ಎಂದೂ ಮರೆಯಲಾಗದ ಬಿಗ್ ಬಾಸ್‌ ಜೋಡಿ ಸಿದ್ಧು ಮತ್ತು ಶೆಹನಾಜ್. ಪದೇ ಪದೇ ಟ್ರೋಲ್‌ ಮಾಡುವವರಿಗೆ ಉತ್ತರ ಕೊಟ್ಟ ನಟಿ..... 

ಹಿಂದಿ ಬಿಗ್ ಬಾಸ್ ಸೀಸನ್ 13ರ ರನ್ನರ್ ಅಪ್ ಶೆಹನಾಜ್ ಗಿಲ್ ಮತ್ತು ವಿನ್ನರ್ ಸಿದ್ಧಾರ್ಥ್‌ ಶುಕ್ಲಾ ಕಾಂಬಿನೇಷನ್‌, ಅವರಿಬ್ಬರ ನಡುವಿದ್ದ ಸ್ನೇಹ ಮತ್ತು ಪ್ರೀತಿ ಬಗ್ಗೆ ನೀವು 100 ದಿನಗಳ ಕಾಲ ನಾನ್‌ ಸ್ಟಾಪ್‌ ನೀಡಿದ್ದೀರಿ. ಸಿದ್ಧಾರ್ಥ್‌ ಎಷ್ಟೇ ರಫ್‌ ಆಂಡ್‌ ಟಫ್ ಆಗಿದ್ದರೂ ಶೆಹನಾಜ್ ಗಿಲ್ ಮಗು ಮನಸ್ಸಿಗೆ ಸೋಲುತ್ತಿದ್ದ. ರಿಯಾಲಿಟಿ ಶೋ ನಂತರ ಇಬ್ಬರು ಕುಟುಂಬಸ್ಥರಿಗೆ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು, ಒಪ್ಪಿಗೆ ಪಡೆದು ಮದುವೆ ಆಗುವ ಪ್ಲ್ಯಾನ್ ಕೂಡ ಮಾಡಿದ್ದರು. ಆದರೆ ವಿಧ ಆಟ ಬೇರೆಯೇ ಆಗಿತ್ತು. 2021ರ ಸೆಪ್ಟೆಂಬರ್ 2ರಂದು ಸಿದ್ಧಾರ್ಥ್ ಹೃದಯಾಘಾತದಿಂದ ಕೊನೆ ಉಸಿರೆಳೆದರು. ಅಂದೇ ಶೆಹನಾಜ್ ಗಿಲ್ ಅರ್ಧ ಜೀವ ಕುಸಿದುಬಿಟ್ಟಿತ್ತು. 

ಅನೇಕ ತಿಂಗಳುಗಳ ಕಾಲ ಶೆಹನಾಜ್ ಗಿಲ್ ಯಾವ ಮಾಧ್ಯಗಳಿಗೂ ಪ್ರತಿಕ್ರಿಯೆ ನೀಡಲಿಲ್ಲ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಆದರೆ ಕಡಿಮೆ ಅವಧಿಯಲ್ಲಿ ತುಂಬಾನೇ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿದರು. ಬಬ್ಲಿ ಹುಡುಗಿ ಆಗಿದ್ದ ಶೆಹನಾಜ್ ಗಿಲ್ ಫಿಟ್ ಆಂಡ್ ಫೈನ್‌ ಆಗಿ ಕಾಣಿಸಿಕೊಂಡು. ಶೆಹನಾಜ್ ಗಿಲ್ ಬದಲಾವಣೆ ನೋಡಿ ಅನೇಕರು ಟ್ರೋಲ್ ಮಾಡಲು ಶುರು ಮಾಡಿದ್ದರು. ಬಾಯ್‌ಫ್ರೆಂಡ್‌ ಸತ್ತು ವರ್ಷ ಆಗಿಲ್ಲ ಆಗಲೇ ನೀನು ಜೀವನ ಎಂಜಾಯ್ ಮಾಡುತ್ತಿರುವೆ ಎಂದರು. ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ಸುಮ್ಮನಿದ ಶೆಹನಾಜ್ ಗಿಲ್, ಶಿಲ್ಪಾ ಶೆಟ್ಟಿ ಟಾಕ್‌ ಶೋನಲ್ಲಿ ಮಾತನಾಡಿದ್ದಾರೆ. ಟ್ರೋಲಿಗರಿಗೆ ಉತ್ತರ ಕೊಟ್ಟಿದ್ದಾರೆ. 

