‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಕೊನೆಗೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾಳೆ. ಈಗ ಅವಳು ಕಟು ನಿರ್ಧಾರ ತಗೊಂಡಿದ್ದಾಳೆ, ಯಾಕೆ?
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಶಾರ್ವರಿ ಕುತಂತ್ರವನ್ನೂ ಮೀರಿ, ಸಾವು-ಬದುಕಿನ ನಡುವೆ ಹೋರಾಟ ಮಾಡಿ ತುಳಸಿ ಅಂತೂ ಮನೆಗೆ ಬಂದಳು. ಹೃದಯಬಡಿತ ನಿಂತಿತು ಅಂತ ವೈದ್ಯರು ತುಳಸಿಯನ್ನು ಮನೆಗೆ ಕಳಿಸಿದರು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಅಂತ ಆಂಬುಲೆನ್ಸ್‌ನಲ್ಲಿ ತುಳಸಿಯನ್ನು ಕರೆದುಕೊಂಡು ಹೋಗುವಾಗ, ಅದೃಷ್ಟವೆಂಬಂತೆ ಪವಾಡವೇ ನಡೆಯಿತು. ತುಳಸಿ ಬದುಕಿದಳು.
ಜೀವಂತವಾಗಿ ಉಳಿದುಕೊಂಡ ತುಳಸಿ!
ನನ್ನ ತುಳಸಿಗೆ ಏನೂ ಆಗೋದಿಲ್ಲ, ತುಳಸಿ ಹೃದಯಬಡಿತ ನನಗೆ ಗೊತ್ತಾಗುತ್ತದೆ, ಅವರಿಲ್ಲದೆ ನಾನು ಬದುಕೋದಿಲ್ಲ ಅಂತ ಮಾಧವ್ ನಂಬಿಕೆ ಇಟ್ಟುಕೊಂಡಿದ್ದನು. ಆ ನಂಬಿಕೆ ನಿಜವಾಗಿದೆ. ನಮ್ಮ ಮನೆ ಬೆಳಕು ಆರಲಿಲ್ಲ, ನಮ್ಮಮ್ಮ ಉಳಿದುಕೊಂಡಳು ಅಂತ ಮಕ್ಕಳೆಲ್ಲರೂ ಖುಷಿಪಡ್ತಿದ್ದಾರೆ. ಮಗುವಿನ ಮುಖ ನೋಡಿದ ತುಳಸಿ ಕೊನೆಗೂ ಜೀವಂತವಾಗಿ ಮನೆಗೆ ಬಂದಿದ್ದಾಳೆ.
ಅಪ್ಪ ಎದುರು ಬಂದ್ರೆ ಅಳು ಬರುತ್ತೆ; ಮಿಸ್ ಡೀವಾ ಸ್ಪರ್ಧಿಯಲ್ಲಿ ಕೇಳಿದ ಪ್ರಶ್ನೆಗೆ KGF ನಟಿ ಕೊಟ ಉತ್ತರ ವೈರಲ್
ಪೂರ್ಣಿ ಕೈಗೆ ಮಗು ಕೊಟ್ಟ ತುಳಸಿ!
ಅಮ್ಮ ಬದುಕಿಬಂದಳು, ಮನೆಗೆ ಪುಟ್ಟ ಕಂದಮ್ಮ ಬಂತು ಎಂದು ಎಲ್ಲರೂ ಖುಷಿಪಡ್ತಿದ್ದಾರೆ. ತುಳಸಿ ಗರ್ಭಿಣಿಯಾದಾಗ ಯಾರು ಹೇಗೆ ಸ್ವೀಕಾರ ಮಾಡ್ತಾರೆ ಎಂಬ ಭಯ ಅವಳಿಗೆ ಇತ್ತು. ಆ ಬಳಿಕ ಅವಳು ಮಕ್ಕಳಿಲ್ಲದ ತನ್ನ ಮಗ-ಸೊಸೆಗೆ ಈ ಮಗುವನ್ನು ಕೊಡಬೇಕು ಎಂದುಕೊಂಡಳು. ಅಂತೆಯೇ ಮಗುವನ್ನು ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು, ಹೆತ್ತು ಹೊತ್ತು ಪೂರ್ಣಿ ಕೈಗೆ ಕೊಟ್ಟಿದ್ದಾಳೆ.
