ಶ್ರೀರಸ್ತು-ಶುಭಮಸ್ತು ಲಲನೆಯರ ನೃತ್ಯದ ಮೋಡಿಯಲ್ಲಿ ತೇಲಾಡಿದ ಸೀರಿಯಲ್​ ಪ್ರೇಮಿಗಳು

ಕಂಪೆನಿಯ ವಾರ್ಷಿಕೋತ್ಸವದಲ್ಲಿ ಶ್ರೀರಸ್ತು-ಶುಭಮಸ್ತು ಮಹಿಳಾಮಣಿಗಳು ನೃತ್ಯ ಮಾಡುವ ಮೂಲಕ ಮೋಡಿ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
 

Shreerastu Shubhamastu Deepika Poorni Sharvari Nidhi  dance on the anniversary of the company suc

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಇದೀಗ ಕಂಪೆನಿಯ ವಿವಾಹ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದೆ. ಮನೆಗೆ ಬಂದಿರುವ ಕೋರಿಯೋಗ್ರಫರ್​ ಇದಾಗಲೇ ಮನೆ ಮಂದಿಗೆಲ್ಲಾ ಡ್ಯಾನ್ಸ್​ ಹೇಳಿಕೊಟ್ಟಾಗಿದೆ. ಇದೀಗ ಕಂಪೆನಿಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಮಾಧವ್​ ಕುಟುಂಬದವರು ಭರ್ಜರಿ ನ್ಯತ್ಯ ಪ್ರದರ್ಶನ ನೀಡಿದ್ದು ಅಭಿಮಾನಿಗಳಿಂದ ಭೇಷ್​ ಎನಿಸಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಈ ರೀತಿಯ ನೃತ್ಯಗಳನ್ನು ಕೆಲವೇ ದಿನಗಳಲ್ಲಿ ಹೇಳಿಕೊಡುವುದು ಅಷ್ಟು ಸುಲಭದ ಮಾತಲ್ಲ. ದೀಪಿಕಾ ಹಾಗೂ ಪೂರ್ಣಿ ಪಾತ್ರಧಾರಿಗಳು ಸೇರಿದಂತೆ ಕೆಲವರು ಇದಾಗಲೇ ನೃತ್ಯ ಕಲಾವಿದೆಯರಾಗಿರುವ ಕಾರಣ, ಅವರಿಗೆ ನೃತ್ಯ ಹೇಳಿಕೊಡುವುದು ಕಷ್ಟವಾಗಲಿಕ್ಕಿಲ್ಲ. ಆದರೆ ಕಂಪೆನಿಯ ವಾರ್ಷಿಕೋತ್ಸವದಲ್ಲಿ ಮನೆ ಮಂದಿಯ ನೃತ್ಯಗಳೂ ಇರುವುದರಿಂದ  ಈ ರೀತಿಯ ನೃತ್ಯ ಮಾಡಿಸುವುದು ಬಲು ಕಷ್ಟದ ಮಾತು.  

ಆದರೆ ಇದೀಗ  ಮೊದಲ ಹಂತದಲ್ಲಿ ದೀಪಿಕಾ, ಪೂರ್ಣಿ, ಶಾರ್ವರಿ ಹಾಗೂ ನಿಧಿ ಝುಮ್ಕಾ ಝುಮ್ಕಾರೆ ಹಾಡಿಗೆ ನೃತ್ಯ ಮಾಡಿದ್ದು, ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಮಾಧವನ ಕುಟುಂಬದ ಸ್ತ್ರೀ ಶಕ್ತಿಯ ಹೆಜ್ಜೆ ಶೀರ್ಷಿಕೆಯಡಿ ಇದರ ಪ್ರೊಮೋ ಬಿಡುಗಡೆಯಾಗಿದೆ. ಇದಕ್ಕೆ ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಇದೀಗ ಉಳಿದ ಕುಟುಂಬಸ್ಥರ ಡ್ಯಾನ್ಸ್​ ನೋಡಲು ಶ್ರೀರಸ್ತು ಶುಭಮಸ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತು ಆ್ಯನಿವರ್ಸರಿ ಸಂಭ್ರಮದಲ್ಲಿ ಗೆಜ್ಜೆಯ ನಾದ: ಈ 'ನಿಗೂಢ' ಕಲಾವಿದೆಯ ನಾಟ್ಯದ ರಸದೌತಣ...

