Asianet Suvarna News Asianet Suvarna News
breaking news image

ಸಿಹಿ ಬಾಳಲ್ಲಿ ಬಿರುಗಾಳಿ: ಮಾತನಾಡುವ ಮುನ್ನ ಅಕ್ಕಪಕ್ಕ ನೋಡಬಾರದೆ? ಅಭಿಮಾನಿಗಳ ಆಕ್ರೋಶ

ತಾನು ಇದ್ದರೆ ಅಮ್ಮನಿಗೆ ತೊಂದರೆಯಾಗುತ್ತದೆ ಎನ್ನುವ ಮಾತನ್ನು ಕೇಳಿಸಿಕೊಂಡಿರೋ ಸಿಹಿ ಆಕೆಯಿಂದ ದೂರ ಹೋಗುವ ಪ್ಲ್ಯಾನ್​ ಮಾಡುತ್ತಿದ್ದಾಳೆ. ಅಭಿಮಾನಿಗಳು ಹೇಳ್ತಿರೋದೇನು?
 

Sihi is planning to go away from Seetama as she heras mother in trouble if she stays in Seeta Rama suc
Author
First Published Apr 27, 2024, 1:15 PM IST

ರಾಮ್​ಗಿಂತ ಬೇರೊಬ್ಬ ಗಂಡ ನಿನಗೆ ಸಿಗುವುದಿಲ್ಲ. ರಾಮ್​ಗೂ ನೀನೇ ಸರಿಯಾದ ಪತ್ನಿ. ಆದರೆ ಸಿಹಿಯ ಕಾರಣದಿಂದ ಅವರು ನಿನ್ನ ಮದುವೆಗೆ ಒಪ್ಪದಿದ್ದರೆ? ಎಂದು ಸೀತಾಳಿಗೆ ಹೇಳುವಾಗಲೇ ಸಿಹಿ ಇದನ್ನೆಲ್ಲಾ ಕೇಳಿಸಿಕೊಂಡು ಬಿಟ್ಟಿದ್ದಾಳೆ. ಅವಳು ಅಲ್ಲಿಯೇ ಇರುವುದನ್ನು ಗಮನಿಸಿದೇ ಈ ಮಾತುಕತೆ ನಡೆದಿದೆ. ದೇಸಾಯಿ ಅವರಿಗೆ ತನಗೆ ಸಿಹಿ ಎನ್ನುವ ಮಗಳಿದ್ದಾಳೆ ಎನ್ನುವ ಸತ್ಯ ಗೊತ್ತಿಲ್ಲ ಎಂದು ಸೀತಾ ಹೇಳಿದಾಗ, ಅಯ್ಯೋ ಹಾಗಿದ್ದರೆ ಸೀತಾಳ ಬಗ್ಗೆ ಗೊತ್ತಾದರೆ ಒಪ್ಪಿಕೊಳ್ಳದಿದ್ದರೆ ಏನು ಮಾಡುವುದು ಎಂದು ಮಾತುಕತೆ ನಡೆದಿದೆ. ಇದನ್ನು ಸಿಹಿ ಕೇಳಿಸಿಕೊಂಡಿದ್ದಾಳೆ. ತನ್ನಿಂದ ಸೀತಮ್ಮನ ಬದುಕಿನಲ್ಲಿ ಖುಷಿ ಇರುವುದಿಲ್ಲ ಎಂದು ಅಂದುಕೊಂಡಿರೋ ಸಿಹಿ ಹೇಗಾದರೂ ಮಾಡಿ ನಾನು ಒಬ್ಬಳೇ ಇರುವುದನ್ನು ಕಲಿಯಬೇಕು, ಸೀತಮ್ಮನ ಜೀವನದಿಂದ ದೂರವಾಗಬೇಕು. ಇಲ್ಲದಿದ್ದರೆ ಆಕೆಗೆ ತನ್ನಿಂದ ನೆಮ್ಮದಿ ಇರುವುದಿಲ್ಲ ಎಂದು ಸಿಹಿ ಅಂದುಕೊಂಡಿದ್ದಾಳೆ.

