ಸೀತಾರಾಮದಲ್ಲಿ ಸಿಹಿ ಅಪಘಾತದಲ್ಲಿ ಸತ್ತೇ ಹೋದಳು ಎಂದುಕೊಳ್ಳುವಷ್ಟರಲ್ಲಿಯೇ ಕಿಡ್ನ್ಯಾಪ್​ ಆಗಿದ್ದಾಳೆ. ಸೀತಾರಾಮದಲ್ಲಿ ಇದೇನಿದು ಟ್ವಿಸ್ಟ್​? 

ಸೀತಾ ಸಿಹಿಯನ್ನು ಕರೆದುಕೊಂಡು ಬರುವ ಸಮಯದಲ್ಲಿ ಅಪಘಾತದಲ್ಲಿ ಸಿಹಿ ಸತ್ತೇ ಹೋದಳು ಎನ್ನುವ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿತ್ತು. ಬಿಳಿ ಬಟ್ಟೆ ಹಾಕಿಕೊಂಡು ಬಂದ ಸಿಹಿಗೆ ಕಾರು ಗುದ್ದಿತ್ತು. ಅಪಘಾತದಲ್ಲಿ ಸಿಹಿ ಸತ್ತು ಹೋದಂತೆ ತೋರಿಸಲಾಗಿತ್ತು. ಪಕ್ಕದಲ್ಲಿಯೇ ಸಿಹಿಯ ಆತ್ಮ ಬಂದು ಸೀತಮ್ಮಾ ಎಂದು ಕರೆದಂತೆ ತೋರಿಸಲಾಗಿತ್ತು. ಆದರೆ ಇಂದು ಬೇರೆ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಿಹಿಯನ್ನು ಕರೆದುಕೊಂಡು ಸೀತಾ ಬರುವ ಸಂದರ್ಭದಲ್ಲಿ ರುದ್ರಪ್ರತಾಪ ಆ ಕಾರನ್ನು ಅಡ್ಡಗಟ್ಟಿದ್ದಾನೆ. ಸಿಹಿಯನ್ನು ಅಲ್ಲಿಂದ ಕರೆದುಕೊಂಡು ಹೋಗಲು ಟ್ರೈ ಮಾಡಿದ್ದಾನೆ. ಆ ಸಮಯದಲ್ಲಿ ಸೀತಾ ಅಲ್ಲಿಯೇ ಇರುವ ಕೋಲಿನಿಂದ ರುದ್ರಪ್ರತಾಪನ ತಲೆಗೆ ಹೊಡೆದಿದ್ದಾಳೆ. ಆತ ಕೂಡ ಸೀತಾಳನ್ನು ದೂಕಿದ್ದಾನೆ. ಇಬ್ಬರೂ ಎಚ್ಚರ ತಪ್ಪಿ ಬಿದ್ದಿದ್ದಾರೆ. ಅಷ್ಟರಲ್ಲಿಯೇ ಮಹಿಳೆಯೊಬ್ಬಳು ಅಲ್ಲಿಗೆ ಬಂದು ಕಾರಿನಲ್ಲಿರುವ ಸಿಹಿಯನ್ನು ಅಪಹರಿಸಿಕೊಂಡು ಹೋಗಿದ್ದಾಳೆ.

ಆ ಮಹಿಳೆ ಯಾರು ಎಂದು ತೋರಿಸಿಲ್ಲ. ಆದರೆ ಇವತ್ತಿನ ಪ್ರೊಮೋ ನೋಡಿ ನೆಟ್ಟಿಗರು ಫುಲ್​ ಕನ್​ಫ್ಯೂಸ್​ ಆಗಿದ್ದಾರೆ. ಸಿಹಿ ಸತ್ತದ್ದು ಸೀತಾಳ ಕನಸೆ? ಈಗ ಅಪಹರಿಸಿಕೊಂಡು ಹೋಗಿರುವ ಮಹಿಳೆ ಯಾರು? ಎಷ್ಟು ಸಲ ಎಂದು ಸಿಹಿಯನ್ನು ಕಿಡ್ನಾಪ್​ ಮಾಡಿಸುತ್ತೀರಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬರೀ ಕೊಲೆ, ಸಾವು, ಕಿಡ್ನಾಪ್​ ಇದನ್ನೇ ಸೀರಿಯಲ್​ಗಳಲ್ಲಿ ತೋರಿಸುತ್ತಿರುವುದಕ್ಕೂ ಸಾಕಷ್ಟು ವಿರೋಧ ಕಮೆಂಟ್ಸ್​ ಬರುತ್ತಿವೆ. ಈಗ ಬಹುಶಃ ಶಾಲಿನಿಯೇ ಮಗುವನ್ನು ಕರೆದುಕೊಂಡು ಹೋಗಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಇದು ಚಾಂದನಿಯ ಕೆಲಸ ಎನ್ನುತ್ತಿದ್ದಾರೆ. ಈ ಸೀರಿಯಲ್​ಗೆ ಸೀತಾರಾಮ ಬೇಡ, ಸಿಹಿ ಕಿಡ್ನಾಪ್​ ಕಥೆ ಎಂದು ಹೆಸರು ಇಡಬೇಕು ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.