ಇದೇ ವೇಳೆ, ಭರತನಾಟ್ಯ ಕಲಾವಿದೆಯೊಬ್ಬಳ ಪ್ರೊಮೋ ಅನ್ನು ಕೂಡ ವಾಹಿನಿ ಬಿಡುಗಡೆ ಮಾಡಿದೆ. ಆಕೆ ಯಾರು ಎಂದು ಇದುವರೆಗೆ ತಿಳಿಸಿಲ್ಲ.  ಆ್ಯನಿವರ್ಸರಿ ಸಂಭ್ರಮದಲ್ಲಿ ಗೆಜ್ಜೆಯ ನಾದ ಎಂಬ ಶೀರ್ಷಿಕೆ ಕೊಟ್ಟಿದೆ. ಹಾಗಿದ್ದರೆ ಈ ಕಲಾವಿದೆ ಯಾರು ಎಂಬ ಬಗ್ಗೆ ಇದೀಗ ಕುತೂಹಲ ಮನೆಮಾಡಿದೆ. ಅಷ್ಟಕ್ಕೂ ಈಕೆ ಸುಧಾರಾಣಿ ಎನ್ನುವುದೇ ಬಹುತೇಕ ನೆಟ್ಟಿಗರ ಅಭಿಮತ. ಅಭಿಗೆ ತನ್ನ ಈ ಹೊಸ ಅಮ್ಮ ತುಳಸಿಯನ್ನು ಕಂಡರೆ ಆಗುವುದಿಲ್ಲ. ನನ್ನ ಅಮ್ಮ ಕಾರು ಡ್ರೈವಿಂಗ್​, ಡ್ಯಾನ್ಸ್​ ಎಲ್ಲಾ ಮಾಡುತ್ತಿದ್ದರು. ನಿಮಗೇನು ಬರುತ್ತದೆ ಎಂದು ತುಳಸಿಗೆ ಹಂಗಿಸಿದ್ದ. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡಿದ್ದ ತುಳಸಿ ಡ್ರೈವಿಂಗ್​ ಕಲಿತು ಎಲ್ಲರಿಗೂ ಸರ್​ಪ್ರೈಸ್​ ನೀಡಿದ್ದಳು. ಆದರೆ ಭರತನಾಟ್ಯ ಕಲಿಯುವುದನ್ನಷ್ಟೇ ತೋರಿಸಲಾಗಿತ್ತೇ ವಿನಾ ಮುಂದೇನಾಯ್ತು ಎಂದು ತೋರಿಸಿರಲಿಲ್ಲ. ಇದೀಗ ಆಕೆಯ ನಾಟ್ಯ ತೋರಿಸುವ ಸಮಯ ಬಂದಿದೆ. ತುಳಸಿ ಹೇಗೆ ಭರತನಾಟ್ಯ ಮಾಡುತ್ತಾಳೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.

ಅಷ್ಟಕ್ಕೂ ತುಳಸಿ ಪಾತ್ರಧಾರಿ ಸುಧಾರಾಣಿ ಅವರು ಖುದ್ದು ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆಯೂ ಹೌದು.    54 ವರ್ಷದ ಸುಧಾರಾಣಿ  ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ.   'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು  ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ  ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ  ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ  'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಘಟಾನುಘಟಿ ತಾರೆಯರಿಗೆ ಡ್ಯಾನ್ಸ್​ ಹೇಳಿಕೊಟ್ಟ ಶ್ರೀರಸ್ತು ಶುಭಮಸ್ತು ದೀಪಿಕಾಗೆ ಈ ಸ್ಥಿತಿ ಬಂದೋಯ್ತಾ?

 

Latest Videos
Follow Us:
Download App:
  • android
  • ios