ಇಲ್ಲೊಂದು ವಿಷಯ ಗಮನಿಸಲೇಬೇಕು. ಅದೇನೆಂದರೆ, ಇದು ಸೀರಿಯಲ್​ ಆಗಿರಬಹುದು. ಆದರೆ ಇಂಥ ಸೂಕ್ಷ್ಮ ವಿಷಯಗಳು ಬಂದಾಗ, ಅದರಲ್ಲಿಯೂ ಮಕ್ಕಳ ಬಗ್ಗೆ ಮಾತನಾಡುತ್ತಿರುವಾಗ ಮನೆಯವರೆಲ್ಲರೂ ಅಕ್ಕಪಕ್ಕದಲ್ಲಿ ಮಕ್ಕಳು ಇದ್ದಾರೆಯೇ ಎನ್ನುವುದನ್ನು ಗಮನಿಸಿಬೇಕು, ಇಲ್ಲದಿದ್ದರೆ ಆ ಮಕ್ಕಳ ಮನಸ್ಸಿನ ಮೇಲೆ ಅದೆಂಥ ಅಗಾಧ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಯಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಸಿಹಿಯಂಥ ಮಕ್ಕಳಿಗೇನೂ ಇಂದು ಕೊರತೆ ಇಲ್ಲ. ವಯಸ್ಸಿಗಿಂತಲೂ ಬುದ್ಧಿ ಹೆಚ್ಚು ಬೆಳೆದಿರುತ್ತದೆ. ಇಂಥ ಸೂಕ್ಷ್ಮ ವಿಷಯಗಳು ಅವರ ಮನಸ್ಸಿನಲ್ಲಿ ನಾಟಿ ಬಿಟ್ಟರೆ, ಅವರು ಎಂದಿಗೂ ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಬದಲಿಗೆ, ಮನಸ್ಸಿನಲ್ಲಿಯೇ ಇಟ್ಟು ಕೊರಗುತ್ತಾರೆ. ತನ್ನಿಂದ ಮನೆಯವರಿಗೆ ಕಷ್ಟ ಆಗುತ್ತಿದೆ ಎಂದು ತಿಳಿದರೆ ಆ ಪುಟ್ಟ ಮನಸ್ಸಿಗೆ ಅದೆಂಥ ನೋವು ಆಗಬಹುದು ಎನ್ನುವುದನ್ನು ದೊಡ್ಡವರು ಗಮನಿಸಬೇಕಾದ ಅಗತ್ಯವಿದೆ ಎನ್ನುವುದು ಅಭಿಮಾನಿಗಳ ಮಾತು. 

ಸಿಹಿಯ ಮುದ್ದು ಮುದ್ದು ಸ್ಟೆಪ್​ಗೆ ಅಭಿಮಾನಿಗಳು ಫಿದಾ: ಆ್ಯಕ್ಟಿಂಗ್​ನಲ್ಲಿ ನಿನಗೆ ನೀನೇ ಸಾಟಿ ಎಂದ ಫ್ಯಾನ್ಸ್​

ಇನ್ನು ಸೀತಾರಾಮ ಸೀರಿಯಲ್​ಗೆ ಬರುವುದಾದರೆ, ಕೊನೆಗೂ ಸೀತಾಳ ಬಾಳಲ್ಲಿ ಆ ದಿನ ಬಂದೇ ಬಿಟ್ಟಿದೆ. ಯಾವುದನ್ನು ಮುಚ್ಚಿಡಲು ಭಾರ್ಗವಿ ಸೀತಾಳಿಗೆ ಫೋರ್ಸ್​ ಮಾಡಿ, ಹಾಗೆ ಮಾಡುವಲ್ಲಿ ಸಕ್ಸಸ್​ ಆಗಿದ್ದಳೋ ಆ ಸತ್ಯ ಕೊನೆಗೂ ಬಂದು ಬಿಟ್ಟಿದೆ. ತಾತ ದೇಸಾಯಿಗೆ ಸೀತಾಳಿಗೆ ಓರ್ವ ಮಗಳು ಇದ್ದಾಳೆ ಎನ್ನುವ ಸತ್ಯ ತಿಳಿದುಬಂದಿದೆ. ತಾತನ ಆರೋಗ್ಯದ ಬಗ್ಗೆ ಬ್ಲ್ಯಾಕ್​ಮೇಲ್​  ಮಾಡಿ ಸೀತಾಳಿಂದ ಈ ಸತ್ಯ ಹೇಳದಂತೆ ಯಶಸ್ವಿಯಾಗಿದ್ದ ಭಾರ್ಗವಿಗೆ ಈಗ ಸಂಕಟವೂ ಹೌದು, ಖುಷಿಯೂ ಹೌದು. ಈ ವಿಷಯವನ್ನು ನನ್ನಿಂದ ಯಾಕೆ ಮುಚ್ಚಿಟ್ಟಿದ್ದು ಎಂದು ಭಾರ್ಗವಿಗೆ ತಾತ ಕೇಳಿದ್ದಾರೆ. ಈಗ ಭಾರ್ಗವಿಗೆ ಸೀತಾಳ ಮೇಲೆ ಗೂಬೆ ಕುಳ್ಳರಿಸುವುದು ದೊಡ್ಡ ವಿಷಯವೇ ಅಲ್ಲ. ಆದರೆ ಇದನ್ನು ಎಲ್ಲರ ಎದುರು ಅವಳು ಹೇಗೆ ನಿಭಾಯಿಸುತ್ತಾಳೆ, ಯಾವ ರೀತಿಯಲ್ಲಿ ಸೀತಾಳದ್ದೇ ತಪ್ಪು ಎನ್ನುತ್ತಾಳೆ ಎನ್ನುವುದನ್ನು ನೋಡಬೇಕಿದೆ.

