Asianet Suvarna News Asianet Suvarna News

ಮಹಾನಟಿ ಷೋನಲ್ಲಿ 'ಮದವೇರಿಸೋ ಮದನಾರಿಯ ನೋಡಿ...' ಜಾಕ್ವೆಲಿನ್​ ಜಾಗದಲ್ಲಿ ಯಾರಿವರು?

ಜೀ ಕನ್ನಡದಲ್ಲಿ ಬರುತ್ತಿರುವ ಮಹಾನಟಿ ರಿಯಾಲಿಟಿ ಷೋನಲ್ಲಿ ಮದವೇರಿಸೋ ಮದನಾರಿಯ ನೋಡಿ... ಡೈಲಾಗ್​ ಮೂಲ ನಾಯಕಿ ಕಾಣಿಸಿದ್ದಾರೆ. ಯಾರಿವರು? 
 

Madaveriso Madanari Nodi Dubbing Artist Ashika Sharma in Mahanati reality show suc
Author
First Published Jun 2, 2024, 2:35 PM IST

ಮದವೇರಿಸೋ ಮದನಾರಿಯ ನೋಡಿ ಮಿಡಿದವರೆಷ್ಟು, ಮಡಿದವರೆಷ್ಟು... ಡೈಲಾಗ್​ ಈಗಲೂ ಬಹುತೇಕ ಬಾಯಲ್ಲಿ ನಲಿದಾಡುತ್ತಲೇ ಇದೆ. ಹೌದು. 2022ರಲ್ಲಿ ಬಿಡುಗಡೆಯಾದ ಬ್ಲಾಕ್​ಬಸ್ಟರ್​ ಚಿತ್ರ ವಿಕ್ರಾಂತ್​ ರೋಣದ ಡೈಲಾಗ್​ ಇದು. ಈ ಡೈಲಾಗ್​ ಸಿನಿಮಾದಲ್ಲಿ ಹೇಳಿದವರು ಬಾಲಿವುಡ್​​ ನಟಿ ಜಾಕ್ವೆಲಿನ್​ ಫರ್ನಾಂಡಿಸ್.ಚಿತ್ರದ ಪ್ರೊಮೋಷನ್​ ಸಮಯದಲ್ಲಿಯೂ ಇದೇ ಡೈಲಾಗ್​ ಬಿಡುಗಡೆ ಮಾಡಲಾಗಿತ್ತು. ಅದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದು ಇದೆ. ​ ಈ ಚಿತ್ರದ ನಾಯಕಿಯಾಗಿ ಸುದೀಪ್​ ಎದುರು ಜಾಕ್ವೆಲಿನ್​ ಕಾಣಿಸಿಕೊಂಡಿದ್ದು, ಈ ಡೈಲಾಗ್​ ಅನ್ನು ಅವರು ಹೇಳಿದ್ದಾರೆ. ಆದರೆ ಅಸಲಿಗೆ ಈ ಡೈಲಾಗ್​ ಹೇಳಿದವರು ಡಬ್ಬಿಂಗ್​ ಆರ್ಟಿಸ್ಟ್​ ಆಶಿಕಾ ಶರ್ಮಾ. ರಾಧಾ ಕೃಷ್ಣ ಸೀರಿಯಲ್​ ಸೇರಿದಂತೆ ಹಲವಾರು ಸಿರಿಯಲ್​ಗಳು ಹಾಗೂ ಸಿನಿಮಾಗಳಲ್ಲಿ ಕನ್ನಡ ಬಾರದ ನಾಯಕಿಯರಿಗೆ ದನಿ ನೀಡಿದ್ದಾರೆ, ನೀಡುತ್ತಿದ್ದಾರೆ ಆಶಿಕಾ ಶರ್ಮಾ.