ಕ್ಯೂಟ್ ಮಗುವಿನ ಜೊತೆಯಲ್ಲಿ ಭಾರ್ಗವಿ LLB ಧಾರಾವಾಹಿಯ ಸುಜಾತಾ ಲುಕ್ ಹೋಲಿಕೆ
ಹಾಲು ಕುಡಿಸದ ತುಳಸಿ!
“ಇನ್ಮುಂದೆ ಈ ಮಗು ನನ್ನದಲ್ಲ, ನಿನ್ನದು. ನೀನು ಈ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ತಗೋಬೇಕು. ಈ ಮಗುವಿನ ಮೇಲೆ ನನಗೆ ಯಾವ ಹಕ್ಕು ಇಲ್ಲ. ನಿನ್ನ ಪ್ರೀತಿ, ಕಾಳಜಿಯನ್ನು ಧಾರೆ ಎರಿ” ಎಂದು ತುಳಸಿ ಮಗುಗೆ ಹೇಳಿದ್ದಾರೆ. ಮಗು ಅಳುತ್ತಿದ್ದರೂ ಕೂಡ ತುಳಸಿ ಹಾಲು ಕುಡಿಸಲು ಮುಂದೆ ಬರಲೇ ಇಲ್ಲ. ನೀನೆ ಈ ಮಗು ನೋಡಿಕೋ ಅಂತ ತುಳಸಿ ಪೂರ್ಣಿಗೆ ಹೇಳಿದಳು. ಪೂರ್ಣಿಯೇ ಮಗುವಿಗೆ ಹಾಲು ಕೊಟ್ಟಿದ್ದಾಳೆ. ಈಗ ತಾನೇ ಹುಟ್ಟಿದ ಮಗುಗೆ ತುಳಸಿ ಹಾಲು ಕೂಡ ಕೊಟ್ಟಿಲ್ಲ ಎಂದಮಾತ್ರಕ್ಕೆ ಅವಳು ಕಟುಕಿ ಎಂದರ್ಥವಲ್ಲ. ತುಳಸಿಗೆ ಮಗುವಿನ ಮೇಲೆ ಅಕ್ಕರೆ ಇಲ್ಲ ಎಂದರ್ಥವಲ್ಲ. ಪೂರ್ಣಿಗೆ ಮಗು ಇಲ್ಲ ಎನ್ನುವ ಕೊರತೆ ಈಗ ನೀಗಿದೆ. ಪೂರ್ಣಿ ಈಗ ತಾಯಿ ಅಂತ ಎನಿಸಿಕೊಳ್ಳಬೇಕು. ಹೀಗಾಗಿ ಮಗುವಿಗೆ ಹಾಲು ಕುಡಿಸೋದರಿಂದ ಹಿಡಿದು, ಎಲ್ಲವನ್ನೂ ಅವಳೇ ಮಾಡಲಿ ಎನ್ನೋದು ತುಳಸಿ ಆಶಯ.
ಕಥೆ ಏನು?
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಮಧ್ಯ ವಯಸ್ಕರಾದ ತುಳಸಿ, ಮಾಧವ್ ಇಬ್ಬರೂ ಸಂಗಾತಿಗಳನ್ನು ಕಳೆದುಕೊಂಡಿರುತ್ತಾರೆ. ಆ ನಂತರ ಇವರ ಮಧ್ಯೆ ಸ್ನೇಹ ಬೆಳೆದು, ಮದುವೆ ಆಗುವುದು. ಆದರೆ ಮಾಧವ್ ಮನೆಯಲ್ಲಿರೋ ಶಾರ್ವರಿ ಎನ್ನುವ ದುಷ್ಟ ಹೆಂಗಸು ಮಾತ್ರ ಎಲ್ಲರ ಖುಷಿ ಹಾಳುಮಾಡಲು ರೆಡಿ ಆಗಿದ್ದಾಳೆ.
ಪಾತ್ರಧಾರಿಗಳು
ಪೂರ್ಣಿ-ಲಾವಣ್ಯಾ ಭಾರದ್ವಾಜ್
ತುಳಸಿ-ಸುಧಾರಾಣಿ
ಮಾಧವ್-ಅಜಿತ್ ಹಂದೆ
