'ಅಂಕು ಡೊಂಕಿದೆ...' ಎನ್ನುತ್ತಾ ಕುಣಿದ 'ಶ್ರೀರಸ್ತು ಶುಭಮಸ್ತು' ಜೋಡಿ: ಪ್ರೆಗ್ನೆಂಟ್ ಹುಷಾರಮ್ಮಾ ಅಂತ ಫ್ಯಾನ್ಸ್
ಶ್ರೀರಸ್ತು ಶುಭಮಸ್ತು ಸೀರಿಯಲ್ ಕಲಾವಿದೆಯರಾದ ಸಿರಿ ಮತ್ತು ಸಂಧ್ಯಾ ಆಕಾರದಲ್ಲಿ ಗುಲಾಬಿ ಹೊಂದಿದೆ ಹಾಡಿಗೆ ಸಕತ್ ರೀಲ್ಸ್ ಮಾಡಿದ್ದು, ಫ್ಯಾನ್ಸ್ ಏನ್ ಹೇಳುತ್ತಿದ್ದಾರೆ ನೋಡಿ.
ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುವ ಪಾತ್ರ ಸೊಸೆಯದ್ದು. ಸಿರಿ ಪಾತ್ರದ ಮೂಲಕ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಿರುವ ಈ ಸೊಸೆಯ ರಿಯಲ್ ಹೆಸರು ಚಂದನಾ ರಾಘವೇಂದ್ರ. ಅದೇ ರೀತಿ ಗಂಡನ ಮನೆಯಲ್ಲಿ ತುಳಸಿ ಅರ್ಥಾತ್ ಸುಧಾರಾಣಿಯನ್ನು ಎಲ್ಲರೂ ಕಡೆಗಣ್ಣಿನಿಂದ ನೋಡುತ್ತಿರುವ ಸಂದರ್ಭದಲ್ಲಿ ಆಕೆಯ ಪರವಾಗಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿರುವಾಕೆ ಸಂಧ್ಯಾ. ಇವರ ನಿಜವಾದ ಹೆಸರು ದೀಪಾ ಕಟ್ಟೆ (Deepa Katte) .
ಇದೀಗ ಚಂದನಾ ರಾಘವೇಂದ್ರ ಮತ್ತು ದೀಪಾ ಕಟ್ಟೆ ಅವರು ಇಬ್ಬರೂ ಸೇರಿ ರೀಲ್ಸ್ ಮಾಡಿದ್ದಾರೆ. ಓಲ್ಡ್ ಈಸ್ ಗೋಲ್ಡ್ ಅನ್ನುವ ಹಾಗೆ ಅಂಜದಗಂಡು ಸಿನಿಮಾದ ಆಕಾರದಲ್ಲಿ ಗುಲಾಬಿ ಹೊಂದಿದೆ... ಅಂಕು ಡೊಂಕಿದೆ ಹೇಗೆ ಕುಣಿಯಲಿಗೆ ಸಕತ್ ಸ್ಟೆಪ್ ಹಾಕಿದ್ದಾರೆ. ಕಿರುತೆರೆ ಕಲಾವಿದರು ಅದರಲ್ಲಿಯೂ ಹೆಚ್ಚಾಗಿ ಕಲಾವಿದೆಯರು ಇನ್ಸ್ಟಾಗ್ರಾಮ್ನಲ್ಲಿ ಸಕತ್ ಆ್ಯಕ್ಟೀವ್ ಇದ್ದಾರೆ. ಆಗಾಗ್ಗೆ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ರೀಲ್ಸ್ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಂದು ಸಿಂಗಲ್ ಆಗಿ, ಇನ್ನು ಕೆಲವೊಮ್ಮೆ ತಮ್ಮ ಸೀರಿಯಲ್ ಸಹ ನಟ-ನಟಿಯರ ಜೊತೆ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ದೀಪಾ ಕಟ್ಟೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಂದನಾ ಅವರ ಜೊತೆ ಮಾಡಿರುವ ರೀಲ್ಸ್ ಶೇರ್ ಮಾಡಿಕೊಂಡಿದ್ದು ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಇದರಲ್ಲಿ ದೀಪಾ, ಕಿರುತೆರೆಯಲ್ಲಿ ನಾಯಕಿ ಪಾತ್ರದಲ್ಲೂ, ಖಳನಾಯಕಿ ಪಾತ್ರದಲ್ಲೂ ನಟಿಸಿ ಜನಮನ ಗೆದ್ದಿದ್ದಾರೆ. ಇವರು ಕಳೆದ ಮೇ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಟಿ ಉದ್ಯೋಗಿ ರಕ್ಷಿತ್ ಯಡಪಡಿತ್ತಾಯ ಅವರ ಜೊತೆ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದು, ಮದುವೆ ಸಮಾರಂಭ, ಅರಿಶಿನ, ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಲೇ ಇವರ ಮದುವೆಯ ಬಗ್ಗೆ ಸುದ್ದಿಯಾಗಿತ್ತು. ಧಾರಾವಾಹಿಯಲ್ಲಿ ದೀಪಾ ಗರ್ಭಿಣಿಯಾಗಿರುವ ಕಾರಣ, ಅವರ ಫ್ಯಾನ್ಸ್ ಈ ರೀಲ್ಸ್ ನೋಡಿ ಕಾಲೆಳೆಯುತ್ತಿದ್ದಾರೆ. ಗರ್ಭಿಣಿಯಮ್ಮ, ಹುಷಾರ್ ಡ್ಯಾನ್ಸ್ ಮಾಡುವಾಗ ಎಚ್ಚರ ಎನ್ನುತ್ತಿದ್ದಾರೆ. ಅದಕ್ಕೆ ದೀಪಾ ಕೂಡ ರಿಪ್ಲೈ ಮಾಡಿದ್ದು, ಇದು ಹಾ ಹಾ ಹಾ ಇದು ಸೀರಿಯಲ್ಗಾಗಿ ಮಾಡಿದ ರೀಲ್ಸ್ ಅಲ್ಲ ಎಂದಿದ್ದಾರೆ.
BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!
ಇನ್ನು ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ಚಂದನಾ ಅವರು ಸದ್ಯ ಭಗೀರಥ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ಭಗೀರಥ' ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಕೆ.ರಮೇಶ್ ಹಾಗೂ ಬಿ.ಭೈರಪ್ಪ ಮೈಸೂರು ಅವರು ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಮ್ ಜನಾರ್ದನ ನಿರ್ದೇಶನವಿದೆ. ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಸಿರಿ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಕ್ಯಾಮೆರಾ ಚಾಲನೆ ನೀಡಿದರು.
ಭಾಗ್ಯಲಕ್ಷ್ಮಿ ಸೀರಿಯಲ್ ಮುಗಿಯುವವರೆಗೆ ಹೊರಗಡೆ ಬರ್ಬೇಡಾ, ಚಪ್ಪಲಿ ಏಟು ಬೀಳತ್ತೆ ಅಂತಿದ್ದಾರಲ್ಲಪ್ಪಾ!