ಅಷ್ಟಕ್ಕೂ, ತನಗೆ ಸಿಹಿ ಎನ್ನುವ ಮಗಳು ಇದ್ದಾಳೆ ಎನ್ನುವ ಸತ್ಯವನ್ನು ತಾತನ ಎದುರು ಹೇಳಲು ಹೋದಾಗ ಅದಕ್ಕೆ ಭಾರ್ಗವಿ ಅಡ್ಡಗಾಲು ಹಾಕಿದ್ದಳು. ಅದರೆ ತಾತ ಮತ್ತು ಸಿಹಿ ನಡುವೆ ಇದಾಗಲೇ ಫೋನ್​ನಲ್ಲಿ ಮಾತುಕತೆ ನಡೆದಿತ್ತು. ಸಿಹಿ ತಾತನನ್ನು ಮನೆಗೆ ಕರೆದಿದ್ದಳು. ಅಲ್ಲಿ ಬಂದ ತಾತನನ್ನು ಸಿಹಿ ಮನೆಗೆ ಕರೆದುಕೊಂಡು ಹೋಗಿ ಸೀತಮ್ಮನ ಮನೆ ಎಂದಿದ್ದಾಳೆ. ನನಗೆ ಸೀತಮ್ಮನ ಮನೆ ಬೇಡ, ನಿನ್ನ ಮನೆ ಬೇಕು ಎಂದಿದ್ದಾನೆ ತಾತ. ಆಗ ಸಿಹಿ ಇದು ಸೀತಮ್ಮನ ಮನೆಯೇ. ನಾನು ಸೀತಮ್ಮನ ಮಗಳು ಎಂದಿದ್ದಾಳೆ. ಈ ವಿಷಯ ತಾತನಿಗೆ ಮುಂಚೆನೇ ಗೊತ್ತಿತ್ತಾ ಅಥವಾ ಮುಚ್ಚಿಟ್ಟ ಗುಟ್ಟು ರಟ್ಟಾಗಿ ಹೋಯ್ತಾ ಎನ್ನುವುದು   ಕುತೂಹಲವಾಗಿತ್ತು. ಇದೀಗ ವಿಷಯ ಬೆಳಕಿಗೆ ಬಂದಿದೆ. ಸೀತಾ ಈ ವಿಷಯವನ್ನು ಮೊದಲೇ ತಾತನಿಗೆ ತಿಳಿಸಿದ್ದಳೋ, ಇಲ್ಲವೋ ಎನ್ನುವ ಸತ್ಯ ಇನ್ನೂ ಬಹಿರಂಗಗೊಳ್ಳಲಿಲ್ಲ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಸೀತಾಳಿಗೆ ಅಗ್ನಿ ಪರೀಕ್ಷೆ ಶುರುವಾಗಿದೆ. 

ಟವಲಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ ಅಲ್ವಾ? ಭೂಮಿಕಾಗೊಂದು ದೊಡ್ಡ ಸಲಾಂ ಅಂತಿದ್ದಾರೆ ಫ್ಯಾನ್ಸ್​
 

Latest Videos
Follow Us:
Download App:
  • android
  • ios