Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತು ಪೂರ್ಣಿ, ಅಮೃತಧಾರೆ ಜೀವಾ ಹನಿಮೂನ್​ ಹೇಗಿತ್ತು? ಫುಲ್​ ಡಿಟೇಲ್ಸ್​ ಹಂಚಿಕೊಂಡ ದಂಪತಿ

ಶ್ರೀರಸ್ತು ಶುಭಮಸ್ತು ಸೀರಿಯಲ್​ ಪೂರ್ಣಿ ಅರ್ಥಾತ್​ ಲಾವಣ್ಯ ಭಾರಧ್ವಾಜ ಹಾಗೂ ಅಮೃತಧಾರೆ ಜೀವಾ ಅರ್ಥಾತ್​  ಶಶಿ ಹೆಗ್ಡೆಹನಿಮೂನ್​ ಹೇಗಿತ್ತು? ಫುಲ್​ ಡಿಟೇಲ್ಸ್​ ಹಂಚಿಕೊಂಡ ದಂಪತಿ
 

Shreerastu Shubhamastu Poorni and Amrutadhare Jeeva honeymoon toru plan video suc
Author
First Published Jun 2, 2024, 11:15 AM IST

ಶ್ರೀರಸ್ತು ಶುಭಮಸ್ತು ಪೂರ್ಣಿ, ಅಮೃತಧಾರೆ ಜೀವಾ ಸೀರಿಯಲ್​ಗಳಲ್ಲಿ ಬೇರೆ ಬೇರೆಯವರ ಪತಿ-ಪತ್ನಿ. ಆದರೆ ರಿಯಲ್​ ಲೈಫ್​ನಲ್ಲಿ ಇವರು ದಂಪತಿ. ಪೂರ್ಣಿಯವರ ನಿಜವಾದ ಹೆಸರು ಲಾವಣ್ಯ ಭಾರಧ್ವಾಜ ಹಾಗೂ ಜೀವಾ ಅವರ ನಿಜವಾದ ಹೆಸರು ಶಶಿ ಹೆಗ್ಡೆ. ಕೆಲ ದಿನಗಳ ಹಿಂದೆ ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲಾವಣ್ಯ ಅವರ ಬಹು ದಿನಗಳ ಕನಸಾಗಿದ್ದ ಮನಾಲಿಗೆ ಹೋಗಿದ್ದಾರೆ. ಬೆಂಗಳೂರಿನಿಂದ ಮನಾಲಿಗೆ ಹೋಗುವ ದಾರಿಯಲ್ಲಿನ ಕೆಲವು ವಿಡಿಯೋಗಳನ್ನು ಮಾಡಿರುವ ಜೋಡಿ, ತಮ್ಮ ಹನಿಮೂನ್​ ಪಯಣ ಹೇಗಿತ್ತು ಎಂಬುದನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಜೋಡಿ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಇದೀಗ ಹನಿಮೂನ್​ ಡಿಟೇಲ್ಸ್​ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮನಾಲಿಯಲ್ಲಿನ ಮೊದಲ ದಿನದ ಎಕ್ಸ್​ಪೀರಿಯನ್ಸ್​ ಕೂಡ ಶೇರ್​ ಮಾಡಿಕೊಂಡಿದ್ದಾರೆ. 

ಬೆಂಗಳೂರಿನಿಂದ ಹೊರಟಾಗ ದಾರಿಮಧ್ಯೆ ಸಿಕ್ಕ ಸ್ಥಳಗಳು, ಅಲ್ಲಿ ಅನುಭವಿಸಿದ ಬಿಸಿಲಿನ ತಾಪ, ಕೂಲ್​ ಕೂಲ್ ಅನುಭವ ಎಲ್ಲವನ್ನೂ ಜೋಡಿ ಶೇರ್ ಮಾಡಿಕೊಂಡಿದೆ. ಇದಾಗಲೇ ಲಾವಣ್ಯ ಅವರು ಮನಾಲಿಯ ಕೆಲವೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.  ಹೀಗೆ ಅಜ್ಜಿ, ತಾತ ಆಗೋಣ ಎಂದು ಕ್ಯಾಪ್ಶನ್ ಹಾಕಿದ್ದಾರೆ. ವಿಡಿಯೋದಲ್ಲಿ ಲಾವಣ್ಯ ವಿಂಟರ್ ವೇರ್, ವೂಲನ್ ಕ್ಯಾಪ್ ಧರಿಸಿ, ಹಿಮದ ಮೇಲೆ ಮಲಗಿ ತುಂಬಾ ಖುಷಿಯಾಗ್ತಿದೆ ಇವತ್ತು, ಹ್ಯಾಪಿ ಆನಿವರ್ಸರಿ (Anniversary) ಚಿನ್ನ ಎಂದಿದ್ದರು. ಶಶಿ ಲಾವಣ್ಯ ಹತ್ತಿರ ಬಂದು ಐ ಲವ್ ಯೂ ಎಂದು ಮಂಜನ್ನು ಲಾವಣ್ಯ ಮೇಲೆ ಎಸೆದಿದ್ದು, ಲಾವಣ್ಯ ಕೂಡ ಲವ್ ಯು ಟೂ ಎಂದಿದ್ದರು. ಹಿನ್ನೆಲೆಯಲ್ಲಿ ಏನೇ ಬರಲಿ ಜೊತೆಯಾಗಿ, ನೀನೆ ನನ್ನ ಕಥೆಯಾಗಿ ನೀಡುವ ಬಂಧನ ಎನ್ನುವ ಹಾಡು ಪ್ಲೇ ಆಗುತ್ತಿದ್ದು, ಇಬ್ಬರ ಮದುವೆ ಮತ್ತು ಪ್ರಿವೆಡ್ಡಿಂಗ್ ವಿಡಿಯೋ, ಜೊತೆಗೆ ಮಂಜಿನಲ್ಲಿ ಎಂಜಾಯ್ ಮಾಡ್ತಿರೋ ವಿಡಿಯೋ ಕೂಡ ಹಂಚಿಕೊಂಡಿದ್ದರು. ಇದೀಗ ಹನಿಮೂನ್​ ಟೂರ್​ ಪೂರ್ವದ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. 