ಅವ್ರು ಕೂಡ ಕೆಟ್ಟ ಪದ ಬಳಸಿದ್ರು... ಆದ್ರೆ ನಾನೊಬ್ಬನೇ ಟಾರ್ಗೆಟ್​ ಆಗಿದ್ಯಾಕೊ? ನೋವು ತೋಡಿಕೊಂಡ ಲಾಯರ್​ ಜಗದೀಶ್​

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಒಂದು ಹಂತಕ್ಕೆ ಸೀರಿಯಲ್​ ಬಂದಾಗ, ಅದರ ಟಿಆರ್​ಪಿ ನೋಡಿ ಅದನ್ನು ಚ್ಯೂಯಿಂಗ್ ಗಮ್​ನಂತೆ ಎಳೆಯುವುದು ಹೊಸ ವಿಷಯವೇನಲ್ಲ. ಇದೇ ಕಾರಣಕ್ಕೆ ಒಂದು ಸೀರಿಯಲ್​ ಐದಾರು ವರ್ಷಗಳಿಂದ ಹಿಡಿದು 8-10 ವರ್ಷ ಎಳೆಯುವುದೂ ಉಂಟು. ಆರಂಭದಲ್ಲಿ ಒಂದಿಷ್ಟು ಕುತೂಹಲ ಎನಿಸಿಕೊಳ್ಳುವ ಸೀರಿಯಲ್​ಗಳು ಕೊನೆ ಕೊನೆಯಲ್ಲಿ ಏನೇನೋ ಕಥೆಗಳನ್ನು ತುರುಕುವ ಮೂಲಕ ಸಪ್ಪೆಯಾಗಿ ಕೊನೆಗೆ ದಿಢೀರ್​ ಎಂದು ಹೇಗೇಗೋ ಮುಗಿಸುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಜಾಹೀರಾತು, ಟಿಆರ್​ಪಿ ರೇಟ್​ ಬರುತ್ತಿರುವ ಸಂದರ್ಭದಲ್ಲಿ ಸೀರಿಯಲ್​ಗಳನ್ನು ಎಳೆಯುವುದು ಅನಿವಾರ್ಯವೂ ಆಗಿರುತ್ತದೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್​ಗಳು ಆರಂಭದಲ್ಲಿ ಇರಿಸಿಕೊಂಡಿರುವ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದೇ ಇಲ್ಲ. 

 ಮುಂದು ಮಾಡಿಕೊಂಡು ಸೀರಿಯಲ್​ ಅನ್ನು ಅಡ್ಡಾದಿಡ್ಡಿ ಕೊಂಡೊಯ್ಯಲಾಗುತ್ತಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ ಸುರಿಮಳೆ ಆಗ್ತಿದೆ. ಈ ಹಿಂದೆ ಮೂರು ಬಾರಿ ಸಿಹಿಯನ್ನು ಕಿಡ್​ನ್ಯಾಪ್​ ಮಾಡಿಸಲಾಗಿದೆ. ಆಗ ಭಾರ್ಗವಿ ಮತ್ತು ರುದ್ರಪ್ರತಾಪ್​ ಈ ಕೆಲಸ ಮಾಡಿಸಿದ್ದರು. ಇನ್ನೇನು ಇಬ್ಬರೂ ಒಂದಾಗುತ್ತಿದ್ದಾರೆ ಎನ್ನುವಾಗಲೇ, ಸಿಹಿಯನ್ನು ರಾಮ್​ ಎತ್ತಿಕೊಂಡ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಂದು ರಾಮ್​ನ ಕೈಯನ್ನು ಚಾಕುವಿನಿಂದ ಇರಿದು ಹೋಗಿದ್ದ. ನಂತರ ಬೈಕ್​ ಮೇಲೆ ಹತ್ತಿಕೊಂಡು ಹೋದ. ಚಾಕುವಿನ ಇರಿತಕ್ಕೆ ರಾಮ್​ ವಿಲವಿಲ ಒದ್ದಾಡುತ್ತಿದ್ದರೂ, ಹೆಗಲ ಮೇಲಿದ್ದ ಸಿಹಿಯನ್ನು ಬೀಳಲು ಕೊಡಲಿಲ್ಲ. ಇದಕ್ಕೂ ಮುನ್ನ, ಸೀತಾ ಮತ್ತು ಸಿಹಿ ಹೋಗುತ್ತಿರುವ ಹೊತ್ತಿಗೆ ಓರ್ವ ಆಗಂತುಕ ಬೈಕ್​ನಲ್ಲಿ ಬಂದು ಗಾಬರಿ ಹುಟ್ಟಿಸಿದ್ದ. ಸಿಹಿಯ ಅಪಹರಣ ಮಾಡಿಕೊಂಡು ಬೈಕ್​ನಲ್ಲಿ ಹೋಗಲಾಗಿತ್ತು. ಅದಕ್ಕೂ ಮುನ್ನವೂ ಸಿಹಿಯನ್ನು ಅಪಹರಿಸಲಾಗಿತ್ತು. ಈಗ ಮತ್ತೊಮ್ಮೆ ಅವಳು ಕಿಡ್​ನ್ಯಾಪ್​ ಆಗಿದ್ದಾಳೆ. ಇದೇನಿದು ಎಂಬ ಗೊಂದಲದಲ್ಲಿದ್ದಾರೆ ವೀಕ್ಷಕರು. 

ಅಮೃತಧಾರೆ ಗೌತಮ್​ ದಿವಾನ್​ ರಿಯಲ್​ ಮನೆ 'ಮ Na' ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ...