ ಆಚರಿಸಿದ್ದಾನೆ ರಾಮ್. ಇದೇ ವೇಳೆ ಇವರಿಬ್ಬರೂ ಮದುವೆಯಾದರೆ, ತನ್ನನ್ನು ಎಲ್ಲಿ ಬೇರೆ ಮಾಡುತ್ತಾರೆಯೋ ಎನ್ನುವ ಆತಂಕವೂ ಸಿಹಿಯನ್ನು ಕಾಡುತ್ತಿದೆ. ಅದೇ ಇನ್ನೊಂದೆಡೆ ಶ್ರೀರಾಮ್ ದೇಸಾಯಿ-ಸೀತಾ ಮದುವೆಯಾದಮೇಲೆ ಆಸ್ತಿ ಹೊಡೆಯಬೇಕು ಅಂತ ಭಾರ್ಗವಿ ಯೋಚಿಸುತ್ತಿದ್ದಾಳೆ. ರಾಮ್ನ ಅಮ್ಮ ವಾಣಿ ಬಂಗಾರ ಎಲ್ಲವೂ ಸೀತಾಗೆ ಸೇರುತ್ತದೆ ಅಂತ ರಾಮ್ ತಾತ ಸೂರ್ಯಪ್ರಕಾಶ್ ಹೇಳಿದ್ದಾನೆ. ಹೀಗಾಗಿ ಭಾರ್ಗವಿ ಈಗ ಎಲ್ಲ ಬಂಗಾರವನ್ನು ಸೀತಾಗೆ ಕೊಟ್ಟು, ಆಮೇಲೆ ಅದನ್ನು ತಾನು ಪಡೆದುಕೊಳ್ಳಬೇಕು ಅಂತ ಪ್ಲ್ಯಾನ್ ಮಾಡಿದ್ದಾಳೆ.
\ಶಾರುಖ್ ಖಾನ್ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್ಡೇಟ್ ಕೊಟ್ಟ ನಟಿ ಜೂಹಿ ಚಾವ್ಲಾ