ರೊಮ್ಯಾಂಟಿಕ್​ ಮೂಡ್​ನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ: ಹನಿಮೂನ್ ಮೂಡ್​ ಮುಗಿದಿಲ್ವಾ ಕೇಳ್ತಿದ್ದಾರೆ ಫ್ಯಾನ್ಸ್​

ಅಷ್ಟಕ್ಕೂ ಇವರ ಲವ್​ ಸ್ಟೋರಿ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆದ್ರೂ. ಲಾವಣ್ಯ ಮತ್ತು ಶಶಿ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ರಂತೆ, ಇಬ್ಬರು ಜೊತೆಯಾಗಿ ಟೂರ್ ಕೂಡ ಹೋಗ್ತಾ ಇದ್ರಂತೆ. ಆದ್ರೆ ಲಾವಣ್ಯ ಅವರಿಗೆ ಶಶಿ ಅವರು ತಮ್ಮನ್ನು ಲವ್ ಮಾಡ್ತಿರೋ ಬಗ್ಗೆ ಕ್ಲೂ ಕೂಡ ಇರಲಿಲ್ವಂತೆ. ಅವರು ಪ್ರಪೋಸ್ (propose) ಮಾಡಿದಾಗ್ಲೆ ಶಶಿ ನನ್ನನ್ನ ಲವ್ ಮಾಡ್ತಿದ್ದಾನೆ ಅಂತ ಶಾಕ್ ಆಗಿತ್ತಂತೆ ಇವರಿಗೆ. 

ಇಷ್ಟ ಪಟ್ಟ ಹುಡುಗಿಗೆ ಪ್ರಪೋಸ್ ಮಾಡಿದಾಗ, ಆಕೆ ನಂಗೆ ಟೈಮ್ ಬೇಕು ಅಂದ್ರಂತೆ… ಅಷ್ಟೊಂದು ಕಾಯುವ ತಾಳ್ಮೆ ಶಶಿ ಅವರಿಗೆ ಇಲ್ಲವಾಗಿತ್ತಂತೆ. ಅವರು ನೇರವಾಗಿ ಲಾವಣ್ಯ ಅವರ ಮನೆಗೆ ಹೋಗಿ ಅವರ ಅಮ್ಮನ ಎದುರು ಮದುವೆ ಪ್ರಸ್ತಾಪ ಇಟ್ಟೇ ಬಿಟ್ರಂತೆ. ಅಮ್ಮ ಹೇಗೋ ಒಪ್ಪಿಗೆ ಕೊಡ್ತಾರೆ ಅನ್ನೋದು ಲಾವಣ್ಯಂಗೆ ಗೊತ್ತಿತ್ತು, ಆದ್ರೆ ಅಪ್ಪ ಏನು ಮಾಡ್ತಾರೆ ಅನ್ನೋ ಭಯ ಇತ್ತಂತೆ. ಆದ್ರೆ ಅವರ ಅಪ್ಪ ಕೂಡ ಸಲೀಸಾಗಿ ಒಪ್ಪಿಕೊಂಡಾಗ ಲಾವಣ್ಯ ಅವ್ರಿಗೆ ಶಾಕ್ ಅಗಿತ್ತಂತೆ. ಇನ್ನು ಲಾವಣ್ಯ (Lavanya) ಅವರು ಶಶಿಗೆ ತಿಳಿಯದಂತೆ ಅವರ ಅಪ್ಪನ ಜೊತೆ ಮಾತನಾಡಿ, ಅಲ್ಲಿಂದಲೂ ಒಪ್ಪಿಗೆ ಪಡೆದರಂತೆ. ಎಲ್ಲಾ ಒಪ್ಪಿಕೊಂಡಾದ್ಮೆಲೆ ಇಬ್ಬರ ಮದ್ವೆಗೆ ಅಡ್ಡಿಯಾದದ್ದು ಕೊರೋನಾ. ಆದ್ರೆ ಇದೇ ಕೊರೋನಾದಿಂದಾಗಿ ಇಬ್ಬರಿಗೂ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುತ್ತೆ ಈ ಜೋಡಿ. ಇದೆಲ್ಲಾ ಆಗಿ 2022ರ ಮೇ ತಿಂಗಳಲ್ಲಿ, ಶಶಿ ಅವರ ಊರಲ್ಲಿ, ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿ ಅದ್ಧೂರಿಯಾಗಿ ಶಶಿಧರ್ ಹೆಗ್ಡೆ ಮತ್ತು ಲಾವಣ್ಯ ಮದ್ವೆಯಾಗಿದ್ದಾರೆ. ಸದ್ಯಕ್ಕೆ ಈ ಇಬ್ಬರೂ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.  

ಅಪ್ಪುಗೂ ನೃತ್ಯ ಸಂಯೋಜಿಸಿದ್ದ ಶ್ರೀರಸ್ತು ಶುಭಮಸ್ತು ದೀಪಿಕಾ: ಪೂರ್ಣಿಗೆ ಡ್ಯಾನ್ಸ್​ ಹೇಳಿಕೊಡ್ತಿರೋ ವಿಡಿಯೋ ವೈರಲ್​

Latest Videos
Follow Us:
Download App:
  • android
  • ios