ಇದೀಗ ಆಶಿಕಾ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಷ್ಟಕ್ಕೂ, ಇವರಿಗೆ ವಿಕ್ರಾಂತ್​ ರೋಣದಲ್ಲಿ ಅವಕಾಶ ಸಿಕ್ಕಿದ್ದೇ ಕುತೂಹಲವಾದದ್ದು. ಈ ಹಿಂದೆ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದರು. ತಮಗೆ  ಮೊದಲಿನಿಂದಲೂ ಸುದೀಪ್​ ಅವರ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುವ ಹಂಬಲವಿತ್ತು. ನಂತರ ವಿಕ್ರಾಂತ್​ ರೋಣದ ನಾಯಕ ಜಾಕ್ವೆಲಿನ್​ ಅವರಿಗೆ ದನಿ ನೀಡಲು ಆರ್ಟಿಸ್ಟ್​ ಹುಡುಕುತ್ತಿರುವ ವಿಷಯ ತಿಳಿಯಿತು. ಆಗ ನನಗೆ ಸಿನಿ ರಂಗದಲ್ಲಿ ಅಷ್ಟೊಂದು ಯಾರೂ ಪರಿಚಯವಿರಲಿಲ್ಲ. ನಾನು ಮೂರ್ನಾಲ್ಕು ರೀತಿಯ ದನಿಯನ್ನು ಕಳಿಸಿಕೊಟ್ಟಿದ್ದೆ. ಆದರೆ ಅಲ್ಲಿಂದ ರಿಪ್ಲೈ ಬಂದಿರಲಿಲ್ಲ. ಅದಾಗಲೇ ಒಂದೂವರೆ ವರ್ಷ ಆಗಿ ಹೋಯಿತು. ನಾನೂ ಅದರ ಆಸೆ ಬಿಟ್ಟಿದ್ದೆ. ಬಹುಶಃ ನನ್ನ ದನಿ ಜಾಕ್ವೆಲಿನ್ ಅವರಿಗೆ ಸೂಟ್​ ಆಗುವುದಿಲ್ಲ ಎಂದುಕೊಂಡು ಹಾಗೆಯೇ ಇದ್ದೆ. ಆದರೆ ಅದೊಂದು ದಿನ ವಿಕ್ರಾಂತ್​ ರೋಣ ಅವರ ಸೌಂಡ್​ ಎಂಜಿನಿಯರ್​ ಕಾಲ್ ಮಾಡಿ, ಅವರೇ ದನಿಯ ಮುದ್ರಣದ ಟೆಸ್ಟ್​ ಕಳುಹಿಸುವಂತೆ ತಿಳಿಸಿದರು. ಆ ದಿನ ನಿಜಕ್ಕೂ ನನಗೆ ನಂಬಲು ಸಾಧ್ಯವೇ ಆಗಿರಲಿಲ್ಲ. ದನಿಯನ್ನು ಮುದ್ರಿಸಿ ಕಳುಹಿಸಿದ್ದೆ. ಮರುದಿನವೇ ಅಲ್ಲಿಂದ ಕರೆ ಬಂದು, ನನ್ನನ್ನು ಆಯ್ಕೆ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದರು ಆಶಿಕಾ. 

ಬಿಗ್​ಬಾಸ್​ ನೀತು ಲವ್​ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...

ಇದೇ ವೇಳೆ, ತಾವು ಡಬ್ಬಿಂಗ್​ ಆರ್ಟಿಸ್ಟ್​ ಆಗಲು ಕಾರಣದ ಕುತೂಹಲವನ್ನು ಸಂದರ್ಶನದಲ್ಲಿ ಹೇಳಿದ್ದಾರೆ.  ಆರ್ಕಿಟೆಕ್ಚರ್​ ಆಗಿ ಕೆಲಸ ಮಾಡುತ್ತಿದ್ದೆ. ಲಾಕ್​ಡೌನ್​ ಸಮಯದಲ್ಲಿ ಅದನ್ನು ತ್ಯಜಿಸಬೇಕಾಯಿತು. ದಿನನಿತ್ಯದ ಖರ್ಚನ್ನು ಸರಿದೂಗಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿದ್ದೆ. ನಾನು ತುಂಬಾ ಕಾನ್​ಫಿಡೆಂಟ್​ ಆಗಿದ್ದರಿಂದ ಆ್ಯಂಕರಿಂಗ್​ ಮಾಡಬಹುದು ಎನ್ನಿಸಿತ್ತು. ಆ ಸಮಯದಲ್ಲಿ ಸೆಂಟ್ರಿಲ್​ ಜೈಲಿನ ಕೈದಿಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನವಿತ್ತು. ಹೇಗೋ ಅಲ್ಲಿ ಆ್ಯಂಕರಿಂಗ್​ ಮಾಡುವ ಅವಕಾಶ ಸಿಕ್ಕಿತು. ಅದು ನನ್ನ ಬದುಕನ್ನು ಬದಲಿಸಿತು. ಅಲ್ಲಿ ಸಿನಿಮಾದ ಕೆಲವರ ಪರಿಚಯವಾಗಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಹಾಗಾಯಿತು ಎಂದಿದ್ದಾರೆ.
 
ಇನ್ನು ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಕುರಿತು ಹೇಳುವುದಾದರೆ, ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಇದೀಗ, Heroine Introduction Roundಗೆ ಬಂದು ನಿಂತಿದೆ. ಇದರಲ್ಲಿ ಆಶಿಕಾ ಶರ್ಮಾ ಕಾಣಿಸಿಕೊಂಡಿದ್ದು, ಡ್ಯಾನ್ಸ್​ ಕೂಡ ಮಾಡಿದ್ದಾರೆ. 

ಮದುಮಗಳಾದ ಆ್ಯಂಕರ್​ ಅನುಶ್ರೀ ವಿಡಿಯೋ ವೈರಲ್​! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​...


Latest Videos
Follow Us:
Download App:
  • android
  • ios