'ನನಗೆ ನಗುವುದಕ್ಕೆ ಅವಕಾಶ ಸಿಕ್ಕರೆ ನಾನು ಸದಾ ನಗುತ್ತಿರುವೆ. ಸದಾ ಖುಷಿಯಾಗಿರುವೆ. ದೀಪಾವಳಿ ಆಚರಿಸುವುದು ನನಗೆ ಇಷ್ಟ, ದೀಪಾವಳಿ ಹಬ್ಬ ಮಾಡುವೆ. ಏಕೆಂದರೆ ಜೀವನದಲ್ಲಿ ನಾನು ಸಂತೋಷವಾಗಿರಬೇಕು. ಇದರ ಬಗ್ಗೆ ನಾನು ಎಲ್ಲಿಯೂ ಮಾತನಾಡುತ್ತಿರಲಿಲ್ಲ ಆದರೆ ನೀವು ಕೇಳಿರುವುದಕ್ಕೆ ಹೇಳುತ್ತಿರುವುದು. ನನ್ನ ಸಂತೋಷದ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಾನು ಉತ್ತರ ಕೊಡುವುದಿಲ್ಲ ಅವರ ಮೆಸೇಜ್‌ಗೆ ರಿಪ್ಲೈ ಮಾಡುವುದಿಲ್ಲ. ಯಾಕೆ ನಾನು ಎಲ್ಲರಿಗೂ ಪದೇ ಪದೇ ನನ್ನ ಸಿದ್ಧಾರ್ಥ್‌ ಸಂಬಂಧದ ಬಗ್ಗೆ ಯಾಕೆ ಹೇಳಬೇಕು? ಯಾವ ವಿಚಾರಕ್ಕೆ ನಾವು ಕನೆಕ್ಟ್ ಆಗಿದ್ದು ಯಾವ ರೀತಿ ರಿಲೇಶ್‌ಶಿಪ್‌ ನಡೆಸಿಕೊಂಡು ಬಂದೆವು ಇದೆಲ್ಲಾ ಯಾರಿಗೆ ಯಾಕೆ ಹೇಳಬೇಕು. ನನಗೆ ಅವರು ಎಷ್ಟು ಮುಖ್ಯನೋ ನಾನು ಕೂಡ ಅವರಿಗೆ ಅಷ್ಟೇ ಮುಖ್ಯವಾಗಿದ್ದೆ. ಸಿದ್ಧಾರ್ಥ್‌ ನನಗೆ ಎಂದೂ ನೀನು ನಗಬೇಡ ಎಂದು ಹೇಳಿಲ್ಲ. ನಾನು ಜೀವನದಲ್ಲಿ ಸದಾ ನಗುತ್ತಿರಬೇಕು ಎಂದು ಸಿದ್ಧಾರ್ಥ್‌ ಹೇಳುತ್ತಿದ್ದರು ಹೀಗಾಗಿ ನಾನು ಸದಾ ನಗುತ್ತಿರುವೆ. ಜೀವನ ಎಂಜಾಯ್ ಮಾಡ್ತೀನಿ. ನಾನು ಕೆಲಸ ಕೂಡ ಮಾಡ್ತೀನಿ ಏಕೆಂದರೆ ನನ್ನ ಜೀವನದ ಪಯಣ ಇನ್ನೂ ಇದೆ' ಎಂದು ಶೆಹನಾಜ್ ಗಿಲ್ ಹೇಳಿದ್ದಾರೆ. 

BB15: ವೇದಿಕೆ ಮೇಲೆ ಕಣ್ಣೀರಿಟ್ಟ ಸಲ್ಮಾನ್ ಖಾನ್‌, ಶೆಹನಾಜ್ ಗಿಲ್‌ ವಿಡಿಯೋ ವೈರಲ್!

ಶೆಹನಾಜ್ ಗಿಲ್ ಸಣ್ಣ ಆಗಲು ಕಾರಣ:

'ನಾನು ಯಾವುದೇ ರೀತಿ ಡಯಟ್ ಮಾಡುವುದಿಲ್ಲ. ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುತ್ತೇನೆ ಆದರೆ ಕಡಿಮೆ ಪ್ರಮಾಣದಲ್ಲಿ. ಸೆಲೆಬ್ರಿಟಿಗಳ ರೀತಿ ವರ್ಕೌಟ್ ಮಾಡಲು ಹೊರ ಹೋಗುವುದಿಲ್ಲ ಅಥವಾ ಪರ್ಸನಲ್ ಟ್ರೈನರ್‌ ಇಲ್ಲ. ನಾನು 70% ಸೇವಿಸುವ ಆಹಾರದ ಬಗ್ಗೆ ಗಮನ ಕೊಡುತ್ತೇನೆ. ಆರಂಭದಲ್ಲಿ ಎರಡು ಮೂರು ಲೀಟರ್ ನೀರು ಕುಡಿಯುವುದಕ್ಕೆ ಬೇಸರವಿತ್ತು ರುಚಿ ಇರುವುದಿಲ್ಲ ಎಂದು ಅದಿಕ್ಕೆ ಸೌತೆಕಾಯಿ, ಸ್ಟ್ರಾಬೆರಿ ಹಾಕುತ್ತಿದ್ದೆ. ತ್ವಚೆಗೂ ಕೂಡ ನೀರು ಮುಖ್ಯ' ಎಂದಿದ್ದಾರೆ ಶೆಹನಾಜ್ ಗಿಲ್. 

'ವರ್ಕೌಟ್ ಮಾಡುವುದು ನನಗೆ ಖುಷಿ ಕೊಡುತ್ತಿದೆ ಇದರಿಂದ ನನ್ನ ಮೈಂಡ್‌ ಕೂಡ stable ಆಗಿದೆ. ಬಿಗ್ ಬಾಸ್ ನಂತರ ನಾನು ಸಣ್ಣ ಆಗಬೇಕು ಎಂದು ಪ್ಲ್ಯಾನ್ ಮಾಡಿದ್ದು. ತುಂಬಾ ಜನರು ನನ್ನನ್ನು ಪ್ರೀತಿಸುತ್ತಾರೆ ನನ್ನ ಜೀವನದಲ್ಲೂ ಬದಲಾವಣೆಗೆ ಜಾಗವಿದೆ ಎಂದು ತೋರಿಸಬೇಕಿತ್ತ. ನಮ್ಮದು ಗ್ಲಾಮರ್ ಜೀವನ ಹೀಗಾಗಿ ಗ್ಲಾಮರ್ ಆಗಿ ಉಡುಪು ಧರಿಸು ಶುರು ಮಾಡಿದೆ ಡಿಫರೆಂಟ್ ಲುಕ್ ಮತ್ತು ಮೇಕಪ್ ಟ್ರೈ ಮಾಡಬೇಕು ಎಂದು ನಿರ್ಧಾರ ಮಾಡಿಕೊಂಡೆ' ಎಂದು ಶೆಹನಾಜ್ ಗಿಲ್ ಹೇಳಿದ್ದಾರೆ.